IPL 2025 : ಪಂಜಾಬ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಆರ್‌ಸಿಬಿ : ಈ ಸಲ ಕಪ್ ನಮ್ಮದೇ ಎಂದ ಆರ್ ಸಿಬಿ ಫ್ಯಾನ್ಸ್

IPL 2025 : ಪಂಜಾಬ್ ತಂಡದ ನೀಡಿದ 102 ರನ್‌ಗಳ ಸುಲಭದ ಗುರಿಯನ್ನು 2 ವಿಕೆಟ್ ನಷ್ಟಕ್ಕೆ ಆರ್‌ಸಿಬಿ ತಲುಪಿತು. ಆರಂಭಿಕರಾಗಿ ಮೈದಾನ ಪ್ರವೇಶಿಸಿದ ವಿರಾಟ್ ಕೊಹ್ಲಿ ಕೇವಲ 12 ರನ್ ಗಳಿಸಿ ಕೈಲ್ ಜೇಮಿಸನ್ ವಿಕೆಟ್ ಒಪ್ಪಿಸಿದರು. ಫಿಲಿಪ್ ಸಾಲ್ಟ್ ಮತ್ತು ಮಯಾಂಕ್ ಅಗರ್ವಾಲ್ ಜೊತೆಯಾಗಿ ಗೆಲುವಿನ ಸಮೀಪಕ್ಕೆ ತಲುಪಿದ್ದರು.ಈ ವೇಳೆ ಮುಶೀರ್ ಖಾನ್ ಬೌಲಿಂಗ್‌ಗೆ ಮಯಾಂಕ್ ಅಗರ್ವಾಲ್ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬಂದ ಕ್ಯಾಪ್ಟನ್ ರಜತ್ ಪಾಟಿದಾರ್, ಸಾಲ್ಟ್‌ಗೆ ಜೊತೆಯಾದರು ಎರಡು ವಿಕೆಟ್ … Read more

Rain Alert : ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ : ಈ ಜಿಲ್ಲೆಗಳಿಗೆ ರೆಡ್ ಅಲರ್ಟ್‌ ಘೋಷಣೆ.!

Rain Alert : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇಂದಿನಿಂದ ಮತ್ತೆ 5 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಇಂದಿನಿಂದ5 ದಿನ ಗುಡುಗು, ಮಿಂಚು ಸಹಿತ ಅತ್ಯಧಿಕ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಿಸಿದೆ. ಕಳೆದ ಒಂದು ವಾರದಿಂದ ಎಡಬಿಡದೆ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಚಳಿಗಾಳಿ … Read more

ನಿನ್ನ ಮೇಲೆ ಅನುಮಾನಪಟ್ಟಿದ್ದಕ್ಕೆ ಕ್ಷಮಿಸು – ಜಿತೇಶ್‌ ಶರ್ಮಾಗೆ ಇಷ್ಟು ಮಂದಿ ಕ್ಷಮೆಯಾಚಿಸಿದ್ದೇಕೆ.?

ಮೇ 27 ನಡೆದ 18ನೇ ಆವೃತ್ತಿಯ ಐಪಿಎಲ್‌ನ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಮೂಲಕ ಒಂದನೇ ಕ್ವಾಲಿಫಯರ್‌ಗೆ ಲಗ್ಗೆ ಇಟ್ಟಿತು. ಇಂದು ಚಂಡೀಗಢದಲ್ಲಿ ನಡೆಯಲಿರುವ ಒಂದನೇ ಕ್ವಾಲಿಫಯರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಗೆದ್ದರೆ ಮಾತ್ರ ಕ್ವಾಲಿಫಯರ್‌ಗೆ ಪ್ರವೇಶ ಎಂಬ ಮಹತ್ವದ ಅವಕಾಶಕ್ಕೆ ವೇದಿಕೆಯಾಗಿದ್ದ ಈ ಪಂದ್ಯದಲ್ಲಿ ಜಿತೇಶ್‌ ಶರ್ಮಾ 33 … Read more

Guarantee Scheme : ಮುಂದಿನ ತಿಂಗಳಿಂದ ಅನರ್ಹರಿಗೆ ಗ್ಯಾರಂಟಿ ಬಂದ್‌?, ಬರುತ್ತಾ ಹೊಸ ರೂಲ್ಸ್?‌, ಸಿಎಂ ಆಪ್ತ

ಐದು ಗ್ಯಾರಂಟಿಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಮುಖ ಸ್ಕೀಮ್ ಗಳಾಗಿವೆ. ಈ ಗ್ಯಾರಂಟಿ ಯೋಜನೆಗಳಿಂದಲೇ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು. ಐದು ವರ್ಷವೂ ಎಲ್ಲರಿಗೂ ಗ್ಯಾರಂಟಿ ನೀಡುವುದಾಗಿ ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ಘೋಷಣೆ ಮಾಡಿತ್ತು. ಇದೀಗ ಗದ್ದಲ ಜೋರಾಗಿದ್ದು, ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ಮತ್ತೆ ವಿವಾದದವನ್ನ ಸೃಷ್ಟಿಸಿದೆ. ಅಷ್ಟಕ್ಕೂ ರಾಯರೆಡ್ಡಿ ಹೇಳಿದ್ದೇನು? ಪಂಚ ಗ್ಯಾರಂಟಿಗಳನ್ನ ಐದು ವರ್ಷವೂ ನೀಡುತ್ತೇವೆ ಎನ್ನುವ ವಾಗ್ದಾನದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದೀಗ ಅದೇ ಗ್ಯಾರೆಂಟಿ ಯೋಜನೆಗಳ ಪರಿಷ್ಕರಣೆ ವಿಚಾರ … Read more

ಆರ್ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ ದಿನೇಶ್ ಕಾರ್ತಿಕ್..! ಮೊದಲ ಕ್ವಾಲಿಫೈಯರ್ ಗೆದ್ದವರು ಫೈನಲ್ಗೆ, ಸೋತವರಿಗೂ ಇದೆ ಅವಕಾಶ!

ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಂದು ಪಂದ್ಯ ನಡೆಯಲಿದ್ದು, ಗೆದ್ದವರು ನೇರವಾಗಿ ಫೈನಲ್ ಪ್ರವೇಶ ಮಾಡಲಿದ್ದಾರೆ. ಸೋತವರಿಗೆ ಇನ್ನೊಂದು ಅವಕಾಶ ಸಿಗಲಿದೆ. ಇದೇ ಹೊತ್ತಲ್ಲೇ ಆರ್ಸಿಬಿಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ. ಇಂದು ನಡೆಯಲಿರುವ ಪಂದ್ಯಕ್ಕೆ ಇಬ್ಬರು ದೈತ್ಯ ಶಕ್ತಿಗಳ ಬೂಸ್ಟ್ ಸಿಗಲಿದೆ. ಜೋಶ್ ಹೇಜಲ್ವುಡ್, ಟಿಮ್ ಡೆವಿಡ್ ಪಂದ್ಯದ ಪ್ಲೇಯಿಂಗ್-11ನಲ್ಲಿ ಇರಲಿದ್ದಾರೆ. ಈ ಬಗ್ಗೆ ಖುದ್ದು ಕ್ಯಾಪ್ಟನ್ ಜಿತೇಶ್ ಶರ್ಮಾ ಅವರೇ ಮಾಹಿತಿ ನೀಡಿದ್ದಾರೆ. ನಿನ್ನೆಯ … Read more

ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂಬ ಕಮಲ್ ಹಾಸನ್ ಹೇಳಿಕೆಗೆ ಒಂದೇ ಸಾಲಿನಲ್ಲಿ ಕೌಂಟ‌ರ್ ಕೊಟ್ಟ ಸಿಎಂ ಸಿದ್ದರಾಮಯ್ಯ

ತಮಿಳು ನಟ ಕಮಲ್ ಹಾಸನ್ ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಮುಂದಿನ ಚಿತ್ರ ಥಗ್‌ಲೈಫ್‌ನ ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಮಾತನಾಡುತ್ತಾ ತಮಿಳು ಹಾಗೂ ಕನ್ನಡ ನಡುವೆ ಭಾಷಾ ವಾಗ್ವಾದ ಉಂಟಾಗುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ ಎಂದು ಹೇಳುವ ಮೂಲಕ ಕಮಲ್ ಹಾಸನ್ ಕನ್ನಡದ ಇತಿಹಾಸ ಹಾಗೂ ಕನ್ನಡಿಗರ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ತಮಿಳಿನಂತೆ ಕನ್ನಡವೂ ಒಂದು ಸ್ವತಂತ್ರ ಹಾಗೂ ದೀರ್ಘಕಾಲದ ಇತಿಹಾಸವಿರುವ ಭಾಷೆ, ಕನ್ನಡ ಯಾವ ಭಾಷೆಯಿಂದಲೂ ಹುಟ್ಟಿಲ್ಲ ಎಂದು ಕನ್ನಡಿಗರು … Read more

ಅವರಿಬ್ಬರೂ ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿರ್ಲಿಲ್ಲಾ.. ಏಡ್ಸ್ ಇಂಜೆಕ್ಷನ್ ಚುಚ್ಚಿರ್ಲಿಲ್ಲ.. ಮುತ್ತು’ರತ್ನ’ ಅವರೇ ಇಟ್ಟುಕೊಳ್ಳಲಿ ಎಂದ ಡಿಸಿಎಂ ಡಿಕೆಶಿ

ಪಕ್ಷವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಉಚ್ಛಾಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ಅವರಿಬ್ಬರೂ ಯಾರನ್ನು ರೇಪ್ ಮಾಡಿಲ್ವಲ್ಲ. ಎಸ್.ಟಿ.ಸೋಮಶೇಖರ್ ಹಾಗೂ ಹೆಬ್ಬಾರ್ ವಿಧಾನಸೌಧದಲ್ಲಿ ಯಾರನ್ನೂ ರೇಪ್ ಮಾಡಿಲ್ವಲ್ಲ, ಯಾರಿಗಾದ್ರೂ ಏಡ್ಸ್ … Read more

ಮತ್ತೆ ಕಮಲ್ ಹಾಸನ್ ಮೊಂಡಾಟ – ಕ್ಷಮೆ ಕೇಳಲ್ಲ, ನಾನು ಹೇಳಿದ್ದು ನನ್ನ ಪ್ರಕಾರ ಸರಿ ಎಂದ ಕಮಲ್ ಹಾಸನ್

ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಮಲ್ ಹಾಸನ್ ವಿರುದ್ಧ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ನಟ ಮತ್ತೆ ಮೊಂಡಾಟವಾಡಿದ್ದಾರೆ. ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದು ಉದ್ಧಟತನ ಮೆರೆದಿದ್ದಾರೆ. ಕೇರಳದಲ್ಲಿ ನಡೆದ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಬಗ್ಗೆ ಮಾತಾಡಲು ರಾಜಕಾರಣಿಗಳಿಗೆ ಅರ್ಹತೆ ಇಲ್ಲ. ಅನೇಕ ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ತಮಿಳುನಾಡು ಒಂದು ವಿಶಾಲ ಹೃದಯ ರಾಜ್ಯ. ಮಲಯಾಳಲಂನ ಮೆನನ್, ತೆಲುಗಿನ ರೆಡ್ಡಿ, ಕನ್ನಡದ … Read more

ಶರಣ್ ಪಂಪ್‌ವೆಲ್ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ : ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ – ಬಿಜೆಪಿ

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಾಯಕ ಶರಣ್ ಪಂಪ್‌ವೆಲ್ ಬಂಧನಕ್ಕೆ ಕರ್ನಾಟಕ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಪ್ರವೃತ್ತಿ ಮುಂದುವರಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬೆನ್ನಲ್ಲೇ ಮಂಗಳೂರಿನಲ್ಲಿ ಬಂದ್‌ಗೆ ಕರೆ ನೀಡಿದ್ದ ಆರೋಪದ ಮೇಲೆ ಶರಣ್ ಪಂಪ್‌ವೆಲ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು. ಶರಣ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು ಶರಣ್ … Read more

ಬೆಂಗಳೂರಿಗೆ ಎಚ್ಎಎಲ್ ಕೊಟ್ಟಿದ್ದು ಬಿಜೆಪಿ ಸರ್ಕಾರವಲ್ಲ, ನೆಹರು ಎಂದ ಡಿಕೆಶಿ, ದಾಖಲೆ ಸಮೇತ ತಿರುಗೇಟು ನೀಡಿದ ಸಂಸದ ಯದುವೀ‌ರ್ ಒಡೆಯ‌ರ್.!

ಕರ್ನಾಟಕದಿಂದ ಎಚ್‌ಎಎಲ್ ಘಟಕವನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಆಂಧ್ರ ಸಿಎಂ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಮನವಿ ಮಾಡಿಕೊಂಡ ಬೆನ್ನಲ್ಲಿಯೇ ರಾಜ್ಯ ರಾಜಕಾರಣಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾ‌ರ್ ಯಾವುದೇ ಕಾರಣಕ್ಕೂ ನಾವು ಎಚ್‌ಎಎಲ್‌ಅನ್ನು ಬಿಟ್ಟುಕೊಡೋದಿಲ್ಲ. ಇದನ್ನು ಬಿಜೆಪಿ ಸರ್ಕಾರ ನೀಡಿದ್ದಲ್ಲ. ಮಾಜಿ ಪ್ರಧಾನಿ ಜವಹರಲಾಲ್‌ ನೆಹರು ಅವರು ನಾಡಿನ ಸಾಮರ್ಥ್ಯ ಗುರುತಿಸಿ ಬೆಂಗಳೂರಿನಲ್ಲಿ ಎಚ್‌ಎಎಲ್‌ ಘಟಕ ಸ್ಥಾಪಿಸಿದ್ದರು’ ಎಂದಿದ್ದರು. ಆದರೆ, ಡಿಸಿಎಂ ಡಿಕೆ ಶಿವಕುಮಾರ್‌ ಅವರ ಮಾತು ಎಲ್ಲರಿಗೂ … Read more