‘ಮಳೆಗಾಲದಲ್ಲಿ ಪ್ರವಾಹ ಉಂಟಾದ್ರೆ ಸೂಟ್ ಧರಿಸಿ ಜನರ ಸೇವೆ ಹೇಗೆ ಮಾಡ್ತೀರಿ’; ಸಿಎಂ ವಿಜಯ್ ಗೆ ಅಣ್ಣಾಮಲೈ ಟಾಂಗ್

Spread the love

ಮೇ.10ರಂದು ಟಿವಿಕೆ ಮುಖ್ಯಸ್ಥ ವಿಜಯ್ ಅವರು ಬ್ಲಾಕ್ ಸೂಟ್ಗೆ ಬಿಳಿ ಬಣ್ಣದ ಶರ್ಟ್ ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಡೀ ದಕ್ಷಿಣ ಭಾರತದಲ್ಲೇ ತಲ್ಲಣವನ್ನು ಸೃಷ್ಟಿಸಿತ್ತು. ಇದು ಪೆರಿಯಾರ್ ಮತ್ತು ಇ.ವಿ. ರಾಮಸ್ವಾಮಿ ಅವರ ವಿಚಾರಧಾರೆಯನ್ನು ಬಿತ್ತರಿಸುವ ಪರಿಕಲ್ಪನೆ ಎನ್ನಲಾಗಿತ್ತು.

ಆದರೆ, ಸಿಎಂ ವಿಜಯ್ ಅವರ ಈ ನಡೆ ಮತ್ತು ಕರುಣಾನಿಧಿ ಮತ್ತು ಎಂಕೆ ಸ್ಟಾಲಿನ್ರ ಪಂಚೆ ರಾಜಕೀಯದ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ನಾಯಕ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ತಮಿಳುನಾಡಿನಲ್ಲಿ ಪಂಚೆ ಧರಿಸಿ ಅದಕ್ಕೆ ಬಿಳಿ ಬಣ್ಣದ ಶರ್ಟ್ ಧರಿಸೋದು ಸಾಮಾನ್ಯ ಅದರ ಜೊತೆಗೆ ಹಿಂದೂಗಳು ಹಣೆಗೆ ವಿಭೂತಿ ಇಡವುದು ಕಡ್ಡಾಯ. ಆದರೆ. ಈಪ್ರವೃತ್ತಿಯನ್ನು ವಿಜಯ್ ತಮ್ಮ ಪದಗ್ರಹಣ ಕಾರ್ಯಕ್ರಮದಲ್ಲಿ ಸ್ಥಗಿತಗೊಳಿಸಿದ್ದರು. ಕಪ್ಪು ಪ್ಯಾಂಟ್, ಕೋಟ್, ಬಿಳಿ ಶರ್ಟ್ ಧರಿಸಿ ಎಲ್ಲರು ಅಚ್ಚರಿ ಪಡುವಂತೆ ಮಾಡಿದ್ದರು.

ಅಣ್ಣಾಮಲೈ ಹೇಳಿದ್ದೇನು?

ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಸಂಸದ ತೇಜಸ್ವಿ ಸೂರ್ಯ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಅಲ್ಲ ‘ನನಗೆ ಒಂದು ಸಂಶಯ ಕಾಡುತ್ತಿದೆ. ತಮಿಳುನಾಡಿನಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾದರೆ, ಜನರ ಬಳಿ ಮಾತನಾಡಲು ಮತ್ತು ಪ್ರವಾಹದ ಪರಿಸ್ಥಿತಿಯನ್ನು ಪರೀಕ್ಷಿಸಲು ಮಾಜಿ ಸಿಎಂ ಕರುಣಾನಿಧಿಯವರು ಪಂಚೆಯನ್ನು ಮೊಣಕಾಲಿನಿಂದ ಮೇಲೆತ್ತಿಕೊಂಡು ನೀರಿಗೆ ಇಳಿದು ವಿಚಾರಿಸಿದ್ದರು. ಆ ಫೋಟೋವನ್ನು ಕಂಡಿದ್ದೇನೆ. ಅವರ ನಂತರ ಮಗ ಎಂಕೆ ಸ್ಟಾಲಿನ್ ಅವರು ಇದೇ ರೀತಿ ನೀರಿನಲ್ಲಿ ನಿಂತು ತೆಗೆಸಿಕೊಂಡಿರುವ ಫೋಟೋ ಕಂಡಿದ್ದೇನೆ. ಉದಯ ನಿಧಿ ಸ್ಟಾಲಿನ್ ಅವರನ್ನು ಹೀಗೆ ಕಂಡಿದ್ದೇನೆ.ಆದರೆ ಈ ಸೂಟ್ ಧರಿಸಿರುವ ನೂತನ ಸಿಎಂ ಹೇಗೆ ಮಳೆ ನೀರಿನಲ್ಲಿ ನಡೆದು ಹೋಗಿ ಜನರ ಕಷ್ಟಗಳನ್ನು ಆಲಿಸುತ್ತಾರೆ ಎಂಬುದು ನನ್ನ ಪ್ರಶ್ನೆ’ ಎಂದು ವಿಜಯ್ ಪದಗ್ರಹಣದ ನಡೆಯನ್ನು ಕಂಡು ವ್ಯಂಗ್ಯವಾಡಿದ್ದಾರೆ.

ಸಾಮಾನ್ಯವಾಗಿ ರಾಜಕಾರಣಿಗಳು ಸಾಮಾನ್ಯ ಜನರ ಬಳಿ ಮಾತನಾಡಲು, ಸಾಮಾನ್ಯರಂತೆ ಕಾಣಿಸಿಕೊಂಡು ಅವರ ಕಷ್ಟಗಳನ್ನು ಆಲಿಸಲು ಪ್ರಯತ್ನಿಸುತ್ತಾರೆ. ವಿಜಯ್ ಅವರ ಬ್ಲಾಕ್ ಸ್ಯೂಟ್ ಸಂಸ್ಕೃತಿಯನ್ನು ಜನರಿಂದ ದೂರ ಇರುವ ಸಂಸ್ಕೃತಿ ಎಂದಿದ್ದಾರೆ. ಅಧಿಕಾರ ನಡೆಸುವುದು ಸಿನಿಮಾ ಶೈಲಿಯಲ್ಲಿ ಅಲ್ಲ. ವಾಸ್ತವವಾಗಿ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.

WhatsApp Group Join Now

ಅಣ್ಣಾಮಲೈ ಅವರ ಈ ಹೇಳಿಕೆಗೆ ಅಕ್ಕ -ಪಕ್ಕ ಕುಳಿತಿದ್ದ ನಿರೂಪಕಿ, ತೇಜಸ್ವಿ ಸೂರ್ಯ ಮತ್ತು ಶಶಿ ತರೂರ್ ಅವರು ನಗಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದಶಕಕ್ಕೂ ಹೆಚ್ಚು ಕಾಲದಿಂದ ತಮಿಳುನಾಡಿನಲ್ಲಿ ಪ್ರವಾಹದ ಸಮಸ್ಯೆ ತಾಂಡವವಾಡುತ್ತಿದೆ. ಇಲ್ಲಿಯವರೆಗೂ ದ್ರಾವಿಡ ನಾಡನ್ನು ಆಳಿದ ಮಾಜಿ ಸಿಎಂಗಳಾದ ಕರುಣಾನಿಧಿ, ಎಂಜಿಆರ್ ಮತ್ತು ಜಯಲಲಿತಾರು ಯಾವುದೇ ಸಮಸ್ಯೆಯನ್ನು ಪರಿಹರಿಸಲಿಲ್ಲ. ಅವರ ನಂತರ ಬಂದ ಸ್ಟಾಲಿನ್ ಅವರು ಸಹ ಇದೇ ದಾರಿಯಲ್ಲಿದ್ದಾರೆ ಎನ್ನುವುದು ಅಣ್ಣಾಮಲೈ ಅವರ ಪರೋಕ್ಷ ಮಾತಾಗಿದೆ.


Spread the love

Leave a Reply