Anugraha Scheme : ಅನುಗ್ರಹ ಯೋಜನೆಯಡಿ ಪ್ರತಿ ಮೇಕೆಗೆ ₹5,000/- ರೂಪಾಯಿ ಪರಿಹಾರ.! ಬೇಕಾಗುವ ದಾಖಲೆಗಳೇನು.?

Anugraha Scheme : ನಮಸ್ಕಾರ ಸ್ನೇಹಿತರೇ, ಕುರಿ-ಮೇಕೆಗಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದರೆ ಅನುಗ್ರಹ ಯೋಜನೆಯ ಅಡಿಯಲ್ಲಿ ರೈತರಿಗೆ ₹5,000/- ರೂಪಾಯಿಯವರೆಗೆ ಪರಿಹಾರ ನೀಡಲಾಗುವುದು. ಕುರಿ ಹಾಗೂ ಮೇಕೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ ಹಾಗೂ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದರೆ ಪರಿಹಾರ ಧನ ವಿತರಿಸುವ ಅನುಗ್ರಹ ಯೋಜನೆಯನ್ನು (Anugraha Scheme) ಈ ಹಿಂದೆ 2017 ರಲ್ಲಿ ಸಿದ್ದರಾಮಯ್ಯನವವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದರು.

ಕುರಿಗಳಿಗೆ ಮೇಲಿಂದ ಮೇಲೆ ಆಗಮಿಸುವ ರೋಗ ಹಾಗೂ ನೈಸರ್ಗಿಕ ವಿಕೋಪಕ್ಕೆ ತುತ್ತಾಗುತ್ತಿರುವ ಮನಗಂಡು ಸರಕಾರ ಅನುಗ್ರಹ ಯೋಜನೆ (Anugraha Scheme) ಜಾರಿಗೊಳಿಸಿತ್ತು. ಕುರಿಗಳು ಸತ್ತರೆ ₹5,000/- ರೂಪಾಯಿಗಳ ಪರಿಹಾರ ನೀಡುವ ಅನುಗ್ರಹ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Scholarship : ₹50,000/- ಸ್ಕಾಲರ್ಶಿಪ್.! ಅರ್ಹ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ – ಡೈರೆಕ್ಟ್ ಲಿಂಕ್ ಇಲ್ಲಿದೆ

ಏನಿದು ಅನುಗ್ರಹ ಯೋಜನೆ.?

ಕುರಿ ಹಾಗೂ ಮೇಕೆಗಳು ಆಕಸ್ಮಿಕ ಮರಣ ಹೊಂದಿದಲ್ಲಿ ಹಾಗೂ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮರಣ ಹೊಂದಿದರೆ ವಿಮೆಗೆ ಒಳಪಡದ 6 ತಿಂಗಳ ಮೇಲ್ಪಟ್ಟ ಪ್ರತಿ ಕುರಿ, ಮೇಕೆಗೆ 5 ಸಾವಿರ ರೂಪಾಯಿ, 3 ರಿಂದ 6 ತಿಂಗಳ ಕುರಿ ಹಾಗೂ ಮೇಕೆ ಮರಿಗೆ ₹2,500/- ರೂಪಾಯಿಗಳಂತೆ ಪರಿಹಾರ ಧನ ವಿತರಿಸಲಾಗುವುದು.

ಅನುಗ್ರಹ ಯೋಜನೆಗೆ ರೈತರಿಗೆ ಉಪಯೋಗವಾಗಲಿದೆ. ಏಕೆಂದರೆ ರೈತರ ಜಾನುವಾರುಗಳು ಕೆಲವು ಸಲ ಯಾವುದೇ ರೋಗ ರುಜಿನಗಳಿಲ್ಲದಿದ್ದರೂ ವಿಷ ಜಂತುಗಳಿಂದ ಸಾವನ್ನಪ್ಪುತ್ತವೆ. ಇದರಿಂದಾಗಿ ರೈತರಿಗೆ ಅಪಾರ ಹಾನಿಯಾಗುತ್ತದೆ. ಆಗ ಸರ್ಕಾರದ ಈ ಅನುಗ್ರಹ ಯೋಜನೆಯು (Anugraha Scheme) ಕೈಹಿಡಿಯುತ್ತದೆ.

ಇದನ್ನೂ ಕೂಡ ಓದಿ : Borewell Subsidy : ಬೋರ್ ವೆಲ್ ಕೊರೆಸಲು ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

ಅರ್ಹತೆಗಳೇನು :-

ಮರಣ ಹೊಂದಿದ ಕುರಿ/ಮೇಕೆ, ಹಸು, ಎಮ್ಮೆ ಎತ್ತುಗಳ ಶವ ಪರೀಕ್ಷೆಗೆ ಮೊದಲು ಮತ್ತು ಶವ ಪರೀಕ್ಷೆ ನಂತರದ ಭಾವಚಿತ್ರಗಳಲ್ಲಿ ಫಲಾನುಭವಿ ಮತ್ತು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ಇರುವ ಜಿಪಿಆರ್ ಎಸ್ ಭಾವಚಿತ್ರಗಳನ್ನು ತೆಗೆದು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ದೃಢೀಕರಿಸುವುದು. ಮರಣಿಸಿದ ಕುರಿ, ಮೇಕೆ, ಹಸು, ಎಮ್ಮೆ, ಎತ್ತುಗಳ ಭಾವಚಿತ್ರಗಳನ್ನು ಸಂಬಂಧಪಟ್ಟ ಪಶುವೈದ್ಯರು, ಸಹಾಯಕ ನಿರ್ದೇಶಕರು ಪರಿಶೀಲಿಸಿ ಸಲ್ಲಿಸುವುದು ಹಾಗೂ ಮರಣಿಸಿದ ಕುರಿ, ಮೇಕೆ, ಹಸು, ಎಮ್ಮೆ, ಎತ್ತುಗಳ ಭಾವಚಿತ್ರಗಳಿಗೆ ಸಂಬಂಧಿಸಿದಂತೆ ಶವ ಪರೀಕ್ಷೆ ನಡೆಸಿದ ಪಶುವೈದ್ಯರೇ ವೈಯುಕ್ತಿಕ ಜವಾಬ್ದಾರರಾಗಿರುತ್ತಾರೆ.

ಇದನ್ನೂ ಕೂಡ ಓದಿ : Canara Bank Jobs : ಕೆನರಾ ಬ್ಯಾಂಕ್‌ನಲ್ಲಿ ಬಂಪರ್ ಉದ್ಯೋಗಾವಕಾಶ.! ಆಸಕ್ತರು ಇಂದೇ ಅರ್ಜಿ ಸಲ್ಲಿಸಿ – ಹೇಗೆ ಅರ್ಜಿ ಸಲ್ಲಿಸುವುದು.?

ಬೇಕಾಗುವ ದಾಖಲೆಗಳೇನು.?

  • ಮರಣೋತ್ತರ ವರದಿ
  • ಫಲಾನುಭವಿ ಅರ್ಜಿ
  • ಫೋಟೋಗಳು
  • ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ
  • ಮುಂಗಡ ಹಣ ಸಂದಾಯ ರಶೀದಿಯಲ್ಲಿ ಫಲಾನುಭವಿಗಳ ಸಹಿ
  • ಪೂರ್ಣ ವಿಳಾಸ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ತಪ್ಪದೇ ವೋಚರಳನ್ನು ದೃಢೀಕರಿಸಿ ಸಲ್ಲಿಸಬೇಕು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply