ಆರ್ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟ ದಿನೇಶ್ ಕಾರ್ತಿಕ್..! ಮೊದಲ ಕ್ವಾಲಿಫೈಯರ್ ಗೆದ್ದವರು ಫೈನಲ್ಗೆ, ಸೋತವರಿಗೂ ಇದೆ ಅವಕಾಶ!

Spread the love

ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಂದು ಪಂದ್ಯ ನಡೆಯಲಿದ್ದು, ಗೆದ್ದವರು ನೇರವಾಗಿ ಫೈನಲ್ ಪ್ರವೇಶ ಮಾಡಲಿದ್ದಾರೆ.

ಸೋತವರಿಗೆ ಇನ್ನೊಂದು ಅವಕಾಶ ಸಿಗಲಿದೆ. ಇದೇ ಹೊತ್ತಲ್ಲೇ ಆರ್ಸಿಬಿಗೆ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ. ಇಂದು ನಡೆಯಲಿರುವ ಪಂದ್ಯಕ್ಕೆ ಇಬ್ಬರು ದೈತ್ಯ ಶಕ್ತಿಗಳ ಬೂಸ್ಟ್ ಸಿಗಲಿದೆ. ಜೋಶ್ ಹೇಜಲ್ವುಡ್, ಟಿಮ್ ಡೆವಿಡ್ ಪಂದ್ಯದ ಪ್ಲೇಯಿಂಗ್-11ನಲ್ಲಿ ಇರಲಿದ್ದಾರೆ.

ಈ ಬಗ್ಗೆ ಖುದ್ದು ಕ್ಯಾಪ್ಟನ್ ಜಿತೇಶ್ ಶರ್ಮಾ ಅವರೇ ಮಾಹಿತಿ ನೀಡಿದ್ದಾರೆ. ನಿನ್ನೆಯ ಪಂದ್ಯಕ್ಕೂ ಮುನ್ನ ನಡೆದ ಟಾಸ್ ಪ್ರಕ್ರಿಯೆ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೇಜಲ್ವುಡ್ ಅವರು ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಅವರು ನಮ್ಮ ಪ್ರಮುಖ ಬೌಲರ್ಗಳಲ್ಲಿ ಒಬ್ಬರು.

ಹೇಜಲ್ವುಡ್ ಕಂಬ್ಯಾಕ್ ಮಾಡುವ ಬಗ್ಗೆ ಮೆಂಟರ್ ದಿನೇಶ್ ಕಾರ್ತಿಕ್ ಕೂಡ ಕನ್ಫರ್ಮ್ ಮಾಡಿದ್ದಾರೆ. ಹೇಜಲ್ವುಡ್ ಕ್ವಾಲಿಫಾಯರ್ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ ಎಂದು ತಿಳಿಸಿದ್ದಾರೆ. ಮೊದಲ ಕ್ವಾಲಿಫೈಯರ್ ಪಂದ್ಯವು ಪಂಜಾಬ್ನ ಮಲ್ಲನಪುರದ ಮಹಾರಾಜ ಯದುವಿಂದ್ರ ಸಿಂಗ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

WhatsApp Group Join Now

Spread the love

Leave a Reply