ಕಡಿಮೆ ನೀರು ಕುಡಿಯುವುದು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ದಿನಪೂರ್ತಿ ಸಾಕಷ್ಟು ನೀರು ಕುಡಿಯದಿದ್ದರೆ ಮೂತ್ರ ಗಟ್ಟಿಯಾಗುತ್ತಿದ್ದು, ಖನಿಜಗಳು ಜಮೆಯಾಗಲು ಅವಕಾಶ ಸಿಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಯುವಕರು ಸೇರಿದಂತೆ ಎಲ್ಲಾ ವಯಸ್ಸಿನವರಲ್ಲೂ ಹೆಚ್ಚಾಗುತ್ತಿರುವುದು ಆರೋಗ್ಯ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಅನಿಯಮಿತ ಆಹಾರ ಪದ್ಧತಿ, ಕಡಿಮೆ ನೀರು ಸೇವನೆ ಹಾಗೂ ಕೆಲವು ವಿಶೇಷ ಆಹಾರಗಳ ಅತಿಯಾದ ಸೇವನೆ ಕಿಡ್ನಿ ಸ್ಟೋನ್ ನಿರ್ಮಾಣಕ್ಕೆ ಪ್ರಮುಖ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ಆಕ್ಸಲೇಟ್, ಸೋಡಿಯಂ ಮತ್ತು ಹೆಚ್ಚಿನ ಪ್ರೋಟೀನ್ ಪ್ರಮಾಣ ಹೆಚ್ಚಾದಾಗ ಮೂತ್ರಪಿಂಡಗಳಲ್ಲಿ ಖನಿಜಗಳ ಜಮಾವಣೆ ಹೆಚ್ಚಾಗಿ ಕಿಡ್ನಿ ಸ್ಟೋನ್ ರೂಪುಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ವಿಶೇಷವಾಗಿ ಪಾಲಕ್, ಬೀಟ್ರೂಟ್, ಚಾಕೊಲೇಟ್, ಬಾದಾಮಿ ಹಾಗೂ ಟೀ ಮತ್ತು ಕಾಫಿ ಸೇರಿದಂತೆ ಕೆಲವು ಆಹಾರಗಳಲ್ಲಿ ಆಕ್ಸಲೇಟ್ ಪ್ರಮಾಣ ಹೆಚ್ಚು ಇರುವುದರಿಂದ ಅವುಗಳನ್ನ ಮಿತವಾಗಿ ಸೇವಿಸುವುದು ಉತ್ತಮವೆಂದು ವೈದ್ಯರು ಸಲಹೆ ನೀಡಿದ್ದಾರೆ.
ಇನ್ನು ಹೆಚ್ಚಿನ ಉಪ್ಪು ಇರುವ ಫಾಸ್ಟ್ ಫುಡ್, ಪ್ಯಾಕೇಜ್ಡ್ ಸ್ನ್ಯಾಕ್ಸ್, ಪ್ರಾಸೆಸ್ಡ್ ಆಹಾರಗಳು ಹಾಗೂ ಅತಿಯಾದ ಮಾಂಸಾಹಾರವೂ ಕಿಡ್ನಿ ಸ್ಟೋನ್ ಅಪಾಯ ಹೆಚ್ಚಿಸಬಹುದು ಎಂದು ಹೇಳಲಾಗಿದೆ. ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾದರೆ ಮೂತ್ರದ ಮೂಲಕ ಕ್ಯಾಲ್ಸಿಯಂ ಹೊರಹೋಗುವ ಪ್ರಮಾಣ ಹೆಚ್ಚಾಗಿ, ಅದು ಕಿಡ್ನಿ ಸ್ಟೋನ್ ರೂಪುಗೊಳ್ಳುವಿಕೆಗೆ ಕಾರಣವಾಗುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.
ಕಡಿಮೆ ನೀರು ಕುಡಿಯುವುದು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ದಿನಪೂರ್ತಿ ಸಾಕಷ್ಟು ನೀರು ಕುಡಿಯದಿದ್ದರೆ ಮೂತ್ರ ಗಟ್ಟಿಯಾಗುತ್ತಿದ್ದು, ಖನಿಜಗಳು ಜಮೆಯಾಗಲು ಅವಕಾಶ ಸಿಗುತ್ತದೆ. ಹೀಗಾಗಿ ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಸೇವಿಸುವುದು ಮುಖ್ಯವೆಂದು ವೈದ್ಯರು ಸಲಹೆ ನೀಡಿದ್ದಾರೆ.
ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಹಾಗೂ ನಿಯಮಿತ ವ್ಯಾಯಾಮದಿಂದ ಕಿಡ್ನಿ ಸ್ಟೋನ್ ಸಮಸ್ಯೆಯನ್ನ ಬಹುತೇಕ ತಡೆಗಟ್ಟಬಹುದು ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿಂಬೆ ಹಣ್ಣು, ತೆಂಗಿನಕಾಯಿ ನೀರು ಹಾಗೂ ಕ್ಯಾಲ್ಸಿಯಂ ಸಮೃದ್ಧ ಆಹಾರಗಳು ಕಿಡ್ನಿ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಲಾಗಿದೆ.
ತಜ್ಞರ ಪ್ರಕಾರ ಪದೇಪದೇ ಬೆನ್ನು ನೋವು, ಮೂತ್ರವಿಸರ್ಜನೆ ವೇಳೆ ನೋವು ಅಥವಾ ರಕ್ತಮಿಶ್ರಿತ ಮೂತ್ರ ಕಂಡುಬಂದರೆ ತಕ್ಷಣ ವೈದ್ಯರನ್ನ ಸಂಪರ್ಕಿಸುವುದು ಅಗತ್ಯ. ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಗಂಭೀರ ಸಮಸ್ಯೆಗಳನ್ನ ತಪ್ಪಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Kannada News Time ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)
ಈ ಆಹಾರಗಳೇ ಕಿಡ್ನಿಗೆ ತುಂಬಾ ಡೇಂಜರ್! ಈ ಫುಡ್ ಹ್ಯಾಬಿಟ್ನಿಂದಲೇ ಕಿಡ್ನಿ ಸ್ಟೋನ್ ಆಗುತ್ತೆ!
WhatsApp Group
Join Now