ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಅಪರಾಧಿಗಳಿಗೆ ಅವರ ತಪ್ಪಿನ ಅನುಸಾರ ಶಿಕ್ಷೆನ ವಿಧಿಸೋರು ನ್ಯಾಯಾಧೀಶರಾಗಿರುತ್ತಾರೆ. ಕೆಲವೊಂದು ಕೇಸ್ ಗಳಲ್ಲಿ ಅವರು ಮಾಡಿದಂತಹ ಘೋರ ತಪ್ಪಿಗೆ ಅವರಿಗೆ ನೇಣಿಗೆ ಏರಿಸುವಂತಹ ಶಿಕ್ಷೆಯನ್ನ ಈ ನ್ಯಾಯಾಧೀಶರು ಪ್ರಕಟಿಸುತ್ತಾರೆ. ಆದರೆ ಭಾರತ ದೇಶದಲ್ಲಿ ಮೊಟ್ಟ ಮೊದಲ ಭಾರಿಗೆ ಅದೇ ನ್ಯಾಯಾಧೀಶರು ಗಲ್ಲಿಗೆ ಏರಿದರು ಅಂದರೆ ನೀವು ನಂಬಲೇ ಬೇಕು. ಇದು ನಮ್ಮ ಭಾರತ ದೇಶದಲ್ಲಿ ನಡೆದಂತಹ ಮೊಟ್ಟ ಮೊದಲ ಹಾಗು ಕೊನೆಯ ಘಟನೆ ಕೂಡ ಹೌದು, ಇನ್ನೂ ಒಬ್ಬ ನ್ಯಾಯಾಧೀಶರು ಗಲ್ಲಿಗೆ ಎರಿದ್ರ? ಏನಿದು ವಿಚಿತ್ರವಾದಂತಹ ಕೇಸ್ ನಿಜಕ್ಕೂ ಇದು ಎಲ್ಲಿ ನಡೆದದ್ದು ಇದಕ್ಕೆ ಸಂಬಂದಿಸಿದ ರೋಚಕ ಕಥೆಯನ್ನ ಓದುತ್ತ ಹೋಗೋಣ.
Table of Contents
ಏನಿದು ಘಟನೆ :-
೧೯೬೯-೭೦ ರ ದಶಕದಲ್ಲಿ ಅಸ್ಸಾಂ ರಾಜ್ಯದ ದುಬ್ರಿ ಎಂಬ ನಗರದಲ್ಲಿ ನ್ಯಾಯಾಧೀಶರಾಗಿ ಸೇವೆಯನ್ನ ಸಲ್ಲಿಸುತಿದಂತಹ ಉಪೇಂದ್ರನಾಥ್ ರಾಜ್ ಖೋವಾ ತಮ್ಮ ಪರಿವಾರದ ಸಹಿತ ಅಲ್ಲಿ ವಾಸವಿದ್ದರು. ಇವರಿಗೆ ಇಲ್ಲಿ ಒಳ್ಳೆಯ ಸಾಮಾಜಿಕ ಸ್ಥಾನ ಮಾನ ಹಾಗೂ ಗೌರವ ಇತ್ತು. ಆರಂಭದಲ್ಲಿ ಲಾ ಓದಿ ವಕೀಲರಾಗಿದ್ದವರು ಅವರು ಒಂದಷ್ಟು ವರ್ಷ ವಕೀಲರಾಗಿ ಸೇವೆಯನ್ನ ಸಲ್ಲಿಸಿ ನಂತರ ನ್ಯಾಯಾಧೀಶರಾಗಿ ಬಡ್ತಿಯನ್ನ ಪಡೆದು ಅಸ್ಸಾಂ ನ ಹಲವು ಭಾಗಗಳಲ್ಲಿ ದುಡಿದರು ಕೊನೆಗೆ ಅವರನ್ನ ಈ ದುಬ್ರಿ ಎಂಬ ಟೌನ್ ಗೆ ವರ್ಗಾವಣೆಯನ್ನ ಮಾಡಲಾಯಿತು. ೧೬೯೬ ರ ಕೊನೆಯಲ್ಲಿ ಪರಿವಾರ ಸಹಿತ ಇಲ್ಲಿಗೆ ಬಂದಂತ ಅವರಿಗೆ ಅಲ್ಲೊಂದು ಸರ್ಕಾರೀ ಕ್ವಾಟರ್ಸ್ ಕೂಡ ಸಿಕ್ಕಿತು.
೧೯೭೦ ರಲ್ಲಿ ಅವರು ಸೇವೆಯಿಂದ ನಿವೃತ್ತಿ ರಾಗುವವರು ಇದ್ದರು. ಅವರಿಗೆ ಒಬ್ಬಳು ಮಡದಿ ಹಾಗೂ ೩ ಮಕ್ಕಳು ಇದ್ದರು. ಮೂವರು ಕೂಡ ಹೆಣ್ಣು ಮಕ್ಕಳೇ ಮೊದಲ ಮಗಳಿಗೆ ಮದುವೆ ಮಾಡಿದ್ದರು. ಇನ್ನಿಬ್ಬರು ಓದುತ್ತ ಇದ್ದರು. ಈ ರೀತಿ ಇದ್ದಾಗ ಅವರು ತಾವು ಇದ್ದಂತಹ ಕ್ವಾಟರ್ಸ್ ನ ಶೌಚಾಲಯದ ಎದುರಿಗೆ ಇದ್ದಂತಹ ಮರವೊಂದರ ಬೃಹತ್ ಕೊಂಬೆಯನ್ನ ಕಡಿಯುವಂತೆ ಅವರು ಅಲ್ಲಿದಂತಹ ಕೆಲಸಗಾರರಿಗೆ ಹೇಳಿದರು. ನಂತರ ಆ ಮರವನ್ನ ಕಡೆದು ಅಲ್ಲೊಂದು ಹಳ್ಳವನ್ನ ಮಾಡಿದರು. ಇದನ್ನ ಶೌಚದ ಬಿಟ್ಟ ನಿರ್ಮಿಸ್ತಾ ಇದ್ದೇವೆ ಎಂದು ಆ ಕೆಲಸಗಾರರಿಗೆ ಹೇಳಿದರು. ಇದಾದ ಮೇಲೆ ಅದರ ಪಕ್ಕದಲ್ಲೇ ಅಂತಹದ್ದೇ ಅಗಲವಾದಂತಹ ಹಳ್ಳವನ್ನ ರಚಿಸಿಕೊಳ್ಳುತ್ತಾರೆ.
ಇದನ್ನೂ ಕೂಡ ಓದಿ : ಈ ಏಳು ತಪ್ಪುಗಳನ್ನ ನೀವು ಯಾವತ್ತೂ ಮಾಡೋಕೆ ಹೋಗಲೇಬೇಡಿ – 7 Things the Middle Class Spends Money on That Poor
ಕ್ವಾಟಸ್ರ್ ನ ಆವರಣದಲ್ಲಿ ಅವರು ಯಾಕೆ ಇಂತಹ ಹಳ್ಳಗಳನ್ನ ರಚಿಸಿಕೊಂಡಿದ್ದಾರೆ ಅಂತ ಮಾತ್ರ ಯಾರಿಗೂ ಗೊತ್ತಾಗಲಿಲ್ಲಾ. ಇವರ ಕೊನೆಯ ಇಬ್ಬರು ಹೆಣ್ಣು ಮಕ್ಕಳು ದೂರದ ಊರುಗಳಲ್ಲಿ ವ್ಯಾಸಂಗ ಮಾಡುತ್ತಾಯಿದ್ದರು. ೧೯೭೦ ರ ಫೆಬ್ರವರಿಯ ಮೊದಲವಾರದಲ್ಲಿ ಮನೆಯಲ್ಲಿ ಸರಸ್ವತಿ ಪೂಜೆ ಮಾಡುವುದಾಗಿ ಹೇಳಿ ಇವರು ತಮ್ಮ ಹಿರಿ ಮಗಳನ್ನ ಮನೆಗೆ ಕರೆಸಿಕೊಂಡಿದ್ದರು. ಆವತು ರಾತ್ರಿ ೧೦ ಗಂಟೆ ವರೆಗೂ ಇವರೆಲ್ಲಾ ರಾತ್ರಿ ಡಿನ್ನರ್ ಮುಗಿಸಿ ಮಾತಾಡಿಕೊಂಡು ಸಹಜವಾಗಿ ಇದದ್ದನ್ನ ಆ ಮನೆ ಕೆಲಸಗಾರರು ನೋಡಿದ್ದರು. ಆ ಸಂಜೆ ತಂದೆ ಉಪೇಂದ್ರನಾಥ್ ಅವರು ಕೆಲಸಗಾರರಿಗೆಲ್ಲ ಪೂಜೆಯ ಖರ್ಚಿಗೆಂದು ಸ್ವಲ್ಪ ಹಣವನ್ನ ಕೊಟ್ಟು ಹೊರಗಡೆ ಕಳಿಸಿದ್ರು. ಬೆಳಿಗ್ಗೆ ಎಂದಿನಂತೆ ಆ ಕೆಲಸಗರು ಕೆಲಸಕ್ಕೆ ಬಂದಾಗ ಇಡೀ ಮನೆಯಲ್ಲಿ ಈ ಜಡ್ಜ್ ಸಾಹೇಬ್ ಒಬ್ಬರೇ ಇದ್ದರು. ಇವರ ಪತ್ನಿ ಹಾಗು ಮಗಳು ಎಲ್ಲಿ, ಇವರೆಲ್ಲ ರಾತ್ರಿ ಒಟ್ಟಿಗೆ ಇದ್ದರಲ್ಲ ಅಂತ ಅವರು ಚಿಂತಿಸಿದ್ರು.
ಈ ಬಗ್ಗೆ ಯಾರೋ ಒಬ್ಬರು ಅವರೆಲ್ಲ ಎಲ್ಲಿ ಹೋದರು ಅಂತ ಕೇಳಿದಾಗ ನ್ಯಾಯಾಧೀಶರು ತಮ್ಮ ಪತ್ನಿಯು ಉಷಾರಿಲ್ಲಾ ಹೀಗಾಗಿ ಆಕೆಯ ಜೊತೆ ನನ್ನ ಮಗಳು ಕೂಡ ಊರಿಗೆ ಹೋಗಿದ್ದಾರೆ ಅಂತ ಹೇಳುತ್ತಾರೆ. ಏನೋ ಇರ್ಬಹುದು ಏನೋ ಅಂತ ಆ ಆಳುಗಳು ಹೆಚ್ಚಿಗೆ ಏನು ವಿಚಾರಿಸದೆ ತಮ್ಮ ಕೆಲಸಗಳ್ಳಿ ನಿರತರಾಗುತ್ತಾರೆ. ಮನೆಯ ಹೊರಗಡೆ ನಿನ್ನೆ ವರೆಗೂ ಬಾಯಿಯನ್ನ ತೆರೆದು ಕೊಂಡಿದಂತಹ ಆ ಹಳ್ಳಗಳಲ್ಲಿ ಒಂದು ಹಳ್ಳ ಅವತ್ತು ಸಂಪೂರ್ಣವಾಗಿ ಮುಚ್ಚಲ್ ಪಟ್ಟಿತ್ತು. ಒಂದು ಮಾತ್ರ ಕಾಳಿ ಇತ್ತು. ಇದು ಕೂಡ ನೌಕರರಿಗೆ ಯಾಕೆ ಅಂತ ಅರ್ತ ಆಗಲಿಲ್ಲಾ. ಅದರ ಬಗ್ಗೆ ಈ ನ್ಯಾಯಾಧೀಶರಲ್ಲಿ ಕೇಳುವಂತ ಧೈರ್ಯ ಕೂಡ ಇರಲಿಲ್ಲಾ. ಈ ನೌಕರರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸಗಳಲ್ಲಿ ತಾವು ನಿರತರಾದರು. ಇದಾಗಿ ಮರು ದಿನ ಈ ನ್ಯಾಯಧೀಶರು ತಮ್ಮ ಇಬ್ಬರು ಕಿರಿ ಮಕ್ಕಳನ್ನು ಕೂಡ ಪೂಜೆಗೆ ಬರುವುದಕ್ಕೆ ಕೇಳಿಕೊಳ್ಳುತ್ತಾರೆ. \
ಕೆಲಸಗಾರರಿಗೆ ಸಂಶಯ :-
ಆದರೆ ಅವರಿಗೆ ರಜೆ ಇರದ ಕಾರಣ ಅವರು ಮೊದಲಿಗೆ ಬರುವುದಕ್ಕೆ ಆಗಲ್ಲ ಅಂತ ಹೇಳ್ತಾರೆ. ಆದರೆ ಇವರು ಒತ್ತಾಯ ಮಾಡಿದಾಗ ಆ ಯುವತಿಯರು ರಜೆಯನ್ನ ಹಾಕಿ ಮನೆಗೆ ಬರುತ್ತಾರೆ. ಇವರು ಬಂದ ತಕ್ಷಣ ತಮ್ಮ ತಾಯಿ ಹಾಗು ಹಿರಿಯ ಸಹೋದರಿಯ ಬಗ್ಗೆ ವಿಚಾರಿಸಿದರು. ಆಗ ಇವರ ತಂದೆ ಅವರೆಲ್ಲಾ ಊರಿಗೆ ಹೋಗಿದ್ದಾರೆ, ಬೆಳಿಗ್ಗೆ ಬರುತ್ತಾರೆ ಅಂತ ಹೇಳಿದರು. ಸರಿ ಅವತ್ತು ರಾತ್ರಿ ಉಪೇಂದ್ರನಾಥ್ ತಮ್ಮ ಇಬ್ಬರು ಮಕ್ಕಳ ಜೊತೆ ಡಿನ್ನರ್ ಮುಗಿಸಿ ತಮ್ಮ ಕೋಣೆಗೆ ಹೋಗಿ ಮಲಗುತ್ತಾರೆ. ಬೆಳಿಗ್ಗೆ ಕೆಲಸದವರು ಬಂದಾಗ ಆ ಕ್ವಾಟರ್ಸ್ ನಲ್ಲಿ ಈ ನ್ಯಾಯಾಧೀಶರು ಮಾತ್ರ ಇದ್ದದ್ದು ಅವರ ಗಮನಕ್ಕೆ ಬರುತ್ತೆ.
ರಾತ್ರಿ ತಾನೇ ಅವರ ಇಬ್ಬರು ಮಕ್ಕಳು ಕೂಡ ಅಲ್ಲಿಯೇ ಇದ್ದರು. ಆದರೆ ಇವಾಗ ಇಲ್ಲ, ಅದರ ಬಗ್ಗೆ ಕೆಲಸದವರು ನ್ಯಾಯಾಧೀಶರನ್ನ ವಿಚಾರಿಸಿದಾಗ, ಯಾರೋ ಸಂಬಂಧಿಗಳು ಹುಷಾರಿಲ್ಲದ ಕಾರಣ ಅವರನ್ನ ಕಾಣುವ ಸಲುವಾಗಿ ಬೆಳ್ಳಂಬೆಳಿಗ್ಗೆ ಅವರು ಹೊರಟು ಹೋದರು ಈ ಉಪೇಂದ್ರನಾಥ್ ಹೇಳಿದರು. ಆದರೆ ನಂತರ ನಿನ್ನೆ ಅವರು ತೆರೆದಿದ್ದಂತಹ ಆ ಇನ್ನೊಂದು ಹಳ್ಳ ಸಂಪೂರ್ಣವಾಗಿ ಮುಚ್ಚಿಹೋಗಿದ್ದನ್ನ ಈ ನೌಕರರು ಗಮನಿಸುತ್ತಾರೆ. ಈ ಬಗ್ಗೆ ಅವರಿಗೆ ಸಂಶಯ ಬಂದರೂ ಕೂಡ ಅವರಿಗೆ ಕೇಳುವುದಕ್ಕೆ ಧೈರ್ಯ ಇಲ್ಲದೇ ಅವರೆಲ್ಲಾ ಸುಮ್ಮನಾಗುತ್ತಾರೆ.
ಇದನ್ನೂ ಕೂಡ ಓದಿ : ಸಂಸಾರದ ಬಂಡಿಯಲ್ಲಿ ಒಂದು ಚಕ್ರ ದಾರಿ ತಪ್ಪಿದ್ರೆ ಏನಾಗುತ್ತೆ ಅನ್ನೋಕೆ ಇದೇ ಉದಾಹರಣೆ.!
ಅವತ್ತು ಸಂಜೆಯಾದರೂ ಕೂಡ ಈ ಉಪೇಂದ್ರನಾಥ್ ರವರ ಕುಟುಂಬದ ಯಾರೂ ಕೂಡ ವಾಪಾಸ್ ಬರಲಿಲ್ಲ. ಈ ಉಪೇಂದ್ರನಾಥ್ ೧೯೭೦ರ ಫೆಬ್ರವರಿಯಲ್ಲಿ ಅವರ ಸೇವೆಯಿಂದ ನಿವೃತ್ತರಾಗುತ್ತಾರೆ. ನಿವೃತ್ತರಾದ ಮುಂದಿನ ಕೆಲವು ವಾರಗಳು ಅಲ್ಲಿಯೇ ಇರುತ್ತಾರೆ. ನಂತರ ಆ ಒಂದು ಕ್ವಾಟ್ರಸ್ ನ್ನ ತಾವು ಒಬ್ಬರೇ ಖಾಲಿ ಮಾಡಿ ಬೇರೆ ಕಡೆ ಶಿಫ್ಟ್ ಆಗುತ್ತಾರೆ. ಕೊನೆಗೂ ಅಲ್ಲಿದ್ದಂತಹ ನೌಕರರಿಗೆ ಇವರ ಪರಿವಾರದ ಇತರರು ಏನಾದರೂ ಎಲ್ಲಿ ಹೋದರು ಅನ್ನುವುದು ಗೊತ್ತಾಗಲೇ ಇಲ್ಲ. ಅಲ್ಲಿಂದ ಹೊರಡುವಾಗ ಮಾತ್ರ ಈ ಉಪೇಂದ್ರನಾಥ್ ರವರು ಅವರೆಲ್ಲಾ ದೆಹಲಿಯಲ್ಲಿ ಇದ್ದಾರೆ. ಈಗ ತಾನು ಕೂಡ ಅಲ್ಲಿಗೆ ಹೋಗುತ್ತೇನೆ ಅಂತ ಹೇಳಿ ಹೊರಟು ಹೋಗುತ್ತಾರೆ.
ಅಷ್ಟು ಹೊತ್ತಿಗೆ ೧೯೭೦ ಜೂನ್ ತಿಂಗಳು ಬಂದಿರುತ್ತೆ. ಹೊಸದಾಗಿ ಬಂದಂತಹ ನ್ಯಾಯಾಧೀಶರಿಗೆ ಮನೆ ಕೆಲಸಕ್ಕೆ ನೆರವಾಗುವುದಕ್ಕೆ ಕೆಲವು ಆಳುಗಳು ನೇಮಕವಾಗುತ್ತಾರೆ. ಅದರಲ್ಲಿ ಒಬ್ಬ ಆಳು ಅಲ್ಲಿಯ ಸಿಲಿಗುರಿ ಎನ್ನುವ ಊರಿನವನಾಗಿದ್ದ. ಇದು ಬೆಂಗಾಲ್ ನಲ್ಲಿತ್ತು. ಈ ನೌಕರ ಈ ಮುನ್ನ ಉಪೇಂದ್ರನಾಥ್ ರವರಿಗೂ ಕೂಡ ಕೆಲಸದವನಾಗಿ ನೇಮಕವಾಗಿದ್ದ. ಅವನಿಗೆ ಉಪೇಂದ್ರನಾಥ್ ಅವರ ಮುಖ ಪರಿಚಯ ಚೆನ್ನಾಗಿಯೇ ಇತ್ತು. ಹೀಗಿದ್ದಾಗ ತನ್ನ ಊರಾದಂತಹ ಸಿಲಿಗುರಿಯಲ್ಲಿ ಒಮ್ಮೆ ಅವನು ತನ್ನ ಹಳೆಯ ಯಜಮಾನ ಆದಂತಹ ಉಪೇಂದ್ರನಾಥ್ ರವರನ್ನ ಒಂದು ಕಡೆ ನೋಡಿ ಆಶ್ಚರ್ಯ ಪಡುತ್ತಾನೆ.
ಅವರು ಅಲ್ಲಿಯ ಒಂದು ಹೋಟೆಲ್ ನಲ್ಲಿದ್ದರು. ಇವರು ದೆಹಲಿಗೆ ಹೋಗ್ತೀನಿ ಅಂದಿದ್ದರಲ್ಲ, ಈಗ ಇಲ್ಲಿದ್ದೀರಾ.? ಅಂತ ಕೇಳಿದಾಗ, ತಾನು ಸಧ್ಯಕ್ಕೆ ಇಲ್ಲಿಯೇ ಒಂದು ಹೋಟೆಲ್ ನಲ್ಲಿ ಇದ್ದೇನೆ. ಯಾವುದೋ ಕೆಲಸಕ್ಕೆ ಇಲ್ಲಿಗೆ ಬಂದಿದ್ದೇನೆ. ನಾನು ಇಲ್ಲಿರುವಂತಹ ವಿಷಯವನ್ನ ಯಾರಿಗೂ ಹೇಳಬೇಡ ಅಂತ ಅವರು ಆತನಿಗೆ ಹೇಳಿದರು. ಇದೆಲ್ಲಾ ಮುಗಿದು ಕೆಲವು ದಿನಗಳು ಜಾರಿದ ಬಳಿಕ ಇವರ ಪತ್ನಿಯ ಸಹೋದರರೊಬ್ಬರಿಗೆ ಈ ಬಗ್ಗೆ ಅನುಮಾನ ಬಂದಿತ್ತು. ಅವರು ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಯಾವಾಗ ತಮ್ಮ ಸಹೋದರಿ ಹಾಗು ಆಕೆಯ ಮಕ್ಕಳ ಬಗ್ಗೆ ಇವರಿಗೆ ಯಾವುದೇ ಮಾಹಿತಿ ಸಿಗಲಿಲ್ಲವೋ, ಆಗ ಸಹಜವಾಗಿ ಅವರಿಗೆ ಉಪೇಂದ್ರನಾಥ್ ರವರ ಮೇಲೆ ಅನುಮಾನ ಮೂಡುತ್ತೆ.
ಈ ಬಗ್ಗೆ ತಕ್ಷಣನೇ ಅವರ ವಿರುದ್ಧ ಒಂದು ದೂರು ದಾಖಲಿಸಿ ಅವರು ವಿಚಾರಣೆಗೆ ಮುಂದಾಗುತ್ತಾರೆ. ಮೊದಲು ಈ ಬಗ್ಗೆ ಅವರು ಆ ಕ್ವಾಟ್ರಸ್ ನ ಬಳಿ ಕೆಲಸ ಮಾಡುತ್ತಿದ್ದಂತಹ ಆಳುಗಳು ಹಾಗು ಇದರ ಸುತ್ತಮುತ್ತ ಇದ್ದಂತಹ ಜನರನ್ನ ವಿಚಾರಿಸಿದ್ದರು. ಈ ಬಗ್ಗೆ ಕೆಲವು ಪ್ರಶ್ನೆಗಳನ್ನ ಕೇಳಿದಾಗ, ಅವರು ಕೂಡ ಅವರ ಪರಿವಾರದವರೆಲ್ಲಾ ದೆಹಲಿಯಲ್ಲಿ ಇದ್ದಾರೆ. ಇವರು ಕೂಡ ಅಲ್ಲಿಗೆ ಹೋದರು ಅಂತ ಹೇಳಿದರು. ಹಾಗು ಕೆಲವೇ ದಿನಗಳ ಮುನ್ನ ಅವರನ್ನ ಸಿಲಿಗುರಿಯಾ ಒಂದು ಹೋಟೆಲ್ ನಲ್ಲಿ ನೋಡಿದ್ದಾಗಿ ಆತ ಅವರ ಬಳಿ ತಿಳಿಸಿದ್ದ. ತಕ್ಷಣವೇ ಅವರು ಈ ನೌಕರ ತಿಳಿಸಿದಂತಹ ಹೋಟೆಲ್ ಗೆ ಹೋದಾಗ ಅಲ್ಲಿ ಉಪೇಂದ್ರನಾಥ್ ಈ ಅಧಿಕಾರಿಗಳ ಕೈಗೆ ಸಿಗುತ್ತಾರೆ.
ಇದನ್ನೂ ಕೂಡ ಓದಿ : Son And His Mother : ನಮ್ಮ ಜನ ಎಷ್ಟು ಹಾಳಾಗಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಅನ್ನಿಸುತ್ತೆ
ಸುಳ್ಳು ಕಥೆ ಹೇಳಿದ ನ್ಯಾಯಾಧೀಶ
ಅವರು ಕಳೆದ ಎರಡು ತಿಂಗಳಿನಿಂದ ಕೂಡ ಅಲ್ಲಿಯೇ ವಾಸವಾಗಿದ್ದರು. ಈ ಅಧಿಕಾರಿಗಳಿಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ಇವರ ಪರಿವಾರದವರು ದೆಹಲಿಯಲ್ಲಿ ವಾಸವಾಗಿದ್ದರೆ, ಇವರು ಯಾಕೆ ತಿಂಗಳಾನುಗಟ್ಟಲೆ ಈ ಹೋಟೆಲ್ ನಲ್ಲಿ ವಾಸವಾಗಿದ್ದಾರೆ ಎಂದು ಕೇಳಿದಾಗ, ಈ ನ್ಯಾಯಾಧೀಶರು ಕೂಡ ಅದೇ ಕಾರಣವನ್ನ ಕೊಡುತ್ತಾರೆ. ದೆಹಲಿಯಲ್ಲಿ ಯಾವ ಸ್ಥಳ.? ಅವರನ್ನ ಸಂಪರ್ಕ ಮಾಡುವಂತಹ ಬಗೆ ಹೇಗೆ.? ನೀವೇಕೆ ಇಲ್ಲಿದ್ದೀರಾ.? ಎಂದು ಕೇಳಿದಾಗ ತಬ್ಬಿಬ್ಬದಂತಹ ಆ ನ್ಯಾಯಾಧೀಶ, ಇದೀಗ ಬೇರೆಯದೇ ಕಥೆಯನ್ನ ಹೇಳತೊಡಗಿದರು.
ನನ್ನ ಪತ್ನಿಗೆ ಹುಷಾರು ತಪ್ಪಿ ಆಕೆ ಕೊನೆಯುಸಿರೆಳೆದಳು. ಈ ಒಂದು ವಿಷಯ ಗೊತ್ತಾದಂತಹ ನನ್ನ ಹಿರಿಯ ಮಗಳು ಕೂಡ ತನ್ನ ಪ್ರಾಣವನ್ನ ತಾನೇ ಕಳೆದುಕೊಂಡಳು ಅಂತ ಹೇಳಿದರು. ಈ ಒಂದು ವಿಷಯವನ್ನ ನಾನು ಯಾರಿಗೂ ಹೇಳದೇ ಅವರು ದೆಹಲಿಯಲ್ಲಿ ಇದ್ದಾರೆ ಎಂದು ಸುಳ್ಳು ಹೇಳಿ ಇಷ್ಟು ದಿವಸ ಕಾಲವನ್ನ ನೂಕಿದ್ದೇನೆ ಎಂದು ನ್ಯಾಯಾಧೀಶ ಹೇಳುತ್ತಾರೆ. ಸರಿ, ಉಳಿದ ಹೆಣ್ಣುಮಕ್ಕಳು ಎಲ್ಲಿ ಎಂದು ಕೇಳಿದಾಗ, ಅವರು ಕೂಡ ಈ ಒಂದು ವಿಷಯ ಗೊತ್ತಾಗಿ ಹತ್ತು ದಿನಗಳ ಬಳಿಕ ಬ್ರಹ್ಮಪುತ್ರ ನದಿಗೆ ಹಾರಿ ತಮ್ಮ ಪ್ರಣವನ್ನ ಕಳೆದುಕೊಂಡರು ಎಂದು ಹೇಳಿದರು.
ಅವರ ಮಾತನ್ನ ಕೇಳಿ ಎಲ್ಲರಿಗೂ ಅಚ್ಚರಿಯಾಗುತ್ತದೆ. ನಂತರ ಈ ಉಪೇಂದ್ರನಾಥ್, ತಾನು ಶೌಚಾಲಯಕ್ಕೆ ಹೋಗಿ ಸ್ನಾನ ಮಾಡಿಕೊಂಡು ಬರುತ್ತೇನೆ. ಮುಂದಿನದು ಆ ನಂತರ ಮಾತನಾಡೋಣ ಎಂದು ಹೇಳಿ ಶೌಚಾಲಯಕ್ಕೆ ಹೋಗಿದ್ದರು. ಆದರೆ ಬಾತ್ ರೂಮ್ ನ ಓಳಗೆ ಹೊಕ್ಕಂತಹ ಜಡ್ಜ್, ಎಷ್ಟು ಹೊತ್ತಾದರೂ ಕೂಡ ಹೊರಗಡೆ ಬರದೇ ಇದ್ದಾಗ ಆ ಬಾಗಿಲನ್ನ ಬಲವಂತದಿಂದ ತೆಗೆದಂತಹ ಅಧಿಕಾರಿಗಳು ಒಳ ನುಗ್ಗಿದಾಗ, ಅಲ್ಲಿ ನ್ಯಾಯಾಧೀಶರು ಚಾಕುವೊಂದರಿಂದ ತಮಗೆ ತಾವೇ ಚುಚ್ಚಿ ಕೊಂಡು ರಕ್ತದ ಮಡುವಿನಲ್ಲಿ ಬಿದ್ದದ್ದು ಕಂಡು ಬರುತ್ತೆ.
ಆದರೆ ಅವರಿನ್ನೂ ಜೀವಂತವಾಗಿದ್ದರು. ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತುರ್ತು ವಿಭಾಗದಲ್ಲಿ ಚಿಕಿತ್ಸೆಯನ್ನ ಕೊಡಲಾಯಿತು. ಅಲ್ಲಿ ಎರಡು ತಿಂಗಳುಗಳ ಕಾಲ ಅವರು ರೆಸ್ಟ್ ಮಾಡಿದರು. ಸಮಯೋಚಿತವಾಗಿ ಸಿಕ್ಕಂತಹ ಚಿಕಿತ್ಸೆಯಿಂದಾಗಿ ಅವರು ಬದುಕುಳಿದರು. ನಂತರ ಅವರು ನೀಡಿದಂತಹ ಹೇಳಿಕೆಗಳು ವಿವಾದಮಯವಾಗಿತ್ತು. ಇಷ್ಟು ದಿನ ಅವರು ಹೇಳಿದ್ದೇ ಬೇರೆ, ಈಗ ಹೇಳುತ್ತಿರುವುದೇ ಬೇರೆ. ಅವರ ಪತ್ನಿಗೆ ಕಾರು ಅಪಘಾತವಾಗಿ ಅವರ ಆರೋಗ್ಯ ಹದಗೆಟ್ಟು ಅವರು ಮರಣ ಹೊಂದಿದಾಗ ಈ ಬಗ್ಗೆ ಹತಾಶರಾದಂತಹ ಇವರ ಮೂರು ಮಕ್ಕಳು ಒಂದೊಂದು ರೀತಿಯಲ್ಲಿ ತಮ್ಮ ಪ್ರಾಣವನ್ನು ತಾವೇ ಕಳೆದುಕೊಂಡರು ಅಂತ ಹೇಳಿದರು.
ಇದನ್ನೂ ಕೂಡ ಓದಿ : One Side Love : ಲವ್ ನನಗೆ ಇಷ್ಟ ಇಲ್ಲ ಅಂದಿದ್ದಕ್ಕೆ ಈ ರಾಕ್ಷಸ ಏನು ಮಾಡಿದ್ದ ಗೊತ್ತಾ.? ಕೊನೆಗೆ ಆತ ಏನಾದ ಗೊತ್ತಾ.?
ಇದರಲ್ಲಿ ಯಾವುದು ನಿಜ.? ಯಾವುದು ಸುಳ್ಳು ಎನ್ನುವ ಗೊಂದಲ ಇನ್ನೂ ಕೂಡ ಪೊಲೀಸರಲ್ಲಿ ಇತ್ತು. ಈ ಸಲ ಅವರನ್ನ ಸತ್ಯ ಸಂಗತಿ ಏನು ಎಂದು ಹೇಳುವಂತೆ ಒತ್ತಾಯ ಮಾಡಿದಾಗ, ಅಸಲಿ ವಿಷಯಾವನ್ನ ಕೊನೆಗೂ ಈ ನ್ಯಾಯಾಧೀಶರು ಬಾಯಿಬಿಟ್ಟರು. ಅವರು ಅಲ್ಲಿಯವರೆಗೂ ಹೇಳಿದ್ದೆಲ್ಲವೂ ಅಪ್ಪಟ ಸುಳ್ಳು. ವಾಸ್ತವವಾಗಿ ಅವರ ಪತ್ನಿ ಹಾಗು ಮಕ್ಕಳನ್ನ ಅವರೇ ತಮ್ಮ ಕೈಯಾರ ಕೊಲೆ ಮಾಡಿದ್ದರು. ಆ ರಾತ್ರಿ ಡಿನ್ನರ್ ಮುಗಿಸಿ, ಪತ್ನಿ ಹಾಗು ಹಿರಿ ಮಗಳನ್ನ ಆ ರಾತ್ರಿಯೇ ಕೊಲೆ ಮಾಡಿದಂತಹ ಅವರು, ಅವರನ್ನ ಶೌಚಾಲಯದ ಬಳಿ ಇದ್ದಂತಹ ಹೊಂಡಲ್ಲಿ ಹಾಕಿ ಮುಚ್ಚಿದ್ದರು. ನಂತರ ಹದಿನೈದು ದಿವಸಗಳ ಬಳಿಕ ಉಳಿದ ಮಕ್ಕಳನ್ನ ಅವರಿಗೆ ಪರೀಕ್ಷೆ ಇದ್ದರೂ ಕೂಡ ಬಲವಂತವಾಗಿ ಮನೆಗೆ ಕರೆಸಿಕೊಂಡು ಆ ರಾತ್ರಿ ಅವರನ್ನ ಹತ್ಯೆ ಮಾಡಿದ್ದರು.
ಸತ್ಯ ಒಪ್ಪಿಕೊಂಡ ಆರೋಪಿ
ಅದರಲ್ಲೂ ಕೊನೆಯ ಮಗಳನ್ನ ಕೊಲ್ಲುವುದಕ್ಕೆ ಇಚ್ಛಿಸದಂತಹ ಅವರು ಅವಳೊಬ್ಬಳನ್ನೇ ಮಾತ್ರ ತಮ್ಮ ಒಬ್ಬ ನೌಕರನ ಸಹಾಯದಿಂದ ಕೊಲ್ಲಿಸಿದ ಬಗ್ಗೆ ಅವರು ಬಾಯಿಬಿಟ್ಟಿದ್ದರು. ಹಾಗು ಅವರನ್ನ ಕಿಚನ್ ಬಳಿ ತೆರೆಯಲಾಗಿದ್ದಂತಹ ಹೊಂಡದಲ್ಲಿ ಹೂತಾಕಿದ್ದರು. ಇವರ ಈ ಒಂದು ವಿವರಣೆ ಕೇಳಿದಂತಹ ಅಧಿಕಾರಿಗಳು ನಿಜಕ್ಕೂ ಶಾಕ್ ಆದರು. ಇದರಲ್ಲಿ ಭಾಗಿಯಾದ ನೌಕರರನ್ನೂ ಕೂಡ ಹಿಡಿದು ಬಂಧಿಸಲಾಯಿತು. ಅಪರಾಧಿಗಳಿಗೆ ಶಿಕ್ಷೆ ಕೊಡುವಂತಹ ನ್ಯಾಯಾಧೀಶರೇ ಇಂತಹ ಕೌಟುಂಬಿಕ ಹತ್ಯೆಗೆ ಇಳಿದಿದ್ದು ಸರಿನಾ.? ಅವರಿಗೆ ಈ ರೀತಿ ಮಾಡುವುದಕ್ಕೆ ಮನಸ್ಸಾದರೂ ಹೇಗೆ ಬಂತು.? ಇಷ್ಟಕ್ಕೂ ನೀವು ಇಂತಹ ಒಂದು ಘೋರ ಕೃತ್ಯವನ್ನ ಮಾಡುವುದಕ್ಕೆ ಕಾರಣವೇನು.? ಎಂದು ಕೇಳಿದಾಗ…
ಅದರ ಹಿಂದಿನ ಕಾರಣವನ್ನು ಮಾತ್ರ ಅವರು ಯಾವುದೇ ಕಾರಣಕ್ಕೂ ಹೇಳಲೇ ಇಲ್ಲ. ಆತ ತಪ್ಪೊಪ್ಪಿಕೊಂಡಾಗಲೇ ಆ ಕ್ವಾಟ್ರಸ್ ನ ಬಳಿಯ ಆ ಹೊಂಡಗಳನ್ನ ಅಗೆಸಿದಾಗ ಅಲ್ಲಿ ನಾಲ್ಕು ಸ್ತ್ರೀ ದೇಹಗಳು ಪತ್ತೆಯಾದವು. ಇವು ಆತ ನಡೆಸಿದಂತಹ ಹತ್ಯೆಗಳಿಗೆ ಸಿಕ್ಕಂತಹ ಪ್ರಾಥಮಿಕ ಸಾಕ್ಷಿಗಳು. ಆತನ ಈ ಇಡೀ ಹೇಳಿಕೆಯನ್ನ ಜಿಲ್ಲಾ ಮ್ಯಾಜಿಸ್ಟ್ರೀಟ್ ಕೋರ್ಟ್ ನಲ್ಲಿ ದಾಖಲಿಸಲಾಯಿತು. ಈ ಬಗ್ಗೆ ಮುಂದಿನ ಮೂರ್ನಾಲ್ಕು ವರ್ಷಗಳವರೆಗೂ ವಿಚಾರಣೆಯಾಗಿ ೧೯೭೬ರ ಫೆಬ್ರವರಿ ೧೪ನೇ ತಾರೀಕು ಜೈಲಿನಲ್ಲಿ ಇವರಿಗೆ ಮರಣದಂಡನೆ ಶಿಕ್ಷೆ ಲಭ್ಯವಾಗುತ್ತದೆ. ಇದರ ವಿರುದ್ಧ ಉಪೇಂದ್ರನಾಥ್ ಹೈ ಕೋರ್ಟ್ ಹಾಗು ಸುಪ್ರೀಂ ಕೋರ್ಟ್ ಗೂ ಕೂಡ ಅಪೀಲ್ ನ್ನ ಹೋಗುತ್ತಾರೆ. ಅವರ ಅಪೀಲ್ ಅಲ್ಲಿ ಅಂಗೀಕಾರವಾಗಲಿಲ್ಲ.
ಇಂತಹ ವ್ಯಕ್ತಿಗೆ ಮರಣದಂಡನೆ ಸೂಕ್ತ ಎಂದು ತೀರ್ಪು ನೀಡಲಾಯಿತು. ಈ ಮೂಲಕ ಹತ್ಯೆಗಳ ಹಿಂದೆ ಇದ್ದಂತಹ ಕಾರಣ ಕೂಡ ಅವರ ನ್ಯಾಯಾಧೀಶನ ಜೊತೆಗೆ ಮಣ್ಣನ್ನ ಸೇರಿತು. ಸ್ನೇಹಿತರೇ, ಇದು ನಮ್ಮ ದೇಶವಲ್ಲದೆ ಇಡೀ ವಿಶ್ವದಲ್ಲಿಯೇ ನಡೆದಂತಹ ಅಪರೂಪದಲ್ಲಿಯೇ ಅಪರೂಪದ ಪ್ರಕರಣ. ಇಷ್ಟಕ್ಕೂ ಅವರು ತಮ್ಮ ಹೆಂಡತಿ ಹಾಗು ತಮ್ಮ ಮೂವರು ಮಕ್ಕಳನ್ನ ಕೊಂದಿದ್ದ್ಯಾಕೆ.? ಇದಕ್ಕೆ ನಿಜಕ್ಕೂ ಏನು ಕಾರಣವಿರಬಹುದು.? ಇನ್ನು ಕೂಡ ನಿಗೂಢವಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.