ಮೇ 27 ನಡೆದ 18ನೇ ಆವೃತ್ತಿಯ ಐಪಿಎಲ್‌ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರುವ ಮೂಲಕ ಒಂದನೇ ಕ್ವಾಲಿಫಯರ್‌ಗೆ ಲಗ್ಗೆ ಇಟ್ಟಿತು.
ಇಂದು ಚಂಡೀಗಢದಲ್ಲಿ ನಡೆಯಲಿರುವ ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಗೆದ್ದರೆ ಮಾತ್ರ ಕ್ವಾಲಿಫಯರ್‌ಗೆ ಪ್ರವೇಶ ಎಂಬ ಮಹತ್ವದ ಅವಕಾಶಕ್ಕೆ ವೇದಿಕೆಯಾಗಿದ್ದ ಈ ಪಂದ್ಯದಲ್ಲಿ ಜಿತೇಶ್ ಶರ್ಮಾ 33 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 85 ರನ್ ಗಳಿಸಿ ಅಬ್ಬರದ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಬೌಂಡರಿಗಳ ಸುರಿಮಳೆಗೈದು 257.58 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಜಿತೇಶ್ ಶರ್ಮಾ ಪಂದ್ಯ ಮುಗಿಯುತ್ತಿದ್ದಂತೆ ಹೀರೊ ಎನಿಸಿಕೊಂಡರು. ನಾಯಕನಾಗಿ ತಂಡವನ್ನು ಮುನ್ನಡೆಸಿ ಒತ್ತಡದಲ್ಲೂ ಅಬ್ಬರದ ಇನ್ನಿಂಗ್ಸ್ ಆಡಿದ್ದಕ್ಕೆ ಮೆಚ್ಚುಗೆ ಪಡೆದುಕೊಂಡರು. ಹೀಗೆ ಪಂದ್ಯದ ಬಳಿಕ ಹೊಗಳಿಕೆಗೆ ಪಾತ್ರರಾದ ಜಿತೇಶ್ ಶರ್ಮಾ ಲಕ್ನೋ ಇನ್ನಿಂಗ್ಸ್ ಬಳಿಕ ಭಾರೀ ಟೀಕೆಗೊಳಗಾಗಿದ್ದರು.
ಲಕ್ನೋ ಸೂಪರ್ ಜೈಂಟ್ಸ್ 227 ರನ್ ಕಲೆಹಾಕಿ ಕೇವಲ 3 ವಿಕೆಟ್ ಕಳೆದುಕೊಂಡು ಆರ್‌ಸಿಬಿಗೆ 228 ರನ್‌ಗಳ ಗುರಿಯನ್ನು ನೀಡಿತ್ತು. ಈ ಮೊತ್ತ ಕಂಡು ಜಿತೇಶ್ ನಾಯಕತ್ವವನ್ನು ಟೀಕಿಸಲಾಗಿತ್ತು. ಅದರಲ್ಲಿಯೂ ಕೃನಾಲ್ ಪಾಂಡ್ಯ ಕೇವಲ 2 ಓವರ್ ಬೌಲಿಂಗ್ ಹಾಕಿಸಿದ್ದಕ್ಕೆ ಕಳಪೆ ನಾಯಕತ್ವ ಎಂಬ ಕಾಮೆಂಟ್ ಪಡೆದುಕೊಂಡರು. ಪಂದ್ಯ ಸೋತರೆ ಅದಕ್ಕೆ ಜಿತೇಶ್ ಶರ್ಮಾನೇ ಕಾರಣ ಎಂದಿದ್ದರು.
ಆದರೆ ಪಂದ್ಯ ಮುಗಿದ ಬಳಿಕ ಅವರ ಎಲ್ಲ ಟೀಕೆಗಳಿಗೂ ಜಿತೇಶ್ ಶರ್ಮಾ ಉತ್ತರ ಕೊಟ್ಟಿದ್ದು, ಅನೇಕ ನೆಟ್ಟಿಗರು ಜಿತೇಶ್ ಶರ್ಮಾ ಕುರಿತು ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ. ನಿಮ್ಮ ಮೇಲೆ ಅನುಮಾನಪಟ್ಟಿದ್ದಕ್ಕಾಗಿ ಕ್ಷಮಿಸಿ, ತಪ್ಪಾಯಿತು ಎಂದು ಹಲವಾರು ಮಂದಿ ಬರೆದುಕೊಂಡಿದ್ದಾರೆ.

ನಿನ್ನ ಮೇಲೆ ಅನುಮಾನಪಟ್ಟಿದ್ದಕ್ಕೆ ಕ್ಷಮಿಸು – ಜಿತೇಶ್ ಶರ್ಮಾಗೆ ಇಷ್ಟು ಮಂದಿ ಕ್ಷಮೆಯಾಚಿಸಿದ್ದೇಕೆ.?
WhatsApp Group
Join Now