Dairy & Poultry Training : ಹೈನುಗಾರಿಕೆ, ಕೋಳಿ ಸಾಕಾಣಿಕೆ ಉಚಿತ ತರಬೇತಿ – ಸಂಪೂರ್ಣ ಮಾಹಿತಿ

Dairy & Poultry Training : ನಮಸ್ಕಾರ ಸ್ನೇಹಿತರೇ, ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಹೈನುಗಾರಿಕೆ ಹಾಗೂ ಹುಲಕೋಟಿಯ ಆರ್‌ಸೆಟಿ (ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಕೋಳಿ ಸಾಕಾಣಿಕೆಯ ಉಚಿತ ತರಬೇತಿಗೆ ಗ್ರಾಮೀಣ ಭಾಗದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೈನುಗಾರಿಕೆ ತರಬೇತಿ :-

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ರುಡ್‌ಸೆಟ್ ಸಂಸ್ಥೆಯು ವಿಜಯಪುರದಲ್ಲಿ 20-01-2025 ರಿಂದ 29-01-2025ರ ವರೆಗೆ ಉಚಿತ ಹೈನುಗಾರಿಕೆ ಉದ್ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

Post Office Scheme : ಅಂಚೆ ಇಲಾಖೆಯ ಈ ಯೋಜನೆಯಡಿ ರಿಸ್ಕ್‌ ಇಲ್ಲದೇ 12 ಲಕ್ಷ ರೂ. ಗಳಿಸಿ.!

ಸದರಿ ಹೈನುಗಾರಿಕೆ ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ದಿನಕ್ಕೆ 10 ಗಂಟೆಗಳ ಕಾಲ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ತರಬೇತಿ ಪಡೆದು ತಾವು ತಮ್ಮ ಸ್ವಂತ ಉದ್ಯೋಗ ನಡೆಸಲು ಅನುಕೂಲ. ತರಬೇತಿ ಪಡೆದ ನಂತರ ಶಿಬಿರಾರ್ಥಿಗಳಿಗೆ ಸಂಸ್ಥೆಯ ಮತ್ತು ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಮಾಣಪತ್ರ ನೀಡಲಾಗುವುದು.

ತರಬೇತಿ ಸೇರಲು ಅರ್ಹತೆಗಳು

ಅಭ್ಯರ್ಥಿಯು ಗ್ರಾಮೀಣ ಪ್ರದೇಶವರಾಗಿದ್ದು ಬಿಪಿಎಲ್ / ಅಂತ್ಯೋದಯ / ಪಿಹೆಚ್‌ಹೆಚ್ ರೇಷನ್ ಕಾರ್ಡ ಅಥವಾ ನರೇಗಾ ಜಾಬ್ ಕಾರ್ಡ ಹೊಂದಿರಬೇಕು.

ತರಬೇತಿ ಸೇರುವ ಅಭ್ಯರ್ಥಿಗಳು 19 ರಿಂದ 45 ವಯೋಮಿತಿ ಒಳಗಿರಬೇಕು. ತರಬೇತಿ ಸೇರುವವರು ಕೆಳಗೆ ನೀಡಿರುವ ದೂರವಾಣಿಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ನೋಂದಣಿಗೆ ಸಂಪರ್ಕಿಸಿ : 9739511914, 9731065632, 7483987824, 9480078829, 9845490323

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಕೋಳಿ ಸಾಕಾಣಿಕೆ ತರಬೇತಿ

ಗದಗ ಹುಲಕೋಟಿಯ ಆರ್‌ಸೆಟಿ (ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಹುಲಕೋಟಿ ಗದಗ) ಸಂಸ್ಥೆಯಲ್ಲಿ ಉಚಿತ ಊಟ- ವಸತಿಯೊದಿಗೆ ಕೋಳಿ ಸಾಕಾಣಿಕೆ ತರಬೇತಿ ಜನವರಿ 20ರಿಂದ ಆರಂಭವಾಗಲಿದೆ.

ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು, ಸ್ವ ಸಹಾಯ ಗುಂಪಿನವರು ಮತ್ತು ಸಾಮಾನ್ಯ ಯಾವುದೇ 19 ರಿಂದ 44ರ ವಯಸ್ಸಿನೊಳಗಿನ ಗ್ರಾಮೀಣ ಭಾಗದ ಜನ ಅರ್ಜಿ ಸಲ್ಲಿಸಬಹುದು.

ತರಬೇತಿ ಪಡೆದವರಿಗೆ ಕೇಂದ್ರ ಸರಕಾರದಿಂದ ಪ್ರಮಾಣ ಪತ್ರ ಕೊಡಲಾಗುವುದು, ಬ್ಯಾಂಕ್ ಹಣಕಾಸಿನ ನೆರವಿಗೆ ಕ್ರಮವಹಿಸುವುದು, ತರಬೇತಿ ಪಡೆಯಲು ಇಚ್ಚಿಸುವವರು ಮೊದಲು ಅರ್ಜಿ ಸಲ್ಲಿಸಬೇಕು ಮತ್ತು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದವರಾಗಿರಬೇಕು.

ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?

ಬಿಪಿಎಲ್ ರೇಶನ್ ಕಾರ್ಡ್, ಅಂತ್ಯೋದಯ, ಎಎವೈ ಪಿಎಚ್‌ಎಚ್‌, ಆದ್ಯತಾ ಕುಟುಂಬ ರೇಶನ್ ಕಾರ್ಡ್ ಅಥವಾ ನರೇಗಾ ಜಾಬ್ ಕಾರ್ಡ್ ಇವುಗಳಲ್ಲಿ ಯಾವುದಾದರು ಒಂದನ್ನು ಹೊಂದಿರಬೇಕು.

ಎಸ್‌ಬಿಐ ಆರ್‌ಸೆಟಿ ಹುಲಕೋಟಿ ಗದಗ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ತುಂಬಿ ನಿರ್ದೇಶಕರು ಆರ್‌ಸೆಟಿ ಸಂಸ್ಥೆ ಹುಲಕೋಟಿ ಗದಗ, ಕೃಷಿ ವಿಜ್ಞಾನ ಕೇಂದ್ರ ಆವರಣ, ಹುಲಕೋಟಿ ಗದಗ ಇವರಿಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ : 9480880201

WhatsApp Group Join Now
Please follow and like us:
0
Tweet 20
Pin Share20

Leave a Reply

Social media & sharing icons powered by UltimatelySocial