Server Problem  : ಆಸ್ತಿ ನೋಂದಣಿಯ ‘ಕಾವೇರಿ ವೆಬ್‌ಸೈಟ್‌’ ಸರ್ವರ್ ಮತ್ತೆ ಡೌನ್ ; ದಿನಕ್ಕೆ 550 ಅಷ್ಟೇ ನೋಂದಣಿ

Spread the love

Server Problem : ನಾಲ್ಕು ದಿನ ಗಳಿಂದ ಸರ್ವರ್‌ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ಆಸ್ತಿಗಳ ಖರೀದಿ, ಮಾರಾಟ ಸಹಿತ ನೋಂದಣಿ ಪ್ರಕ್ರಿಯೆ ಸ್ತಬ್ಧಗೊಂಡಿದ್ದು ಜನರು ಪರದಾಡುವಂತಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮೇಲ್ದರ್ಜೆಗೇರಿಸಿದ “ಕಾವೇರಿ 2.0′ ತಂತ್ರಾಂಶವನ್ನು ಬಳಕೆ ಮಾಡುತ್ತಿದೆ.

ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana

ಆದರೆ ಸರ್ವರ್‌ ಸಮಸ್ಯೆಯಿಂದ 10 ದಿನಗಳಿಂದ ಋಣಭಾರ ಪ್ರಮಾಣಪತ್ರ (ಇ.ಸಿ.) ವಿತರಣೆಯಲ್ಲಿ ಸಮಸ್ಯೆ ಉಂಟಾಗಿತ್ತು. ಅದರ ಮುಂದುವರಿದ ಭಾಗವಾಗಿ 4 ದಿನಗಳಿಂದ ಆಸ್ತಿ ಖರೀದಿ ಮತ್ತು ಮಾರಾಟ ನೋಂದಣಿ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ.

ರಾಜ್ಯದಲ್ಲಿ ದಿನಕ್ಕೆ 8ರಿಂದ 8,500 ನೋಂದಣಿಗಳು ಆಗುತ್ತಿದ್ದವು. ಇದ ರಿಂದ ಅಂದಾಜು 80-100 ಕೋಟಿ ರೂ. ಆದಾಯ ಬರುತ್ತಿತ್ತು. ಆದರೆ ಮಂಗಳವಾರ ಕೇವಲ 500-550 ನೋಂದಣಿ ಸಾಧ್ಯವಾಗಿದ್ದು 15-18 ಕೋ.ರೂ. ಆದಾಯ ಬಂದಿದೆ. ಅದೂ ಬಹುತೇಕ ಹಳೆಯವು. ಇದುವರೆಗೆ ಸರ್ವರ್‌ ಸಮಸ್ಯೆ ಏನು ಹಾಗೂ ಯಾವಾಗ ಇತ್ಯರ್ಥವಾಗಲಿದೆ ಎಂಬ ಸ್ಪಷ್ಟ ಮಾಹಿತಿಯೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಬಳಿ ಇಲ್ಲ.

ಈ ಹಿನ್ನೆಲೆಯಲ್ಲಿ ಸಮಸ್ಯೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ತಾಲೂಕು ಮಟ್ಟದಲ್ಲಿಯ ಉಪನೋಂದಣಾಧಿಕಾರಿ ಕಚೇರಿಗಳ ಮುಂದೆ ಜನ ದಿನಗಟ್ಟಲೆ ಕಾದು, ನೋಂದಣಿಯಾಗದೆ ನಿರಾಸೆಯಿಂದ ಹಿಂತಿರುಗುತ್ತಿರುವುದು ಸಾಮಾನ್ಯವಾಗಿದೆ. ಸಾರ್ವಜನಿಕ ಲಾಗ್‌ಇನ್‌ ಮೂಲಕವೇ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆ, ದಾಖಲೆಗಳ ಅಪ್‌ಲೋಡ್‌ ಮಾಡುವುದು, ಮಾರಾಟ ಮತ್ತು ಖರೀದಿಸುವವರ ಫೋಟೋ ಮತ್ತು ಹೆಬ್ಬೆಟ್ಟು ಎಂಟ್ರಿ ಸಹಿತ ಪ್ರತಿಯೊಂದು ಆಗಬೇಕು. ಆದರೆ ಲಾಗ್‌ಇನ್‌ ಆಗುತ್ತಲೇ ಇಲ್ಲ. ವಿಚಿತ್ರವೆಂದರೆ ಸಮಸ್ಯೆಯ ಮೂಲವೂ ಗೊತ್ತಾಗುತ್ತಿಲ್ಲ. ಇದು ಒಂದೆಡೆ ಜನರಿಗೆ ಕಿರಿಕಿರಿ ಉಂಟಾಗುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಹಲವು ಹಂತಗಳಲ್ಲಿ ನೋಂದಣಿ ಪ್ರಕ್ರಿಯೆ ಅಪೂರ್ಣವಾಗಿದೆ. ಬಹುತೇಕ ಕಡೆಗಳಲ್ಲಿ ಇಸಿ ವಿತರಣೆಯೇ ಆಗಿಲ್ಲ. ಫೋಟೋ ಪಕ್ಕದಲ್ಲಿ ಹೆಬ್ಬೆಟ್ಟು ಗುರುತು ಬಂದಿಲ್ಲ. ಹಲವೆಡೆ ಫೋಟೋ ಬಂದಿಲ್ಲ. ಮುದ್ರಾಂಕ ಶುಲ್ಕ ಪಾವತಿಸಿದ್ದರೂ ಇಲಾಖೆ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿಲ್ಲ. ಹೀಗೆ ಅರ್ಧಕ್ಕೇ ಸ್ಥಗಿತಗೊಂಡಿವೆ ಎಂದು ಜನ ಆಕ್ರೋಶ ಹೊರಹಾಕುತ್ತಿದ್ದಾರೆ.

ಆಸ್ತಿಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ನೋಂದಣಿ ಮಾತ್ರವಲ್ಲ, ಬ್ಯಾಂಕ್‌ ಭೋಜಾ ನೋಂದಣಿ, ಮದುವೆ ನೋಂದಣಿ ಒಳಗೊಂಡಂತೆ ಉಪನೋಂದಣಾಧಿಕಾರಿ ಕಚೇರಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೂ ಇದರಿಂದ ಹಿನ್ನಡೆ ಉಂಟಾಗಿದೆ. ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಹೇಳಲಾಗದು. ಇದರಿಂದ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಂತಾಗಲಿದೆ ಎಂದು ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?

ಸಮಸ್ಯೆಗೆ ಕಾರಣ ಏನು.?

ಸರ್ವರ್‌ ಸಮಸ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ ಮೇಲ್ನೋಟಕ್ಕೆ ಈ ಮೊದಲು ಉಪ ನೋಂದಣಾಧಿಕಾರಿ ಕಚೇರಿಗೆ ಲಾಗ್‌ಇನ್‌ ನೀಡಲಾಗಿತ್ತು. ಈಚೆಗೆ ಸಾರ್ವಜನಿಕರಿಗೂ ಲಾಗ್‌ಇನ್‌ ನೀಡಲಾಗಿದೆ. ಇದರಿಂದ ಸರ್ವರ್‌ ಮೇಲೆ ಒತ್ತಡ ಹೆಚ್ಚಾಗಿದೆ.

ಪರಿಣಾಮ ಏನು.?

ಆಸ್ತಿ ಖರೀದಿ, ಮಾರಾಟ ನೋಂದಣಿ, ಋಣ ಭಾರ ಪ್ರಮಾಣಪತ್ರ ಅಪ್‌ಲೋಡ್‌, ನೋಂದಣಿಗೆ ನೀಡುವ ದೃಢೀಕೃತ ನಕಲು ವಿತರಣೆ, ಮದುವೆ ನೋಂದಣಿ, ಬ್ಯಾಂಕ್‌ ಸಾಲ ನೋಂದಣಿ ಸ್ಥಗಿತ.

WhatsApp Group Join Now

Spread the love

Leave a Reply