ಸಾವಿಗೂ ಮುನ್ನ ಯುವಕನ ಹೆಸರು ಹೇಳಿ ಜೀವ ಬಿಟ್ಟ ಗೃಹಿಣಿ : ವಾಟ್ಸಾಪ್ ಬ್ಲ್ಯಾಕ್‌ಮೇಲ್‌ಗೆ ಮಹಿಳೆ ಬಲಿ.!

Spread the love

ಅಕ್ರಮ ಸಂಬಂಧದ (illicit Relationship) ವಿಚಾರದಲ್ಲಿ ಯುವಕನೊಬ್ಬ ಮಾಡುತ್ತಿದ್ದ ಸತತ ಬ್ಲ್ಯಾಕ್‌ಮೇಲ್‌ಗೆ (Blackmail) ಹೆದರಿ ಗೃಹಿಣಿಯೊಬ್ಬರು ಆತ್ಮಹತ್ಯೆಗೆ (Crime) ಶರಣಾಗಿರುವ ದೂರಾಚರಣೆಯ ಘಟನೆ ಮೈಸೂರು ಜಿಲ್ಲೆಯ (Mysuru) ಹುಣಸೂರು ತಾಲೂಕಿನ ಲಕ್ಕನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಶ್ರೀಕಾಂತ್ ಎಂಬುವವರ ಪತ್ನಿಯಾಗಿದ್ದ 34 ವರ್ಷದ ಸಿಂಧೂ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಗೃಹಿಣಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿಕಾಸ್ ಎಂಬ ಯುವಕನ ಕಿರುಕುಳ ತಾಳಲಾರದೆ ಸಿಂಧೂ ಅವರು ಕ್ರಿಮಿನಾಶಕ ಮಾತ್ರೆ ಸೇವಿಸಿದ್ದರು. ತಕ್ಷಣವೇ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಗ ಸಿಂಧೂ ಅವರು ತಮ್ಮ ಸಾವಿಗೆ ವಿಕಾಸ್ ಎಂಬಾತನೇ ನೇರ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಮೃತರ ಮೊಬೈಲ್ ಪರಿಶೀಲಿಸಿದಾಗ ವಿಕಾಸ್ ಜೊತೆ ನಿರಂತರವಾಗಿ ನಡೆಸಿದ್ದ ವಾಟ್ಸಾಪ್ ಸಂದೇಶಗಳು ಹಾಗೂ ವಿಡಿಯೋ ಕಾಲ್‌ಗಳ ವಿವರಗಳು ಪತ್ತೆಯಾಗಿವೆ.

ಈ ಘಟನೆಗೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಎಲ್.ಕೆ. ವಿಕಾಸ್, ಆತನ ತಂದೆ ಕುಮಾರ ಹಾಗೂ ತಾಯಿ ವಸಂತ ಎಂಬ ಮೂವರ ವಿರುದ್ಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

WhatsApp Group Join Now

Spread the love

Leave a Reply