Honey Bee Farming Subsidy : ನಮಸ್ಕಾರ ಸ್ನೇಹಿತರೇ, ರೈತರಿಗೆ ತೋಟಗಾರಿಕಾ ಇಲಾಖೆಯಿಂದ ಜೇನು ಕೃಷಿ ಮಾಡಲು ಎಷ್ಟು ಸಹಾಯಧನ ಸಿಗುತ್ತದೆ.? ಜೇನು ಸಾಕಣೆಯಿಂದ ರೈತರಿಗಾಗುವ ಲಾಭವೇನು? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಜೇನು ಕೃಷಿಗೆ (Bee Farming) ದೊಡ್ಡ ಮಟ್ಟದ ಬಂಡವಾಳ ಬೇಡ. ಕಡಿಮೆ ಬಂಡವಾಳದಲ್ಲಿ ಬಂಪರ್ ಆದಾಯ ಪಡೆಯುವ ವಿಶಿಷ್ಠ ಉಪ ಕಸುಬು ಇದು. ಜೇನು ಪ್ರಕೃತಿದತ್ತವಾಗಿ ಸೃಜಿಸುವ ಉತ್ಪನ್ನವಾದ್ದರಿಂದ ಇದಕ್ಕೆ ಯಾವುದೇ ರೀತಿಯ ನಿರ್ಧಿಷ್ಟ ಸ್ಥಳವೂ ಬೇಡ. ಜೇನಿಗೆ ಮಕರಂದ ಸವಿಯಲು ಪೂರಕವಾದ ಸ್ಥಳವಾದರೆ ಸಾಕು. ರೈತರು ಜಮೀನಿನ ಒಂದು ಭಾಗದಲ್ಲೇ ಇತರ ಕೃಷಿಯ ಜೊತೆಗೆ ಜೇನು ಸಾಕಾಣಿಕೆಯನ್ನು ನಡೆಸಬಹುದು.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಜೇನು ಸಾಕಾಣಿಕೆಯನ್ನು ಕೃಷಿ ಜತೆಗೆ ಉಪ ಕಸುಬನ್ನಾಗಿ ಮಾಡಿಕೊಂಡಿರುವ ಹಲವರು ವರ್ಷಕ್ಕೆ ಲಕ್ಷ ಲಕ್ಷ ಗಳಿಸುತ್ತಿರುವ ನಿದರ್ಶನಗಳಿವೆ. ತೀರಾ ಸಣ್ಣ ಮಟ್ಟದಲ್ಲಿ ಅಂದರೆ 5ರಿಂದ 10 ಜೇನು ಪೆಟ್ಟಿಗೆ ಇಟ್ಟುಕೊಂಡಿರುವವರು ಕೂಡ ಹೆಚ್ಚು ಪರಿಶ್ರಮವಿಲ್ಲದೆ ತಿಂಗಳಿಗೆ ಐದಾರು ಸಾವಿರ ರೂಪಾಯಿ ಗಳಿಸುವವರಿದ್ದಾರೆ.
ರೈತರಿಗೆ ಬಂಪರ್ ಇಳುವರಿ
ಜೇನು ಸಾಕಣೆಯಿಂದ ನೇರ ಆದಾಯ ಮಾತ್ರವಲ್ಲ, ಜೇನು ಪರಾಗಸ್ಪರ್ಶದಿಂದ ಬೆಳೆಯ ಇಳುವರಿ ಹೆಚ್ಚಿಸಿಕೊಳ್ಳುವ ಮೂಲಕ ಪರೋಕ್ಷ ಆದಾಯವನ್ನೂ ಗಳಿಸಬಹುದು. ಜೇನುನೊಣಗಳು ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುವುದರಿಂದ ಬೆಳೆ ಇಳುವರಿ ಹೆಚ್ಚಾಗುತ್ತದೆ. ಜೇನುನೊಣಗಳ ಪರಾಗ ಸ್ಪರ್ಶದಿಂದ ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಅಡಿಕೆ ಇಳುವರಿಯಲ್ಲಿ ಶೇ.20, ಟೊಮೆಟೋ ಬೆಳೆಯಲ್ಲಿ ಶೇ.25, ದ್ರಾಕ್ಷಿ ಬೆಳೆಯಲ್ಲಿ ಶೇ.35, ಸೌತೆ, ಕುಂಬಳ, ಸೀಬೆಯಲ್ಲಿ ಶೇ.40 ಹಾಗೂ ಕಲ್ಲಂಗಡಿ ಬೆಳೆಯಲ್ಲಿ ಶೇ.80ರಷ್ಟು ಅಧಿಕ ಇಳುವರಿ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಏಲಕ್ಕಿ, ನಿಂಬೆ, ತರಕಾರಿ, ಹೂವು, ಔಷಧಿ ಹಾಗೂ ಸುಗಂಧ ದ್ರವ್ಯ ಬೆಳೆಗಳೂ ಸಹ ಪರಾಗ ಸ್ಪರ್ಶದಿಂದ ಲಾಭದಾಯಕ ಪ್ರಯೋಜನ ಹೊಂದಲಿವೆ.
Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಸರ್ಕಾರದಿಂದ ಸಿಗುವ ಸವಲತ್ತುಗಳು
ಜೇನು ಸಾಕಾಣಿಕೆಗೆ ಸರ್ಕಾರದಿಂದಲೂ ಬಹಳಷ್ಟು ಸವಲತ್ತುಗಳಿವೆ. ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದೆ ಆರಂಭಿಸಿರುವ ಆತ್ಮನಿರ್ಭರ ಯೋಜನೆಯಡಿ ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದರಲ್ಲಿ ಜೇನು ಕೃಷಿಗೆ ಅತ್ಯುತ್ತಮ ಉತ್ತೇಜನ ಸಿಗುತ್ತಿದೆ. ರಾಷ್ಟ್ರೀಯ ಜೇನು ಮಂಡಳಿ (National Honey Board) ನಬಾರ್ಡ್ ಸಹಯೋಗದೊಂದಿಗೆ ಭಾರತದಲ್ಲಿ ಜೇನುಸಾಕಣೆಗೆ ಹಣಕಾಸು ಒದಗಿಸುತ್ತಿದೆ.
ಜೇನು ತುಪ್ಪ ಸಂಸ್ಕರಣೆ ಘಟಕ ನಿರ್ಮಾಣಕ್ಕೂ ನೆರವು ಕಲ್ಪಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಖಾದಿ ಆಯೋಗವೂ ಜೇನು ಕೃಷಿಗೆ ಬಹಳ ದೊಡ್ಡಮಟ್ಟದಲ್ಲಿಯೇ ನೆರವು ನೀಡುತ್ತಿದೆ. ಬೆಳೆಗಳ ಇಳುವರಿ ಹೆಚ್ಚಳಕ್ಕೆ ಜೇನು ಸಾಕಣೆ ಅತ್ಯಮೂಲ್ಯವಾಗಿ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಜೇನು ಕೃಷಿಗೆ ಸಾಕಷ್ಟು ನೆರವು ನೀಡುತ್ತಿದೆ.
ತೋಟಗಾರಿಕಾ ಇಲಾಖೆ ನೆರವು
ಜೇನು ಸಾಕಾಣಿಕೆಗೆ ಪೋತ್ಸಾಹ ನೀಡಲು ತೋಟಗಾರಿಕೆ ಇಲಾಖೆ ಕೋಟಿ ಕೋಟಿ ಅನುದಾನ ಮೀಸಲಿಡುತ್ತದೆ. ಮಧುವನ ಹಾಗೂ ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆಯಡಿ ಶೇ.75ರಂತೆ 3,375 ರೂಪಾಯಿಗಳ ಸಹಾಯಧನ ನೀಡಲಾಗುತ್ತಿದೆ. ಜೇನು ಸಾಕಣೆ ಮಾಡುವ ಸಣ್ಣ ರೈತರಿಗೆ ತೋಟಗಾರಿಕೆ ಇಲಾಖೆ ಶೇ.75 ಸಬ್ಸಿಡಿ ನೀಡುತ್ತಿದೆ. ಎಸ್ಸಿ-ಎಸ್ಟಿ ಸಮುದಾಯದವರಿಗೆ ಶೇ.90 ಸಹಾಯಧನದ ಸೌಲಭ್ಯ ಇದೆ.
Business Loan : ಸ್ವ-ಉದ್ಯೋಗ ಆರಂಭಿಸಲು 2 ಲಕ್ಷ ರೂಪಾಯಿವರೆಗೆ ಸಾಲ ಹಾಗು ಸಹಾಯಧನ.! ಬೇಕಾಗುವ ದಾಖಲೆಗಳೇನು.?
ಜಮೀನು ಹೊಂದಿರುವ ರೈತರಿಗೆ ಗರಿಷ್ಟ 10 ಜೇನು ಪೆಟ್ಟಿಗೆ, ಕುಟುಂಬ (ಜೇನುನೊಣಗಳ ಸಮೂಹ) ಹಾಗೂ ಸ್ಟಾಂಡ್ ಖರೀದಿಗೆ ಸಹಾಯಧನ ಲಭ್ಯವಿದ್ದರೆ, ಜಮೀನು ರಹಿತ ಕುಟುಂಬಗಳಿಗೆ ಗರಿಷ್ಟ 4 ಜೇನು ಪೆಟ್ಟಿಗೆ, ಕುಟುಂಬ (ಜೇನುನೊಣಗಳ ಸಮೂಹ) ಹಾಗೂ ಸ್ಟಾಂಡ್ ಖರೀದಿಸಲು ಇಲಾಖೆ ವತಿಯಿಂದ ಸಹಾಯಧನ ಸಿಗಲಿದೆ.
ಜೇನುಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಲಾಭ ಗಳಿಸಬಹುದಾಗಿದೆ. ಅಲ್ಲದೇ ಕೃಷಿಕರಲ್ಲದವರೂ ಸಹ ಜೇನುಕೃಷಿಯನ್ನು ನಡೆಸಬಹುದು. ತಾಲ್ಲೂಕು ತೋಟಗಾರಿಕೆ ಇಲಾಖೆಯ ಮೂಲಕ ಸರ್ಕಾರದ ಸಹಾಯಧನ ಪಡೆಯಬಹುದಾಗಿದೆ.
ಜೇನು ಕೃಷಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ : 9620736384, 0816-2211808
- ಮೇಷದಿಂದ ಮೀನದವರೆಗೆ : ಇಂದು ಯಾವ ರಾಶಿಗೆ ಶುಭ, ಯಾವ ರಾಶಿಗೆ ಎಚ್ಚರಿಕೆ.?
- ಕಿಡ್ನಿ ಸಮಸ್ಯೆ ಇರುವವರಿಗೆ ಈ ಆಹಾರಗಳು ವಿಷಕ್ಕೆ ಸಮ; ಯಾವುದೇ ಕಾರಣಕ್ಕೂ ಸೇವಿಸಬೇಡಿ!
- ‘ರೋಹಿತ್ – ನನ್ನ ಸಂಬಂಧ ಕೇವಲ ಕೋಚ್ ಹಾಗೂ ನಾಯಕನದ್ದಲ್ಲ’ : ಹಿಟ್ ಮ್ಯಾನ್ ಬಗ್ಗೆ ಫಿಲ್ಟರ್ ಇಲ್ಲದೆ ಮಾತನಾಡಿದ ಗೌತಮ್ ಗಂಭೀರ್
- 2027ರ ವಿಶ್ವಕಪ್ಗೆ ರೋಹಿತ್ – ವಿರಾಟ್ ಫಿಕ್ಸ್.? ಸುರೇಶ್ ರೈನಾ ನೀಡಿದ ‘90% ಸೀಕ್ರೆಟ್’ ಏನು.?
- ವಿಶ್ವಕಪ್ ಗೆಲ್ಲಲು 17 ವರ್ಷ ತೆಗೆದುಕೊಳ್ಳಲಿಲ್ಲ : ಗಂಭೀರ್ ತಿರುಗೇಟು.!
- ಸಾವಿಗೂ ಮುನ್ನ ಯುವಕನ ಹೆಸರು ಹೇಳಿ ಜೀವ ಬಿಟ್ಟ ಗೃಹಿಣಿ : ವಾಟ್ಸಾಪ್ ಬ್ಲ್ಯಾಕ್ಮೇಲ್ಗೆ ಮಹಿಳೆ ಬಲಿ.!
- ಜಾತಕ ಸೆಪ್ಟೆಂಬರ್ 25 : ಇಂದಿನ ದಿನಭವಿಷ್ಯ : ಶುಕ್ರವಾರದ 12 ರಾಶಿಗಳ ಫಲ ಹೇಗಿದೆ.?
- ಜಾತಕ ಸೆಪ್ಟೆಂಬರ್ 24 : ಮೇಷ, ಮಿಥುನ ರಾಶಿಯವರಿಗೆ ಯಶಸ್ಸು, ಬಡ್ತಿಯ ಶುಭ ಸುದ್ದಿ, ಆರ್ಥಿಕ ಲಾಭದ ಯೋಗ
- ಮೂತ್ರಪಿಂಡದ ಹಾನಿಯ ಮುನ್ಸೂಚನೆಗಳಿವು! ದೇಹದ ಈ 5 ಜಾಗಗಳಲ್ಲಿ ನೋವು ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ
- ಎಡ ಭುಜದ ಬಿಗಿತವನ್ನು ಗ್ಯಾಸ್ ಎಂದು ತಿಳಿದುಕೊಂಡರೆ ಜೀವಕ್ಕೆ ಅಪಾಯ! ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
- Lung Cancer : ಅಗರಬತ್ತಿ ಹೊಗೆ ಸಿಗರೇಟ್ಗಿಂತ ಹೆಚ್ಚು ಅಪಾಯಕಾರಿ? ಶ್ವಾಸಕೋಶ ಕ್ಯಾನ್ಸರ್ಗೆ ಕಾರಣವಾಗಬಹುದು ಎಚ್ಚರ.!
- ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ; ಸೆ.24ರಂದು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್
- 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ : ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
- ಸೆಪ್ಟೆಂಬರ್ 23 : ಇಂದಿನ ರಾಶಿ ಭವಿಷ್ಯ : ಉದ್ಯೋಗ – ವ್ಯವಹಾರದಲ್ಲಿ ಯಾರಿಗೆ ಲಾಭ.?
- DC ಕಚೇರಿ FDA ಮನೆಗಳ ಮೇಲೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಆಸ್ತಿ ಪತ್ತೆ – ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?ಸಿಕ್ಕಿಬಿದ್ದ ಆ ಅಧಿಕಾರಿಗಳು ಯಾರು.?
- ಸೈಲೆಂಟ್ ಕಿಲ್ಲರ್ ಹಾರ್ಟ್ ಅಟ್ಯಾಕ್: ಮುಂಜಾನೆ ಕಂಡುಬರುವ ಈ 6 ಮುನ್ನೆಚ್ಚರಿಕೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
- ಭೀಕರ ಅಪಘಾತ… ಪತಿ ಸಾವು, 18ಕ್ಕೂ ಹೆಚ್ಚು ಮೂಳೆ ಮುರಿದು ಕೋಮಾಗೆ ಜಾರಿದ ಪತ್ನಿ!
- Cancer : ಮಹಿಳೆಯರಲ್ಲಿ ಯಾವ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತೆ? ಈ ಎಚ್ಚರಿಕೆ ಲಕ್ಷಣಗಳನ್ನು ಗಮನಿಸೋದು ಮುಖ್ಯ!
- ದಿನ ಭವಿಷ್ಯ (22-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..
- ರಾಜ್ಯದಲ್ಲಿ 5 ದಿನ ಮಳೆ ಅಬ್ಬರ; ಬೆಂಗಳೂರು ಸೇರಿ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ದಿನ ಭವಿಷ್ಯ (21-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಸಾಲ ತೀರಿಸುವ ಕಾರಣಕ್ಕೆ ಪಕ್ಕದ ಮನೆಯ ಬಾಲಕನ ಕಿ*ಡ್ನಾಪ್, ಹ*ತ್ಯೆ , ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ
- ಇಂದಿನ ದಿನ ಭವಿಷ್ಯ: 12 ರಾಶಿಗಳ ಫಲ ಹೇಗಿದೆ? ಯಾರಿಗೆ ಶುಭ, ಯಾರಿಗೆ ಎಚ್ಚರಿಕೆ.?
- ವಾಹನ ಸವಾರರೇ ಎಚ್ಚರ; ಸೆಪ್ಟೆಂಬರ್ 25ರೊಳಗೆ ಈ ಕೆಲಸ ಮಾಡದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು.?
- Fatty Liver: ನಿರ್ಲಕ್ಷಿಸಬೇಡಿ.. ಲಿವರ್ ಅಪಾಯದಲ್ಲಿದೆ ಎನ್ನಲು ಮುಖ ನೀಡುವ 4 ಎಚ್ಚರಿಕೆಗಳಿವು!
- ಗ್ರಾಮೀಣ ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಬಿಗ್ ರಿಲೀಫ್ ; ಅ.2 ರಿಂದ ಇ-ಸ್ವತ್ತು ವಿತರಣೆ ಆರಂಭ
- ಅಂಚೆ ಕಚೇರಿಯ ಅದ್ಭುತ ಯೋಜನೆ : ಇಷ್ಟು ಹಣ ಹೂಡಿಕೆ ಮಾಡಿದ್ರೆ ಪ್ರತಿ 3 ತಿಂಗಳಿಗೆ ₹57,400 ಬಡ್ಡಿ!
- ದಿನ ಭವಿಷ್ಯ (18-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- E-KYC ಮಾಡದಿದ್ರೆ ರೇಷನ್ ಬಂದ್! ಸೆ.30 ಕೊನೆ ದಿನ- ಮನೆಯಿಂದ್ಲೇ ಮಾಡೋದು ಹೇಗೆ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ
- 2,000 ದಾಟಿದ UPI ಪೇಮೆಂಟ್ಗೆ MDR ಶುಲ್ಕ : ಪೆಟ್ರೋಲ್ ಬಂಕ್ಗಳಲ್ಲಿ ಇನ್ಮುಂದೆ UPI ಬಂದ್.?





























