ಅಣ್ಣಾಮಲೈ ರಾಜೀನಾಮೆ ಅಂಗೀಕಾರ, ಬಿಜೆಪಿಯಿಂದ ಅಧಿಕೃತವಾಗಿ ಹೊರಬಂದ ಮಾಜಿ ಐಪಿಎಸ್ ಅಧಿಕಾರಿ

Spread the love

ಕಳೆದ ಕೆಲ ದಿನಗಳಿಂದ ತಮಿಳುನಾಡು ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ ರಾಜೀನಾಮೆ ಭಾರಿ ಚರ್ಚೆಯಾಗಿದೆ. ತಮಿಳುನಾಡಿನಲ್ಲಿ ಬಿಜೆಪಿಯಿಂದ ಅಣ್ಣಾಮಲೈ ಮೂಲೆಗುಂಪಾಗಿದ್ದಾರೆ ಅನ್ನೋ ಮಾತುಗಳ ನಡುವೆಯೇ ಇದೀಗ ಅಣ್ಣಾಮಲೈ ರಾಜೀನಾಮೆ ಅಂಗೀಕಾರವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜೀನಾಮೆ ಅಂಗೀಕರಿಸಿದ್ದಾರೆ.

ಈ ಸುದ್ದಿ ಹೊರಬೀಳುತ್ತಿದ್ದಂತೆ ದಕ್ಷಿಣ ಭಾರತದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ವಿರುದ್ದ ಗರಂ ಆಗಿದ್ದಾರೆ.

ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಭೇಟಿ ಮಾಡಿದ್ದ ಅಣ್ಣಾಮಲೈ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇತ್ತ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಭಾರತದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ವಿರುದ್ದ ಗರಂ ಆಗಿದ್ದರು. ಅಣ್ಣಾಮಲೈ ಉಳಿಸಿಕೊಳ್ಳುವ ಪ್ರಯತ್ನ ನಡೆಯಲಿದೆ ಎಂದೇ ನಂಬಿದ್ದರು. ಆದರೆ ಇದೀಗ ಅಧಿಕೃಕವಾಗಿ ಅಣ್ಣಾಮಲೈ ರಾಜೀನಾಮೆ ಅಂಗೀಕಾರಗೊಂಡಿದೆ. ಇದು ಬಿಜೆಪಿ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದೆ.

ಇಂದು ಮಧ್ಯಾಹ್ನ ಅಣ್ಣಾಮಲೈ ಸುದ್ದಿಗೋಷ್ಠಿ

ಇಂದು ಮಧ್ಯಾಹ್ನ ಅಣ್ಣಾಮಲೈ ಸೋಶಿಯಲ್ ಮೀಡಿಯಾ ಮೂಲಕ ಲೈವ್ ಆಗಮಿಸಿ ಕಾರ್ಯಕರ್ತರು, ಬೆಂಬಲಿಗರ ಜೊತೆ ಮಾತನಾಡಲಿದ್ದಾರೆ. ಈ ಮೂಲಕ ರಾಜೀನಾಮೆ ಹಾಗೂ ತಮ್ಮ ಮುಂದಿನ ನಿರ್ಧಾರಗಳ ಕುರಿತು ತಿಳಿಸುವ ಸಾಧ್ಯತೆ ಇದೆ. ಅಣ್ಣಾಮಲೈ ಸುದ್ದಿಗೋಷ್ಠಿ ಇದೀಗ ತೀವ್ರ ಕುತೂಹಲ ಕೆರಳಿಸಿದೆ.

ಹೊಸ ಪಾರ್ಟಿ ಘೋಷಣೆ ಸಾಧ್ಯತೆ

ತಮಿಳುನಾಡು ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ಅಣ್ಣಾಮಲೈ ಹೊಸ ರಾಜಕೀಯ ಪಕ್ಷ ಆರಂಭಿಸುವ ಸಾಧ್ಯತೆ ಇದೆ ಎಂದಿದ್ದಾರೆ. ನಟ ವಿಜಯ್ ಕೆಲವೆ ವರ್ಷಗಳ ಮೊದಲು ಹೊಸ ಪಕ್ಷ ಸ್ಥಾಪಿಸಿ ಭರ್ಜರಿ ಗೆಲುವಿನ ಮೂಲಕ ಮುಖ್ಯಂತ್ರಿಯಾಗಿದ್ದಾರೆ. ಇದೇ ತಂತ್ರದ ಮೂಲಕ ಅಣ್ಣಾಮಲೈ ಪ್ರಾದೇಶಿಕ ಪಕ್ಷ ಸ್ಥಾಪಿಸಿ ತಮಿಳುನಾಡಿನಲ್ಲಿ ಹೊಸ ರಾಜಕೀಯ ಅಲೆ ಸೃಷ್ಟಿಸಲಿದ್ದಾರೆ ಅನ್ನೋ ಮಾತುಳು ಕೇಳಿಬರುತ್ತಿದೆ.

ರಾಷ್ಟ್ರೀಯ ನಾಯಕರು ಅಣ್ಣಾಮಲೈ ಜೊತೆ ಮಾತುಕತೆ ನಡೆಸಿ ಮನವೊಲಿಸು ಪ್ರಯತ್ನ ಮಾಡಿದ್ದರು ಎನ್ನಲಾಗುತ್ತಿದೆ. ಆದರೆ ಅಣ್ಣಾಮಲೈ ಯಾವುದೇ ಮಾತುಕತೆಗೆ ಜಗ್ಗಿಲ್ಲ. ಪರಿಣಾಮ ಅಣ್ಣಾಮಲೈ ರಾಜೀನಾಮೆ ಅಂಗೀಕಾರಗೊಂಡಿದೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈಗೆ ಅಭಿಮಾನಿಗಳು, ಬೆಂಬಲಿಗರ ಸಂಖ್ಯೆ ಹೆಚ್ಚಿದೆ. ದಕ್ಷಿಣ ಭಾರತದಲ್ಲೇ ಅಣ್ಣಾಮಲೈ ಬಿಜೆಪಿ ನಾಯಕನಾಗಿ ಗುರುತಿಸಿಕೊಂಡಿದ್ದರು. ಇದೀಗ ರಾಜೀನಾಮೆಯಿಂದ ದಕ್ಷಿಣ ಭಾರತದಲ್ಲೇ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ.

WhatsApp Group Join Now

Spread the love

Leave a Reply