ತಮಿಳು ನಟ ಕಮಲ್ ಹಾಸನ್ ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಮುಂದಿನ ಚಿತ್ರ ಥಗ್‌ಲೈಫ್‌ನ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಮಾತನಾಡುತ್ತಾ ತಮಿಳು ಹಾಗೂ ಕನ್ನಡ ನಡುವೆ ಭಾಷಾ ವಾಗ್ವಾದ ಉಂಟಾಗುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ.
ಕನ್ನಡ ತಮಿಳಿನಿಂದ ಹುಟ್ಟಿದ ಭಾಷೆ ಎಂದು ಹೇಳುವ ಮೂಲಕ ಕಮಲ್ ಹಾಸನ್ ಕನ್ನಡದ ಇತಿಹಾಸ ಹಾಗೂ ಕನ್ನಡಿಗರ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ.
ತಮಿಳಿನಂತೆ ಕನ್ನಡವೂ ಒಂದು ಸ್ವತಂತ್ರ ಹಾಗೂ ದೀರ್ಘಕಾಲದ ಇತಿಹಾಸವಿರುವ ಭಾಷೆ, ಕನ್ನಡ ಯಾವ ಭಾಷೆಯಿಂದಲೂ ಹುಟ್ಟಿಲ್ಲ ಎಂದು ಕನ್ನಡಿಗರು ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ.
ಕಮಲ್ ಹಾಸನ್‌ರ ಈ ಹೇಳಿಕೆಯನ್ನು ಕನ್ನಡದ ಹಲವು ರಾಜಕಾರಣಿಗಳು ಖಂಡಿಸಿದ್ದು, ಇದೀಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕಮಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದೇ ಸಾಲಿನಲ್ಲಿ ಉತ್ತರ ನೀಡಿದ ಅವರು ʼಕನ್ನಡ ಭಾಷೆಗೆ ಬಹಳ ದೀರ್ಘಕಾಲದ ಇತಿಹಾಸ ಇದೆ. ಪಾಪ ಅವರಿಗೆ ಗೊತ್ತಿಲ್ಲ ಅಂತ ಕಾಣುತ್ತೆʼ ಎಂದು ಹೇಳಿದರು.
WhatsApp Group
Join Now