Pan Card : ಪಾನ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ

Pan Card : ಪಾನ್‌ ಕಾರ್ಡ್ ಎಂಬುವುದು ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಹತ್ತು ಅಂಕೆಗಳುಳ್ಳ ಶಾಶ್ವತ ಗುರುತಿನ ಪುರಾವೆಯಾಗಿದೆ. ಇದು ಮಾರಾಟ, ಖರೀದಿ, ಹಣಕಾಸಿನ ವಹಿವಾಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿದೇಶಕ್ಕೆ ಹೋಗುವವರಿಗಂತೂ ಪಾನ್‌ ಕಾರ್ಡ್ ಅಗತ್ಯ ದಾಖಲೆಗಳಲ್ಲೊಂದಾಗಿದೆ. ಹಾಗಾದರೆ ಒಂದು ವೇಳೆ ಪಾನ್‌ ಕಾರ್ಡ್ ಕಳೆದು ಹೋದಲ್ಲಿ ಏನು ಮಾಡಬೇಕು? ಬದಲಿ ಪಾನ್ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಕೂಡ ಓದಿ : PMFBY Scheme : ಈ ಯೋಜನೆ ಅಡಿಯಲ್ಲಿ 88,000 ಕ್ಕೂ ಅಧಿಕ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ.!

ನಕಲಿ ಪಾನ್ ಕಾರ್ಡ್ ಪಡೆಯಿರಿ

ಪಾನ್‌ ಕಾರ್ಡ್ ಕಳೆದು ಹೋದರೆ ಅಥವಾ ಕಳ್ಳತನವಾದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ದೂರಿನ ಸ್ವೀಕೃತಿ ಪ್ರತಿಯನ್ನು ಪಡೆದುಕೊಳ್ಳಬೇಕು. ಇದರಿಂದಾಗಿ ಈ ಸಂದರ್ಭದಲ್ಲಿ ನಿಮ್ಮ ಪಾನ್‌ ಕಾರ್ಡ್‌ ದುರ್ಬಳಕೆ ಆಗುವುದನ್ನು ತಡೆಯಬಹುದಾಗಿದೆ. ಯಾರಾದರೂ ದುರುಪಯೋಗ ಪಡಿಸಿದರೂ ಕಾನೂನಿನ ಚೌಕಟ್ಟಿನಿಂದ ಇದು ನಿಮ್ಮನ್ನು ರಕ್ಷಿಸುತ್ತದೆ.

ಪಾನ್‌ ಕಾರ್ಡ್ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲದ ಕಾರಣ ಹತ್ತಿರದ ಪಾನ್‌ ಕಾರ್ಡ್ ಮಾಡಿಕೊಡುವ ಕೇಂದ್ರಗಳಲ್ಲಿ 49A ಫಾರ್ಮ್ ಅನ್ನು ಭರ್ತಿ ಮಾಡಿ ನೀಡಿರಿ. ಫಾರ್ಮ್‌ನ ಮೇಲ್ಬಾಗದಲ್ಲಿ ಬಲಬದಿಗೆ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ಫೋಟೋಗೆ ಸಹಿ ಮಾಡಬೇಕು. ಅರ್ಜಿಯೊಂದಿಗೆ ಪೊಲೀಸ್ ಠಾಣೆಯಿಂದ ಪಡೆದ ದೂರಿನ ಪ್ರತಿ, ವಿಳಾಸ ಮತ್ತು ಗುರುತಿನ ಪುರಾವೆ, ಡಿ.ಡಿ. ಅಥವಾ ಚೆಕ್ ಅನ್ನು PAN/NSDL ಕಚೇರಿಗೆ ಸಲ್ಲಿಸಬೇಕು. ಅಥವಾ ಅರ್ಜಿ ಮತ್ತು ದಾಖಲಾತಿಗಳನ್ನು ಅಂಚೆ ಮೂಲಕ ಪುಣೆಯಲ್ಲಿರುವ ಪಾನ್ ಕಾರ್ಡ್ ತಯಾರಿಸಿ ಕೊಡುವ ಕಚೇರಿಗೂ ಕಳುಹಿಸಬಹುದು. ಅವರು ಪರಿಶೀಲಿಸಿ ಹೊಸ ಪಾನ್‌ಕಾರ್ಡ್ ಅನ್ನು ನಮ್ಮ ವಿಳಾಸಕ್ಕೆ ಕಳುಹಿಸಿಕೊಡುತ್ತಾರೆ.

ಇದನ್ನೂ ಕೂಡ ಓದಿ : Housing Scheme : ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.! ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಬಿಡುಗಡೆ.!

ಪಾನ್‌ ಕಾರ್ಡ್ ಕಳೆದು ಹೋದಾಗ ಸುಮ್ಮನಿರುವಂತಿಲ್ಲ. ಮೊದಲು ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. ದೂರು ನೀಡಿದ ನಂತರ ಹೊಸ ಪಾನ್‌ಕಾರ್ಡ್ ಪಡೆಯುವುದನ್ನು ಮರೆಯದಿರಿ. ಒಂದು ವೇಳೆ ನಿಮ್ಮ ಪಾನ್ ಕಾರ್ಡ್ ಅನ್ನು ಇತರ ಯಾರಾದರೂ ಉಪಯೋಗಿಸುತ್ತಿರುವುದು ಗಮನಕ್ಕೆ ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿರಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply