PM Kisan Samman Nidhi : ಪಿಎಂ ಕಿಸಾನ್ 17ನೇ ತಂತಿನ ಹಣ ಬಿಡುಗಡೆ | ಇಂದು ಮಧ್ಯಾಹ್ನ 3 ಗಂಟೆಗೆ ಇವರಿಗೆ ಮಾತ್ರ | ಈ ಕೆಲಸ ಕಡ್ಡಾಯ

Spread the love

PM Kisan Samman Nidhi : ನಮಸ್ಕಾರ ಸ್ನೇಹಿತರೇ, ಎಲ್ಲ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ದೊಡ್ಡ ಗುಡ್‌ನ್ಯೂಸ್.! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನೇಳನೇ ಕಂತಿನ ಹಣ ಬಿಡುಗಡೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ವರ್ಷಕ್ಕೆ 6,000/- ಹಣ ಒದಗಿಸುವ ಯೋಜನೆಯನ್ನ ಜಾರಿಗೊಳಿಸಿದ್ದು, ಇಲ್ಲಿಯವರೆಗೂ ಎಲ್ಲ ರೈತರ ಖಾತೆಗಳಿಗೆ ಹದಿನಾರನೇ ಕಂತಿನ ಹಣ ಜಮಾ ಆಗಿದೆ. ಆದರೆ ಎಲ್ಲ ರೈತರು ಹದಿನೇಳನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದು, ಈ ಹಣ ಈಗಾಗಲೇ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

WhatsApp Group Join Now

ಇಷ್ಟಕ್ಕೂ ಹದಿನೇಳನೇ ಕಂತಿನ ಹಣ ರೈತರ ಖಾತೆಗಳಿಗೆ ಯಾವ ದಿನದಂದು ಜಮಾ ಆಗುತ್ತೆ. ರೈತರ ಖಾತೆಗೆ ಈ ಬಾರಿ ಹಣ ಬರುವುದಕ್ಕೆ ಎಲ್ಲ ರೈತರು ಕಡ್ಡಾಯವಾಗಿ ಮಾಡಲೇಬೇಕಾಗಿರುವ ಕೆಲಸ ಏನು? ಈ ಎಲ್ಲ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : ನಿಮಗೂ ಉಚಿತ ಮನೆ ಬೇಕಾ.? ಹೇಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಉಚಿತ ಮನೆಗಾಗಿ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳು.?

WhatsApp Group Join Now

ರೈತರಿಗೆ ಸಹಾಯ ಮಾಡಲು ಮತ್ತು ಅವರ ಕೃಷಿಯನ್ನು ಪ್ರೋತ್ಸಾಹಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನ ಜಾರಿಗೆ ತಂದಿದೆ. ಅದೇ ರೀತಿ ರಾಜ್ಯ ಸರಕಾರ ಕೂಡ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ನೀಡುತ್ತಿರುವಂತಹ ಪಿಎಂ ಕಿಸಾನ್ ಯೋಜನೆ ಅಡಿ ನೋಂದಣಿಯಾದ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೆ 2000/- ರೂ. ಇಲ್ಲಿಯವರೆಗೆ ರೈತರಿಗೆ ಸಾಕಷ್ಟು ಲಾಭವಾಗಿದೆ. ಈ ಮೂಲಕ ರೈತರು ಹಲವು ಯೋಜನೆಗಳಲ್ಲಿ ಹೆಸರು ನೋಂದಾಯಿಸಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದರು.

ಇನ್ನು ಹದಿನಾರನೇ ಕಂತಿನ ಹಣ ಈಗಾಗಲೇ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಅಂದ್ರೆ ಹದಿನಾರನೇ ಕಂತಿನ ಹಣವನ್ನು ನೋಂದಾಯಿತ ರೈತರ ಖಾತೆಗೆ ಜಮಾ ಮಾಡಲಾಗಿದೆ. ಹದಿನೇಳನೇ ಕಂತಿನ ಹಣ ಯಾವಾಗ ಬರುತ್ತೆ ಎಂಬುದು ಎಲ್ಲರ ಪ್ರಶ್ನೆ. ದಾಖಲಾತಿಯೊಂದಿಗೆ ಆಧಾರ್ ಕಾರ್ಡ್ ನೋಂದಣಿ ಮಾಡದೆ ಇರುವುದು ಹಾಗು ತಾವು ನೀಡಿದ ದಾಖಲೆಗಳೊಂದಿಗೆ ಆಧಾರ್ ಕಾರ್ಡ್ ಸೀಡಿಂಗ್ ಮಾಡದಿರುವ ಕಾರಣದಿಂದ ಕೆಲವರಿಗೆ ಈ 16 ಕಂತುಗಳು ಬಂದಿಲ್ಲ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ ತಮ್ಮ ದಾಖಲೆಗಳನ್ನು ನವೀಕರಿಸಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವಂತೆ ಸರ್ಕಾರವು ಅಂತಹ ವ್ಯಕ್ತಿಗಳಿಗೆ ಸೂಚನೆ ನೀಡಿದೆ.

WhatsApp Group Join Now

ಇದನ್ನೂ ಕೂಡ ಓದಿ : PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.

ಆಧಾರ್ ಕಾರ್ಡ್ ಸೀಡಿಂಗ್ ಮಾಡಿದ್ರೆ ಕೆಲವೇ ದಿನಗಳಲ್ಲಿ ಅವರಿಗೆ ಹದಿನಾರನೇ ಕಂತು ಪಾವತಿ ಆಗುತ್ತೆ. ಕೆಲ ತಾಂತ್ರಿಕ ದೋಷಗಳಿಂದ ಕೆಲವರಿಗೆ ಈ ಹದಿನಾರನೇ ಕಂತಿನ ಹಣ ಬಂದಿಲ್ಲ ಅಂತ ಗೊತ್ತಾಗಿದೆ. ಈ ಎಲ್ಲ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಹಣ ಜಮಾ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದಲ್ಲದೆ ಪಿಎಂ ಕಿಸಾನ್ ಯೋಜನೆ ಅಡಿ ನೋಂದಣಿಯಾದ ರೈತರಿಗೆ ತಮ್ಮ ಈ-ಕೆವೈಸಿ ಖಾತೆಯನ್ನ ನವೀಕರಿಸಲು ತಿಳಿಸಲಾಗಿದೆ. ಇದು ಕಡ್ಡಾಯವೂ ಆಗಿದೆ. ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳ ಒಳಗೆ ಎಲ್ಲರ ಖಾತೆಗೆ ಹದಿನೇಳನೇ ಕಂತು ಜಮಾ ಮಾಡುವುದಾಗಿ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

1 thought on “PM Kisan Samman Nidhi : ಪಿಎಂ ಕಿಸಾನ್ 17ನೇ ತಂತಿನ ಹಣ ಬಿಡುಗಡೆ | ಇಂದು ಮಧ್ಯಾಹ್ನ 3 ಗಂಟೆಗೆ ಇವರಿಗೆ ಮಾತ್ರ | ಈ ಕೆಲಸ ಕಡ್ಡಾಯ”

Leave a Reply