Gruhalakshmi Scheme : ಇನ್ನೂ ನಿಮಗೆ ಗೃಹಲಕ್ಷ್ಮಿ ಹಣ ಸಿಕ್ಕಿಲ್ವಾ.? ಬೇಗ ಈ ಕೆಲಸ ಮಾಡಿ – ತಕ್ಷಣ ಹಣ ಬರುತ್ತೆ

Spread the love

Gruhalakshmi Scheme : ನಮಸ್ಕಾರ ಸ್ನೇಹಿತರೇ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭರವಸೆ ನೀಡಿದ್ದ ಗ್ಯಾರಂಟಿಗಳನ್ನ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಆ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ(Gruhalakshmi Scheme) ಯೋಜನೆಯ ಅರ್ಹ ಫಲಾನುಭವಿಗಳಲ್ಲಿ ಹಲವಾರು ಮಹಿಳೆಯರಿಗೆ ಇನ್ನೂ ಕೂಡ ಬ್ಯಾಂಕ್ ಖಾತೆಗೆ ಹಣ ಜಮಾ ಆಗದಿರುವುದು ಕಂಡು ಬಂದಿದೆ. ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರ ಹಲವು ಕ್ರಮಗಳನ್ನ ಕೈಗೊಂಡಿದೆ.

WhatsApp Group Join Now

ಅಷ್ಟೇ ಅಲ್ಲದೇ ಈ ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಅಡಿಯಲ್ಲಿ ರಾಜ್ಯದ ಲಕ್ಷಾಂತರ ಅರ್ಹ ಫಲಾನುಭವಿ ಗೃಹಣಿಯರು ಈ ಯೋಜನೆಯ ಸದುಪಯೋಗವನ್ನ ಪಡೆದುಕೊಂಡಿದ್ದಾರೆ. ಆದರೂ ಕೂಡ ಇನ್ನೂ ಹಲವಾರು ಗೃಹಿಣಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದರೂ ಇದುವರೆಗೂ ಅವರಿಗೆ ಒಂದು ಕಂತು ಕೂಡ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿಲ್ಲ. ಏನು ಸಮಸ್ಯೆ.? ಯಾಕೆ ಇನ್ನೂ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಜಮಾ ಆಗಿಲ್ಲ.? ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

Gruhalakshmi Scheme

ನಿಮ್ಮ ಮನೆಯ ಯಜಮಾನನ(ರೇಷನ್ ಕಾರ್ಡ್ ನಲ್ಲಿರುವ) ಖಾತೆಗೆ ಅಥವಾ ಮನೆಯ ಎರಡನೇ ಯಜಮಾನಿ ಖಾತೆಗೆ ಹಣ ಜಮಾ :

ಹೌದು, ನಿಮಗೆಲ್ಲ ಈಗಾಗಲೇ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ ಹಲವು ಮಹಿಳೆಯರ ಖಾತೆಗೆ ಹಣ ಜಮೆ ಆಗಿಲ್ಲ. ಇದಕ್ಕೆಲ್ಲಾ ಹಲವಾರು ಕಾರಣಗಳಿವೆ.

WhatsApp Group Join Now

ಮೊದಲನೆಯ ಕಾರಣವೇನೆಂದರೆ, ಇದುವರೆಗೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಏಕೆ ಜಮಾ ಆಗಿಲ್ಲವೆಂದರೆ, ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ತಪ್ಪಾಗಿರಬಹುದು ಅಥವಾ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಇನ್ನೂ ಸರಿಯಾಗಿ ಲಿಂಕ್ ಆಗದೇ ಇರುವುದು ಕೂಡ ಮುಖ್ಯ ಕಾರಣವಾಗಿದೆ.

ಇದೆಲ್ಲವನ್ನ ಗಮನಿಸಿದಂತಹ ಸರ್ಕಾರ ಅರ್ಹ ಫಲಾನುಭವಿಗಳ ಮನೆಯ ಯಜಮಾನ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣವನ್ನ ಜಮಾ ಮಾಡಲು ನಿರ್ಧರಿಸಿದೆ.

WhatsApp Group Join Now

ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಮನೆಯ ಯಜಮಾನಿಗೆ ಸಿಗುವಂತೆ ಮಾಡುತ್ತಾರೆ. ಒಂದು ವೇಳೆ ಮನೆಯ ಯಜಮಾನಿ ಖಾತೆಗೆ ವರ್ಗಾವಣೆ ಸಮಸ್ಯೆ ಕಂಡು ಬಂದಲ್ಲಿ ಮನೆಯ ಯಜಮಾನನ ಬ್ಯಾಂಕ್ ಖಾತೆಗೆ ಹಣ ಜಮ ಆಗುವಂತೆ ಮಾಡಲಾಗುತ್ತದೆ.

ಆದ್ದರಿಂದ ಮನೆಯ ಯಜಮಾನನ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ವರ್ಗಾವಣೆಯಾಗಬೇಕಾದರೆ, ಮನೆ ಯಜಮಾನನ ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರಬೇಕು. ಹಾಗು ಪಡಿತರ ಚೀಟಿ ಈ-ಕೆವೈಸಿ ಕೂಡ ಮಾಡಿಸಿರಬೇಕಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಜಮಾ ಆಗದಿದ್ದರೆ ಈ ಚಿಕ್ಕ ಕೆಲಸ ಮಾಡಿಬಿಡಿ

ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ನಿಮ್ಮ ಬ್ಯಾಂಕ್ ಖಾತೆಗೆ ಇನ್ನೂ ಜಮಾ ಆಗದಿದ್ದರೆ ಅದಾಲತ್ ಗೆ ಹೋಗಿ ದೂರು ಸಲ್ಲಿಸಬೇಕಾಗುತ್ತದೆ. ನೀವು ಸಲ್ಲಿಸಿರುವ ದೂರನ್ನು ಪರಿಗಣಿಸಿ ಗ್ರಾಮ ಪಂಚಾಯತ್ ನ ಸಿಬ್ಬಂದಿಗಳು ನಿಮ್ಮ ಮನೆಗೆ ಭೇಟಿ ನೀಡಿ, ನಿಮ್ಮ ಬ್ಯಾಂಕ್ ಖಾತೆಯ ಸಮಸ್ಯೆಗಳನ್ನ ಪರಿಗಣಿಸಿ ಪರಿಹಾರವನ್ನ ಸೂಚಿಸುತ್ತಾರೆ.

ನಿಮ್ಮ ಮನೆಗೆ ಭೇಟಿ ನೀಡುವ ಅಧಿಕಾರಿ ಹಾಗು ಸಿಬ್ಬಂದಿ ವರ್ಗದವರು ಯಾರೆಂದು ನೋಡುವುದಾದರೆ, ನಿಮ್ಮ ವಲಯದ ಅಂಗನವಾಡಿ ಸಹಾಯಕರು ಹಾಗು ಗ್ರಾಮ ಪಂಚಾಯತ್ ನ ಕಡೆಯಿಂದ ಅಧಿಕಾರಿಗಳು ಕೂಡ ಜೊತೆಯಲ್ಲಿರುತ್ತಾರೆ.

ಆದರೂ ಸಮಸ್ಯೆ ಪರಿಹಾರವಾಗದೇ, ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗದೇ ಇದ್ದಲ್ಲಿ ಸಿಬ್ಬಂದಿ ವರ್ಗದವರು ನಿಮ್ಮನ್ನು ಬ್ಯಾಂಕ್ ಗೆ ಕರೆದುಕೊಂಡು ಹೋಗಿ ಸಮಸ್ಯೆ ಪರಿಹಾರವಾಗಿ, ಹಣ ವರ್ಗಾವಣೆಯಾಗುವಂತೆ ಮಾಡುತ್ತಾರೆ. ಇನ್ನು ಮುಂದೆ ಕೂಡ ಯಾವುದೇ ಸಮಸ್ಯೆಯಾಗದಂತೆ, ಬೇಕಾಗಿರುವ ದಾಖಲೆಗಳನ್ನ ಸರಿಪಡಿಸಿಕೊಂಡು ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಪ್ರತೀ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವಂತೆ ಮಾಡುತ್ತಾರೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಅದಾಲತ್ ಜಾರಿಗೆ :

ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಅಡಿಯಲ್ಲಿ ಇಲ್ಲಿಯವರೆಗೆ ಸುಮಾರು ೧.೧೭ ಕೋಟಿ ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಈಗಾಗಲೇ ೧.೧೦ ಕೋಟಿ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಅಡಿಯಲ್ಲಿ ಡಿಬಿಟಿ(DBT) ಮೂಲಕ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನ ಜಮಾ ಮಾಡಲಾಗುತ್ತದೆ.

ಆದರೆ, ಇದುವರೆಗೂ ಸುಮಾರು ೨ ಲಕ್ಷ ಅರ್ಹ ಫಲಾನುಭವಿಗಳಿಗೆ ಹಲವಾರು ಸಮಸ್ಯೆಗಳಿಂದಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ. ಆದ್ದರಿಂದ ಈ ಸಮಸ್ಯೆಗಳನ್ನು ಪರಿಹರಿಸುವ ಪ್ರಕ್ರಿಯೆಯನ್ನು ನಡೆಸಲು ಸರ್ಕಾರವು ಮುಂದಾಗಿದೆ.

ಏಕೆ ಹಣ ವರ್ಗಾವಣೆಯಾಗುತ್ತಿಲ್ಲ ಎಂದು ತಿಳಿಯುವುದಾದರೆ, ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯಲ್ಲಿ ಸಾಕಷ್ಟು ಗೊಂದಲಗಳು ಇರಬಹುದು. ಇಲ್ಲದಿದ್ದಲ್ಲಿ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರಬಹುದು. ನಿಮ್ಮ ವಲಯದ ಅಂಗನವಾಡಿ ಸಹಾಯಕರು ನಿಮ್ಮನ್ನು ಕರೆದುಕೊಂಡು ಹೋಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ತೊಂದರೆಗಳನ್ನ ಬಗೆಹರಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.

ಇಷ್ಟೆಲ್ಲಾ ಆದ್ರೂ ಕೂಡ ಇನ್ನು ನಿಮಗೆ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಜಮಾ ಆಗದೇ ಇದ್ದರೆ, ಈ ಚಿಕ್ಕ ಕೆಲಸವನ್ನ ಮಾಡಿಬಿಡಿ

ಕೊನೆಯದಾಗಿ ನೀವು ಈ ಒಂದು ಖಾತೆಯನ್ನು ತೆರೆದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ತಕ್ಷಣ ಬರುತ್ತದೆ. ಅದು ಯಾವುದೆಂದು ನೋಡುವುದಾದರೆ, ಸರ್ಕಾರಿ ಸ್ವಾಮ್ಯದ ಅಂಚೆ ಕಚೇರಿಯ IPPB(India Post Payments Bank) ಉಳಿತಾಯ ಖಾತೆ. ಅಂಚೆ ಕಚೇರಿಯಲ್ಲಿನ ಈ ಒಂದು ಖಾತೆಯನ್ನು ಕೇವಲ ಐದು ನಿಮಿಷಗಳಲ್ಲಿ ನೀವು ತೆರೆಯಬಹುದಾಗಿದೆ.

ರಾಜ್ಯದಲ್ಲಿ ಒಟ್ಟು ೩೩ IPPB(India Post Payments Bank) ಶಾಖೆಗಳಿವೆ. ಅಂಚೆ ಕಚೇರಿಯಲ್ಲಿನ IPPB(India Post Payments Bank) ಪೋಸ್ಟ್ ಖಾತೆ ತೆರೆಯುವುದರಿಂದ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ತಕ್ಷಣ ನಿಮ್ಮ ಪೋಸ್ಟ್ ಆಫೀಸ್ ಖಾತೆಗೆ ವರ್ಗಾವಣೆಯಾಗುತ್ತದೆ. ಇದುವರೆಗೆ ಹಲವಾರು ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಅರ್ಹ ಫಲಾನುಭವಿಗಳು ಈ ಒಂದು ಪೋಸ್ಟ್ ಖಾತೆಯನ್ನು ತೆರೆದಿರುವುದರಿಂದ ಕೇವಲ ಎರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ವರ್ಗಾವಣೆಯಾದ ಉದಾಹರಣೆ ಕಂಡು ಬಂದಿದೆ.

ನಿಮಗೂ ಕೂಡ ಇದುವರೆಗೂ ಹಣ ಜಮಾ ಆಗಿಲ್ಲವೆಂದರೆ ಇದೊಂದು ಪ್ರಯತ್ನ ಖಂಡಿತಾ ಮಾಡಿ ನೋಡಿ. ಹಾಗು ಸರ್ಕಾರ ಮಹಿಳೆಯರಿಗಾಗಿ ಅನುಷ್ಠಾನಗೊಳಿಸಿರುವ ಈ ಒಂದು ಯಶಸ್ವೀ ಯೋಜನೆಯ ಪ್ರಯೋಜನವನ್ನ ಪಡೆದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply