Business Loan : ಸ್ವ-ಉದ್ಯೋಗ ಆರಂಭಿಸಲು 2 ಲಕ್ಷ ರೂಪಾಯಿವರೆಗೆ ಸಾಲ ಹಾಗು ಸಹಾಯಧನ.! ಬೇಕಾಗುವ ದಾಖಲೆಗಳೇನು.?

Business Loan : ನಮಸ್ಕಾರ ಸ್ನೇಹಿತರೇ, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸಲು ಸಾಲ ಸೌಲಭ್ಯದ ಜೊತೆಗೆ ಸಹಾಯಧನ ನೀಡಲು ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವಂತಹ ವಿವಿಧ ನಿಗಮಗಳಿಂದ ಸಾಲ ಹಾಗೂ ಸಹಾಯಧನ ಸೌಲಭ್ಯವನ್ನು ನೀಡಲು ಅರ್ಜಿಯನ್ನ ಆಹ್ವಾನಿಸಲಾಗಿದೆ. ಯಾವ ಯಾವ ನಿಗಮಗಳಿಂದ ನೇರ ಸಾಲಕ್ಕೆ ಅರ್ಜಿ ಆಹ್ವಾನಿಸಲಾಗಿದೆ.? ಬೇಕಾಗುವ ದಾಖಲೆಗಳೇನು.? ಏನೆಲ್ಲಾ ಅರ್ಹತೆಗಳಿರಬೇಕು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Borewell Subsidy : ಬೋರ್ ವೆಲ್ ಕೊರೆಸಲು ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

ಅರ್ಹ ಫಲಾನುಭವಿಗಳಿಗೆ ಸಿಗುವ ಸಾಲ ಹಾಗೂ ಸಹಾಯಧನದ ಮೊತ್ತದ ವಿವರ :-

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸ್ವಯಂ ಉದ್ಯೋಗ ಆರಂಭಿಸಲು ಘಟಕದ ವೆಚ್ಚವು 1 ಲಕ್ಷ ರೂಪಾಯಿ ಇದ್ದರೆ ಅಂತಹ ಅಭ್ಯರ್ಥಿಗಳಿಗೆ ₹20,000/- ರೂಪಾಯಿ ಸಹಾಯಧನ ನೀಡಲಾಗುತ್ತದೆ. ಉಳಿದ ₹80,000/- ರೂಪಾಯಿ ಹಣವನ್ನು ಬ್ಯಾಂಕಿನಿಂದ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಒಂದು ವೇಳೆ ಘಟಕದ ವೆಚ್ಚ 2 ಲಕ್ಷ ರೂಪಾಯಿ ಇದ್ದರೆ ₹30,000/- ರೂಪಾಯಿ ಹಣವನ್ನು ಸಹಾಯಧನವಾಗಿ ನೀಡಲಾಗುತ್ತದೆ. ಉಳಿದ ₹1.7 ಲಕ್ಷ ರೂಪಾಯಿಯನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಗಳಲ್ಲಿ ಬರುವಂತಹ ವಿವಿಧ 9 ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಕೂಡ ಓದಿ : Goat Farming Subsidy : ಕುರಿ ಸಾಕಣಿಕೆ ಮಾಡಲು ಸಿಗಲಿದೆ ₹50,000/- ಸಹಾಯಧನ.! ರೈತರು ಈ ಕೂಡಲೇ ಅರ್ಜಿ ಸಲ್ಲಿಸಿ

ಯಾವೆಲ್ಲ ನಿಗಮಗಳಲ್ಲಿ ನೇರ ಸಾಲಕ್ಕೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.?

  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
  • ಉಪ್ಪಾರ ಅಭಿವೃದ್ಧಿ ನಿಗಮ
  • ಮರಾಶ ಅಭಿವೃದ್ಧಿ ನಿಗಮ
  • ವಿಶ್ವಕರ್ಮ ಅಭಿವೃದ್ಧಿ ನಿಗಮ
  • ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
  • ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
  • ಸವಿತಾ ಸಮಾಜ ಅಭಿವೃದ್ಧಿ ನಿಗದು
  • ಅಲೆಮಾರಿ, ಅರೆ-ಅಲೆಮಾರಿ ಅಭಿವೃದ್ಧಿ ನಿಗಮ
  • ಒಕ್ಕಲಿಗ ಅಭಿವೃದ್ಧಿ ನಿಗಮ

ಏನೆಲ್ಲಾ ಅರ್ಹತೆಗಳಿರಬೇಕು.?

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ರಿಂದ 55 ವರ್ಷದ ಒಳಗೆ ಇರಬೇಕು.
  • ಕನಿಷ್ಠ 7ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾರ್ಹತೆ ಹೊಂದಿರಬೇಕು.

ಇದನ್ನೂ ಕೂಡ ಓದಿ : Rajiv Gandhi Housing Scheme : ರಾಜೀವ್ ಗಾಂಧಿ ವಸತಿ ಯೋಜನೆಗೆ ಕೂಡಲೇ ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – ಬೇಕಾಗುವ ದಾಖಲೆಗಳೇನು.?

ಬೇಕಾಗುವ ದಾಖಲೆಗಳೇನು.?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಶೈಕ್ಷಣಿಕ ಅಂಕ ಪಟ್ಟಿಗಳು
  • ಪಡಿತರ ಚೀಟಿ

ಅರ್ಜಿ ಸಲ್ಲಿಸಲು ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಮೇಲೆ ತಿಳಿಸಲಾದ ನಿಮ್ಮ ಸಂಬಂಧಪಟ್ಟ ವರ್ಗದ ನಿಗಮಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಆನ್ ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply