Drought Relief : ಬೆಳೆ ಪರಿಹಾರ ಹಣ ಬಿಡುಗಡೆ.! ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯಾ ಚೆಕ್ ಮಾಡಿಕೊಳ್ಳಿ

Drought Relief : ನಮಸ್ಕಾರ ಸ್ನೇಹಿತರೇ, ರಾಜ್ಯದ ಎಲ್ಲ ರೈತರಿಗೆ ಗುಡ್‌ನ್ಯೂಸ್ ಬಂದಿದ್ದು, ಸುಮಾರು 34 ಲಕ್ಷ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಇಂದಿನಿಂದಲೇ ಬೆಳೆ ನಷ್ಟ ಪರಿಹಾರ ವಿತರಿಸಲಾಗುವುದು. ಇನ್ನು ಮೂರ್ನಾಲ್ಕು ದಿನಗಳಲ್ಲಿ ಎಲ್ಲ ರೈತರ ಬ್ಯಾಂಕ್ ಅಕೌಂಟ್‌ಗೆ ಬೆಳೆ ನಷ್ಟ ಪರಿಹಾರ ಜಮಾ ಆಗಲಿದೆ.

Pan Card Updates : ನೀವು ಪಾನ್ ಕಾರ್ಡ್ ಹೊಂದಿದ್ದೀರಾ.? ಹೊಸ ನಿಯಮ ಜಾರಿಗೆ – ₹10,000/- ದಂಡ.!

ಹೌದು, ಕೇಂದ್ರದಿಂದ ಬಂದಿರುವ ₹3,454 ಕೋಟಿ ರೂಪಾಯಿ ಇನ್‌ಪುಟ್ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ರೈತರಿಗೆ ವಿತರಿಸಿದ ಗರಿಷ್ಠ ₹2000 ರೂಪಾಯಿವರೆಗಿನ ಪರಿಹಾರ ಮೊತ್ತ ಕಡಿತ ಮಾಡಿಕೊಂಡು ಬಾಕಿ ಮೊತ್ತವನ್ನು ಡಿಬಿಟಿ ಮೂಲಕ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಕೃಷಿ, ನೀರಾವರಿ, ತೋಟಗಾರಿಕೆ ಬೆಳೆಗಳಿಗೆ ನಿಗದಿಯಾದ ಮೊತ್ತವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Gruhalakshmi Scheme : ಇನ್ನೂ ನಿಮಗೆ ಗೃಹಲಕ್ಷ್ಮಿ ಹಣ ಸಿಕ್ಕಿಲ್ವಾ.? ಬೇಗ ಈ ಕೆಲಸ ಮಾಡಿ – ತಕ್ಷಣ ಹಣ ಬರುತ್ತೆ

ಮೊದಲಿಗೆ 15 ಲಕ್ಷ ರೈತರ ಖಾತೆಗೆ ಪರಿಹಾರ ಮೊತ್ತ ಜಮಾ ಮಾಡಲಾಗುತ್ತದೆ. ಬಳಿಕ ಉಳಿದ ರೈತರಿಗೆ ಮೂರ್ನಾಲ್ಕು ದಿನಗಳಲ್ಲಿ ಪರಿಹಾರ ಹಣ ತಲುಪಲಿದೆ ಎಂದು ಹೇಳಲಾಗಿದೆ. ಕೇಂದ್ರದಿಂದ ಬಂದಿರುವ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲು ಚುನಾವಣಾ ಆಯೋಗದಿಂದ ಒಪ್ಪಿಗೆ ಪಡೆಯಲಾಗಿದ್ದು, ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಅರ್ಹರಾಗಿದ್ದ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply