ಸ್ವ ಉದ್ಯೋಗ ಮಾಡುವ ಯೋಚನೆ ಇದ್ಯಾ.? ಸ್ವ ಉದ್ಯೋಗ ಸಾಲ ಯೋಜನೆ – ಬೇಕಾಗುವ ದಾಖಲೆಗಳೇನು.?

ನಮಸ್ಕಾರ ಸ್ನೇಹಿತರೇ, ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆದು ಕುಟುಂಬ ನಿರ್ವಹಣೆ ಮಾಡಿದರೆ, ದೇಶದ ಪ್ರಗತಿಗೂ ಇದು ದೊಡ್ಡ ಕೊಡುಗೆ ನೀಡುತ್ತದೆ ಎಂಬುದು ಸರ್ಕಾರದ ಯೋಚನೆ ಮತ್ತು ಯೋಜನೆಯಾಗಿದೆ. ಅದಕ್ಕಾಗಿಯೇ ಸರ್ಕಾರಗಳು ಮಹಿಳೆಯರಿಗೆ ವಿವಿಧ ಕೌಶಲ್ಯಗಳನ್ನು ಕಲಿಸಲು ಮತ್ತು ಉದ್ಯೋಗ ಒದಗಿಸಲು ನಾನಾ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರನ್ನು ಆರ್ಥಿಕ ಸ್ವಾತಂತ್ರ್ಯಗೊಳಿಸಲು ಇಂತಹ ಯೋಜನೆಗಳೂ ಸಹಾಯವಾಗುತ್ತವೆ.

ಇದನ್ನೂ ಕೂಡ ಓದಿ : Udyogini Scheme : ಎಲ್ಲಾ ವರ್ಗದ ಮಹಿಳೆಯರು ಅರ್ಜಿ ಸಲ್ಲಿಸಬಹುದು – ಬೇಕಾಗುವ ದಾಖಲೆಗಳೇನು.? ಸಂಪೂರ್ಣ ಮಾಹಿತಿ

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಮಹಿಳೆಯರ ಶ್ರೇಯೋಭಿವೃದ್ಧಿ ಹಾಗೂ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಲಖ್ ಪತಿ ದೀದಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಹಾಗಾದ್ರೆ ಬನ್ನಿ ಈ ಲಖ್ ಪತಿ ದೀದಿ ಯೋಜನೆಯಡಿಯಲ್ಲಿ ಯಾರೆಲ್ಲಾ ಸಾಲ ಪಡೆಯಲು ಅರ್ಹರು? ಬೇಕಾಗುವ ದಾಖಲೆಗಳೇನು.? ಎನ್ನುವುದರ ಬಗ್ಗೆ
ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಲಖ್ ಪತಿ ದೀದಿ ಯೋಜನೆಯ ಪ್ರಯೋಜನಗಳೇನು.?

ಈ ಯೋಜನೆಯಡಿಯಲ್ಲಿ ಮಹಿಳೆಯರನ್ನು ಸ್ವ-ಸಹಾಯ ಗುಂಪುಗಳೊಂದಿಗೆ ಅನುಸಂಧಾನ ಮಾಡಲಾಗಿದೆ. ಇಲ್ಲಿ ಎಲ್‌ಇಡಿ ಲೈಟ್‌ಗಳ ತಯಾರಿಕೆ, ಪ್ಲಂಬಿಂಗ್ ಮತ್ತು ಡ್ರೋನ್ ರಿಪೇರಿ ತರಬೇತಿ ಪಡೆಯಬಹುದು. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ತಂತ್ರಜ್ಞಾನದ ಸೇರ್ಪಡೆಗೆ ಈ ಡ್ರೋನ್‌ಗಳು ಸಹಾಯ ಮಾಡುತ್ತವೆ. ಈ ಯೋಜನೆಯಡಿ ಕಾರ್ಯಾಗಾರಗಳು, ಸಾಲ ಸೌಲಭ್ಯ, ವಿಮೆ, ಕೌಶಲ್ಯ ಅಭಿವೃದ್ಧಿ, ಆರ್ಥಿಕ ಪ್ರೋತ್ಸಾಹ ಸೇರಿದಂತೆ ಹಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಕೂಡ ಓದಿ : ಮಹಿಳೆಯರಿಗೆ ಸಿಹಿಸುದ್ಧಿ.! ವಿವಿಧ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ – ಬೇಕಾಗುವ ದಾಖಲೆಗಳೇನು.?

ಏನೆಲ್ಲಾ ಅರ್ಹತೆಗಳಿರಬೇಕು.?

• ಈ ಯೋಜನೆ ಮಹಿಳೆಯರಿಗೆ ಮಾತ್ರ.
• ಮಹಿಳಾ ಅರ್ಜಿದಾರರು, ತಾವು ಅರ್ಜಿ ಸಲ್ಲಿಸುವ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
• ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂಪಾಯಿ ಮೀರಬಾರದು.
• ಅರ್ಜಿದಾರರ ಕುಟುಂಬದಲ್ಲಿ ಯಾರೂ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.

ಬೇಕಾಗುವ ದಾಖಲೆಗಳೇನು.?

• ವಸತಿ ಪ್ರಮಾಣ ಪತ್ರ
• ಆಧಾರ್ ಕಾರ್ಡ್
• ಪಡಿತರ ಚೀಟಿ
• ಆದಾಯ ಪ್ರಮಾಣ ಪತ್ರ
• ಬ್ಯಾಂಕ್ ಖಾತೆ
• ಮೊಬೈಲ್ ಸಂಖ್ಯೆ

ಇದನ್ನೂ ಕೂಡ ಓದಿ : PM Vishwakarma Yojana : ಕಡಿಮೆ ಬಡ್ಡಿದರದಲ್ಲಿ 5 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ.! ಅರ್ಜಿ ಸಲ್ಲಿಸಲು  ಬೇಕಾಗುವ ಅಗತ್ಯ ದಾಖಲೆಗಳೇನು.?

ಹೇಗೆ ಅರ್ಜಿ ಸಲ್ಲಿಸುವುದು.?

ಮೊದಲು ಸ್ಥಳೀಯ ಸ್ವಸಹಾಯ ಗುಂಪಿಗೆ ಸೇರಿಕೊಳ್ಳಿ.
ಅಂಗನವಾಡಿ ಕೇಂದ್ರವು ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಅಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಲಾಗುತ್ತದೆ. ಲಖ್ ಪತಿ ದೀದಿ ಯೋಜನೆಗಾಗಿ ಅರ್ಜಿ ನಮೂನೆಯನ್ನು ಪಡೆದು ನಿಮ್ಮ ವಿವರಗಳನ್ನು ಭರ್ತಿ ಮಾಡಿ. ನಿಗದಿತ ಕಚೇರಿ ಅಥವಾ ಅಂಗನವಾಡಿ ಕೇಂದ್ರದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಿ.

ನಂತರ ನಿಮ್ಮ ಅರ್ಜಿಯು ಅರ್ಹತೆ ಪರಿಶೀಲನೆ ಪ್ರಕ್ರಿಯೆಯ ಮೂಲಕ ಮುಂದಿನ ಹಂತಕ್ಕೆ ಹೋಗುತ್ತದೆ. ಪರಿಶೀಲನೆಯ ನಂತರ ನಿಮ್ಮ ಅರ್ಜಿಯ ಅನುಮೋದನೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಎಸ್‌ಎಂಎಸ್ ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಆಯ್ಕೆಯ ನಂತರ ಕಾರ್ಯಾಗಾರಗಳು ಮತ್ತು ಇತರ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗಬೇಕಾಗುತ್ತದೆ. ತರಬೇತಿಯ ನಂತರ ನಿಮಗೆ ಹಣಕಾಸಿನ ನೆರವು ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಾಗುತ್ತದೆ.

Leave a Reply