ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಇಬ್ಬರು ಮಕ್ಕಳ ತಾಯಿ : ಪ್ರೇಮಿ ಕೈಕೊಟ್ಟನೆಂದು ಮರಳಿ ಗಂಡನ ಬಳಿ ಬಂದ ಮಹಿಳೆ

Spread the love

ತನ್ನ ಮಡದಿ, ಇಬ್ಬರು ಮುದ್ದಾದ ಮಕ್ಕಳನ್ನು ತೊರೆದು ಪ್ರೇಮಿಯೊಂದಿಗೆ ಪರಾರಿಯಾಗಿದ್ದಾಳೆ ಎಂಬ ಸುದ್ದಿ ತಿಳಿದು ಗಂಡ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದನು. ಆ ಮಹಿಳೆ ಸುಮಾರು 4 ತಿಂಗಳು ತನ್ನ ಪ್ರೇಮಿಯ ಜೊತೆ ಇದ್ದಳು. ಆದರೆ ಇದೀಗ ಮತ್ತೆ ಗಂಡನ ಮನೆಗೆ ಮರಳಿದ್ದಾಳೆ.

ಆಕೆಯ ಹೇಳಿಕೆಯ ಪ್ರಕಾರ, ಯಾರಿಗಾಗಿ ಮನೆ ಬಿಟ್ಟು ಹೋಗಿದ್ದಳೋ ಆ ವ್ಯಕ್ತಿಯೇ ಈಗ ಆಕೆಯನ್ನು ಬಿಟ್ಟು ಬೇರೆಡೆ ಹೋಗಿದ್ದಾನೆ. ಹೀಗಾಗಿ ತನ್ನ ಬಳಿ ಬೇರೆ ದಾರಿ ಉಳಿದಿರಲಿಲ್ಲ, ಅದಕ್ಕಾಗಿಯೇ ವಾಪಸ್ ಬರಬೇಕಾಯಿತು ಎಂದು ಆಕೆ ಹೇಳಿದ್ದಾಳೆ.

ಆದರೆ ಗಂಡ ಮಾತ್ರ ಆಕೆಯನ್ನು ಮತ್ತೆ ಜೊತೆಗಿಟ್ಟುಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿದ್ದಾನೆ. ಪತ್ನಿ ಹಲವು ಬಾರಿ ಮನವಿ ಮಾಡಿಕೊಂಡರೂ, ಆತ ತನ್ನ ನಿರ್ಧಾರವನ್ನು ಬದಲಿಸಿಲ್ಲ.

“ನಾನು ನನ್ನ ಮಕ್ಕಳನ್ನು ಒಬ್ಬನೇ ಸಾಕುತ್ತೇನೆ. ಆದರೆ ಈ ಮಹಿಳೆಯ ಜೊತೆ ಮತ್ತೆ ಬದುಕಲು ನನಗೆ ಸಾಧ್ಯವಿಲ್ಲ” ಎಂದು ಖಡಾಖಂಡಿತವಾಗಿ ಹೇಳಿದ್ದಾನೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

WhatsApp Group Join Now

Spread the love

Leave a Reply