Rain Alert : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇಂದಿನಿಂದ ಮತ್ತೆ 5 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಇಂದಿನಿಂದ5 ದಿನ ಗುಡುಗು, ಮಿಂಚು ಸಹಿತ ಅತ್ಯಧಿಕ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಕಳೆದ ಒಂದು ವಾರದಿಂದ ಎಡಬಿಡದೆ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಚಳಿಗಾಳಿ ಬೀಸುತ್ತಿದ್ದು, ಜನರು ಹೊರ ಬರದಂತೆ ಆಗಿದೆ.
ಮಹಾಮಳೆಗೆ ರಾಜ್ಯದ ಹಲವೆಡೆ ಸಾವು-ನೋವುಗಳು ಸಂಭವಿಸಿದ್ದಾವೆ. ಅಲ್ಲಲ್ಲೇ ಮನೆ, ಧನದ ಕೊಟ್ಟಿಗೆಗಳು ಬಿದ್ದು ಹಾನಿಗೊಂಡಿದ್ದಾವೆ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಪರಿಹಾರ ನೀಡುವಂತ ಕಾರ್ಯವನ್ನು ಸ್ಥಳೀಯ ಆಡಳಿತಗಳು ಮಾಡುತ್ತಿವೆ.
WhatsApp Group
Join Now