HSRP Number Plate : ಎಚ್ಎಸ್ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ಜನವರಿ 31 ರವರೆಗೆ ವಿಸ್ತರಣೆ.! ಸರ್ಕಾರ ಅಧಿಕೃತ ಆದೇಶ.!

HSRP Number Plate : ನಮಸ್ಕಾರ ಸ್ನೇಹಿತರೇ, ಹಳೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಗಡುವು ವಿಸ್ತರಿಸಲಾಗಿದೆ.ಹೌದು. ಜ.31 ರವರೆಗೆ ರವರೆಗೆ HSRP ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆಧಿಕೃತ ಆದೇಶ ಹೊರಡಿಸಿದೆ. HSRP ಅಳವಡಿಕೆಗೆ ಡಿ 31 ಕೊನೆ ದಿನವಾಗಿತ್ತು. ಇದೀಗ ಜ.31 ರವರೆಗೆ ಸಾರಿಗೆ ಇಲಾಖೆ ಗಡುವು ವಿಸ್ತರಿಸಿದೆ.

WhatsApp Group Join Now

ರಾಜ್ಯದಲ್ಲಿ ಸುಮಾರು 2 ಕೋಟಿ ಹಳೆ ವಾಹನಗಳಿದ್ದು, 55 ಲಕ್ಷ ವಾಹನ ಮಾತ್ರ HSRP ಅಳವಡಿಸಿಕೊಂಡಿವೆ. 2019ರ ಏ. 1ಕ್ಕೆ ಮೊದಲು ನೋಂದಣಿಯಾದ ವಾಹನಗಳಿಗೆ HSRP ಕಡ್ಡಾಯ ಮಾಡಲಾಗಿದೆ. ಬಹುತೇಕ ವಾಹನಗಳಿಗೆ ಇನ್ನೂ ಹೆಚ್.ಎಸ್.ಆರ್.ಪಿ. ಹಾಕಿಸದ ಹಿನ್ನಲೆಯಲ್ಲಿ ಮತ್ತೆ ಗಡುವು ವಿಸ್ತರಣೆ ಮಾಡಲಾಗಿದೆ.

ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?

WhatsApp Group Join Now

ಎಚ್‌ಎಸ್‌ಆರ್ ಪಿ ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಎಂದು ಅರ್ಥವಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ವಾಹನಗಳಿಗೆ ಇದನ್ನು ಕಡ್ಡಾಯಗೊಳಿಸಿದೆ. ಎಚ್‌ಎಸ್‌ಆರ್ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ವಾಹನ ಮಾಲೀಕರು ವಿಳಾಸ ಬದಲಾವಣೆ, ನಕಲಿ ಆರ್ಸಿ, ವಿಮೆ ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

2019ರ ಏಪ್ರಿಲ್ 1ಕ್ಕಿಂತ ಹಿಂದಿನ ವಾಹನಗಳು ಎಚ್‌ಎಸ್‌ಆರ್ಪಿ ಅಳವಡಿಸಿಕೊಳ್ಳಬೇಕು, ನೀವು HSRP ನಂಬರ್ ಪ್ಲೇಟ್ ಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‌ಎಸ್‌ಆರ್ಪಿ) ಅಳವಡಿಸುವುದು ಕಡ್ಡಾಯವಾಗಿದೆ.

WhatsApp Group Join Now

Leave a Reply