Agriculture Department : ನಮಸ್ಕಾರ ಸ್ನೇಹಿತರೇ, ಕೃಷಿ ಇಲಾಖೆಯಲ್ಲಿ ಒಟ್ಟಾರೆ 945 ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳನ್ನೊಳಗೊಂಡ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿದೆ. ಕೃಷಿ ಇಲಾಖೆಯ ಉಳಿಕೆ ಮೂಲ ವೃಂದದ ಗ್ರೂಪ್ ‘ಬಿ’ ಹುದ್ದೆಗಳಾದ ಕೃಷಿ ಅಧಿಕಾರಿಗಳು 86 ಹಾಗೂ ಸಹಾಯಕ ಕೃಷಿ ಅಧಿಕಾರಿಗಳು 586 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಕೂಡ ಓದಿ : Vidya Nidhi Scholarship : ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಸಿಹಿಸುದ್ಧಿ – ರಾಜ್ಯ ಸರ್ಕಾರದಿಂದ `ವಿದ್ಯಾನಿಧಿ’ ಯೋಜನೆಗೆ ಅರ್ಜಿ ಆಹ್ವಾನ.!
ಉಳಿದಂತೆ ಹೈದರಾಬಾದ್ ಕರ್ನಾಟಕ ವಿಭಾಗದ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ 42 ಕೃಷಿ ಅಧಿಕಾರಿಗಳು ಹಾಗೂ 231 ಸಹಾಯಕ ಕರಷಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 945 ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಈವರೆಗೆ ಕೃಷಿ ಇಲಾಖೆಯ ಅತಿ ದೊಡ್ಡ ನೇಮಕಾತಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಆನ್‌ಲೈನ್ ಮೂಲಕ ಅ.07ರಿಂದ ಅರ್ಜಿ ಸಲ್ಲಿಕೆ ಮಾಡಬಹುದಿದ್ದು, ನವೆಂಬರ್ 07ಕ್ಕೆ ಕೊನೆಯ ದಿನಾಂಕವಾಗಿದೆ. ಶೈಕ್ಷಣಿಕ ಮಾನದಂಡಗಳು, ವಯೋಮಿತಿ ಸೇರಿದಂತೆ ಇತರೆ ಅರ್ಹತೆಗಳಿಗಾಗಿ ಕೆಳಗೆ ನೀಡಿರುವ ಪಿಡಿಎಫ್ ವೀಕ್ಷಣೆ ಮಾಡಿ.
ಪಿಡಿಎಫ್ ಲಿಂಕ್ :- https://kpsc.kar.nic.in/AAO%20-%20AO_RPC_Notification.pdf
ಹೈದರಾಬಾದ್ ಕರ್ನಾಟಕ ವೃಂದದ ನೇಮಕಾತಿ ಅಧಿಸೂಚನೆ :- https://kpsc.kar.nic.in/AAO%20-%20AO_HK_Notification.pdf
ಇದನ್ನೂ ಕೂಡ ಓದಿ : ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ಸೌಲಭ್ಯ – business loan for women
ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ವಿಶೇಷ ಪ್ರಯತ್ನದ ಫಲವಾಗಿ ಈ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಇಲಾಖೆ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರಿವುದು ಇದೇ ಮೊದಲು. ಎನ್. ಚಲುವರಾಯಸ್ವಾಮಿ ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ಇಲಾಖಾ ಸುಧಾರಣೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇಲಾಖೆಯಲ್ಲಿ ಶೇ.60 ಕ್ಕೂ ಅಧಿಕ ಹುದ್ದೆ ಗಳು ಖಾಲಿ ಇರುವುದನ್ನು ಮನಗಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ಆರ್ಥಿಕ ಇಲಾಖೆ ಅನುಮತಿಯನ್ನು ಪಡೆದು ಇಲಾಖೆ ಮೂಲಕ ಕೆ.ಪಿ.ಎಸ್.ಸಿ ಗೆ ಪ್ರಸ್ತಾವನೆ ಕಳಿಸಲು ಕಾರಣರಾಗಿದ್ದಾರೆ.
ಈ ನೇಮಕಾತಿಯಿಂದ ರಾಜ್ಯದ 31 ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡಲು ಅಧಿಕಾರಿಗಳನ್ನು ನೇಮಿಸಲು ಸಾಧ್ಯವಾಗಲಿದೆ. 2008 ರಲ್ಲಿ ಕೆ.ಪಿ ಎಸ್.ಸಿ ಮೂಲಕ 410 ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇದೀಗ ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ ಮಾಡಲು ಕ್ರಮ ವಹಿಸಲಾಗಿದ್ದು ಮೂರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಳಿಸಲು ಸೂಚಿಸಲಾಗಿದೆ. ಇದರಿಂದ ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಲಭ್ಯವಾಗಲಿದ್ದು ಕೃಷಿಕ ಸಮುದಾಯದ ಮಾರ್ಗದರ್ಶನ ಹಾಗೂ ಸೇವೆಗೆ ದೊಡ್ಡ ಶಕ್ತಿ ದೊರೆತಂತಾಗಲಿದೆ.
ಇದನ್ನೂ ಕೂಡ ಓದಿ : Canara Bank Recruitment : ಕೆನರಾ ಬ್ಯಾಂಕಿನಲ್ಲಿ 3,000 ಹುದ್ದೆಗಳಿಗೆ ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.? ಕೊನೆಯ ದಿನಾಂಕ ಯಾವುದು.?
ಕೃಷಿ ಇಲಾಖೆಯಲ್ಲಿ ಏಕಕಾಲದಲ್ಲಿ ಇಷ್ಟು ದೊಡ್ಡ ಮಟ್ಟದ ನೇಮಕಾತಿಗೆ ಅನುಮತಿ ಒದಗಿಸಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃಷಿ ಸಚಿವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ನೇಮಕಾತಿಯಿಂದ ಇಲಾಖೆಯಲ್ಲಿ ಖಾಲಿ ಇದ್ದ ಮೂರನೇ ಒಂದರಷ್ಟು ಅಧಿಕಾರಿಗಳ ಹುದ್ದೆ ಭರ್ತಿಯಾದಂತಾಗಲಿದೆ. ಇದರಿಂದ ರೈತರಿಗೆ ಸೇವಾ ಸೌಲಭ್ಯ ಒದಗಿಸುವ ಪ್ರಕ್ರಿಯೆ ಸುಗಮವಾಗಲಿದೆ. ಬಾಕಿ ಉಳಿವ ಖಾಲಿ ಹುದ್ದೆಗಳ ಭರ್ತಿಗೂ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- PM Kisan Scheme : ಕಿಸಾನ್’ ಯೋಜನೆಯ 18 ನೇ ಕಂತಿನ ಹಣ ಬಿಡುಗಡೆ : ನಿಮ್ಮ ಖಾತೆಗೆ ₹2000 ಜಮೆಯಾಗಿದ್ಯಾ? ಹೀಗೆ ಚೆಕ್ ಮಾಡಿ
- Krishi Bhagya Scheme : 2024 ನೇ ಸಾಲಿನ ಕೃಷಿ ಭಾಗ್ಯ ಯೋಜನೆಗೆ ಹೊಸ ಅರ್ಜಿಗಳು ಆರಂಭ.! ರೈತರು ಕೂಡಲೇ ಅರ್ಜಿ ಸಲ್ಲಿಸಿ
- Vidya Nidhi Scholarship : ರಾಜ್ಯ ಸರ್ಕಾರದಿಂದ ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಗುಡ್ ನ್ಯೂಸ್ : ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ
- Acidity Remedies : ಅಸಿಡಿಟಿಯಿಂದ ಬಳುತ್ತಿದ್ದೀರಾ.? ದಿನಕ್ಕೆ ಎರಡು ಬಾರಿ ಇದನ್ನು ಮಾಡಿ ಸಾಕು – ಮನೆಮದ್ದು
- PMAY (U) : ಪ್ರಧಾನಮಂತ್ರಿ ಆವಾಸ್ ಯೋಜನೆ ನೋಂದಣಿ ಆರಂಭ.! ಹೇಗೆ ಅರ್ಜಿ ಸಲ್ಲಿಸುವುದು.? ಯಾರೆಲ್ಲಾ ಅರ್ಹರು.?
- Micro Credit Scheme : ಕೇಂದ್ರ ಸರ್ಕಾರದಿಂದ ಮೈಕ್ರೋ ಕ್ರೆಡಿಟ್ ಯೋಜನೆಯಡಿ ಮಹಿಳೆಯರಿಗಾಗಿ ಸಿಗಲಿದೆ ಸಾಲ ಹಾಗು ಸಹಾಯಧನ.!
- Subsidy Loan : ರೈತರಿಗೆ ಹೈನುಗಾರಿಕೆ ಮಾಡಲು ಸಬ್ಸಿಡಿ ಸಹಿತ 2 ಲಕ್ಷ ರೂಪಾಯಿ ಸಾಲ – ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?
- RRB Recruitment 2024 : ಭಾರತೀಯ ರೈಲ್ವೇ ಇಲಾಖೆಯಲ್ಲಿ 3445 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಇದೇ ತಿಂಗಳು 20 ಲಾಸ್ಟ್ ಡೇಟ್!
- PM Kisan Samman Nidhi : ಪಿಎಂ ಕಿಸಾನ್ 18ನೇ ಕಂತಿನ ₹2,000 ರೂಪಾಯಿ ಹಣ ಬಿಡುಗಡೆ ದಿನಾಂಕ ಪ್ರಕಟ.! ಸಂಪೂರ್ಣ ಮಾಹಿತಿ
- ನಿಮಗೂ ಉಚಿತ ಮನೆ ಬೇಕಾ.? ಹೇಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಉಚಿತ ಮನೆಗಾಗಿ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳು.?
- e-Shram Card 2024 : ಈ ಕಾರ್ಡ್ ಮಾಡಿದ್ರೆ 2 ಲಕ್ಷ ರೂ. ವಿಮೆ ಮತ್ತು 3000 ರೂ. ಸಹಾಯಧನ! ಹೇಗೆ ಅರ್ಜಿ ಸಲ್ಲಿಸುವುದು.?
- Gold Rate Today : ಚಿನ್ನ ಖರೀದಿದಾರರಿಗೆ ಸಿಹಿಸುದ್ಧಿ ಇದೆಯಾ.? ಎಷ್ಟಾಗಿದೆ ನೋಡಿ ಇಂದಿನ ಚಿನ್ನದ ಬೆಲೆ.?
- PWD Jobs 2024 : ಲೋಕೋಪಯೋಗಿ ಇಲಾಖೆಯಲ್ಲಿ ನೇಮಕಾತಿಗಾಗಿ ಅರ್ಜಿ ಆಹ್ವಾನ.! ಕೊನೆಯ ದಿನಾಂಕ ಯಾವುದು.? ಹೇಗೆ ಅರ್ಜಿ ಸಲ್ಲಿಸುವುದು.?
- PhonePe – Google Pay : ಫೋನ್ ಪೇ – ಗೂಗಲ್ ಪೇನಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ಹೋದರೆ ಏನು ಮಾಡಬೇಕು.? ಮರಳಿ ಸಿಗುತ್ತಾ.?
- PhonePe Loan Facility : ಫೋನ್ ಪೇ ಮೂಲಕ ಪಡೆಯಿರಿ ಸಾಲ – ನಿಮಗೂ ಸಿಗುತ್ತಾ ಬೇಗ ಚೆಕ್ ಮಾಡಿ
- BPL Ration Card : ಪಾನ್ ಕಾರ್ಡ್ – ಆಧಾರ್ ಕಾರ್ಡ್ ಜೋಡಣೆ ಮಾಡಿದ ಬಡವರ ಬಿಪಿಎಲ್ ಕಾರ್ಡ್ ರದ್ದು.?ಗ್ಯಾರಂಟಿ ಸೌಲಭ್ಯವೂ ಕಡಿತ.!
- Bigg Boss : ಪತ್ನಿ ಶ್ರಾವಣಿ ಮೇಲೆ ಬಿಗ್ಬಾಸ್ ಖ್ಯಾತಿಯ ಸಮೀರಾಚಾರ್ಯ ಹಲ್ಲೆ..? ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ.!
- SSY Scheme : ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳೇ ಗಮನಿಸಿ : ಈ ಕೆಲಸ ಮಾಡದಿದ್ದರೆ ಬಂದ್ ಅಗಲಿದೆ ಖಾತೆ!
- SBI Bank Recruitment : ‘ಎಸ್ ಬಿಐ’ ನಲ್ಲಿ 1,511 ಹುದ್ದೆಗಳಿಗೆ ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.? ಕೊನೆಯ ದಿನಾಂಕ ಯಾವುದು.?
- Atal Pension Yojana : ಈ ಯೋಜನೆಯಡಿ ಪ್ರತಿ ತಿಂಗಳಿಗೆ ₹5,000/- ಪಿಂಚಣಿ ಪಡೆಯಲು ಅರ್ಜಿ ಆಹ್ವಾನ.! ಬೇಕಾಗುವ ದಾಖಲೆಗಳೇನು.?