Bigg Boss Kannada 11 : ನಮಸ್ಕಾರ ಸ್ನೇಹಿತರೇ, ಕಳೆದ 10 ವರ್ಷಗಳಿಂದ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರ್ತಿದ್ದಾರೆ. ಸುದೀಪ್ ಹೊರತಾಗಿ ಬಿಗ್ ಬಾಸ್ ಅನ್ನು ಅವರಷ್ಟು ಶಕ್ತವಾಗಿ ನಿರೂಪಣೆ ಮಾಡುವ ಇನ್ನೊಬ್ಬ ಸೆಲೆಬ್ರಿಟಿಯನ್ನು ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಆದರೆ ಸುದೀಪ್ ಮುಂದಿನ ಸೀಸನ್ನಿಂದ ಬಿಗ್ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಈ ಘೋಷಣೆಗೆ ಅವರದ್ದೇ ಆದ ಕಾರಣಗಳಿವೆ. ಆದರೆ ಕೆಲವರು ಸುದೀಪ್ರ ಈ ಘೋಷಣೆಗೆ ಬೇರೆ ಅರ್ಥ ಕಲ್ಪಿಸುವ ಪ್ರಯತ್ನ ಮಾಡಿದ್ದರು. ಅದೇ ಕಾರಣಕ್ಕೆ ಸುದೀಪ್ ಈಗ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಲರ್ಸ್ ವಾಹಿನಿಯಿಂದ, ಬಿಗ್ಬಾಸ್ ಆಯೋಜಕರಿಂದ ಕಿಚ್ಚ ಸುದೀಪ್ಗೆ ಅವಮಾನ ಆಗಿದೆ ಹಾಗಾಗಿ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ಹಂಚಿಕೊಂಡಿದ್ದರು. ಇದರ ಬಗ್ಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಟ್ವೀಟ್ ನೋಡಿ, ಗೌರವಿಸಿ ಬಂದ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಇದು ನಿಜವಾಗಿಯೂ ನನಗೆ ಸ್ಪೂರ್ತಿ ತುಂಬುತ್ತದೆ. ಈ ಪ್ರೀತಿ ಗೌರವವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ’ ಎಂದಿದ್ದಾರೆ.
ಇದನ್ನೂ ಕೂಡ ಓದಿ : ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ಮುಂದುವರೆದು, ‘ನನ್ನ ಹಾಗೂ ಚಾನೆಲ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ, ನನಗೆ ಅಗೌರವವನ್ನು ಚಾನೆಲ್ ತೋರಿದೆ ಎಂದು ವಿಡಿಯೋ, ಕಮೆಂಟ್ ಮಾಡುವವರಿಗೆ ನಾನು ಹೇಳಬಯಸುವುದೆಂದರೆ, ನಾನು ಮತ್ತು ಚಾನೆಲ್ ದೀರ್ಘವಾದ ಹಾಗೂ ಧನಾತ್ಮಕವಾದ ಜರ್ನಿ ಮಾಡಿದ್ದೇವೆ. ಭಿನ್ನಾಭಿಪ್ರಾಯ, ಅಗೌರವ ಎಂಬುದೆಲ್ಲ ಸುಳ್ಳು, ಸಾಕ್ಷ್ಯ ಇಲ್ಲದ್ದು. ಬಿಗ್ಬಾಸ್ನಿಂದ ಹೊರಹೋಗುತ್ತಿರುವ ಕುರಿತು ಮಾಡಿದ ಟ್ವೀಟ್ ಸ್ಪಷ್ಟವಾಗಿತ್ತು ಮತ್ತು ನೇರವಾಗಿತ್ತು.
ಕಲರ್ಸ್ ವಾಹಿನಿಯೊಟ್ಟಿಗೆ ನನ್ನ ಸಂಬಂಧ ಅದ್ಭುತವಾಗಿದೆ ಮತ್ತು ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಈಗಿನ ನಿರ್ದೇಶಕ ಪ್ರಕಾಶ್, ಅಸಾಧ್ಯ ಪ್ರತಿಭಾವಂತ ಮತ್ತು ಶಕ್ತಿಯುತ ವ್ಯಕ್ತಿ ಮತ್ತು ನಾನು ಅವರ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಇಲ್ಲದ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವ ವ್ಯಕ್ತಿತ್ವ ನನ್ನದಲ್ಲ’ ಎಂದಿದ್ದಾರೆ ಸುದೀಪ್.
ಇದನ್ನೂ ಕೂಡ ಓದಿ : Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಕಿಚ್ಚ ಸುದೀಪ್, ತಾವು ಬಿಗ್ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಕೆಲ ದಿನಗಳ ಹಿಂದೆಯಷ್ಟೆ ಘೋಷಣೆ ಮಾಡಿದ್ದಾರೆ. ಸುದೀಪ್ರ ಈ ಹಠಾತ್ ಘೋಷಣೆ ಅವರ ಅಭಿಮಾನಿಗಳಲ್ಲಿ, ಬಿಗ್ಬಾಸ್ ವೀಕ್ಷಕರಲ್ಲಿ ಮತ್ತು ಮಾಜಿ ಬಿಗ್ಬಾಸ್ ಸ್ಪರ್ಧಿಗಳಿಗೆ ಆಘಾತ ಉಂಟು ಮಾಡಿತ್ತು. ಇದೇ ಸಂದರ್ಭದಲ್ಲಿ ಕೆಲ ಮಾಜಿ ಬಿಗ್ಬಾಸ್ ಸ್ಪರ್ಧಿಗಳು ಕಲರ್ಸ್ ವಾಹನಿಯಿಂದ ಸುದೀಪ್ಗೆ ಅವಮಾನ ಆಗಿದೆಯೇ ಎಂಬ ಅನುಮಾನವನ್ನು ಸಹ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ಸುದೀಪ್ ಇದೀಗ ಸ್ಪಷ್ಟನೆ ನೀಡುವ ಮೂಲಕ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
- ಮದುವೆಗೂ ಮುನ್ನ ತಪ್ಪದೆ ಮಾಡಿಸಿಕೊಳ್ಳಿ ಈ ಟೆಸ್ಟ್ ! ನಿಮ್ಮದು ಈ ಟೆಸ್ಟ್ ಆಗಿದೆಯಾ.?
- Crime News : ಸೊಸೆಯ ತಲೆ ಕತ್ತರಿಸಿದ ಮಾವ – ಆಗ್ರಾದಲ್ಲಿ ಭೀಕರ ಹತ್ಯೆ
- Gruhalakshmi Scheme : ‘ಗೃಹಲಕ್ಷ್ಮಿ’ ಮಾಸಿಕ ಹಣ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಚಿಂತನೆ! ಗೃಹಲಕ್ಷ್ಮೀಯರಿಗೆ ಸಿಹಿಸುದ್ಧಿ.!
- ಮನೆಯನ್ನು ಮಾರಿ 33 ಲಕ್ಷ ಹಣದ ಸಮೇತ ಲವರ್ ಜತೆ ಪರಾರಿಯಾದ ಪತ್ನಿ – ಇದರಿಂದ ಮನನೊಂದು ಪ್ರಾಣಬಿಟ್ಟ ಗಂಡ.!
- Gold Rate Today : ಕುಸಿತ ಕಾಣುತ್ತಾ ಬಂಗಾರದ ಬೆಲೆ.? ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ದರ.?
- PhonePe Loan: ಫೋನ್ ಪೇ ಮೂಲಕ ಕೇವಲ 5 ನಿಮಿಷಗಳಲ್ಲಿ 2 ಲಕ್ಷಗಳವರೆಗೆ ಲೋನ್ ಪಡೆಯಬಹುದು.! ಯಾವ ರೀತಿ ಅರ್ಜಿ ಸಲ್ಲಿಸುವುದು.! ಬಡ್ಡಿ ದರ ಎಷ್ಟು.?
- Gold Rate Today : ಮತ್ತೆ ಏರಿಕೆ ಕಂಡ ಚಿನ್ನ.! ಚಿನ್ನ ಖರೀದಿದಾರರು ಬೆಲೆ ನೋಡಿ ಖರೀದಿ ಮಾಡಿ
- ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಪ್ರಯಾಣಿಕರಿಗೆ ಬಿಸ್ಕತ್ ಹಂಚಿದ ಆಟೋ ಡ್ರೈವರ್!
- ಈ ಅದ್ಭುತ ಹಣ್ಣು ಮಕ್ಕಳಿಲ್ಲದವರಿಗೆ ಹೆಚ್ಚು ಲಾಭದಾಯಕ.!
- ಸ್ನೇಹಿತನ ಜೊತೆ ಲವ್ವಿಡವ್ವಿ, ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ ಪತ್ನಿಗೆ ಚಾಕು ಇರಿದ ಪತಿ.!
- ವೀರ್ಯಾಣು ಹೇಗೆ ಅಂಡಾಣುವನ್ನು ಸೇರುತ್ತದೆ ನೋಡಿ – Health Tips
- Gold Rate Today : ಚಿನ್ನಪ್ರಿಯರಿಗೆ ಸಿಹಿಸುದ್ಧಿ ಇದೆಯಾ.? ಎಷ್ಟು ಏರಿಳಿತ ಕಂಡಿದೆ ಗೊತ್ತಾ ಬಂಗಾರದ ಬೆಲೆ.?
- ಬಾಲಕನ ಕೆನ್ನೆಯ ಗಾಯಕ್ಕೆ ಸ್ಟಿಚ್ ಬದಲು ಫೆವಿಕ್ವಿಕ್ ಹಾಕಿದ ನರ್ಸ್ – ಪೋಷಕರ ಆರೋಪ
- Gold Rate : ಅಲ್ಪ ಇಳಿಕೆ ಕಂಡು ಮತ್ತೆ ಭಾರೀ ಏರಿಕೆಯತ್ತ ಸಾಗಿದ ಚಿನ್ನ – ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?
- Server Problem : ಆಸ್ತಿ ನೋಂದಣಿಯ ‘ಕಾವೇರಿ ವೆಬ್ಸೈಟ್’ ಸರ್ವರ್ ಮತ್ತೆ ಡೌನ್ ; ದಿನಕ್ಕೆ 550 ಅಷ್ಟೇ ನೋಂದಣಿ
- Pan Card Update : ಪಾನ್ ಕಾರ್ಡ್ ಬಳಕೆದಾರರೇ ಎಚ್ಚರ.! 10 ಸಾವಿರ ದಂಡ ತಪ್ಪಿಸಿಕೊಳ್ಳಲು ಕೊನೆಯ ಅವಕಾಶ.? ಸಂಪೂರ್ಣ ಮಾಹಿತಿ
- ಕಿವಿ ಚುಚ್ಚಿಸಲು ಕರೆತಂದಿದ್ದ ಆರು ತಿಂಗಳ ಮಗುವಿಗೆ ಅನಸ್ತೇಷಿಯಾ ಓವರ್ ಡೋಸ್ : ವೈದ್ಯರ ಎಡವಟ್ಟಿಗೆ ಹಸುಗೂಸು ಬಲಿ
- Gold Price Today : ಇಳಿಕೆಯ ಹಾದಿ ಮರೆತ ಬಂಗಾರ.! ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ.?
- ಕಾರ್ಮಿಕರಿಗೆ ಸಿಹಿಸುದ್ಧಿ.! ಮದುವೆಗೆ ಸರ್ಕಾರದಿಂದ ಸಿಗಲಿದೆ ₹60,000/- ಸಹಾಯಧನ.! ಹೇಗೆ ಅರ್ಜಿ ಸಲ್ಲಿಸುವುದು.?
- Child abuse : ಮಗಳ ಮೇಲೆ ತಾಯಿಯ ಗೆಳೆಯನಿಂದಲೇ ಅತ್ಯಾಚಾರ.. ನಗ್ನಗೊಳಿಸಿ ವಿಡಿಯೋ ಕಾಲ್ ಮಾಡುತ್ತಿದ್ದ ಪಾಪಿ ತಾಯಿ.!
- Gold Rate : ಬಂಗಾರದ ಓಟಕ್ಕೆ ಬಿತ್ತಾ ಬ್ರೇಕ್.! ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ.? ಇನ್ನೂ ಇಳಿಕೆ ಕಾಣುತ್ತಾ.?
- Health Tips : ವಯಸ್ಸಿನ ಅನುಗುಣವಾಗಿ ತಿಂಗಳಿಗೆ ಯಾರು ಎಷ್ಟು ಬಾರಿ ಮಿಲನ ನಡೆಸಬಹುದು.? ಸಂಪೂರ್ಣ ಮಾಹಿತಿ ಇಲ್ಲಿದೆ.
- 10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
- Gold Rate Today : ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ.? ಚಿನ್ನ ಖರೀದಿಗೆ ಇದೇ ಸರಿಯಾದ ಸಮಯಾನ.?
- ATM Withdrawal Rules : ಪ್ರತಿ ತಿಂಗಳು ಕೇವಲ 3 ಬಾರಿ ಮಾತ್ರ ATM ನಿಂದ ಹಣ ಡ್ರಾಗೆ ಶುಲ್ಕ ಇಲ್ಲ. ಬಳಿಕ ಎಷ್ಟು ಶುಲ್ಕ ಗೊತ್ತಾ.?