Jolly Joseph Mystery : ನಮಸ್ಕಾರ ಸ್ನೇಹಿತರೇ, ನಾವು ಎಷ್ಟೋ ಸಲ ಭಯಾನಕ ಕೇಸಿನ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಪ್ರತಿ ಕೇಸಿನ ಹಿಂದೆ ಒಬ್ಬ ಹಂತಕ ಇದ್ದೇ ಇರ್ತಾನೆ. ಅವನಾಗಲಿ ಅಥವಾ ಅವಳಾಗಲಿ, ಇಲ್ಲಿ ಎಷ್ಟೇ ಬುದ್ಧಿ ಶಕ್ತಿಯನ್ನು ಬಳಸಿ ಅಪರಾಧವೆಸಗಿದರೂ ಕೂಡ ಒಂದಲ್ಲ ಒಂದು ಸುಳ್ಳಿನಿಂದಾಗಿ ಸಿಕ್ಕಿ ಹಾಕಿಕೊಳ್ಳಲೇಬೇಕು. ಆದರೆ ಕೇರಳದಲ್ಲಿ ಕೆಲ ವರ್ಷಗಳ ಹಿಂದೆ ನಡೆದಂತಹ ವಿಚಿತ್ರ ಪ್ರಕರಣದಲ್ಲಿ ಅಪರಾಧಿ 14 ವರ್ಷಗಳ ಕಾಲ ಯಾರು ಕೂಡ ಪತ್ತೆಯಾಗಿರಲಿಲ್ಲ. ಇಲ್ಲಿ ಒಂದು ಕುಟುಂಬದಲ್ಲಿ 14 ವರ್ಷಗಳ ಅವಧಿಯಲ್ಲಿ ಅದರ ಆರು ಜನ ಸಾಲು ಸಾಲಾಗಿ ಒಂದೇ ರೀತಿಯಲ್ಲಿ ಸಾವನ್ನಪ್ಪಿದ್ದರು. ಆರಂಭದಲ್ಲಿ ಎಲ್ಲ ಸಾವುಗಳು ಕೂಡ ಸಹಜ ಅಂತ ಜನ ನಂಬಿದ್ದರು.
Table of Contents
ಜಾಲಿ ಜೋಸೆಫ್(Jolly Joseph) ಯಾರು.?
ಆದರೆ ಇದು ಸಹಜ ಸಾವಲ್ಲ. ಸಂಚಿತ ಹತ್ಯೆಗಳು ಎಂಬ ಗುಮಾನಿ ಬಂದು ತನಿಖೆ ನಡೆಸಿದಾಗ ಈ ಎಲ್ಲ ಹತ್ಯೆಗಳನ್ನು ಕೂಡ ಒಬ್ಬ ಮಹಿಳೆ ಅತ್ಯಂತ ಚಾಕಚಕ್ಯತೆಯಿಂದ ಮಾಡಿದಂತಹ ಸಂಗತಿ ಬೆಳಕಿಗೆ ಬರುತ್ತೆ. ಆಕೆ ಬೇರೆ ಯಾರೋ ಹೊರಗಿನ ವ್ಯಕ್ತಿಯಾಗಿರಲಿಲ್ಲ. ಆಕೆ ಕೂಡ ಅದೇ ಮನೆಯೊಳಗೆ ಇದ್ದವು. ತನ್ನ ಮನಸ್ಸಿನಲ್ಲಿ ಹೊಗೆಯಾಡುತ್ತಿದ್ದಂತಹ ದ್ವೇಷ ಹಾಗೂ ಸ್ವಾರ್ಥಗಳಿಗಾಗಿ ತನ್ನದೇ ಮನೆಯ ಆರು ಜನ ಅಮಾಯಕರ ಜೀವವನ್ನ ತೆಗೆದಂತಹ ಹಂತಕಿಯ ಹೆಸರೇ ಜಾಲಿ ಜೋಸೆಫ್(Jolly Joseph). ಕೇರಳದಲ್ಲಿ ನಡೆದಂತಹ ಈ ಭೀಕರವಾದ ಹತ್ಯಾಕಾಂಡ ಕೊಡತಾಯಿಯ ಸೈನೆಡ್ ಕೊಲೆಗಳು ಅಂತಾನೆ ಕುಖ್ಯಾತಿಯನ್ನು ಪಡೆದಿದೆ. ಈ ಜಾಲಿ ಜೋಸೆಫ್(Jolly Joseph) ಈ ಮನೆಯಲ್ಲಿ ತನ್ನ ಹಂತ್ಯಾಕಾಂಡಗಳ ಸರಣಿಯನ್ನ ಮೊದಲು 2002 ರಲ್ಲಿ ಶುರು ಮಾಡುತ್ತಾಳೆ.
ಇದನ್ನೂ ಕೂಡ ಓದಿ : Real Re Born Incident : ಇದು ಇಡೀ ಭಾರತದಲ್ಲಿ ಎಲ್ಲರನ್ನು ಅಚ್ಚರಿಗೊಳಿಸಿದ ರಿಯಲ್ ಪುನರ್ಜನ್ಮದ ಘಟನೆ
ಅಲ್ಲಿಂದ 2016 ಅಂದರೆ 14 ವರ್ಷಗಳಲ್ಲಿ ಮನೆಯ ಆರು ಜನರು ಕೂಡ ಆಕೆಯಿಂದಾಗಿ ದಾರುಣವಾಗಿ ಸಾವನ್ನಪ್ಪಿದ್ದರು ಕೂಡ, ಯಾರಿಗೂ ಆಕೆ ಮೇಲೆ ಅನುಮಾನ ಬರುವುದಿಲ್ಲ. ಆಕೆ ಮಾಡುತ್ತಿದ್ದಂತಹ ಅಡುಗೆ ಹಾಗೂ ನೀರಿನಲ್ಲಿ ಅತ್ಯಂತ ವಿಷಯುಕ್ತವಾದ ಸೈನೆಡ್ ಬೆರಸಿ ಕುಟುಂಬದ ಸದಸ್ಯರನ್ನು ಕೊಂದು ಮುಗಿಸುತ್ತಿದ್ದಳು. ಈ ಬಗ್ಗೆ 2019 ರಲ್ಲಿ ಗೊತ್ತಾಗುತ್ತೆ. ಆಗ ಜಾಲಿ ಜೋಸೆಫ್(Jolly Joseph) ಬಂಧನವಾಗಿ ಈ ಒಂದು ಕೇಸ್ ಕೇರಳದಾಧ್ಯಂತ ಸೆನ್ಸೇಷನ್ ಸುದ್ದಿಯಾಗಿ ಹರಡುತ್ತೆ.
ಇತ್ತೀಚೆಗೆ ಅಂದರೆ 2023 ರ ಡಿಸೆಂಬರ್ ನಲ್ಲಿ ಈ ಬಗ್ಗೆ ಒಂದು ಡಾಕ್ಯುಮೆಂಟರಿ ಕೂಡ ಬಿಡುಗಡೆಯಾಗಿದೆ. ಅದರ ಹೆಸರು ಕರಿ ಅಂಡ್ ಸೈನೆಡ್(Curry and Cyanide). ಇದು ನೆಟ್ ಫ್ಲಿಕ್ಸ್ ನಲ್ಲಿ ನೋಡುವುದಕ್ಕೆ ಲಭ್ಯವಿದೆ. ಆಸಕ್ತರು ಇದರಲ್ಲಿ ನೋಡಬಹುದು. ಇಷ್ಟಕ್ಕೂ ಈ ಜಾಲಿ ಜೋಸೆಫ್(Jolly Joseph) ಯಾರು.? ಈಕೆ ಯಾಕಾಗಿ ಒಂದೇ ಮನೆಯ ಆರು ಜನರನ್ನು ಈ ರೀತಿ ನಿರ್ದಯವಾಗಿ ಕೊಂದು ಹಾಕಿದಳು. ಈ ಜಾಲಿ ಜೋಸೆಫ್ ಗೆ(Jolly Joseph) ಸೈನಡ್ ಎಲ್ಲಿಂದ ಬಂತು.? ಹಾಗು ಅದು ಯಾರಿಂದ ಸಿಕ್ಕಿತು.? ಈ ಜಾಲಿ ಜೋಸೆಫ್(Jolly Joseph) ಗೆ ಇದ್ದಂತಹ ಉದ್ದೇಶ ಏನು.? ಈಕೆ ಮೇಲೆ ಅನುಮಾನ ಹೇಗೆ ಬಂತು.? ಪೊಲೀಸರು ಈ ಜಾಲಿ ಜೋಸೆಫ್(Jolly Joseph) ಳನ್ನು ತಪ್ಪಿತಸ್ಥ ಅಂತ ನಿರೂಪಿಸಿದ್ದು ಹೇಗೆ.? ಈ ಬಗ್ಗೆ ಜಾಲಿ ಜೋಸೆಫ್(Jolly Joseph) ತಾನು ಬಾಯ್ಬಿಟ್ಟ ಸಂಗತಿಗಳು ಏನು.? ಈ ಜಾಲಿ ಜೋಸೆಫ್(Jolly Joseph) ನಡೆಸಿರುವಂತಹ ಮೈನವಿರೇಳಿಸುವಂಥ ಘಟನೆ ಬಗ್ಗೆ ಇವತ್ತಿನ ಒಂದು ಲೇಖನದಲ್ಲಿ ಆಸಕ್ತಿಕರವಾಗಿ ತಿಳಿಯುತ್ತಾ ಹೋಗೋಣ. ಕೊನೆಯವರೆಗೂ ನೋಡಿ.
ಒಂದೇ ಕುಟುಂಬದ ಆರು ಜನರನ್ನ 14 ವರ್ಷಗಳ ಗ್ಯಾಪ್ ಅಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಕೊಂದಂತಹ ವ್ಯಕ್ತಿಯ ಹೆಸರೇ ಜಾಲಿ ಜೋಸೆಪ್(Jolly Joseph). ಈಕೆಯನ್ನ ಎಲ್ಲರೂ ಕೂಡ ಜಾಲಿ ಅಂತಾನೆ ಕರೆಯುತ್ತಿದ್ದರು. ಈ ಜಾಲಿ ತಾನು ಮೂಲತಃ ಕೇರಳದ ಇಡುಕ್ಕಿ ಜಿಲ್ಲೆಯ ಕಾಟಪ್ಪಣ ಎಂಬ ಊರಿನವಳು. ಜೋಸೆಫ್ ಹಾಗು ತೆರೆಸಿಯಮ್ಮ ಎಂಬ ದಂಪತಿಯ ಮಗಳಾದ ಈಕೆ, ಸಾಧಾರಣ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದಳು. ಈ ಜಾಲಿ ಜೋಸೆಫ್(Jolly Joseph) ನ ಪೋಷಕರು ಕೃಷಿ ಮುಂತಾದ ಚಟುವಟಿಕೆಗಳ ನಡೆಸಿ ಹೊಟ್ಟೆಯನ್ನ ಹೊರೆಯುತ್ತಿದ್ದರು. ಇವರದ್ದು ಕ್ರಿಶ್ಚಿಯನ್ ಕುಟುಂಬವಾಗಿತ್ತು.
ಇದನ್ನೂ ಕೂಡ ಓದಿ : ಇದು ಸುಳ್ಳು ಅಂತ ಪ್ರೂವ್ ಮಾಡೋಕೆ ಬಂದೋರೆಲ್ಲ ಸೋತು ಸುಣ್ಣವಾಗಿ ಕೊನೆಗೆ ನಿಜ ಅಂತ ಒಪ್ಪಿಕೊಂಡರು
ತಾನು ಬಡತನದಲ್ಲಿ ಹುಟ್ಟಿದರೂ ಕೂಡ ಆ ಬದುಕಿನ ಸಂಕಷ್ಟಗಳು ಇವ್ಯಾವು ಕೂಡ ಈ ಜಾಲಿ ಜೋಸೆಫ್(Jolly Joseph) ಗೆ ಇಷ್ಟ ಇರಲಿಲ್ಲ. ಹೇಗಾದರೂ ಈ ದರಿದ್ರ ಪರಿಸ್ಥಿತಿ ಹೊರಬಂದು ತಾನು ಕೂಡ ಕೈ ತುಂಬ ಹಣ ಮಾಡಬೇಕು. ತನಗೂ ಕೂಡ ಈ ಐಶ್ವರ್ಯ ಬೇಕು. ಕೊನೆ ಪಕ್ಷ ಆಸ್ತಿ ಇರುವಂತಹ ಯಾರನ್ನಾದ್ರೂ ಹುಡುಕಿ ಅವರನ್ನೇ ಮದುವೆಯಾಗಬೇಕು. ಆ ಒಂದು ಶ್ರೀಮಂತಿಕೆಯನ್ನು ಅನುಭವಿಸಬೇಕು ಅಂತ ಈ ಜಾಲಿ ಜೋಸೆಫ್(Jolly Joseph) ಯೋಚಿಸುತ್ತಿದ್ದಳು. ಆಕೆ ಪ್ರಾಪ್ತ ವಯಸ್ಸಿಗೆ ಬರುತ್ತಿದ್ದ ಹಾಗೇನೇ, ಅಂತಹ ಶ್ರೀಮಂತ ಯುವಕರನ್ನ ಭೇಟಿ ಮಾಡುವುದಕ್ಕೆ ಶುರುಮಾಡುತ್ತಾಳೆ. ಆಗ ಯಾವುದೋ ಒಂದು ಗೃಹ ಪ್ರವೇಶದ ಸಮಾರಂಭವೊಂದರಲ್ಲಿ ಆಕೆಗೆ ಥಾಮಸ್ ಕುಟುಂಬದವರ ಪರಿಚಯ ಆಗುತ್ತೆ. ಟಾಮ್ ಥಾಮಸ್ ಹಾಗು ಅಣ್ಣಮ್ಮ ಥಾಮಸ್ ತಮ್ಮ ಕುಟುಂಬದ ಹಿರಿಯರಾಗಿದ್ದರು. ಇವರು ಆಗರ್ಭ ಶ್ರೀಮಂತರು.
ಹಾಗೆಯೇ ಇವರು ಈ ಜಾಲಿ ಜೋಸೆಫ್(Jolly Joseph) ಅವರ ಕುಟುಂಬದ ದೂರದ ಸಂಬಂಧಿಗಳಾಗಿದ್ದರು. ಇವರು ಮೂಲತಃ ಕೋಝಿಕೋಡ್ ಜಿಲ್ಲೆಯ ಕೊಡತಾಯಿ ಎಂಬಲ್ಲಿ ವಾಸವಿದ್ದರು. ಇವರಿಗೆ ಒಟ್ಟು ಮೂರು ಜನ ಮಕ್ಕಳು, ಅದರಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು. ಇವರ ಹಿರಿಯ ಮಗನ ಹೆಸರು ರಾಯ್ ಥಾಮಸ್(Roy Thomos). ರೊಜೊ ಥಾಮಸ್(Rojo Thomos) ಎನ್ನುವ ಸಹೋದರ ಹಾಗು ರೆಂಜಿ ವಿಲ್ಸನ್ ಎನ್ನುವ ತಂಗಿಯಿದ್ದರು. ಈತನ ಪೋಷಕರು ಸಿರಿವಂತರು ಮಾತ್ರವಲ್ಲದೇ ಉತ್ತಮ ವಿದ್ಯಾವಂತರು, ಉದ್ಯೋಗಸ್ಥರು ಕೂಡ ಆಗಿದ್ದರು. ಈ ಟಾಮ್ ಥಾಮಸ್(Tom Thomos) ಶಿಕ್ಷಣ ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿದ್ದರೆ, ಅಣ್ಣಮ್ಮ ಥಾಮಸ್(Annamma Thomos) ಅಲ್ಲೊಂದು ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.
ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತಿದ್ದಂತಹ ಇವರು ತಮ್ಮ ಮೂರು ಜನ ಮಕ್ಕಳು ಕೂಡ ಉತ್ತಮ ವಿದ್ಯಾಭ್ಯಾಸವನ್ನು ಒದಗಿಸಿ ಸಮಾಜದಲ್ಲಿ ಅವರು ಗೌರವದಿಂದ ಬಾಳುವುದಕ್ಕೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನ ಕಲ್ಪಿಸಿದ್ದರು. ಈ ಕುಟುಂಬಕ್ಕೆ ಸುತ್ತ ಮುತ್ತ ಉತ್ತಮ ಗೌರವವಿತ್ತು. ಹಿರಿಯವರಾದಂತಹ ರಾಯ್ ಥಾಮಸ್ ಸ್ವಂತ ಬ್ಯುಸಿನೆಸ್ ಮಾಡಿ ಮೇಲುಸ್ತರಕ್ಕೆ ಬಂದಿದ್ದರು. ಈ ಜಾಲಿ ಜೋಸೆಫ್ ರ ಕಣ್ಣು ರಾಯ್ ಥಾಮಸ್(Roy Thomos) ಹಾಗು ಅವರ ಬಳಿ ಇದ್ದಂತಹ ಹಣದ ಮೇಲೆ ಬಿತ್ತು. ಅವರನ್ನ ತನ್ನ ಕಡೆ ಸೆಳೆಯುವ ಕಾರಣದಿಂದಾಗಿ ರಾಯ್ ಥಾಮಸ್ ರನ್ನ ಲವ್ ಮಾಡುವಂತಹ ನಾಟಕವನ್ನ ಶುರು ಮಾಡುತ್ತಾಳೆ ಜಾಲಿ ಜೋಸೆಫ್(Jolly Joseph). ರಾಯ್ ಥಾಮಸ್ ಗೆ ತಾನೇ ಒಂದು ಪ್ರೇಮ ಪತ್ರವನ್ನ ಬರೆದಿದ್ದಳು. ಜಾಲಿ ಜೋಸೆಫ್(Jolly Joseph)ಳ ಒಳ ಸಂಚು ಹಾಗು ನಿಜ ಉದ್ದೇಶ ತಿಳಿಯದಂತಹ ರಾಯ್ ಥಾಮಸ್, ಅವಳು ತೋರಿಸಿದಂತಹ ನಾಟಕದ ಪ್ರೀತಿಗೆ ಮರುಳಾಗಿ ತಾನು ಕೂಡ ಜಾಲಿ ಜೋಸೆಫ್(Jolly Joseph)ಳನ್ನ ಇಷ್ಟ ಪಡುವುದಕ್ಕೆ ಶುರು ಮಾಡುತ್ತಾರೆ ರಾಯ್ ಥಾಮಸ್(Roy Thomos).
ಇದನ್ನೂ ಕೂಡ ಓದಿ : Most Mystery Book : ಈ ಪುಸ್ತಕದಲ್ಲಿ ಏನಿದು ಅಂತ ಡಿಕೋಡ್ ಮಾಡೋಕೆ ಹೋದವರೆಲ್ಲ ತಮ್ಮ ಜೀವನದ ಸಮಯವನ್ನೆಲ್ಲಾ ಹಾಳು ಮಾಡಿಕೊಂದರು
ಈ ಒಂದು ಪ್ರೀತಿಯ ವಿಷಯ ರಾಯ್ ಥಾಮಸ್ ನ ಮನೆಯವರಿಗೆ ಗೊತ್ತಾಗುತ್ತದೆ. ಆದರೆ ಅವರಿಗೆ ಈ ಜಾಲಿ ಜೋಸೆಫ್(Jolly Joseph)ಳನ್ನ ತಂತಮ್ಮ ಮನೆಯ ಸೊಸೆಯಾಗಿ ಮಾಡಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ಆದರೆ ರಾಯ್ ಥಾಮಸ್, ಜಾಲಿ ಜೋಸೆಫ್(Jolly Joseph)ಳ ಬಲೆಯಲ್ಲಿ ಸಂಪೂರ್ಣ ಸಿಕ್ಕಿಹಾಕಿಕೊಂಡಿದ್ದ.ಮಗನ ಇಷ್ಟದ ವಿರುದ್ಧ ಹೋಗುವುದಕ್ಕೆ ಮನಸ್ಸಾಗದೇ ಬೇರೆ ವಿಧಿಯಿಲ್ಲದೇ ಅವರು ಈ ಒಂದು ಮದುವೆಯನ್ನ ಒಪ್ಪಿಕೊಳ್ಳುತ್ತಾರೆ. ಜಾಲಿ ಜೋಸೆಫ್(Jolly Joseph) ತಾನು ಮಾಸ್ಟರ್ ಡಿಗ್ರಿ ಪದವೀದರ ಎಂದು ಹೇಳಿದ್ದ ಕಾರಣ ಚೆನ್ನಾಗಿ ಓದಿಕೊಂಡಿರುವಂತಹ ಹೆಣ್ಣು ಮಗಳು ಎಂದು ಅವರು ಈ ಜಾಲಿ ಜೋಸೆಫ್(Jolly Joseph)ಳನ್ನ ಮನೆಯ ಸೊಸೆ ಮಾಡಿಕೊಳ್ಳುವುದಕ್ಕೆ ಒಂದು ಕಾರಣವಾಗಿತ್ತು.
೧೯೯೭ ರಲ್ಲಿ ರಾಯ್ ಥಾಮಸ್ ಹಾಗು ಜಾಲಿ ಜೋಸೆಫ್(Jolly Joseph) ಇಬ್ಬರ ಮಾಡುವೆ ನಡೆಯುತ್ತದೆ. ಮದುವೆಯಾದ ಬಳಿಕ ಜಾಲಿ ಜೋಸೆಫ್(Jolly Joseph) ನಿಧಾನವಾಗಿ ಮನೆಯವರೆಲ್ಲ ಪ್ರೀತಿ, ವಿಶ್ವಾಸವನ್ನ ಗಳಿಸುತ್ತಾ ಹೋಗುತ್ತಾಳೆ.. ರಾಯ್ ಥಾಮಸ್ ರ ತಂಗಿಯಾದ ರೆಂಜಿ ವಿಲ್ಸನ್ ಗೆ ಜಾಲಿ ಜೋಸೆಫ್(Jolly Joseph) ತುಂಬಾ ಹತ್ತಿರವಾಗಿದ್ದಳು. ಮನೆಯವರು ಎಲ್ಲರೂ ಕೂಡ ಅವಳ ವರ್ತನೆಯಲ್ಲಿದ್ದಂತಹ ಮೃದು ನಡೆ, ಸಭ್ಯತೆ. ಈ ಎಲ್ಲವೂ ಕೂಡ ಇಷ್ಟ ಪಡ್ತಾರೆ. ಆದ್ರೆ ಇದೆಲ್ಲ ಜಾಲಿ ಜೋಸೆಫ್(Jolly Joseph) ಅವರನ್ನ ಮರುಳು ಮಾಡುವುದಕ್ಕೆ ತಾನು ಮಾಡಿದಂತಹ ತಂತ್ರ ಮಾತ್ರ ಆಗಿತ್ತು. ಮನೆಯವರ ಪ್ರೀತಿ ಗಳಿಸುವುದಕ್ಕೆ ಹಾಕಿ ಹೂಡಿದಂತಹ ನಾಟಕ ಅಷ್ಟೇ. ಆಕೆ ಮನೆಗೆ ಬಂದ ಕೆಲ ದಿನಗಳ ಬಳಿಕ ಮನೆ ಕೆಲಸ ಮಾಡಿಕೊಂಡು ಕಾಲ ಕಳೆದಿದ್ದ ಜಾಲಿಯನ್ನ ಆಕೆಯ ಅತ್ತೆ ಕೆಲಸಕ್ಕೆ ಹೋಗುವುದಕ್ಕೆ ಸೂಚಿಸಿದ್ದಾರೆ.
ಅಷ್ಟು ಓದಿದಂತಹ ಹೆಣ್ಣು ಮಗಳು ಮನೆಯಲ್ಲಿ ಕಾಲಹರಣ ಮಾಡುವುದು ಸರಿಯಲ್ಲ. ಕೆಲಸಕ್ಕೆ ಹೋಗಿ ಹೊಸ ಜವಾಬ್ದಾರಿ ಹೊಂದಲಿ ಎಂಬುದು ಮನೆಯವರ ಆಶಯ ಆಗಿತ್ತು. ಆದರೆ ಜಾಲಿ ಜೋಸೆಫ್(Jolly Joseph)ಗೆ ಅದು ಇಷ್ಟವಿರಲಿಲ್ಲ. ಕಾರಣಕ್ಕೆ ಅಷ್ಟೊಂದು ಓದಿರಲಿಲ್ಲ. ಹೌದು, ಇಂಟರ್ ಶಿಕ್ಷಣ ಮುಗಿಸಿದ ಜಾಲಿ ಜೋಸೆಫ್(Jolly Joseph) ತಾನು ಮಾಸ್ಟರ್ ಡಿಗ್ರಿ ಓದಿದ್ದೇನೆ ಅಂತ ಸುಳ್ಳು ಹೇಳಿದ್ದಳು. ಆಕೆಗೆ ಯಾವ ಕೆಲಸವನ್ನು ಕೂಡ ಮಾಡದೆ ಮನೆಯಲ್ಲಿದ್ದುಕೊಂಡು ಐಷಾರಾಮಿ ಬದುಕನ್ನು ಅನುಭವಿಸುವುದು ಮಾತ್ರ ಬೇಕಿತ್ತು. ಹೀಗಿರುವಾಗ 1998 ರಲ್ಲಿ ಆಕೆ ಗರ್ಭವತಿಯಾಗುತ್ತಾಳೆ. 1999ರಲ್ಲಿ ಆಕೆಗೆ ಮಗನೊಬ್ಬ ಜನಿಸಿದ. ಅವನಿಗೆ ರೆಮೋ ಅಂತ ಹೆಸರಿಡುತ್ತಾರೆ. ಹೀಗಾಗಿ 1998 ಮತ್ತು 99 ರ ಸಮಯದಲ್ಲಿ ಆಕೆಗೆ ಕೆಲಸಕ್ಕೆ ಹೋಗುವಂತೆ ಒತ್ತಡ ಕಡಿಮೆ ಆಯಿತು.
ಇದನ್ನೂ ಕೂಡ ಓದಿ : Unbelievable Dreams : ಈ ಸಾಧು ಮಾತನ್ನು ಕೇಳಿ ಆ ಜಾಗ ಅಗೆದ ಸರ್ಕಾರಕ್ಕೆ ಎಂಥ ಶಾಕ್ ಕಾದಿತ್ತು ಗೊತ್ತಾ.?
ಇನ್ನು ಆಕೆ ಮಗು ಹುಟ್ಟಿದ ತಕ್ಷಣ ಮುಂದಿನ ಎರಡು ವರ್ಷಗಳವರೆಗೂ ಮಗನ ಲಾಲನೆಯಲ್ಲಿ ಕಾಲ ಕಳೆದಂತಹ ಅವಳಿಗೆ ಈ ಒಂದು ಅವಧಿಯಲ್ಲಿ ಅವಳ ಅತ್ತೆಯಿಂದ ಕೆಲಸಕ್ಕೆ ಹೋಗು ಎಂಬ ಒತ್ತಾಯ ಕೇಳಿಬರಲಿಲ್ಲ. ಆದರೆ ಇದಾಗಿ 2001 ನಂತರ ಮತ್ತೆ ಆಕೆ ಅತ್ತೆ ಈಕೆಗೆ ಈಗಲಾದರೂ ಕೆಲಸಕ್ಕೆ ಹೋಗು ಅಂತ ಸೂಚಿಸುವುದಕ್ಕೆ ಶುರು ಮಾಡಿದ್ರು. ಈ ಜಾಲಿ ಜೋಸೆಫ್ ತಾನು ಎಂ ಕಾಮ್ ಪದವೀಧರ ಎಂದು ಅವರನ್ನ ನಂಬಿಸಿದ್ದಳು. ಯಾವುದೊ ನಕಲಿ ನಕಲಿ ಸರ್ಟಿಫಿಕೇಟ್ ನ್ನ ಫೋರ್ಜರಿ ಮಾಡಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದಳು.
ಅವುಗಳನ್ನ ತನ್ನ ಅತ್ತೆಗೂ ಹತ್ತಿರ ಕೂಡ ತೋರಿಸಿದ್ದಳು. ಈ ಒಂದು ಸಮಯದಲ್ಲಿ ಅತ್ತೆಯಾದಂತಹ ಅಣ್ಣಮ್ಮ ಥಾಮಸ್ ಕೂಡ ಕೂಡ ಕೆಲಸದಿಂದ ನಿವೃತ್ತರಾಗುತ್ತಾರೆ. ಅವರು ಮನೆಯಲ್ಲಿ ಇರುವಾಗ ಜಾಲಿ ಜೋಸೆಫ್(Jolly Joseph) ಕೆಲಸಕ್ಕೆ ಹೋಗುವಂತೆ ಮತ್ತೆ ಮೇಲಿಂದ ಮೇಲೆ ಒತ್ತಾಯ ಬರತೊಡಗಿತ್ತು. ಅವರನ್ನು ನಂಬಿಸುವ ಸಲುವಾಗಿ ನನಗೆ ಹತ್ತಿರದ ಕಾಲೇಜೊಂದರಲ್ಲಿ ಅತಿಥಿ ಶಿಕ್ಷಕಿ ನೌಕರಿ ಸಿಕ್ಕಿದೆ ಅಂತ ತಿಳಿಸಿದ ಜಾಲಿ ಜೋಸೆಫ್(Jolly Joseph), ದಿನವೂ ಬೆಳಗ್ಗೆ ಮನೆಯಿಂದ ಹೊರಟು ಸಂಜೆ ವಾಪಸ್ ಬರ್ತಿದ್ರು. ಆದ್ರೆ ಆಕೆಗೆ ಯಾವ ಕೆಲಸ ಕೂಡ ಸಿಕ್ಕಿರಲಿಲ್ಲ. ಕೊಟ್ಟಾಯಂ ಕಾಲೇಜ್ ನಲ್ಲಿ ತನಗೆ ಕೆಲಸ ಸಿಕ್ಕಿದೆ ಅಂತ ಹೇಳಿ ದಿನವೆಲ್ಲಾ ಎಲ್ಲಿ ಹೋಗುತ್ತಿದ್ದಳೋ ಓನು ಮಾಡುತ್ತಿದ್ದಳೋ, ಏನು ಮಾಡುತ್ತಾ ಕಾಲವನ್ನು ಕಳೆಯುತ್ತಿದ್ದಳೋ ಇನ್ನೂ ಕೂಡ ನಿಗೂಢವಾಗಿ ಉಳಿದು ಹೋಗಿದೆ.
ಈ ಜಾಲಿ ಜೋಸೆಫ್(Jolly Joseph) ಗೋಮುಖವ್ಯಾಘ್ರದಂತಹ ದುಷ್ಟ ಬುದ್ದಿಗೆ ಆ ಮನೆಯಲ್ಲಿ ಮೊದಲು ಬಲಿಯಾಗಿದ್ದು ಆಕೆ ಆದಂತಹ ಅಣ್ಣಮ್ಮ ಥಾಮಸ್. ತಾನು ಹೇಳಿದ ಸುಳ್ಳು ಈಕೆಗೆ ಎಲ್ಲಿ ಗೊತ್ತಾಗುತ್ತದೋ ಎಂಬ ಭಯ ಆ ಜಾಲಿ ಜೋಸೆಫ್(Jolly Joseph) ಗೆ ಇತ್ತು. ಮೇಲಾಗಿ ಈಗ ಈ ಒಂದು ಕೆಲಸದ ನಾಟಕವನ್ನು ತಾನು ಮಾಡುತ್ತಿದ್ದದ್ದೇ ತನ್ನ ಅತ್ತೆಗಾಗಿ. ಆಕೆಯನ್ನ ಮೊದಲು ತೆಗೆದು ಬಿಟ್ರೆ ಒಂದು ದೊಡ್ಡ ಸಮಸ್ಯೆ ಇಲ್ಲದಂತಾಗುತ್ತದೆ ಎನ್ನುವ ಒಂದು ಲೆಕ್ಕ ಅಂತ ಜಾಲಿ ಜೋಸೆಫ್(Jolly Joseph) 2002 ರಲ್ಲಿ ತನ್ನ ಅತ್ತೆಯನ್ನ ಮುಗಿಸುವಂತಹ ಹುನ್ನಾರವನ್ನ ನಡೆಸುತ್ತಾಳೆ. ಈ ಜಾಲಿ ಜೋಸೆಫ್(Jolly Joseph) ಹತ್ತಿರದ ಒಂದು ವೆಟರ್ನರಿ ದವಾಖಾನೆಗೆ ಹೋಗಿ ಮನೆ ಹತ್ತಿರ ಇರುವ ಕೆಲವು ಬೀದಿ ನಾಯಿಗಳಿಗೆ ನವಿಷ ಬೇಕು ಅಂತ ಕೇಳಿ ಪಡೆಯುತ್ತಾಳೆ.
ಅದನ್ನು ತಂದು ದಿನ ಬೆಳಿಗ್ಗೆ ತನ್ನ ಅತ್ತಿಗೆ ಕೊಡುವಂತ ಸೂಪ್ ನಲ್ಲಿ ಬೆರೆಸಿ ಕೊಡುತ್ತಿದ್ದಳು. 2002 ರ ಆಗಸ್ಟ್ 22ನೇ ತಾರೀಖು ಅದನ್ನು ಸೇವಿಸಿದಂತಹ ಅಣ್ಣಮ್ಮ ಅದರಲ್ಲಿದ್ದ ವಿಷದ ಪ್ರಭಾವದಿಂದ ತಕ್ಷಣ ನೆಲಕ್ಕೆ ಕುಸಿದು ಸಾವನ್ನಪ್ಪುತ್ತಾರೆ. ಜಾಲಿ ಜೋಸೆಫ್(Jolly Joseph)ಳ ಮೊದಲ ಕೊಲೆಯ ಸಂಚು ಈ ರೀತಿ ವರ್ಕೌಟ್ ಆಗಿತ್ತು. ವಯಸ್ಸಾದ ಕಾರಣ ಹೃದಯಾಘಾತದಿಂದ ಅವರು ಸಾವನ್ನಪಿರಬಹುದು ಅಂತ ಎಲ್ಲರೂ ಭಾವಿಸುತ್ತಾರೆ. ಇದಾಗಿ ಜಾಲಿ ಜೋಸೆಫ್(Jolly Joseph)ಗೆ ಇಡೀ ಮನೆಯ, ಆಸ್ತಿ-ಪಾಸ್ತಿ ಹಾಗು ಯಜಮಾನಿಕೆಯ ಮೇಲೆ ತನ್ನ ದುಷ್ಟ ಕಣ್ಣು ಬೀಳುತ್ತೆ. ನಂತರ ಆಕೆಯಿಂದ ಬಲಿಯಾಗುವಂತಹ ಮುಂದಿನ ಜೀವ ಆಕೆಯ ಮಾವನವರಾದಂತಹ 66 ವರ್ಷದ ಟಾಮ್ ಥಾಮಸ್.
ಇದನ್ನೂ ಕೂಡ ಓದಿ : ಈ ಏಳು ತಪ್ಪುಗಳನ್ನ ನೀವು ಯಾವತ್ತೂ ಮಾಡೋಕೆ ಹೋಗಲೇಬೇಡಿ – 7 Things the Middle Class Spends Money on That Poor
ಇವರ ಹೆಸರಲ್ಲಿ ಬೇಕಾದಷ್ಟು ಆಸ್ತಿ ಇತ್ತು. ಸುಮಾರು 1600 ಸ್ಕ್ವಾರ್ ಮೀಟರ್ ಅಳತೆಯ ಭೂಮಿ ಇವರ ಹೆಸರಲ್ಲಿತ್ತು. ಅದನ್ನು ತಾನು ಸಾಯುವ ಮೊದಲು ಯುಎಸ್ ನಲ್ಲಿದ್ದಂತಹ ತನ್ನ ಕಿರಿಮಗನಾದಂತಹ ರೊಜೊ ಥಾಮಸ್ ಗೆ ವರ್ಗಾಯಿಸುವುದಕ್ಕೆ ಅವರು ಬಯಸಿದ್ದರು. ಈ ಒಂದು ಆಸ್ತಿ ತನ್ನ ಗಂಡನಿಗೆ ಬಾರದೆ ಅವರ ತಮ್ಮನಿಗೆ ಹೋಗುವ ಬಗ್ಗೆ ಗೊತ್ತಾದಂತಹ ಜಾಲಿ ಜೋಸೆಫ್(Jolly Joseph), ಆ ಆಸ್ತಿಗೆ ಹೇಗಾದರೂ ಮಾಡಿ ತಾನೇ ಒಡತಿ ಆಗಬೇಕು ಅಂತ ಯೋಜನೆ ಹಾಕಿದ್ದಳು. 2008 ರಂದು ಟಾಮ್ ಥಾಮಸ್ ಶ್ರೀಲಂಕಾದ ಕೊಲಂಬೊದಲ್ಲಿ ತಮ್ಮ ಏಕೈಕ ಮಗಳನ್ನು ಕಾಣುವುದಕ್ಕೆ ಹೋಗಿದ್ದರು. ಅವರಿಗೆ ಕರೆ ಮಾಡಿ ತಾನು ಗರ್ಭಿಣಿಯಾಗಿದ್ದೇನೆ. ನಿಮ್ಮನ್ನ ನೋಡಬೇಕು ಅಂತ ಅನಿಸ್ತಿದೆ. ಬೇಗ ಇಲ್ಲಿಗೆ ಬನ್ನಿ ಅಂತ ಹೇಳಿದ ಜಾಲಿ ಜೋಸೆಫ್(Jolly Joseph). ಅವರ ಮಗ ಅಂದ್ರೆ ತನ್ನ ಪತಿರಾಯ ರಾಯ್ ಥಾಮಸ್ ಡ್ರಿಂಕಿಂಗ್ ಹವ್ಯಾಸವನ್ನು ಶುರು ಮಾಡಿದ್ದಾರೆ ಅನ್ನುವ ಸಂಗತಿಯನ್ನ ಕೂಡ ತಿಳಿಸಿದ್ದಳು.
ಮಗನ ಆರೋಗ್ಯದ ಬಗ್ಗೆ ಕಳವಳಕ್ಕೀಡಾದಂತಹ ಅವರು ತಕ್ಷಣದಿಂದ ಶ್ರೀಲಂಕಾದಿಂದ ಹೊರಟು ಬರುತ್ತಾರೆ. ಮನೆಗೆ ಬಂದ ಮಾವನಿಂದ ತನ್ನ ಗಂಡನಿಗೆ ಬೇಕಾದ ಆಸ್ತಿಯನ್ನು ಬರೆಸಿಕೊಳ್ಳುವಲ್ಲಿ ಹೇಗೋ ಯಶಸ್ವಿಯಾದ ಜಾಲಿ ಜೋಸೆಫ್(Jolly Joseph), 2008 ರ ಅದೇ ವರ್ಷ ಅವನನ್ನು ಕೂಡ ಮುಗಿಸುವುದಕ್ಕೆ ಸ್ಕೆಚ್ ಹಾಕುತ್ತಾಳೆ. ಈ ಮುನ್ನ ತಾನು ಎಲ್ಲಿ ಸೈನಡ್ ನ್ನ ಪಡೆದಿದ್ದಳೋ, ಅದೇ ಒಂದು ಸ್ಥಳದಿಂದ ಅದನ್ನು ಮತ್ತೆ ಪಡೆದು ಆಗಸ್ಟ್ 27ನೇ ತಾರೀಖು ಅಂದ್ರೆ ಸರಿಯಾಗಿ ಆಕೆ ಅತ್ತೆಯನ್ನ ಕೊಂದ ಆರು ವರ್ಷಗಳ ನಂತರ ತನ್ನ ಮಾವನಿಗೂ ಕೂಡ ಅವರು ಸೇವಿಸುವಂತಹ ಪದಾರ್ಥಗಳಲ್ಲಿ ಸೈನಡ್ ನ್ನ ಬೆರೆಸಿ ಅವರನ್ನು ಕೂಡ ಕೊಲ್ಲುತ್ತಾಳೆ.
ಜಾಲಿ ಜೋಸೆಫ್(Jolly Joseph)ಳ ಅಕ್ರಮ ಸಂಬಂಧ :-
ಜಾಲಿ ಜೋಸೆಫ್(Jolly Joseph)ಗೆ ಮ್ಯಾಥ್ಯೋ ಎಂಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇತ್ತು. ಈತನೇ ಜಾಲಿ ಜೋಸೆಫ್(Jolly Joseph)ಗೆ ಸೈನಡ್ ನ್ನ ಸಪ್ಲೈ ಮಾಡ್ತಿದ್ದದ್ದು, ನಮ್ಮಿಬ್ಬರ ಸಂಬಂಧ ಮಾವನಿಗೆ ಗೊತ್ತಾಗಿದೆ. ಹೀಗಾಗಿ ಅವರನ್ನು ಮುಗಿಸಬೇಕು ಅಂತ ಅವನನ್ನ ಕನ್ವಿನ್ಸ್ ಮಾಡಿದಂತಹ ಈ ಜಾಲಿ ಜೋಸೆಫ್(Jolly Joseph), ಅವನಿಂದ ಸೈನಡ್ ಪಡೆದು ಮಾವನನ್ನ ಕೊಂದು ಹಾಕಿದ್ದಳು. ಇದಾದ ನಂತರ ಅವಳ ಸ್ವಾರ್ಥಕ್ಕೆ ಬಲಿಯಾಗಿದ್ದು ಅವಳ ಗಂಡ ರಾಯ್ ಥಾಮಸ್. ಈ ಹಿಂದೆ ತನ್ನಿಂದಾಗಿಯೇ ನಡೆದಿದ್ದಂತಹ ಆ ಎರಡು ಹತ್ಯೆಗಳು ಯಾರಲ್ಲೂ ಕೂಡ ಯಾವುದೇ ರೀತಿಯ ಅನುಮಾನವನ್ನ ಮೂಡಿಸಿರಲಿಲ್ಲ. ಆದರೆ 2011 ರಲ್ಲಿ ಸಂಭವಿಸಿದಂತಹ ಈಕೆಯ ಪತಿಯ ಹತ್ಯೆ ಮೊದಲ ಬಾರಿಗೆ ಕೆಲವೊಂದಿಷ್ಟು ಹತ್ಯೆಯ ಕುರಿತಾದ ಅನುಮಾನಗಳನ್ನು ಹುಟ್ಟಿಸಿತ್ತು.
ಇದನ್ನೂ ಕೂಡ ಓದಿ : ಸಂಸಾರದ ಬಂಡಿಯಲ್ಲಿ ಒಂದು ಚಕ್ರ ದಾರಿ ತಪ್ಪಿದ್ರೆ ಏನಾಗುತ್ತೆ ಅನ್ನೋಕೆ ಇದೇ ಉದಾಹರಣೆ.!
ಟಾಮ್ ಥಾಮಸ್ ತಾವು ಸಾಯುವ ಮುನ್ನ ತಮ್ಮೆಲ್ಲಾ ಆಸ್ತಿಗಳನ್ನು ಕೂಡ ಮಗ ರಾಯ್ ಥಾಮಸ್ ನ ಹೆಸರಿಗೆ ವರ್ಗಾಯಿಸಿದ್ದರು. ಹೀಗಾಗಿ ಈಗ ಗಂಡನ ಮುಗಿಸಿದರೆ ಆ ಎಲ್ಲ ಸಂಪತ್ತನ್ನು ಕೂಡ ತಾನೊಬ್ಬಳೇ ಅನುಭವಿಸಬಹುದು ಎಂಬ ಕೆಟ್ಟ ಯೋಚನೆ ಈ ಜಾಲಿ ಜೋಸೆಫ್(Jolly Joseph)ಳದಾಗಿತ್ತು. 2011 ರ ಅಕ್ಟೋಬರ್ ಮೂವತ್ತೊಂದನೇ ತಾರೀಖು ರಾಯ್ ಥಾಮಸ್ ತನ್ನ ಮನೆಯ ಬಾತ್ ರೂಂನಲ್ಲಿ ಮೇಲೆ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಸ್ವಸ್ಥನಾಗಿ ಮಲಗಿದ್ದ. ಅವನಿದ್ದಂತಹ ಬಾತ್ ರೂಮ್‌ನ ಚಿಲಕ ಒಳಗಿನಿಂದ ಲಾಕ್ ಆಗಿತ್ತು. ಅದನ್ನ ಒಡೆದು ಅವನನ್ನ ಆಸ್ಪತ್ರೆಗೆ ಸಾಗಿಸುತ್ತಾರೆ. ಅವನಾಗಲೇ ತೀರಿಹೋಗಿದ್ದಾನೆ ಅಂತ ವೈದ್ಯರು ದೃಢಪಡಿಸಿದರು. ಈ ಒಂದು ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ರಾಯ್ ಥಾಮಸ್ ನ ಕೆಲ ಸಹೋದರರು ಹಾಗು ಅವನ ಅಂಕಲ್ ಆಗಿದ್ದಂತಹ ಮ್ಯಾಥ್ಯೋ ಎಂಬುವರಿಗೆ ಈ ಒಂದು ಸಾವಿನ ಬಗ್ಗೆ ಅನುಮಾನ ಬಂದು, ಇದರ ದೇಹ ಪರೀಕ್ಷೆ ನಡೆಸಬೇಕು ಅಂತ ಅವರು ಆಗ್ರಹಿಸಿದ್ರು. ದೇಹ ಪರೀಕ್ಷೆಯಲ್ಲಿ ರಾಯ್ ಥಾಮಸ್ ದೇಹದಲ್ಲಿ ಸೈನಡ್ ಅಂಶ ಇರುವುದು ಪತ್ತೆಯಾಗಿತ್ತು. ಅವರೆಲ್ಲರ ಅನುಮಾನದ ದೃಷ್ಟಿ ಇದೀಗ ಜಾಲಿ ಜೋಸೆಫ್(Jolly Joseph)ನ ಮೇಲೆ ಬಿದ್ದಿತ್ತು. ಆದರೆ ತನ್ನ ಪತಿ ಈ ಮೊದಲೇ ಕುಡಿತದ ಚಟ ಇದ್ದಂತಹ ವ್ಯಕ್ತಿ, ಅವನು ಖಿನ್ನತೆಯಿಂದ ಬಳಲುತ್ತಿದ್ದ, ಅವನ ಸಾವನ್ನ ಅವನೇ ಈ ರೀತಿ ತಂದುಕೊಂಡಿದ್ದಾನೆ ಅಂತ ಆಕೆ ಪೊಲೀಸರಿಗೆ ತಿಳಿಸಿ, ಅವರೆಲ್ಲರನ್ನು ನಂಬುವಂತೆ ಮಾಡಿದ್ದಳು.
ಈ ಒಂದು ಸಾವಿಗೆ ಆಕೆ ಕೊಟ್ಟ ವಿವರಣೆ. ಚೆನ್ನಾಗಿ ಹೊಂದಾಣಿಕೆಯಾದ್ದರಿಂದ ಪೊಲೀಸ್ ಕೂಡ ಅದನ್ನ ನಿಜ ಇರಬಹುದು ಅಂತ ನಂಬಿ ಹೆಚ್ಚಿನ ಯಾವುದೇ ತನಿಖೆಯನ್ನ ನಡೆಸದೇ ಈ ಒಂದು ಕೇಸನ್ನ ಕ್ಲೋಸ್ ಮಾಡಿದ್ರು. ಈಗ ಜಾಲಿ ಜೋಸೆಫ್(Jolly Joseph) ಇಡೀ ಮನೆಯ ಯಜಮಾನ ಆಗುವುದರ ಜೊತೆಗೆ ಲ್ಯಾಂಡ್ ಲಾಡ್ ಕೂಡ ಆಗಿದ್ದಳು. ಆದರೂ ಕೂಡ ಅವಳಲ್ಲಿದ್ದಂತಹ ರಕ್ತದಾಹ ನಿಲ್ಲಲಿಲ್ಲ. ಆದರೆ ಅವಳು ಕೊಟ್ಟಂತಹ ವಿವರಣೆಯಿಂದ ಮನೆಯ ಅನೇಕರು ತೃಪ್ತರಾಗಿರಲಿಲ್ಲ. ಆಕೆ ಗಂಡನ ಅಂಕಲ್ ಆದಂತ 68 ವರ್ಷದ ಮ್ಯಾಥ್ಯು ಹಾಗು ಅವರ ಪರಿವಾರಕ್ಕೆ ಜಾಲಿ ಜೋಸೆಫ್(Jolly Joseph)ಳ ಮೇಲೆ ಅನುಮಾನ ಇದ್ದೇ ಇತ್ತು.
ಇದನ್ನೂ ಕೂಡ ಓದಿ : Son And His Mother : ನಮ್ಮ ಜನ ಎಷ್ಟು ಹಾಳಾಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಅನ್ನಿಸುತ್ತೆ
ಅವರು ಈ ಬಗ್ಗೆ ಹೆಚ್ಚಿನ ತನಿಖೆ ಆಗಲಿ ಅಂತ ಪೊಲೀಸ್ ಗೂ ಕೂಡ ಒತ್ತಡವನ್ನು ತರುತ್ತಿದ್ದರು. ಮನೆಯಲ್ಲಿ ಆದಂತಹ ಮೂರು ಸಾವುಗಳು ಕೂಡ ಸಹಜವಾಗಿ ಕಾಣ್ತಿಲ್ಲ. ಇದರಲ್ಲಿ ಜಾಲಿ ಜೋಸೆಫ್(Jolly Joseph)ಳ ಕೈವಾಡ ಇರಬಹುದು ಅಂತ ನಮಗೆ ಗುಮಾನಿ ಇದೆ ಅಂತ ಅವರು ದೂರಿದ್ದರು. 2014 ರಲ್ಲಿ ಒಂದು ದಿನ ಮ್ಯಾಥ್ಯುರವರು ದಿನವೂ ಸಂಜೆ ಸೇವಿಸಿದಂತಹ ವಿಸ್ಕಿಯಲ್ಲಿ ಸೈನೈಡ್ ಬೆರೆಸಿ ಜಾಲಿ ಜೋಸೆಫ್(Jolly Joseph) ಅದನ್ನ ಅವರಿಗೆ ಕೊಟ್ಟಳು. ಅದನ್ನು ಕುಡಿದ ತಕ್ಷಣ ನೆಲಕ್ಕೆ ಕುಸಿದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕಲಿಲ್ಲ. ಜಾಲಿ ಜೋಸೆಫ್(Jolly Joseph)ಳ ಬಗ್ಗೆ ಮೊದಲ ಬಾರಿಗೆ ಅನುಮಾನಿಸಿದಂತಹ ಆ ಮನೆಯ ಹಿರಿಯ ಸಂಬಂಧಿ ಆದ ಮ್ಯಾಥ್ಯು ಅವರ ಜೀವ ಕೂಡ ಹಾರಿಹೋಗಿತ್ತು. ಇಷ್ಟಾದರೂ ಕೂಡ ಜಾಲಿ ಜೋಸೆಫ್(Jolly Joseph)ಳ ದುಷ್ಟಬುದ್ಧಿ ಅವಳಿಂದ ದೂರಾಗಲಿಲ್ಲ.
ಇವಳಿಗೆ ಶಾಜು ಎಂಬ ವ್ಯಕ್ತಿಯ ಜೊತೆ ಇನ್ನೊಂದು ಅಕ್ರಮ ನಂಟಿತ್ತು. ಇವನು ಇವಳ ಗಂಡ ರಾಯ್ ಥಾಮಸ್ ನ ಕಸಿನ್. ಈ ಶಾಜಿಗೆ ಸಿಲ್ಲಿ ಎನ್ನುವ ಪತ್ನಿ ಹಾಗು ಒಬ್ಬಳು ಮಗಳು ಕೂಡ ಇದ್ದಳು. ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಈ ಇಬ್ಬರು ಕೂಡ ಅಡ್ಡಿ ಅಂತ ಗೊತ್ತಾದ ಜಾಲಿ ಜೋಸೆಫ್(Jolly Joseph) ಮೊದಲು ಅವನ ಮಗಳನ್ನ ಮುಗಿಸುವುದಕ್ಕೆ ಯೋಚಿಸಿದಳು. 2014 ರ ಮೇ ಒಂದನೇ ತಾರೀಕು ಸೈನಡ್ ಮಿಶ್ರಿತ ಪದಾರ್ಥವನ್ನು ಅವನ ಮಗಳಿಗೆ ಕೊಟ್ಟು ಜಾಲಿ ಜೋಸೆಫ್(Jolly Joseph) ಆ ಮುಗ್ಧ ಹುಡುಗಿಯ ಜೀವವನ್ನು ಕೂಡ ನಿರ್ದಾಕ್ಷಿಣ್ಯವಾಗಿ ತೆಗೆದಿದ್ದಳು. ಈ ಒಂದು ಪದಾರ್ಥ ಸೇವಿಸಿದ ತಕ್ಷಣ ಆಕೆ ಸಾಯಲಿಲ್ಲ. ಕೆಲವು ದಿನಗಳ ಬಳಿಕ ಅಸ್ವಸ್ಥಳಾದಂತಹ ಆ ಹುಡುಗಿ ಜೀವನ್ಮರಣದ ಜೊತೆ ಹೋರಾಟ ನಡೆಸಿ ಕೊನೆಗೂ ಗೆಲ್ಲಲಾರದೇ ಕಣ್ಮರೆಯಾದಳು. ಈಗ ಜಾಲಿ ಜೋಸೆಫ್(Jolly Joseph) ಶಾಜುವಿನ ಪತ್ನಿಯಾದಂತಹ ಸಿಲ್ಲಿಯನ್ನು ಕೂಡ ಕೊಲ್ಲುವುದಕ್ಕೆ ಸ್ಕೆಚ್ ಹಾಕಿದ್ದಳು.
ಅದರಂತೆ 2016 ರ ಒಂದು ದಿನ ಸಿಲ್ಲಿಗೂ ಕೂಡ ಸೈನಡ್ ಕೊಟ್ಟು ಅವಳನ್ನ ಕೊಂದು ಹಾಕಿದ್ದಳು. ಸಿಲ್ಲಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಂತಹ ಜಾಲಿ ಜೋಸೆಫ್(Jolly Joseph) ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಡೆದುಕೊಂಡಿದ್ದಳು. ಈ ರೀತಿಯಾಗಿ 14 ವರ್ಷಗಳ ಅವಧಿಯಲ್ಲಿ ಒಂದೇ ಕುಟುಂಬದ ಆರು ಜನರನ್ನ ಬರ್ಬರವಾಗಿ ಕೊಂದಂತಹ ಈ ಕಿಲ್ಲರ್ 2017 ರಲ್ಲಿ ಈ ಶಾಜುವನ್ನ ಎರಡನೇ ಮದುವೆ ಆಗುತ್ತಾಳೆ. ಈಕೆಯ ವರ್ತನೆ ಬಗ್ಗೆ ನಾದಿನಿ ರೆಂಜಿ ಥಾಮಸ್ ಹಾಗು ಬಾಮೈದ ರೊಜೊ ಥಾಮಸ್, ಇವರಿಬ್ಬರಿಗೂ ಕೂಡ ಬಲವಾದ ಶಂಕೆ ಇತ್ತು. ಈ ಸಾವುಗಳ ಬಗ್ಗೆ ಆಕೆ ಕೊಟ್ಟಂತಹ ಯಾವ ವಿವರಣೆ ಕೂಡ ಅವರಿಗೆ ಒಪ್ಪಿತ ಆಗಲಿಲ್ಲ.
ಇದನ್ನೂ ಕೂಡ ಓದಿ : One Side Love : ಲವ್ ನನಗೆ ಇಷ್ಟ ಇಲ್ಲ ಅಂದಿದ್ದಕ್ಕೆ ಈ ರಾಕ್ಷಸ ಏನು ಮಾಡಿದ್ದ ಗೊತ್ತಾ.? ಕೊನೆಗೆ ಆತ ಏನಾದ ಗೊತ್ತಾ.?
ಜಾಲಿ ಜೋಸೆಫ್ ಳ ಬಂಧನ :-
ಕೊನೆಗೆ 2019 ರ ಜೂನ್‌ನಲ್ಲಿ ರೊಜೊ ಕೊನೆಗೂ ಈ ಬಗ್ಗೆ ಮೌನ ಮುರಿದು ಸ್ಟೇಷನ್ಗೆ ಹೋಗಿ ಜಾಲಿ ಜೋಸೆಫ್(Jolly Joseph)ಯ ಬಗ್ಗೆ ತನ್ನ ಅನುಮಾನವನ್ನ ತಿಳಿಸಿ, ಈ ಎಲ್ಲ ಶವಗಳ ಪರೀಕ್ಷೆ ಮತ್ತೊಮ್ಮೆ ನಡೆಯಲೇಬೇಕು ಅಂತ ಆಗ್ರಹಿಸುತ್ತಾರೆ. ಅವರ ದೂರಿನ ಅನ್ವಯ ಮತ್ತೆ ಆ ಶವಗಳ ಪರೀಕ್ಷೆ ನಡೆದಾಗ ಅವೆಲ್ಲವುಗಳಲ್ಲೂ ಕೂಡ ಸೈನಡ್ ಅಂಶ ಇದ್ದದ್ದು ಬೆಳಕಿಗೆ ಬರುತ್ತೆ. 2019 ರ ಅಕ್ಟೋಬರ್ ನಲ್ಲಿ ಜಾಲಿ ಜೋಸೆಫ್(Jolly Joseph)ಳನ್ನ ಬಂಧಿಸಿ ಈ ಬಗ್ಗೆ ವಿಚಾರಣೆ ನಡೆಸಿದಾಗ, ಆಕೆ ಈ ಸಾವಿನ ಬಗ್ಗೆ ಒಪ್ಪಿಕೊಂಡಿದ್ದಳು. ಈ ಹತ್ಯೆಗಳನ್ನ ತಾನು ಯಾಕೆ ಮತ್ತು ಹೇಗೆ ಮಾಡಿದೆ. ಹಾಗು ಯಾರ ಸಹಾಯದಿಂದ ಈ ಹತ್ಯೆಗಳನ್ನ ಮಾಡಿದೆ ಅಂತ ಸವಿವರವಾಗಿ ಪೋಲೀಸರ ತನಿಖೆಯಲ್ಲಿ ತಿಳಿಸಿದ್ದಳು. ಅವಳ ವಿವರಣೆ ಹಾಗು ಉದ್ದೇಶಗಳ ಬಗ್ಗೆ ಕೇಳಿದಂತಹ ಪೊಲೀಸರೇ ಒಂದು ಕ್ಷಣ ದಿಗ್ಭ್ರಮೆಯಾಗಿದ್ದರು. ಅವಳಿಗೆ ಸೈನಡ್ ಸಪ್ಲೈ ಮಾಡುತ್ತಿದ್ದಂತಹ ಅವಳ ಲವರ್ ಮ್ಯಾಥ್ಯು ವನ್ನು ಕೂಡ ಅರೆಸ್ಟ್ ಮಾಡಲಾಯಿತು. ಇನ್ನು ಆರು ಜನರನ್ನ ನಿರ್ಧಯವಾಗಿ ಕೊಂದಂತಹ ಜಾಲಿ ಜೋಸೆಫ್(Jolly Joseph)ಳ ಅನೇಕ ಅಪೀಲ್ ಗಳು ಕೋರ್ಟ್ನಿಂದ ಹಲವು ಸಲ ರಿಜೆಕ್ಟ್ ಆಗಿದೆ. ಇವತ್ತಿಗೂ ಕೂಡ ಅವಳು ಹಾಗು ಮ್ಯಾಥ್ಯು ಇಬ್ಬರೂ ಕೂಡ ಜೈಲಿ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ.
ಕೊಡತಾಯಿಯ ಮನೆಯ ಸೊಸೆಯದಂತಹ ಈ ಮಹಾತಾಯಿ ಮಾಡಿದಂತಹ ಈ ಘನಂದಾರಿ ಕೆಲಸಗಳ ಬಗ್ಗೆ ಇಡೀ ಕೇರಳದಾದ್ಯಂತ ಚರ್ಚೆ ನಡೆದಿತ್ತು. ಸ್ನೇಹಿತರೇ, ಇಂತಹ ದುರುಳ ಉದ್ದೇಶವಿರುವ ಜಾಲಿಯಂತಹ ಹೆಣ್ಣು ಮಕ್ಕಳು ಯಾರದ್ದಾದರೂ ಮನೆಗೆ ಕಾಲಿಟ್ಟರೆ ಆ ಮನೆ ಯಾವ ರೀತಿ ಸರ್ವ ನಾಶವಾಗುತ್ತೆ ಎನ್ನುವುದಕ್ಕೆ ಈ ಜಾಲಿಯ ಇಡೀ ಸ್ಟೋರಿ ಅತ್ಯುತ್ತಮ ಉದಾಹರಣೆಯಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.