ಅಗರಬತ್ತಿ (Incense) ಹೊಗೆ (Smoke) ಸಿಗರೇಟ್ (Cigarette) ಹೊಗೆಗಿಂತ ಹೆಚ್ಚು ಅಪಾಯಕಾರಿಯಾ? ಇತ್ತೀಚೆಗೆ ಈ ಪ್ರಶ್ನೆ ಸೋಶಿಯಲ್ ಮೀಡಿಯಾ(Social Media)ದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಭಾರತ(India)ದಲ್ಲಿ ಬಹುತೇಕರ ಮನೆಗಳಲ್ಲಿ ಪೂಜೆ, ಧ್ಯಾನ ಮತ್ತು ಸುವಾಸನೆಗಾಗಿ ಅಗರಬತ್ತಿ ಹಚ್ಚುವುದು ಬಹಳ ಹಿಂದಿನಿಂದ ಬಂದ ಪದ್ಧತಿ.
ಆದರೆ, ಈ ಸುವಾಸನೆಯ ಹಿಂದೆ ಸಣ್ಣ ಕಣಗಳು ಮತ್ತು ವಿಷಕಾರಿ ರಾಸಾಯನಿಕಗಳು (Chemicals) ಇವೆ. ಹೀಗಾಗಿ ಈ ವಿಷಯದ ಭಯಪಡದೆ, ಸತ್ಯವನ್ನು ತಿಳಿದುಕೊಳ್ಳುವುದು ಮುಖ್ಯ.
ಅಗರಬತ್ತಿಯ ಸುವಾಸನೆ ಭಕ್ತಿ ಮತ್ತು ಶಾಂತಿಯ ಸಂಕೇತ. ಆದರೆ ಅದರ ಹಿಂದಿನ ಹೊಗೆಯನ್ನು ನಾವು ಮರೆಯಬಾರದು. ಸಿಗರೇಟ್‌ಗಿಂತ ಇದು ಹೆಚ್ಚು ಅಪಾಯಕಾರಿ ಎನ್ನುವುದು ಸಾಮಾನ್ಯ. ನಿಜವಾಗಿ ಎರಡೂ ಹೊಗೆಗಳೂ ಆರೋಗ್ಯಕ್ಕೆ ಹಾನಿಕಾರಕ.
ಸಿಗರೇಟ್ ಹೊಗೆ ನೇರವಾಗಿ, ತೀವ್ರವಾಗಿ ಹಾನಿ ಮಾಡುತ್ತದೆ. ಅಗರಬತ್ತಿ ಹೊಗೆ ನಿಧಾನವಾಗಿ, ದೇಹದ ಒಳಗೆ ಹಾನಿ ಮಾಡುತ್ತದೆ. ಉಸಿರಾಡುವಾಗ ಅಗರಬತ್ತಿ ಹೊಗೆ ದೇಹದ ಒಳಗೆ ಹೋಗಿ ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವಾಗಬಹುದು. ಹೀಗಾಗಿ ಪರಂಪರೆಯನ್ನು ಗೌರವಿಸುತ್ತಾ ಆರೋಗ್ಯವನ್ನು ಕಾಪಾಡುವುದೇ ಬುದ್ಧಿವಂತಿಕೆ. ಇದಕ್ಕೆ ಕೆಲವು ಕ್ರಮಗಳನ್ನು ಫಾಲೋ ಮಾಡಬೇಕು ಎಂದು ಆಂಕೊಲಾಜಿಸ್ಟ್ ಡಾ. ಚಿಂತನ್ ಶಾ ಅವರು ಹೇಳಿದ್ದಾರೆ.
ಪರಿಣಾಮಗಳೇನು?
ಹೆಚ್ಚು ಅಗರಬತ್ತಿ ಬಳಸುವುದರಿಂದ ಬರುವ ಹೊಗೆಯಿಂದ ತಕ್ಷಣ ಕಣ್ಣು ಸುಡುವುದು, ಗಂಟಲು ಕೆರೆಯುವುದು, ತಲೆನೋವು ಮತ್ತು ಉಸಿರಾಡಲು ಕಷ್ಟವಾಗುವುದು ಸಾಧ್ಯ. ದಿನಾಲೂ ಈ ಹೊಗೆ ಉಸಿರಾಡುತ್ತಿದ್ದರೆ ಶ್ವಾಸನಾಳ ಉರಿಯಬಹುದು, ಆಸ್ತಮಾ ಹೆಚ್ಚಾಗಬಹುದು, ನಿರಂತರ ಕೆಮ್ಮು ಬರಬಹುದು ಮತ್ತು ಶ್ವಾಸಕೋಶದ ಶಕ್ತಿ ಕಡಿಮೆಯಾಗಬಹುದು.
ದೇಹದಲ್ಲಿ ಉರಿ ಮತ್ತು ಒತ್ತಡ ಹೆಚ್ಚಾಗುವುದನ್ನು ತೋರಿಸಿವೆ. ಈ ಹೊಗೆಯ ಸಣ್ಣ ಕಣಗಳು ರಕ್ತದಲ್ಲಿ ಸೇರಿ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಆದ್ದರಿಂದ ಹೃದಯಕ್ಕೂ ಹಾನಿ ಆಗಬಹುದು. ಕ್ಯಾನ್ಸರ್ ಬರುವುದು ಸಿಗರೇಟಿನಷ್ಟು ಖಚಿತವಾಗಿ ಸಾಬೀತಾಗಿಲ್ಲ. ಆದರೆ ಮನೆಯೊಳಗೆ ಯಾವುದೇ ಹೊಗೆ ಅಥವಾ ಮಾಲಿನ್ಯ ದೀರ್ಘಕಾಲ ಇದ್ದರೆ ಅಪಾಯ ಹೆಚ್ಚಾಗುತ್ತದೆ ಎಂಬುದು ಸ್ಪಷ್ಟ ಎಂದು ಡಾ. ಚಿಂತನ್ ಶಾ ಅವರು ತಿಳಿಸಿದ್ದಾರೆ.
ವೈದ್ಯರ ಸೂಚನೆಗಳು
ಅಗರಬತ್ತಿ ಅಥವಾ ಸೊಳ್ಳೆ ಸುರುಳಿ ಸುಡುವಾಗ ಕಿಟಕಿ ಮತ್ತು ಬಾಗಿಲು ತೆರೆದಿಡಿ. ಸೊಳ್ಳೆ ತಡೆಯಲು ಹೊಗೆ ಬರುವ ಸುರುಳಿಗಿಂತ ಸೊಳ್ಳೆ ಪರದೆ ಅಥವಾ ಹೊಗೆ ಇಲ್ಲದ ಕಾಯಿಲ್ ಬಳಸುವುದು ಸುರಕ್ಷಿತ. ಒಂದೇ ಸಮಯದಲ್ಲಿ ಹಲವು ಅಗರಬತ್ತಿ ಸುಡಬೇಡಿ.
ಕಡಿಮೆ ಹೊಗೆ ಬರುವುದನ್ನು ಆರಿಸಿ. ಮಲಗುವ ರೂಮ್ನಲ್ಲಿ ರಾತ್ರಿ ಪೂರ್ತಿ ಸುರುಳಿ ಸುಡಬೇಡಿ. ಎಲ್ಲದಕ್ಕಿಂತ ಮುಖ್ಯ ಮನೆಯೊಳಗೆ ಗಾಳಿ ಬರುವಂತೆ ನೋಡಿಕೊಳ್ಳಿ. ಇದರಿಂದ ಹೊಗೆಯಲ್ಲಿ ಗಾಳಿ ಹೊರ ಹೋಗುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. Kannada news time ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಜವಾಬ್ದಾರಿಯಲ್ಲ)
Lung Cancer : ಅಗರಬತ್ತಿ ಹೊಗೆ ಸಿಗರೇಟ್‌ಗಿಂತ ಹೆಚ್ಚು ಅಪಾಯಕಾರಿ? ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಚ್ಚರ.!
WhatsApp Group
Join Now