ಇಂದಿನ ದಿನಗಳಲ್ಲಿ ನಾವು ಪ್ರತಿಯೊಂದು ಆರೋಗ್ಯ ಸಮಸ್ಯೆಗೆ ಔಷಧಿಗಳ ಮೊರೆ ಹೋಗುತ್ತಿದ್ದೇವೆ. ಅಲ್ಲದೆ, ನಮ್ಮ ದೇಹದ ಶಕ್ತಿಯೂ ಸಹ ರೋಗಗಳ ವಿರುದ್ಧ ಹೋರಾಡದಂತಹ ಸ್ಥಿತಿಗೆ ತಲುಪಿದೆ. ಆದರೆ, ಹಿರಿಯರು ಹೇಳುವಂತೆ.. ಈ ಕೆಳಗೆ ನೀಡಿರುವ ಒಂದು ಹಣ್ಣು ಮಧುಮೇಹ ಸೇರಿದಂತೆ ಅನೇಕ ರೋಗಗಳಿಗೆ ರಾಮಬಾಣ…
ಭಾರತದಲ್ಲಿ ದೊರೆಯುವ ಪ್ರತಿಯೊಂದು ಸಸ್ಯ ಮತ್ತು ಹಣ್ಣುಗಳಿಗೆ ತಮ್ಮದೇಯಾದ ವಿಶಿಷ್ಟ ಗುಣಗಳಿರುತ್ತವೆ. ಈ ಪೈಕಿ ಅತ್ತಿ ಹಣ್ಣು ಸಹ ಒಂದು. ಇದು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ, ಈ ಮರದ ಪ್ರತಿಯೊಂದು ಭಾಗವೂ ಅಂದರೆ ಎಲೆ, ಹಣ್ಣು, ತೊಗಟೆ ಮತ್ತು ಹಾಲು ವಿವಿಧ ಕಾಯಿಲೆಗಳಿಗೆ ಮದ್ದಾಗಿ ಬಳಕೆಯಾಗುತ್ತದೆ. ಅತ್ತಿ ಮರದ ಪ್ರಮುಖ ಆರೋಗ್ಯ ಪ್ರಯೋಜನಗಳು ಯಾವುವು? ಬನ್ನಿ ನೋಡೋಣ..
ಮಧುಮೇಹ ನಿಯಂತ್ರಣ (Diabetes Control): ಅತ್ತಿ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡಬಹುದು. ಇದು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದ ಮಧುಮೇಹಿಗಳಿಗೆ ನೈಸರ್ಗಿಕವಾಗಿ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಯಕೃತ್ತಿನ ಆರೋಗ್ಯ (Liver Health): ಯಕೃತ್ತಿಗೆ ಸಂಬಂಧಿಸಿದ ಸೋಂಕುಗಳನ್ನು ಕಡಿಮೆ ಮಾಡುವಲ್ಲಿ ಅತ್ತಿ ಮರದ ತೊಗಟೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ಲಿವರ್ನಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳನ್ನು (Toxins) ಹೊರಹಾಕಿ, ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ: ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಅಥವಾ ಹೊಟ್ಟೆಯ ಹುಣ್ಣು (Ulcer) ಇರುವವರಿಗೆ ಅತ್ತಿ ಹಣ್ಣು ಉತ್ತಮ ಔಷಧ. ಇದರ ತೊಗಟೆಯ ಕಷಾಯವು ಜೀರ್ಣಾಂಗವ್ಯೂಹದ ಉರಿಯೂತವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಚರ್ಮದ ಸಮಸ್ಯೆಗಳು: ಅತ್ತಿ ಮರದ ಹಾಲು (Latex) ನೈಸರ್ಗಿಕ ಆಂಟಿಸೆಪ್ಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಮೊಡವೆಗಳು, ಕಲೆಗಳು ಅಥವಾ ಗಾಯಗಳ ಮೇಲೆ ಈ ಹಾಲನ್ನು ಹಚ್ಚುವುದರಿಂದ ಅವು ಶೀಘ್ರವಾಗಿ ಗುಣವಾಗುತ್ತವೆ ಎಂದು ಹೇಳಲಾಗುತ್ತದೆ.
ಬಳಸುವ ವಿಧಾನ:
ಹಣ್ಣಿನ ಪುಡಿ: ಅತ್ತಿ ಹಣ್ಣುಗಳನ್ನು ಒಣಗಿಸಿ ಪುಡಿಮಾಡಿ ನೀರಿನೊಂದಿಗೆ ಸೇವಿಸಬಹುದು.
ಕಷಾಯ: ಮರದ ತೊಗಟೆಯನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಕುಡಿಯಬಹುದು.
ಹಾಲು: ಚರ್ಮದ ಸಮಸ್ಯೆಗಳಿಗೆ ಮರದ ಹಾಲನ್ನು ನೇರವಾಗಿ ಹಚ್ಚಿಕೊಳ್ಳಬಹುದು.
ಸೂಚನೆ: ಅತ್ತಿ ಮರವು ಔಷಧೀಯ ಗುಣಗಳ ಹೊಂದಿದ್ದರೂ ಸಹ, ಯಾವುದೇ ಮನೆಮದ್ದನ್ನು ಅಥವಾ ಔಷಧಿಯನ್ನು ಪ್ರಾರಂಭಿಸುವ ಮೊದಲು ನುರಿತ ಆಯುರ್ವೇದ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ನಾವು ಈ ಲೇಖನವನ್ನು ಕೇವಲ ಮಾಹಿತಿಗಾಗಿ ಮಾತ್ರ ಬರೆದಿದ್ದೇವೆ.
ಈ ಹಣ್ಣು ಸಿಕ್ರೆ ಬಿಡಬೇಡಿ, ಪಟ್ ಅಂತ ಬಾಯಿಗೆ ಹಾಕ್ಕೊಂಡು ಬಿಡಿ..! ಮಧುಮೇಹ – ಕಿಡ್ನಿಗೆ ಸಮಸ್ಯೆ ರಾಮಬಾಣ
WhatsApp Group
Join Now