ಭಾರತದಲ್ಲಿ ಮಹಿಳೆಯರಿಗೆ ಹೆಚ್ಚಾಗಿ ಬರುವ ಕ್ಯಾನ್ಸರ್ಗಳು (Cancers) ಗರ್ಭಕಂಠ, ಹೊಟ್ಟೆ, ಚರ್ಮ, ಸ್ತನ ಮತ್ತು ಕರುಳಿನ ಕ್ಯಾನ್ಸರ್. ಕಳೆದ ಐದು ವರ್ಷಗಳ ದತ್ತಾಂಶ ನೋಡಿದರೆ ಇವು ಮಹಿಳೆಯರಲ್ಲಿ ಹೆಚ್ಚು ಕಾಣಿಸುತ್ತಿವೆ. ಆರೋಗ್ಯ ಸಚಿವಾಲಯ(Ministry of Health)ದ ಅಧ್ಯಯನದ ಪ್ರಕಾರ 2025ರಲ್ಲಿ ಸ್ತನ ಕ್ಯಾನ್ಸರ್ (Breast Cancer) ಪ್ರಕರಣಗಳು ಅತಿ ಹೆಚ್ಚು.
2020ರ ಆರೋಗ್ಯ ಸಚಿವಾಲಯದ ವರದಿಯಲ್ಲೂ ಸ್ತನ ಕ್ಯಾನ್ಸರ್ ಅತಿ ಸಾಮಾನ್ಯವಾಗಿತ್ತು. ಸ್ತನ ಕ್ಯಾನ್ಸರ್ ಎಂದರೇನು? ಇದರ ಎಚ್ಚರಿಕೆ ಮತ್ತು ದೇಹದಲ್ಲಿ ಕಾಣಿಸುವ ಲಕ್ಷಣಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.
ಸ್ತನ ಕ್ಯಾನ್ಸರ್ ಎಂದರೇನು?
ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ, ಸ್ತನ ಕ್ಯಾನ್ಸರ್ ಎಂದರೆ ಸ್ತನದಲ್ಲಿ ತಪ್ಪಾದ ಕೋಶಗಳು ವೇಗವಾಗಿ ಬೆಳೆದು ಗೆಡ್ಡೆಯಾಗುವುದು. ಬೇಗನೆ ಕಂಡುಹಿಡಿಯದಿದ್ದರೆ ಅದು ದೇಹದ ಇತರ ಭಾಗಗಳಿಗೆ ಹರಡಬಹುದು. ಈ ಕ್ಯಾನ್ಸರ್ ಸಾಮಾನ್ಯವಾಗಿ ಹಾಲು ಹರಿಯುವ ನಾಳಗಳಲ್ಲಿ ಅಥವಾ ಹಾಲು ಉತ್ಪಾದಿಸುವ ಭಾಗಗಳಲ್ಲಿ ಶುರುವಾಗುತ್ತದೆ.
ಮೊದಲ ಹಂತದಲ್ಲಿ ಅದು ಒಂದೇ ಜಾಗದಲ್ಲಿ ನಿಂತಿರುತ್ತದೆ ಮತ್ತು ಅಷ್ಟು ಅಪಾಯಕಾರಿ ಅಲ್ಲ. ಆದರೆ ನಂತರ ಅದು ಸುತ್ತಮುತ್ತಲಿನ ಅಂಗಾಂಶಕ್ಕೆ ಹರಡಿ ಗಂಟು ಅಥವಾ ಗೆಡ್ಡೆ ಮಾಡಬಹುದು.ಅದು ದುಗ್ಧರಸ ಗ್ರಂಥಿಗಳು ಮತ್ತು ಇತರ ಅಂಗಗಳಿಗೆ ಹೋದರೆ ಜೀವಕ್ಕೆ ಅಪಾಯವಾಗಬಹುದು. ಆದ್ದರಿಂದ ಬೇಗನೆ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುವುದು ತುಂಬಾ ಮುಖ್ಯ.
ಸ್ತನ ಕ್ಯಾನ್ಸರ್ನ ಲಕ್ಷಣಗಳೇನು?
• ಸ್ತನ, ಕಂಕುಳು ಅಥವಾ ಕತ್ತಿನ ಎಲುಬಿನ ಬಳಿ ಗಂಟು ಅಥವಾ ಉಂಡೆ ಕಾಣಿಸುವುದು
• ಸ್ತನ ಊದುವುದು
• ಸ್ತನದ ಚರ್ಮ ಕುಗ್ಗಿ ಕಿತ್ತಳೆ ಹಣ್ಣಿನ ಸಿಪ್ಪೆಯಂತೆ ಕಾಣುವುದು
• ಸ್ತನದ ಚರ್ಮ ದಪ್ಪವಾಗುವುದು, ಕೆಂಪಾಗುವುದು ಮತ್ತು ಸಿಪ್ಪೆ ಸುಲಿಯುವುದು
• ಸ್ತನ ಅಥವಾ ಮೊಲೆತೊಟ್ಟಿನಲ್ಲಿ ನೋವು
ಸ್ತನದ ತೊಟ್ಟಿನಿಂದ ಹಾಲು ಅಲ್ಲದ ಬೇರೆ ರೀತಿಯ ಸ್ರಾವ ಬರುವುದು. ಇವು ಸ್ತನ ಕ್ಯಾನ್ಸರ್ನ ಸಾಮಾನ್ಯ ಲಕ್ಷಣಗಳಾಗಿರಬಹುದು. ಇಂಥ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ತಕ್ಷಣ ಭೇಟಿ ಮಾಡಿ.
ಸ್ತನ ಕ್ಯಾನ್ಸರ್ ಪತ್ತೆ ಹೇಗೆ?
ಪ್ರತಿ ಮಹಿಳೆಯೂ ಸ್ತನದಲ್ಲಿ ಗಡ್ಡೆ ಕಂಡುಬಂದರೆ ಸ್ತನ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಜ್ಞ ವೈದ್ಯರು ಅಥವಾ ಸ್ತನ ಶಸ್ತ್ರಚಿಕಿತ್ಸಕರು ಮೊದಲು ಪರೀಕ್ಷೆ ಮಾಡುತ್ತಾರೆ. ನಂತರ ಎರಡೂ ಸ್ತನಗಳ ಮ್ಯಾಮೊಗ್ರಾಮ್, ಅಲ್ಟ್ರಾಸೌಂಡ್ ಅಥವಾ MRI ಮಾಡಿಸಬಹುದು. ಅಗತ್ಯವಿದ್ದರೆ ಸಣ್ಣ ತುಂಡು ತೆಗೆದು ಪರೀಕ್ಷಿಸುವ ಬಯಾಪ್ಸಿ ಮಾಡಲಾಗುತ್ತದೆ.
ಚಿತ್ರಣ ಪರೀಕ್ಷೆಯ ನಂತರ ಕ್ಯಾನ್ಸರ್ ಇರುವ ಸಾಧ್ಯತೆ ಕಂಡುಬಂದರೆ ಹೆಚ್ಚಿನ ಪರೀಕ್ಷೆಗಳನ್ನು ಮಾಡುತ್ತಾರೆ. ನೀರಿನ ಚೀಲದಂತಹ ಗಡ್ಡೆ ಇದ್ದರೆ ಅದನ್ನು ಪರೀಕ್ಷಿಸುತ್ತಾರೆ. ಘನ ಗಡ್ಡೆ ಕಂಡುಬಂದರೆ ಅದನ್ನು ಬಯಾಪ್ಸಿ ಮಾಡಿ ಪರೀಕ್ಷಿಸುತ್ತಾರೆ. ಸ್ತನ ತೊಟ್ಟಿನಿಂದ ಯಾವುದೇ ದ್ರವ ಬಂದರೆ ಅದರ ಬಣ್ಣವನ್ನು ನೋಡುತ್ತಾರೆ.
ಹಾಲುಣಿಸುವ ಅಥವಾ ಗರ್ಭಿಣಿ ಮಹಿಳೆಯರಲ್ಲಿ ಬಿಳಿ ದ್ರವ ಬರುವುದು ಸಾಮಾನ್ಯ. ಇತರ ಮಹಿಳೆಯರಲ್ಲಿ ಬಿಳಿ ದ್ರವ ಬಂದರೆ ಪರೀಕ್ಷೆ ಮಾಡಿಸಬೇಕು. ಹಸಿರು, ಹಳದಿ, ಬೂದು ಅಥವಾ ರಕ್ತ ಬೆರೆತ ದ್ರವ ಬಂದರೂ ಪರೀಕ್ಷೆ ಅಗತ್ಯ. ಇದಕ್ಕೆ ಮ್ಯಾಮೊಗ್ರಾಮ್ ಅಥವಾ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. Kannada news time ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಕನ್ನಡ ನ್ಯೂಸ್ ಟೈಮ್ ಇದಕ್ಕೆ ಜವಾಬ್ದಾರಿಯಲ್ಲ)
Cancer : ಮಹಿಳೆಯರಲ್ಲಿ ಯಾವ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತೆ? ಈ ಎಚ್ಚರಿಕೆ ಲಕ್ಷಣಗಳನ್ನು ಗಮನಿಸೋದು ಮುಖ್ಯ!
WhatsApp Group
Join Now