ಹೈ ಬ್ಲಡ್ ಪ್ರೆಶರ್‌ ನಿರ್ಲಕ್ಷ್ಯ ಬೇಡ: ಹೃದಯಾಘಾತಕ್ಕೆ ಕಾರಣವಾಗುವ ಎಚ್ಚರಿಕೆ ಸೂಚನೆಗಳು!

Spread the love

ವಿಶೇಷವಾಗಿ ಮಧುಮೇಹ, ಅತಿಯಾದ ಒತ್ತಡ, ನಿದ್ರಾಹೀನತೆ, ಧೂಮಪಾನ ಹಾಗೂ ಅಸ್ವಸ್ಥ ಆಹಾರ ಪದ್ಧತಿ ಹೊಂದಿರುವವರಲ್ಲಿ ಅಪಾಯ ಹೆಚ್ಚಿರುತ್ತದೆ. ಯುವಜನತೆಯಲ್ಲಿಯೂ ಈ ಸಮಸ್ಯೆ ವೇಗವಾಗಿ ಏರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್‌ (Hypertension) ಸಮಸ್ಯೆ ಯುವಕರು ಸೇರಿದಂತೆ ಎಲ್ಲಾ ವಯೋಮಾನದ ಜನರಲ್ಲಿ ಹೆಚ್ಚಾಗುತ್ತಿದೆ. ವೈದ್ಯರ ಪ್ರಕಾರ, ನಿಯಂತ್ರಣದಲ್ಲಿಲ್ಲದ ರಕ್ತದೊತ್ತಡವು ಹೃದಯಾಘಾತ, ಸ್ಟ್ರೋಕ್‌ ಹಾಗೂ ಕಿಡ್ನಿ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಬಹುದು. ವಿಶೇಷವಾಗಿ ಈ ಕಾಯಿಲೆಯನ್ನ “ಸೈಲೆಂಟ್ ಕಿಲ್ಲರ್” ಎಂದು ಕರೆಯಲಾಗುತ್ತದೆ, ಏಕೆಂದರೆ ಆರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.

ತಜ್ಞರ ಪ್ರಕಾರ, ನಿರಂತರ ತಲೆನೋವು, ತಲೆ ಸುತ್ತುವುದು, ಎದೆನೋವು, ಉಸಿರಾಟದ ತೊಂದರೆ, ದೃಷ್ಟಿ ಮಂಕಾಗುವುದು, ಅತಿಯಾದ ದಣಿವು ಮತ್ತು ಹೃದಯ ಬಡಿತದಲ್ಲಿ ಅಸಮತೋಲನ ಕಂಡುಬಂದರೆ ಅದನ್ನ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಇವು ಹೈ ಬಿಪಿಯ ಪ್ರಮುಖ ಎಚ್ಚರಿಕೆ ಸೂಚನೆಗಳಾಗಿರಬಹುದು. ಕೆಲವು ಸಂದರ್ಭಗಳಲ್ಲಿ ಮೂಗಿನಿಂದ ರಕ್ತಸ್ರಾವವಾಗುವುದು ಕೂಡ ರಕ್ತದೊತ್ತಡ ಹೆಚ್ಚಿರುವ ಸೂಚನೆಯಾಗಿರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ವೈದ್ಯರ ಹೇಳಿಕೆಯಂತೆ, ಹೈ ಬಿಪಿ ದೀರ್ಘಕಾಲ ನಿಯಂತ್ರಣದಲ್ಲಿರದಿದ್ದರೆ ಹೃದಯಕ್ಕೆ ರಕ್ತ ಪೂರೈಕೆ ಮಾಡುವ ನರಗಳಲ್ಲಿ ಹಾನಿ ಉಂಟಾಗಿ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಮಧುಮೇಹ, ಅತಿಯಾದ ಒತ್ತಡ, ನಿದ್ರಾಹೀನತೆ, ಧೂಮಪಾನ ಹಾಗೂ ಅಸ್ವಸ್ಥ ಆಹಾರ ಪದ್ಧತಿ ಹೊಂದಿರುವವರಲ್ಲಿ ಅಪಾಯ ಹೆಚ್ಚಿರುತ್ತದೆ. ಯುವಜನತೆಯಲ್ಲಿಯೂ ಈ ಸಮಸ್ಯೆ ವೇಗವಾಗಿ ಏರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಆರೋಗ್ಯ ತಜ್ಞರು ಪ್ರತಿಯೊಬ್ಬರೂ ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ದಿನನಿತ್ಯ ವ್ಯಾಯಾಮ, ಕಡಿಮೆ ಉಪ್ಪಿನ ಆಹಾರ, ಒತ್ತಡ ನಿಯಂತ್ರಣ ಮತ್ತು ಸರಿಯಾದ ನಿದ್ರೆ ಹೈ ಬಿಪಿಯನ್ನ ನಿಯಂತ್ರಿಸಲು ಸಹಕಾರಿ ಎಂದು ತಿಳಿಸಿದ್ದಾರೆ. ಯಾವುದೇ ಎದೆನೋವು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯರನ್ನ ಸಂಪರ್ಕಿಸುವುದು ಅತ್ಯಂತ ಅಗತ್ಯವೆಂದು ಎಚ್ಚರಿಸಿದ್ದಾರೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Kannada News Time ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)

WhatsApp Group Join Now

Spread the love

Leave a Reply