ಕನ್ನಡ ನ್ಯೂಸ್ ಟೈಮ್ : ಸ್ವಂತ ವ್ಯಾಪಾರ ಆರಂಭಿಸಬೇಕು ಎನ್ನುವುದು ಯುವ ಜನತೆಯ ಕನಸು ಇಂತಹ ಐಡಿಯಾಗಳು ಎಲ್ಲರಿಗೂ ಬರುತ್ತವೆ ಆದರೆ ಕಾರ್ಯಗತಗೊಳಿಸುವುದಕ್ಕೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಇವುಗಳಲ್ಲಿ ಒಂದು ಬಂಡವಾಳದ ಕೊರತೆ. ನೀವು ಕೂಡ ಇದೇ ರೀತಿ ಉತ್ಪಾದನ ವಲಯದಲ್ಲಿ ತೊಡಗಿಕೊಂಡು ಸ್ವಂತ ಉದ್ಯಮ ಆರಂಭಿಸುವ ಅಥವಾ ವ್ಯಾಪಾರ ಮಾಡಬೇಕೆಂಬ ಯೋಜನೆಯಲ್ಲಿದ್ದು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ಸರ್ಕಾರದ ಕಡೆಯಿಂದ ಸಿಗುತ್ತಿರುವ ಉದ್ಯಮ ಸಾಲ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.
ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ – PM Awas Yojana
ಸರ್ಕಾರ ಮಾತ್ರವಲ್ಲದೇ ಸರ್ಕಾರೇತರವಾಗಿ ಅನೇಕ ಸಂಸ್ಥೆಗಳು ಕೂಡ ಈ ವಿಶೇಷ ಯೋಜನೆಗಳ ಮೂಲಕ ಹಣಕಾಸಿನ ನೆರವು ನೀಡುತ್ತಿವೆ. ಈ ನಿಟ್ಟಿನಲ್ಲಿ ದೇಶದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಬರುವ SBI ಬ್ಯಾಂಕಿನ ಯೋಜನೆಗಳಾದ SBI ಮುದ್ರಾ ಮತ್ತು SBI ಇ-ಮುದ್ರಾ ಎನ್ನುವ ಯೋಜನೆಗಳ ಬಗ್ಗೆ ಈ ಲೇಖನದ ಮೂಲಕ ವಿವರಿಸುತ್ತಿದ್ದೇವೆ.
ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು (PMMY) ಜಾರಿಗೆ ತರಲಾಗಿದೆ. ಭಾರತದಲ್ಲಿ ಸಣ್ಣ ಹಾಗೂ ಮಧ್ಯಮ ವಲಯದ ಉದ್ಯಮ ಹಾಗೂ ವ್ಯಾಪಾರಗಳ ಬೆಳವಣಿಗೆಯನ್ನು ಹೆಚ್ಚಿಸುವ ಸಲುವಾಗಿ ಈ ಯೋಜನೆಗಳ ಮೂಲಕ ಸಾಲ ನೀಡಲಾಗುತ್ತದೆ.
Shrama Shakti Yojane : ಈ ಯೋಜನೆಯಲ್ಲಿ ಪ್ರತಿಯೊಬ್ಬ ಮಹಿಳೆಗೆ ಸಿಗಲಿದೆ ₹50,000/- ರೂಪಾಯಿ.! ಬೇಕಾಗುವ ದಾಖಲೆಗಳೇನು.?
ಅಂತೆಯೇ SBI ಬ್ಯಾಂಕ್ ಕೂಡ ಇದರತ್ತ ಹೆಚ್ಚಿನ ಒಲವು ತೋರಿದೆ.
ಈಗಾಗಲೇ ಲೋನ್ ಪೋರ್ಟ್ ಪೋಲಿಯೋ ವೈಯಕ್ತಿಕ ಮತ್ತು ವ್ಯಾಪಾರ ಸಾಲಗಳನ್ನು ಮತ್ತು ಇನ್ನಿತರ ಮಾದರಿಯ ಅನೇಕ ಸಾಲಗಳನ್ನು ಪರಿಚಯಿಸುತ್ತಿರುವ ಬ್ಯಾಂಕ್ ಉದ್ಯಮ ಸ್ಥಾಪನೆ ವ್ಯಾಪಾರ ಅಭಿವೃದ್ಧಿಗಾಗಿ SBI ಮುದ್ರಾ ಯೋಜನೆ ಮತ್ತು SBI ಇ-ಮುದ್ರಾ ಯೋಜನೆ ಮೂಲಕ ಸಾಲ ಸೌಲಭ್ಯ ಒದಗಿಸುತ್ತಿದೆ. ಈ ಯೋಜನೆ ಪಡೆಯಲು ಯಾರು ಅರ್ಹರು? ಏನೆಲ್ಲಾ ಕಂಡೀಷನ್ ಗಳು ಇರುತ್ತವೆ?
ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳನ್ನು ಇದರ ಜೊತೆಗೆ ಒದಗಿಸಬೇಕು ಎನ್ನುವ ಪೂರ್ತಿ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಸಿಗುವ ಅನುದಾನ :-
• ಕಾರ್ಪೊರೇಟ್ ಅಲ್ಲದ ಕೃಷಿಯೇತರ MSME ಗಳಿಗೆ ಸುಲಭವಾಗಿ ಸಾಲ ಸೌಲಭ್ಯ ದೊರೆಯುತ್ತದೆ
• SBI ಮುದ್ರಾ ಯೋಜನೆಯಡಿ ಗರಿಷ್ಠ ರೂ.10 ಲಕ್ಷದವರೆಗೆ
• SBI ಇ-ಮುದ್ರಾ ಯೋಜನೆಯಡಿ ಗರಿಷ್ಠ ರೂ.50,000 ದವರೆಗೆ
ಯಾರೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.?
ಉತ್ಪಾದನಾ ವಲಯ, ವ್ಯಾಪಾರ ಮತ್ತು ಸೇವಾ ವಲಯ ಅಲೈಡ್ ಕೃಷಿ ವಲಯ ಈ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಸೂಕ್ಷ್ಮ ಉದ್ಯಮಿಗಳು ಅಥವಾ ಹೊಸ ವ್ಯಾಪಾರ ಮಾಲೀಕರು ಅಥವಾ ತಮ್ಮ ವಹಿವಾಟು ಮುಂದಿನ ಹಂತಕ್ಕೆ ಕೊಂಡುಕೊಳ್ಳುವುದಕ್ಕಾಗಿ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವಂತಹ ಆರಂಭಿಕ ಸಂಸ್ಥಾಪಕರು ಈ ಮೇಲೆ ತಿಳಿಸಿದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.
10ನೇ ತರಗತಿ ಉತ್ತೀರ್ಣರಾದ ಮಹಿಳೆಯರಿಗೆ ತಿಂಗಳಿಗೆ ₹7,000/- ಹಣದ ಜತೆಗೆ ಕಮಿಷನ್ – ಏನಿದು ‘ಬಿಮಾ ಸಖಿ ಯೋಜನೆ’..?
SBI ಷರತ್ತುಗಳ ವಿವರ ಹೀಗಿದೆ :-
• ಅರ್ಜಿದಾರರು ಈ ಮೇಲೆ ತಿಳಿಸಿದಂತೆ ಸೂಕ್ಷ್ಮ ಉದ್ಯಮಿಗಳಾಗಿರಬೇಕು
• ಸಣ್ಣ ಮತ್ತು ಮಧ್ಯಮ ಗಾತ್ರದ ಉತ್ಪಾದನಾ ಘಟಕ ಅಥವಾ ವ್ಯಾಪಾರ ಆರಂಭಿಸಿರಬೇಕು ಅಥವಾ ಸಿದ್ಧತೆಯಲ್ಲಿರಬೇಕು
• ಈ ಯೋಜನೆಯ ಪ್ರಯೋಜನ ಪಡೆಯಲು ಬಯಸುವ ಅಭ್ಯರ್ಥಿಗಳು SBI ಬ್ಯಾಂಕ್ ನಲ್ಲಿ ಚಾಲ್ತಿ ಖಾತೆ ಹೊಂದಿರಬೇಕು ( ಅರ್ಜಿ ಸಲ್ಲಿಸುವ ಸಮಯಕ್ಕೆ ಖಾತೆಗಳು ಆರು ತಿಂಗಳು ಹಳೆದ್ದಾಗಿರಬೇಕು)
• ಸಾಲ ಮರುಪಾವತಿಗೆ ಗರಿಷ್ಠ ಸಮಯವಕಾಶ ಐದು ವರ್ಷಗಳು.
• ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚಿನ ಹಣದ ಅಗತ್ಯತೆ ಇದ್ದರೆ ನೇರವಾಗಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ
ಬೇಕಾಗುವ ದಾಖಲೆಗಳು :-
• ಅರ್ಜಿದಾರರ ಆಧಾರ್ ಕಾರ್ಡ್
• ಪ್ಯಾನ್ ಕಾರ್ಡ್
• SBI ಬ್ಯಾಂಕ್ ಖಾತೆ ಪಾಸ್ ಬುಕ್ ವಿವರ
• ಇತ್ತೀಚಿನ ಭಾವಚಿತ್ರಗಳು
• ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
• ಸಮುದಾಯದ ವಿವರಗಳು
• ವ್ಯಾಪಾರದ ಪುರಾವೆ
• IGSTN / UDYOG ವಿವರ
• ಅಂಗಡಿ ಸ್ಥಾಪನೆ ವಿವರ ಅಥವಾ ವ್ಯಾಪಾರ ನೊಂದಣಿ ವಿವರಗಳು
• ಇನ್ನಿತರ ಪ್ರಮುಖ ದಾಖಲೆಗಳು

10 ಲಕ್ಷದವರೆಗೂ ಸಾಲ ಪಡೆದುಕೊಳ್ಳುವ ಭಾಗ್ಯ..! ಮುದ್ರಾ ಯೋಜನೆಯಲ್ಲಿ ನೀವು ಸ್ವಂತ ಉದ್ಯೋಗಕ್ಕಾಗಿ ಸಾಲ ಪಡೆದುಕೊಳ್ಳಿ.!
WhatsApp Group
Join Now