Pendrive Case : ಪ್ರಜ್ವಲ್ ರೇವಣ್ಣ ದೌರ್ಜನ್ಯ ಮಾಡುವಾಗ ಅಪ್ಪ-ಅಮ್ಮ ಕತ್ತೆ ಕಾಯುತ್ತಿದ್ದರೆ..? ಮಾಜಿ ಜೆಡಿಎಸ್ ಸಂಸದ ಶಿವರಾಮೇಗೌಡ

Pendrive Case : ಇಡೀ ರಾಜ್ಯವೇ ಬೆಚ್ಚಿಬೀಳಿಸಿರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಗ ಪ್ರಜ್ವಲ್ ರೇವಣ್ಣ ಜೊತೆ ಆರೋಪಿ ಸ್ಥಾನದಲ್ಲಿರುವ ಎಚ್ ಡಿ ರೇವಣ್ಣ ಬಗ್ಗೆ ಜೆಡಿಎಸ್ ನ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಮಗನ ಜೊತೆಗೆ ಎಚ್ ಡಿ ರೇವಣ್ಣ ವಿರುದ್ಧ ಕೂಡ ಅವರ ಮನೆಕೆಲಸದಾಕೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾಳೆ.

WhatsApp Group Join Now

Pan Card Updates : ನೀವು ಪಾನ್ ಕಾರ್ಡ್ ಹೊಂದಿದ್ದೀರಾ.? ಹೊಸ ನಿಯಮ ಜಾರಿಗೆ – ₹10,000/- ದಂಡ.!

ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ಮಸಾಜ್ ಮಾಡಿಸುವ ನೆಪದಲ್ಲಿ ಮೈ ಕೈ ಮುಟ್ಟಲು ಬರುತ್ತಿದ್ದರು ಎಂದು ಮನೆಕೆಲಸದಾಕೆ ದೂರು ನೀಡಿದ್ದರು. ಇದೀಗ ರೇವಣ್ಣ ಬಗ್ಗೆ ಅವರದೇ ಪಕ್ಷದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು ಸುದ್ದಿಗೋಷ್ಟಿಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ.

WhatsApp Group Join Now

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್.ಆರ್. ಶಿವರಾಮೇಗೌಡ ‘ಮಗ(ಪ್ರಜ್ವಲ್ ರೇವಣ್ಣ) ಇಂತಹ ಕೃತ್ಯ ನಡೆಸುವಾಗ ಅವರ ಅಪ್ಪ-ಅಮ್ಮ ಕತ್ತೆ ಕಾಯ್ತಿದ್ದರಾ? ಅಷ್ಟಕ್ಕೂ ರೇವಣ್ಣನೇ ಒಳ್ಳೆಯ ನಡತೆಯಿರುವ ವ್ಯಕ್ತಿಯಲ್ಲ. ಹಿಂದೊಮ್ಮೆ ನಮ್ಮ ಜೊತೆ ಇಂಗ್ಲೆಂಡ್ ಗೆ ಹೋಗಿದ್ದಾಗ ಇಂತಹದ್ದೇ ಕಾರಣಕ್ಕೆ ಎಚ್ ಡಿ ರೇವಣ್ಣ ಸಿಕ್ಕಿಹಾಕಿಕೊಂಡಿದ್ದರು’ ಎಂದು ಶಿವರಾಮೇಗೌಡ ಹೇಳಿದ್ದಾರೆ.

Gruhalakshmi Scheme : ಇನ್ನೂ ನಿಮಗೆ ಗೃಹಲಕ್ಷ್ಮಿ ಹಣ ಸಿಕ್ಕಿಲ್ವಾ.? ಬೇಗ ಈ ಕೆಲಸ ಮಾಡಿ – ತಕ್ಷಣ ಹಣ ಬರುತ್ತೆ

WhatsApp Group Join Now

ಇದೀಗ ಎಚ್ ಡಿ ರೇವಣ್ಣ ಮೇಲೆ ಮನೆಕೆಲಸದಾಕೆಗೆ ನೀಡಿರುವ ದೂರಿನ ಅನ್ವಯ ಲೈಂಗಿಕ ಕಿರುಕುಳ ಮತ್ತು ತಮ್ಮ ಸಹಾಯಕನ ಮೂಲಕ ಮಹಿಳೆಯನ್ನು ಅಪಹರಿಸಿದ ಪ್ರಕರಣ ದಾಖಲಾಗಿದೆ. ಈ ಬಗ್ಗೆ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಇಂದು ತೀರ್ಪು ಹೊರಬರಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply