Union Budget 2025 : ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಎಂದಿನಂತೆ ಖಾಲಿ ಚೆಂಬು ಕೊಟ್ಟಿದೆ – ಕೇಂದ್ರ ಬಜೆಟ್ ವಿರುದ್ಧ ಸಿದ್ದರಾಮಯ್ಯ ಕಿಡಿ

Union Budget 2025 : ಇಂದು 8ನೇ ಬಾರಿಗೆ ಕೇಂದ್ರ ಬಜೆಟ್ 2025 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಲವು ಕ್ಷೇತ್ರಗಳಿಗೆ ಬಂಪರ್ ಅನುದಾನ ಘೋಷಿಸಿದ್ದಾರೆ. ಉದ್ಯೋಗಿಗಳ ತೆರಿಗೆ ವಿಷಯದಲ್ಲಿ ಭಾರೀ ಗಮನಸಳೆದ ಬಜೆಟ್ ಬಗ್ಗೆ ದೇಶದ ಜನತೆಯಲ್ಲಿ ಕೊಂಚ ಮಂದಹಾಸ ಮೂಡಿದೆ.

ಇನ್ನು ಈ ಬಾರಿಯ ಬಜೆಟ್ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದೇನು? ಎಂಬುದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Union Budget 2025 : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ `ಅನ್ನದಾತ’ರಿಗೆ ಸಿಕ್ಕಿದ್ದೇನು.? ರೈತರಿಗೆ ಏನೆಲ್ಲಾ ಲಾಭಗಳಿವೆ.?

ಇಂದು ತಮ್ಮ ತವರು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ‘ನರೇಂದ್ರ ಮೋದಿ ಸರ್ಕಾರ ಕೇವಲ ಬಾಯಿ ಮಾತಿನಲ್ಲಿ ಹೊಟ್ಟೆ ತುಂಬಿಸುವಂತೆ ಬಜೆಟ್ ಮಂಡಿಸಿದೆ. ರಾಜ್ಯದ ಬಡವರು, ಕಾರ್ಮಿಕರು, ಯುವಕರಿಗೆ ಅನ್ಯಾಯವಾಗಿದೆ. ಹಲವು ಕ್ಷೇತ್ರಗಳಿಗೆ ಅನುದಾನ ಕಡಿಮೆ ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೂ ಅನುದಾನ ನೀಡಿಲ್ಲ. ಕರ್ನಾಟಕಕ್ಕೆ ಕೇಂದ್ರದಿಂದ ಖಾಲಿ ಚೆಂಬು ಬಿಟ್ಟರೆ ಬೇರೇನೂ ಸಿಕ್ಕಿಲ್ಲ’ ಎಂದು ವ್ಯಂಗ್ಯವಾಡಿದರು.

‘ಬಜೆಟ್ನಲ್ಲಿ ಏಮ್ಸ್ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಈ ಕುರಿತಂತೆ ಕೇಂದ್ರ ಸಚಿವ ನಡ್ಡಾ ಅವರು ನಮಗೆ ಭರವಸೆ ನೀಡಿದ್ದರು. ಆದರೆ, ಪ್ರಯೋಜನವಿಲ್ಲ. ವಸತಿ ಯೋಜನೆಗೆ ಯಾವುದೇ ಘೋಷಣೆಯಿಲ್ಲ. ರಾಜ್ಯಕ್ಕೆ ಚೆಂಬು ನೀಡುವುದನ್ನು ಕೇಂದ್ರ ಸರ್ಕಾರ ಎಂದಿನಂತೆ ಮುಂದುವರಿಸಿದೆ’ ಎಂದರು.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

‘ಇದು ದೂರದೃಷ್ಟಿಯಿಲ್ಲದ ಬಜೆಟ್. ನಾವು ಮನವಿ ಮಾಡಿದ್ದ ಯಾವುದೇ ಯೋಜನೆಯನ್ನು ಇವರು ಘೋಷಣೆ ಮಾಡಿಲ್ಲ. ಇದರೊಟ್ಟಿಗೆ ನೀರಾವರಿ ಯೋಜನೆಗಳ ಬಗ್ಗೆಯೂ ಪ್ರಸ್ತಾಪವಿಲ್ಲ. ನಾಡಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಬಿಜಿನಿಸ್ ಕಾರಿಡಾರ್ ಕುರಿತಂತೆ ಕೂಡ ಪ್ರಸ್ತಾಪ ನಡೆದಿಲ್ಲ. ಬಿಹಾರ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬಜೆಟ್ನಲ್ಲಿ ಭರ್ಜರಿ ಕೊಡುಗೆಗಳನ್ನು ಕೊಟ್ಟಿದ್ದಾರೆ’ ಎಂದು ತೀವ್ರ ಕಿಡಿಕಾರಿದರು.

WhatsApp Group Join Now

Leave a Reply