KPTCL Recruitment 2024 : ಕೆಪಿಟಿಸಿಎಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ

Spread the love

KPTCL Recruitment 2024 : ನಮಸ್ಕಾರ ಸ್ನೇಹಿತರೇ, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (KPTCL) ನಲ್ಲಿ ಖಾಲಿ ಇರುವ 411 ಕಿರಿಯ ಸ್ಟೇಷನ್‌ ಪರಿಚಾರಕ ಮತ್ತು 81 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗೆ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಇರುವ 2268 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗೆ ಇಂದಿನಿಂದ (ಅಕ್ಟೋಬರ್‌ 21) ಅರ್ಜಿಯನ್ನ ಆಹ್ವಾನಿಸಲಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅರ್ಜಿ ನಮೂನೆ, ವಯೋಮಿತಿ, ವಿದ್ಯಾರ್ಹತೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?

ಹುದ್ದೆಗಳ ವಿವರ :-

ಕಿರಿಯ ಸ್ಟೇಷನ್‌ ಪರಿಚಾರಕ :- ಸಾಮಾನ್ಯ ಅಭ್ಯರ್ಥಿಗಳಿಗೆ 40, ಗ್ರಾಮೀಣ ಮೀಸಲಾತಿ 22, ಮಾಜಿ ಸೈನಿಕ-5, ಕನ್ನಡ ಮಾಧ್ಯಮ ಅಭ್ಯರ್ಥಿ-1, ಯೋಜನೆ ನಿರಾಶ್ರಿತ ಅಭ್ಯರ್ಥಿ-1, ವಿಶೇಷ ಚೇತನ ಅಭ್ಯರ್ಥಿ-5, ಶ್ರವಣ ದೋಷ ಅಭ್ಯರ್ಥಿ-1 ಸೇರಿದಂತೆ 75 ಹುದ್ದೆಗಳಿವೆ.

ಬ್ಯಾಕ್‌ಲಾಗ್‌ ಹುದ್ದೆಗಳು :- ಸಾಮಾನ್ಯ-23, ಗ್ರಾಮೀಣ ಮೀಸಲಾತಿ 3, ಮಾಜಿ ಸೈನಿಕ-2, ಯೋಜನೆ ನಿರಾಶ್ರಿತ-1, ವಿಕಲ ಚೇತನ ಅಭ್ಯರ್ಥಿ-2 ಸೇರಿದಂತೆ ಒಟ್ಟು 31 ಹುದ್ದೆಗಳಿವೆ. ಒಟ್ಟು 106 ಕಿರಿಯ ಸ್ಟೇಷನ್‌ ಪರಿಚಾರಕ ಹುದ್ದೆಗಳಿವೆ.

ಕಿರಿಯ ಪವರ್‌ಮ್ಯಾನ್‌ :- ಸಾಮಾನ್ಯ 4, ಮಾಜಿ ಸೈನಿಕ 1, ಕನ್ನಡ ಮಾಧ್ಯಮ ಅಭ್ಯರ್ಥಿ 1 ಸೇರಿದಂತೆ 6 ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳು ಕೆಪಿಟಿಸಿಎಲ್‌ನಲ್ಲಿದೆ.

ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಬೆಸ್ಕಾಂನಲ್ಲಿ ಎಷ್ಟು ಹುದ್ದೆಗಳಿವೆ.?

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದಲ್ಲಿ ಪರಿಶಿಷ್ಟ ಜಾತಿ-105, ಪರಿಶಿಷ್ಟ ವರ್ಗ-44, ಸಾಮಾನ್ಯ-272, ಪ್ರವರ್ಗ 1- 25, ಪ್ರವರ್ಗ 2ಎ- 92, ಪ್ರವರ್ಗ 2b 25, ಪ್ರವರ್ಗ 3ಎ-25, 2ಬಿ-20 ಸೇರಿದಂತೆ ಒಟ್ಟು 618 ಹುದ್ದೆಗಳಿವೆ. ಬ್ಯಾಕ್‌ಲಾಗ್‌ನಲ್ಲಿ 288 ಹುದ್ದೆಗಳಿವೆ.

ಚೆಸ್ಕಾಂನಲ್ಲಿ ಎಷ್ಟು ಹುದ್ದೆಗಳಿವೆ.?

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದಲ್ಲಿ 270 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿವೆ. 39 ಬ್ಯಾಗ್‌ಲ್ಯಾಗ್‌ ಹುದ್ದೆಗಳಿವೆ.

ಹೆಸ್ಕಾಂನಲ್ಲಿ ಉದ್ಯೋಗಾವಕಾಶ :-

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದಲ್ಲಿ 500 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿವೆ. 60 ಬ್ಯಾಕ್‌ಲಾಗ್‌ ಹುದ್ದೆಗಳಿವೆ.

ಇದನ್ನೂ ಕೂಡ ಓದಿ : Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಮೆಸ್ಕಾಂ ಹುದ್ದೆಗಳ ವಿವರ :-

ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದಲ್ಲಿ 415 ಹುದ್ದೆಗಳು ಮತ್ತು 34 ಬ್ಯಾಕ್‌ಲಾಗ್‌ ಹುದ್ದೆಗಳಿವೆ.

ಜೆಸ್ಕಾಂ ಗುಲ್ಬಾರ್ಗಾದಲ್ಲಿ ಎಷ್ಟು ಹುದ್ದೆಗಳಿವೆ?

ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದಲ್ಲಿ 15 ಹುದ್ದೆಗಳು ಮತ್ತು 29 ಬ್ಯಾಕ್‌ಲಾಗ್‌ ಹುದ್ದೆಗಳಿವೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು.?

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ 2024 ನವೆಂಬರ್ 20ರಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು.

ಇದನ್ನೂ ಕೂಡ ಓದಿ : Subsidy Scheme : ರೈತರ ಜಮೀನಿಗೆ ಬೇಲಿ, ತಂತಿ ಬೇಲಿ ಹಾಕಿಕೊಳ್ಳಲು 90% ಸಬ್ಸಿಡಿ ಸಹಾಯಧನ – ಬೇಕಾಗುವ ದಾಖಲೆಗಳೇನು.?

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ :- 21 ಅಕ್ಟೋಬರ್‌ 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 25 ನವೆಂಬರ್‌ 2024

WhatsApp Group Join Now

Spread the love

Leave a Reply