ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ಸೌಲಭ್ಯ – business loan for women

Business loan for women : ದೇಶದ ಮಹಿಳೆಯರನ್ನು ಸ್ವಾವಲಂಬಿ ಮತ್ತು ಸಬಲರನ್ನಾಗಿಸಲು ಸ್ತ್ರೀಶಕ್ತಿ ಯೋಜನೆಯಡಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಇಪ್ಪತೈದು ಲಕ್ಷಕ್ಕೂ ಹೆಚ್ಚು ಸಾಲವನ್ನು ನೀಡಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರ್ಕಾರದೊಂದಿಗೆ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಇದರ ಮುಖ್ಯ ಉದ್ದೇಶ ಮಹಿಳೆಯರನ್ನು ಸ್ವಾವಲಂಬಿ ಮತ್ತು ಸಬಲರನ್ನಾಗಿ ಮಾಡುವುದು. ಇದರ ಮೂಲಕ ಮಹಿಳೆಯರು ಸ್ವಂತ ಉದ್ಯೋಗ ವ್ಯಾಪಾರ ಮಾಡಲು ಪ್ರೋತ್ಸಾಹಿಸಲಾಗುತ್ತದೆ.

kannada news time

ಸ್ವಂತ ಉದ್ಯೋಗ ನಡೆಸುವ ಮಹಿಳೆಯರು ಈ ಯೋಜನೆಯಡಿ ಐದು ಲಕ್ಷದವರೆಗೆ ವ್ಯಾಪಾರ ಸಾಲವನ್ನು ತೆಗೆದುಕೊಂಡರೆ ಯಾವುದೇ ರೀತಿಯ ಮೇಲಾಧಾರ ಅಥವಾ ಗ್ಯಾರಂಟಿ ನೀಡುವ ಅಗತ್ಯವಿಲ್ಲ. ಐದು ಲಕ್ಷಕ್ಕಿಂತ ಮೇಲ್ಪಟ್ಟು ಇಪ್ಪತೈದು ಲಕ್ಷದವರೆಗೆ ಸಾಲ ಪಡೆದರೆ ಮಾತ್ರ ಗ್ಯಾರಂಟಿ ನೀಡಬೇಕಾಗುತ್ತದೆ. ವಿಭಿನ್ನ ವರ್ಗಗಳು ಮತ್ತು ವಿವಿಧ ವ್ಯವಹಾರಗಳ ಪ್ರಕಾರ ವಿಭಿನ್ನ ಬಡ್ಡಿ ದರಗಳನ್ನು ವಿಧಿಸಲಾಗುತ್ತದೆ. ಹೆಚ್ಚಿನದಾಗಿ ಇಂಥ ಸ್ವ ಉದ್ಯೋಗಕ್ಕೆ ತಕ್ಷಣ ಸಾಲ ನೀಡಲಾಗುತ್ತದೆ. ಕೃಷಿ ಉತ್ಪನ್ನಗಳಾದ ವ್ಯಾಪಾರ, ಬಟ್ಟೆ ತಯಾರಿಕೆ, ರಸಗೊಬ್ಬರ ಮಾರಾಟ, ಗುಡಿ ಕೈಗಾರಿಕೆ, ಬ್ಯೂಟಿ ಪಾರ್ಲರ್ ಹೀಗೆ ನಾನಾ ತರದ ಉದ್ಯಮಕ್ಕೆ ಸಾಲವನ್ನು ನೀಡಲಾಗುತ್ತದೆ.

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿಯರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್.!

ಈ ಯೋಜನೆಗೆ ಇರುವ ಮಾನದಂಡಗಳೇನು.?
  • ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು.
  • ಸಣ್ಣ ಪ್ರಮಾಣದ ವ್ಯಾಪಾರ ಮಾಡುತ್ತಿರುವ ಮಹಿಳೆಯರು ಯೋಜನೆಗೆ ಅರ್ಹರಾಗಿರುತ್ತಾರೆ.
kannada news time
ಸ್ತ್ರೀಶಕ್ತಿ ಯೋಜನೆಯ ಸಾಲಕ್ಕಾಗಿ ಬೇಕಾಗಿರುವ ದಾಖಲೆಗಳೇನು.?
  • ಅರ್ಜಿದಾರರ ಆಧಾರ್ ಕಾರ್ಡ್,
  • ವಿಳಾಸ ಪುರಾವೆ
  • ಗುರುತಿನ ಚೀಟಿ
  • ಕಂಪನಿ ಮಾಲೀಕತ್ವದ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವವರು ನಿಮ್ಮ ಹತ್ತಿರದ ಎಸ್‌ಬಿಐ ಬ್ಯಾಂಕ್ ಶಾಖೆಗೆ ತೆರಳಿ ಸ್ತ್ರೀಶಕ್ತಿ ಯೋಜನೆಯಡಿ ಅಗತ್ಯ ದಾಖಲೆ ನೀಡಿ ಅರ್ಜಿ ಸಲ್ಲಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply