ಮದುವೆಯಾಗುವಂತೆ ಲಿವ್ ಇನ್ ಸಂಗಾತಿಯಿಂದ ಕಾಟ.! ಕೆರೆ ಬಳಿ ಕರೆಸಿಕೊಂಡು ಆರೋಪಿ ಮಾಡಿದ್ದೇನು ಗೊತ್ತಾ.?

Spread the love

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊಲೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಕ್ರೈಂ (Crime) ಸಿಟಿ ಆಗಿದ್ಯಾ ಅನ್ನೋ ಪ್ರಶ್ನೆ ಕಾಡ್ತಿದೆ.

ಈ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರೇಯಸಿಯನ್ನು ಕೊಂದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಪ್ರಕರಣ?

ಇದೇ ತಿಂಗಳು 8ನೇ ತಾರೀಖಿನಂದು ಬೆಂಗಳೂರಿನಲ್ಲಿ ಹೆಬ್ಬಗೋಡಿ ಸಮೀಪದ ತಿರುಪಾಳ್ಯ ಕೆರೆಯಲ್ಲಿ ಮಹಿಳೆಯ ಕೊಲೆ ಆಗಿತ್ತು. ಕೆರೆ ಪಕ್ಕದಲ್ಲಿ ವಾಕಿಂಗ್ ಮಾಡುತ್ತಿದ್ದವರು ಮಹಿಳೆಯ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸಿಡಿಆರ್ ಮತ್ತು ಟವರ್ ಲೋಕೇಷನ್ ಆಧರಿಸಿ ಆರೋಪಿಯನ್ನು ಲಾಕ್ ಮಾಡಿದ್ದಾರೆ.

ಪ್ರೇಯಸಿ ಕೊಂದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಹೆಬ್ಬಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿ ರತನ್ ದಾಸ್ (37) ಮತ್ತು ಕೊಲೆಯಾದ ಮಹಿಳೆ ಅಂಜಲಿ (47) ಇಬ್ಬರು ಅಸ್ಸಾಂ ಮೂಲದವರಾಗಿದ್ದು, ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.

ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯ

ಕೊಲೆಗೂ ಮೊದಲು ಆರೋಪಿ ರತನ್ ದಾಸ್, ಮೃತ ಅಂಜಲಿಯನ್ನು ಹೆಬ್ಬಗೋಡಿ ಸಮೀಪದ ತಿರುಪಾಳ್ಯ ಕೆರೆ ಬಳಿ ಕರೆಸಿಕೊಂಡು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯ ಮಾಡಿದ್ದನು. ಆದ್ರೆ, ಅಂಜಲಿ ಲೈಂಗಿಕ ಕ್ರಿಯೆಗೆ ಒಪ್ಪದೆ ಮದುವೆ ಮಾಡಿಕೊಳ್ಳುವಂತೆ ದುಂಬಾಲು ಬಿದ್ದಿದ್ದಳು. ಈ ವೇಳೆ ರತನ್ ದಾಸ್ ಮತ್ತು ಅಂಜಲಿ ನಡುವೆ ವಾಗ್ವಾದ ಉಂಟಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ರತನ್ ದಾಸ್ ಅಂಜಲಿಯನ್ನು ಉಸಿರುಗಟ್ಟಿಸಿ ಕೊಂದು ಕೆರೆ ಜೊಂಡು ಹುಲ್ಲಿನಲ್ಲಿ ಎಸೆದು ಪರಾರಿಯಾಗಿದ್ದನು.

ಇನ್ನು, ಟವರ್ ಲೋಕೇಷನ್ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇಬ್ಬರು ಕಳೆದ ಒಂದು ವರ್ಷದಿಂದ ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದೆವು, ಇತ್ತೀಚೆಗೆ ಮದುವೆ ಆಗುವಂತೆ ಪದೇ ಪದೇ ಆಕೆ ಒತ್ತಾಯಿಸುತ್ತಿದ್ದಳು, ಹಾಗಾಗಿ ಕೆರೆ ಬಳಿ ಕರೆಸಿಕೊಂಡು ಕೊಲೆ ಮಾಡಿದ್ದಾಗಿ ಆರೋಪಿ ರತನ್ ದಾಸ್ ತಪ್ಪೊಪ್ಪಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ.

WhatsApp Group Join Now

Spread the love

Leave a Reply