ಗುಡುಗು-ಸಿಡಿಲಿನ ಆರ್ಭಟಕ್ಕೆ ಭೂಮಿ ತಲ್ಲಣ: ಕೋಡಿಶ್ರೀಗಳ ಸ್ಪೋಟಕ ಭವಿಷ್ಯವಾಣಿ

Spread the love

ಸೊರಬ: ಪ್ರಕೃತಿಯಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯ ಹಾಗೂ ಏರುಪೇರುಗಳಿಂದಾಗಿ ಮುಂದಿನ ದಿನಗಳಲ್ಲಿ ಜಲ ಕಂಟಕ ಎದುರಾಗಲಿದ್ದು, ಭೂಮಿ ತಲ್ಲಣಗೊಳ್ಳಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಸೋಮವಾರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿನ ಅನಿರೀಕ್ಷಿತ ಬದಲಾವಣೆಗಳ ಬಗ್ಗೆ ಎಚ್ಚರಿಸಿದರು.ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಜಲ ಕಂಟಕ ಎದುರಾಗುವ ಸಾಧ್ಯತೆ ಇದೆ.

ಗುಡುಗು, ಸಿಡಿಲು, ಗಾಳಿ ಮತ್ತು ಮಳೆಯ ಆರ್ಭಟ ಹೆಚ್ಚಾಗಲಿದ್ದು, ಇದರಿಂದ ಭೂಮಿ ತಲ್ಲಣಗೊಳ್ಳಲಿದೆ ಎಂದು ಹೇಳಿದ್ದಾರೆ.

ಆಕಸ್ಮಿಕ ಘಟನೆಗಳು ಸಂಭವಿಸುವ ಮೂಲಕ ದೊಡ್ಡ ನಗರಗಳು ಸಂಕಷ್ಟಕ್ಕೆ ಸಿಲುಕಲಿವೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಲಿದೆ ಎಂದು ಶ್ರೀಗಳು ಆಶಾದಾಯಕ ನುಡಿಗಳನ್ನಾಡಿದ್ದಾರೆ.

ರಾಜಕಾರಣದ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಅವರು, “ಅರಸನ ಅರಮನೆ ಕಳೆಗುಂದಿತು, ಪಟ್ಟದ ಆನೆ ಗಾಂಭೀರ್ಯ ಕಳೆದುಕೊಂಡಿತು” ಎಂದು ಮಾರ್ಮಿಕವಾಗಿ ತಿಳಿಸಿದರು.

WhatsApp Group Join Now

Spread the love

Leave a Reply