Borewell Rules : ಇನ್ಮುಂದೆ ಅನುಮತಿ ಇಲ್ಲದೇ ಬೋರ್‌ವೆಲ್‌ ಕೊರೆಸುವಂತಿಲ್ಲ.! ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು ಗೊತ್ತಾ.?

Borewell Rules : ನಮಸ್ಕಾರ ಸ್ನೇಹಿತರೇ, ಇನ್ಮುಂದೆ ಬೇಕೆಂದಾಗ, ಬೇಕಾದಲ್ಲಿ ಬೋರ್‌ವೆಲ್ ಕೊರೆಸುವಂತಿಲ್ಲ. ಕೊಳವೆಬಾವಿ ಕೊರೆಸಲು ಸ್ಥಳೀಯ ಪ್ರಾಧಿಕಾರಗಳ ಅನುಮತಿ ಪಡೆಯಲೇಬೇಕು. ಹಾಗೊಂದು ವೇಳೆ ಅನುಮತಿ ಇಲ್ಲದೇ ಕೊಳವೆ ಬಾವಿ ಕೊರೆಸಿದರೆ ಜೈಲುವಾಸ ಮತ್ತು ದಂಡ ತೆರಬೇಕಾಗುತ್ತದೆ.

ಹೌದು, ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ-2024ಕ್ಕೆ ಕಳೆದ ಜನವರಿ 09ರಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸರ್ಕಾರ ಅಧಿಕೃತ ಮುದ್ರೆ ಒತ್ತಿ ರಾಜ್ಯಪತ್ರ ಪ್ರಕಟಿಸಿದೆ.

ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?

ಹೊಸ ನಿಯಮಗಳೇನು.?

ರೈತರನ್ನು ಹೊರತುಪಡಿಸಿ ಭೂಮಿ ಅಥವಾ ಆವರಣಗಳ ಮಾಲೀಕ ಅಥವಾ ಅನುಷ್ಠಾನ ಏಜೆನ್ಸಿಯು ಕೊರೆಬಾವಿ ಅಥವಾ ಕೊಳವೆಬಾವಿ ತೋಡುವ ಮೊದಲು ಕನಿಷ್ಠ 15 ದಿನ ಮುಂಚೆ ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರ ಸ್ಥಳೀಯ ಸಂಸ್ಥೆಗೆ ಲಿಖಿತ ರೂಪದಲ್ಲಿ ತಿಳಿಸಬೇಕು.

ವಿಫಲಗೊಂಡ ಅಥವಾ ಅಪೂರ್ಣವಾಗಿ ಕೊರೆಸಲಾದ ಕೊಳವೆ ಬಾವಿಗಳನ್ನು 24 ಗಂಟೆಯೊಳಗೆ ಮುಚ್ಚಬೇಕು. ಮುಚ್ಚಿರುವ ಕುರಿತು ಛಾಯಾಚಿತ್ರದೊಂದಿಗೆ ಪ್ರಾಧಿಕಾರಕ್ಕೆ ತಿಳಿಸಬೇಕು. ವಿಫಲವಾದ ಕೊಳವೆಬಾವಿ ತಪಾಸಣೆ ಹಾಗೂ ಮೇಲ್ವಿಚಾರಣೆಗಾಗಿ ಪ್ರತಿಯೊಂದು ಸ್ಥಳೀಯ ಪ್ರಾಧಿಕಾರ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಅಥವಾ ಮಂಡಳಿಗಳ ಒಬ್ಬ ಅಧಿಕಾರಿಯನ್ನು ಗೊತ್ತುಪಡಿಸಲು ಕಾಯ್ದೆಯಲ್ಲಿ ಸೂಚಿಸಲಾಗಿದೆ.

MGNREGA : ಸಣ್ಣ ರೈತರಿಗೆ ₹5 ಲಕ್ಷ ನರೇಗಾ ಸಹಾಯಧನ – ಹೇಗೆ ಪಡೆದುಕೊಳ್ಳುವುದು.?

ನಿಯಮ ಉಲ್ಲಂಘಿಸಿದರೆ ಶಿಕ್ಷೆ ಏನು.?

ಸ್ಥಳೀಯ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆಗಳ ಅನುಮತಿ ಪಡೆಯದೆ ಬೋರ್‌ವೆಲ್ ಕೊರೆಸಿದರೆ ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ ಮೂರು ತಿಂಗಳ ಕಾರಾಗೃಹ ವಾಸ ಹಾಗೂ ದಂಡ ಪಾವತಿಸಬೇಕಾಗುತ್ತದೆ.

ಭೂ ಮಾಲೀಕ ಮಾತ್ರವಲ್ಲದೆ, ಅನುಷ್ಠಾನ ಏಜೆನ್ಸಿಗಳೂ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಭೂ ಮಾಲೀಕರು, ಏಜೆನ್ಸಿಗಳಿಗೆ ಅಲ್ಲದೆ, ಕೊಳವೆಬಾವಿ ಕೊರೆಸುವಲ್ಲಿ ಮತ್ತು ನಿಷ್ಕ್ರಿಯ ಕೊಳವೆಬಾವಿ ನಿರ್ವಹಣೆ ಮಾಡುವ ವಿಚಾರದಲ್ಲಿ ಸ್ಥಳೀಯ ಪ್ರಾಧಿಕಾರಗಳಿಗೂ ಕರ್ತವ್ಯ ನಿಗದಿಪಡಿಸಲಾಗಿದೆ.

WhatsApp Group Join Now

Leave a Reply