Bigg Boss Kannada 11 : ಧನರಾಜ್‌ರನ್ನು ಹರಕೆ ಕುರಿ ಮಾಡಿದ ಮಂಜು ಮತ್ತು ಗೌತಮಿ – ಫೈನಲ್ ಟಿಕೆಟ್ ಗೆದ್ದ ಸ್ಪರ್ಧಿಗಳು ಯಾರು.?

Bigg Boss Kannada 11 : ನಮಸ್ಕಾರ ಸ್ನೇಹಿತರೇ, ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಎಂಟ್ರಿ ಪಡೆಯಲು ಈ ವಾರದ ಟಾಸ್ಕ್‌ಗಳು ನಡೆದಿವೆ. ಬಿಗ್ ಬಾಸ್ ಕೂಡ ಟಾಸ್ಕ್‌ನಲ್ಲಿ ಜಯ ಗಳಿಸುವ ಸ್ಪರ್ಧಿ ನೇರವಾಗಿ ಫಿನಾಲೆ ಓಟದಲ್ಲಿ ಟಿಕೆಟ್ ಪಡೆಯುತ್ತಾರೆ, ಸೋತವರು ಫಿನಾಲೆ ಟಿಕೆಟ್ ಪಡೆಯಲು ವಿಫಲರಾಗುತ್ತಾರೆ ಎಂದು ಹೇಳಿದ್ದಾರೆ.

ಹೀಗಾಗಿ ಟಾಸ್ಕ್‌ಗಳು ನಡೆದಿದ್ದು ಫಲಿತಾಂಶ ಕೂಡ ಹೊರಬಂದಿದೆ. ಇದರಲ್ಲಿ ಇಬ್ಬರು ಸ್ಪರ್ಧಿಗಳು ಫಿನಾಲೆಗೆ ಟಿಕೆಟ್ ಪಡೆದಿದ್ದಾರೆ. ಹಾಗಾದರೆ ಆ ಸ್ಪರ್ಧಿಗಳು ಯಾರು?

ತ್ರಿವಿಕ್ರಮ್‌ಗೆ ಫಿನಾಲೆ ಟಿಕೆಟ್ ಟಾಸ್ಕ್‌

ಚೈತ್ರಾ ಕುಂದಾಪುರ ಅವರು ಟಿಕೆಟ್ ಟು ಫಿನಾಲೆ ಓಟದಿಂದ ಹೊರಗಡೆ ಉಳಿದುಕೊಂಡಿದ್ದಾರೆ. ಇವರು ಫಿನಾಲೆಗೆ ನೇರವಾಗಿ ಎಂಟ್ರಿ ಪಡೆಯಲು ಆಗುವುದಿಲ್ಲ. ಎಲಿಮಿನೇಷನ್‌ ದಾಟಿ ಫಿನಾಲೆಗೆ ಎಂಟ್ರಿ ಕೊಡಬೇಕಾಗುತ್ತದೆ. ಇನ್ನು ತ್ರಿವಿಕ್ರಮ್ ಅವರಿಗೆ ಟಿಕೆಟ್ ಟು ಫಿನಾಲೆ ಓಟದಲ್ಲಿ ಮುಂದುವರೆಯುವ ಅವಕಾಶ ಸಿಕ್ಕಿದೆ. ಹೀಗಾಗಿ ತ್ರಿವಿಕ್ರಮ್ ಟಿಕೆಟ್ ಟು ಫಿನಾಲೆ ಓಟದಲ್ಲಿ ಜಯ ಸಾಧಿಸಿದ್ದರೆ, ಚೈತ್ರಾ ಕುಂದಾಪುರ ಅವರು ಇದರಿಂದ ಹೊರ ಉಳಿದಿದ್ದಾರೆ.

ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?

ಹೀಗಾಗಿ ಧನ್‌ರಾಜ್‌ ತಂಡದಿಂದ ಚೈತ್ರಾ ಆಟದಿಂದ ಹೊರಗಡೆ ಉಳಿದಿರುವುದರಿಂದ ಧನ್‌ರಾಜ್, ಗೌತಮಿ ಹಾಗೂ ಮಂಜು ಅವರು ಮಾತ್ರ ಮುಂದಿನ ಟಾಸ್ಕ್ ಆಡುತ್ತಾರೆ. ಇತ್ತ ತ್ರಿವಿಕ್ರಮ್ ಫಿನಾಲೆ ಟಿಕೆಟ್ ಪಡೆದುಕೊಳ್ಳುವ ಓಟದಲ್ಲಿ ಸೆಲೆಕ್ಟ್ ಆಗಿರುವುದರಿಂದ ಇವರ ತಂಡದಲ್ಲಿ ಉಳಿದ ಮೋಕ್ಷಿತಾ, ಹನುಮಂತು ಹಾಗೂ ಭವ್ಯಾ ಅವರು ಮುಂದಿನ ಆಟವನ್ನು ಆಡಿದರು.

ರಜತ್‌ಗೆ ಫಿನಾಲೆ ಟಿಕೆಟ್

ಇನ್ನೂ ರಜತ್ ಈ ವಾರದ ಕ್ಯಾಪ್ಟನ್ ಆಗಿರುವುದರಿಂದ ಉಸ್ತುವಾರಿಯನ್ನೇ ಮಾಡಬೇಕಾಗುತ್ತದೆ. ಯಾವುದೇ ಟಾಸ್ಕ್‌ನಲ್ಲಿ ಭಾಗವಹಿಸಲು ಅವರಿಗೆ ಅವಕಾಶವನ್ನು ಬಿಗ್‌ಭಾಸ್‌ ನೀಡಿಲ್ಲ. ಹೀಗಾಗಿ ಇವರನ್ನು ನೇರವಾಗಿ ಟಿಕೆಟ್ ಟು ಫಿನಾಲೆಗೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗೆ ಎಲ್ಲಾ ಟಾಸ್ಕ್ ಮುಗಿದ ಬಳಿಕ ಒಬ್ಬರು ಸೆಲೆಕ್ಟ್ ಆಗುತ್ತಾರೆ ಇನ್ನೊಬ್ಬರು ರಿಜೆಕ್ಟ್ ಆಗುತ್ತಾರೆ.

ಹೀಗೆ ಎಲ್ಲಾ ಟಾಸ್ಕ್‌ನಲ್ಲಿ ವಿನ್ ಆದವರು ಫಿನಾಲೆ ಟಾಸ್ಕ್‌ ಅನ್ನು ಆಡುತ್ತಾರೆ. ಆಗ ರಜತ್ ಟಾಸ್ಕ್‌ನಲ್ಲಿ ಭಾಗವಹಿಸುತ್ತಾರೆ. ಅಲ್ಲಿಯವರೆಗೂ ಅವರು ಉಸ್ತುವಾರಿಯಾಗಿಯೇ ಇರಲಿದ್ದಾರೆ. ಹೀಗಾಗಿ ಫಿನಾಲೆ ಟಿಕೆಟ್‌ ಪಡೆಯಲು ಅರ್ಹರಾಗಿರುವುದರಿಂದ ತ್ರಿವಿಕ್ರಮ್ ಹಾಗೂ ರಜತ್ ಅವರು ಕೈಗೆ ನೀಲಿ ಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ.

Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!

ಧನ್‌ರಾಜ್‌ ಅವರನ್ನು ಬಕ್ರಾ ಮಾಡಿದ ಮಂಜು ಗೌತಮಿ

ಇನ್ನೂ ಮುಂದಿನ ಆಟದಲ್ಲಿ ಫಿನಾಲೆ ಟಿಕೆಟ್ ಪಡೆಯಲು ಅರ್ಹರಲ್ಲದ ಸ್ಪರ್ಧಿಯ ಹೆಸರನ್ನು ಸೂಚಿಸುವಂತೆ ಬಿಗ್‌ಬಾಸ್‌ ಸೂಚಿಸುತ್ತಾರೆ. ಈ ವೇಳೆ ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಇಬ್ಬರು ಸೇರಿಕೊಂಡು ತಮ್ಮ ತಂಡದ ಧನ್‌ರಾಜ್ ಅವರನ್ನು ಫಿನಾಲೆ ಟಿಕೆಟ್ ಟಾಸ್ಕ್‌ಯಿಂದ ಹೊರಗುಳುಯುವಂತೆ ಮನವೊಲಿಸುತ್ತಾರೆ. ಇದಕ್ಕೆ ಧನ್‌ರಾಜ್‌ ಕೂಡ ಒಪ್ಪಿ ಬಕ್ರಾ ಆಗುತ್ತಾರೆ.

ಇದರಿಂದ ಮನೆಯ ಎಲ್ಲಾ ಸ್ಪರ್ಧಿಗಳು ‘ಮಾರಿ ಹಬ್ಬದಲ್ಲಿ ಬಲಿ ಕೊಟ್ಟಂಗೆ ಆಯ್ತು ಇವನ್ ಕತೆ’ ಎಂದು ಧನ್‌ರಾಜ್ ಅವರನ್ನು ರೇಗಿಸುತ್ತಾರೆ. ಇದರಿಂದ ಕೋಪಗೊಂಡ ರಜತ್ ಸಾರ್ಥಕ ಆಯ್ತು ಬಿಡ್ರೋ ನಿಮ್ ಜೀವನ ಅಂತ ಸಿಳ್ಳೆ ಹೊಡೆದಿದ್ದಾರೆ. ಗೌತಮಿಗಿಂತ ಕಡಿಮೆನಾ ಧನ್‌ರಾಜ್ ಎಂದು ರಜತ್ ಮಂಜಣ್ಣನಿಗೆ ಉಗಿಯುತ್ತಾರೆ.

ಇಷ್ಟಾದರೂ ಬುದ್ಧಿ ಕಲಿಯದ ಮಂಜಣ್ಣ ಮೋಕ್ಷಿತಾ ಬಳಿ ಹೇಳಿಕೊಳ್ತಾರೆ. ‘ಇಲ್ಲಿ ಯಾರನ್ನೂ ನಂಬುಕೊಂಡು ಆಡ್ತಾಯಿಲ್ಲ’ ಎಂದು ಹೇಳ್ತಾರೆ. ಹಾಗಾದರೆ ನೀವಿಬ್ಬರು ಯಾಕೆ ಒಬ್ಬರಿಗೊಬ್ಬರು ಸೇಫ್ ಮಾಡು ಅನ್ನೋ ಥರ ಜೊತೆಯಾಗಿದ್ರಿ ಅನ್ನೋದು ಇಲ್ಲಿ ಪ್ರಶ್ನೆ?

Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಧನ್‌ರಾಜ್‌ಗೆ ಉಗಿದ ಹನುಮಂತ

ಧನ್‌ರಾಜ್‌ ಬಕ್ರಾ ಆಗಿದ್ದಕ್ಕೆ ಹನುಮಂತ ಉಗಿದಿದ್ದಾರೆ. ಮಂಜಣ್ಣನ್ನು ನಂಬಿ ನೀನು ಮೋಸ ಹೋದೆ ದೋಸ್ತಾ ಅಂತ ಹನುಮಂತ ಬೇಸರ ವ್ಯಕ್ತಪಡಿಸಿದ್ದಾರೆ. ಮೋಸ ಹೋದ ಮೇಲೆ ಬುದ್ಧಿ ಬಂತು ಅಂತ ಧನ್‌ರಾಜ್ ಈಗ ಪಶ್ಚಾತ್ತಾಪ ಪಡುವಂತಾಗಿದೆ. ಆದರೆ ಇನ್ನೂ ಕಾಲ ಮಿಂಚಿಲ್ಲ. ಎಲಿಮಿನೇಷನ್‌ನಿಂದ ಬಚಾವ್ ಆದರೆ ನೇರವಾಗಿ ಫಿನಾಲೆ ರೇಸ್‌ನಲ್ಲಿ ಧನ್‌ರಾಜ್ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ.

ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಮೋಸದಿಂದಲೇ ಆಟ ಆಡಿ ಗೆಲ್ಲುವುದು ಹೆಚ್ಚಾಗಿದೆ. ರಜತ್- ಹನುಮಂತ ಅವರನ್ನು ಮೋಸದಿಂದ ಸೋಲಿಸಿದರು, ಧನ್‌ರಾಜ್‌ ಅವರನ್ನು ಮಂಜು ಮತ್ತು ಗೌತಮಿ ಬಕ್ರಾ ಮಾಡುವ ಮೂಲಕ ಸೋಲಿಸಿದರು. ಚೈತ್ರಾ ಕುಂದಪೂರ ಅವರನ್ನು ನೇರವಾಗಿ ಆಟದಿಂದು ಮನೆ ಎಲ್ಲಾ ಸ್ಪರ್ಧಿಗಳು ಹೊರಗಿಟ್ಟರು. ಇದೆಲ್ಲದಕ್ಕು ಕಿಚ್ಚನ ಪಂಚಾಯಿತಿಯಲ್ಲಿ ಸರಿಯಾಗೇ ತರಾಟೆ ತೆಗೆದುಕೊಳ್ಳಲಾಗುತ್ತೆ ಅದು ಮಾತ್ರ ಪಕ್ಕಾ. ಆದರೆ ಇದೆಲ್ಲದರ ನಡುವೆ ಗ್ರ್ಯಾಂಡ್ ಫಿನಾಲೆಗೆ ಯಾವ ಟಾಪ್ 5 ಸ್ಪರ್ಧಿ ಇರಲಿದ್ದಾರೆ ಅನ್ನೋ ಕುತೂಹಲ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

WhatsApp Group Join Now

Leave a Reply