ಅಣ್ಣಾಮಲೈ ರಾಜೀನಾಮೆ ಅಂಗೀಕಾರ, ಬಿಜೆಪಿಯಿಂದ ಅಧಿಕೃತವಾಗಿ ಹೊರಬಂದ ಮಾಜಿ ಐಪಿಎಸ್ ಅಧಿಕಾರಿ

ಕಳೆದ ಕೆಲ ದಿನಗಳಿಂದ ತಮಿಳುನಾಡು ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ ರಾಜೀನಾಮೆ ಭಾರಿ ಚರ್ಚೆಯಾಗಿದೆ. ತಮಿಳುನಾಡಿನಲ್ಲಿ ಬಿಜೆಪಿಯಿಂದ ಅಣ್ಣಾಮಲೈ ಮೂಲೆಗುಂಪಾಗಿದ್ದಾರೆ ಅನ್ನೋ ಮಾತುಗಳ ನಡುವೆಯೇ ಇದೀಗ ಅಣ್ಣಾಮಲೈ ರಾಜೀನಾಮೆ ಅಂಗೀಕಾರವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜೀನಾಮೆ ಅಂಗೀಕರಿಸಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ದಕ್ಷಿಣ ಭಾರತದ ಬಿಜೆಪಿ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ವಿರುದ್ದ ಗರಂ ಆಗಿದ್ದಾರೆ. ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಭೇಟಿ ಮಾಡಿದ್ದ ಅಣ್ಣಾಮಲೈ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ … Read more

ಸಿಎಂ ಡಿಕೆಶಿ ಸಭೆಯಲ್ಲಿ ಹೈ-ಡ್ರಾಮಾ: ಸಿಟ್ಟಿಗೆದ್ದು ಸಭೆಯಿಂದಲೇ ಹೊರನಡೆದ ಸಚಿವ ರಾಮಲಿಂಗಾರೆಡ್ಡಿ!

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯ ಮಧ್ಯೆಯೇ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಭೆಯಿಂದ ಹೊರನಡೆದಿರುವ ಹಠಾತ್ ಬೆಳವಣಿಗೆ ನಡೆದಿದೆ. ಸಭೆಯಲ್ಲಿ ಸಚಿವ ಸಂಪುಟದ ಜವಾಬ್ದಾರಿ ಹಂಚಿಕೆ ಅಥವಾ ಇಲಾಖಾ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಸ್ತಾಪಕ್ಕೆ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. “ನಾನು ಬೆಂಗಳೂರಿನವನು, ಬೆಂಗಳೂರೇ ಬೇಕು” ಎಂದು ಆಕ್ರೋಶ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ವಿಷಯ ಮುನ್ನೆಲೆಗೆ ಬಂದಾಗ ಸಿಟ್ಟಿಗೆದ್ದ ರಾಮಲಿಂಗಾರೆಡ್ಡಿ … Read more

ಕಾರಿನ ಡಿಕ್ಕಿಯಲ್ಲಿ ಸಿಲುಕಿ 3 ವರ್ಷದ ಮಗು ಉಸಿರುಗಟ್ಟಿ ಸಾವು! ಹುಡುಕಾಡಿದ ಪೋಷಕರಿಗೆ ಕಾಯುತ್ತಿತ್ತು ಶಾಕ್

ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಕಂದಮ್ಮನೊಂದು ಆಕಸ್ಮಿಕವಾಗಿ ಕಾರಿನ (Car) ಡಿಕ್ಕಿಯೊಳಗೆ ಸಿಲುಕಿ, ಉಸಿರುಗಟ್ಟಿ ಮೃತಪಟ್ಟಿರುವ (Baby died) ಅತ್ಯಂತ ಕರುಣಾಜನಕ (Tragedy) ಘಟನೆ ಯಾದಗಿರಿ (Yadagiri) ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೊಟ್ಟೂರೇಶ್ವರ ಪೂಜ್ಯರ ಎಂಬುವವರ ಪುತ್ರ ಬಸವಪ್ರಭು (3) ಮೃತಪಟ್ಟ ದುರ್ದೈವಿ ಬಾಲಕ. ಈ ಘಟನೆಯಿಂದ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ತಾನಾಗಿಯೇ ಲಾಕ್ ಆದ ಡಿಕ್ಕಿ ಬಾಗಿಲು ಬಸವಪ್ರಭು ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಮನೆಯ ಮುಂಭಾಗದ ಆವರಣದಲ್ಲಿ … Read more

ಯಾವ ಅರ್ಹತೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಸಚಿವಗಿರಿ ಕೊಟ್ರಿ: ಕಾಂಗ್ರೆಸ್ ನೊಳಗೇ ಅಸಮಾಧಾನ ಶುರು

ಡಿಕೆ ಶಿವಕುಮಾರ್ ಸಂಪುಟದಲ್ಲಿ ನಿನ್ನೆ ಸಚಿವರಾಗಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನೊಳಗೆ ಅಸಮಾಧಾನದ ಹೊಗೆ ಎದ್ದಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಡಿಕೆ ಶಿವಕುಮಾರ್ ಸಿಎಂ ಎಂದು ಘೋಷಣೆ ಮಾಡಲಾಗಿತ್ತು. ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಹಲವು ನಾಯಕರು ದೆಹಲಿಗೆ ಹೋಗಿ ಲಾಬಿ ನಡೆಸಿದ್ದರು. ಎರಡು ದಿನಗಳ ಕಾಲ ಹೈಕಮಾಂಡ್ ಜೊತೆ ಸಿದ್ದರಾಮಯ್ಯ-ಡಿಕೆಶಿ ಚರ್ಚೆ ನಡೆಸಿ 13 ಸಚಿವರ ಲಿಸ್ಟ್ ತಯಾರಿಸಲಾಗಿತ್ತು. ಈ ಪಟ್ಟಿಯಲ್ಲಿ 10 ಮಂದಿ … Read more

ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿಯ ಕೈಗೆ ಸುತ್ತಿಕೊಂಡ ಹಾವು, 4 ತಾಸು ನರಕಯಾತನೆ

ವ್ಯಕ್ತಿಯೊಬ್ಬರ ತಾಳ್ಮೆ ಹಾಗೂ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿಯ ಕೈಗೆ ವಿಷಕಾರಿ ಹಾವೊಂದು ಸುತ್ತಿಕೊಂಡ ಪರಿಣಾಮ ಸುಮಾರು ನಾಲ್ಕು ಗಂಟೆಗಳ ಕಾಲ ನರಕಯಾತನೆ ಅನುಭವಿಸಬೇಕಾಯಿತು. ಆದರೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಒಡಿಶಾದ ಬೌಧ್ ಜಿಲ್ಲೆಯ ಹರಭಂಗ ಬ್ಲಾಕ್‌ನ ಅದೇನಿಗಢ ಗ್ರಾಮದಲ್ಲಿ ಪಾರ್ಶ್ವವಾಯು (Paralysis) ಪೀಡಿತರಾಗಿ ಚಲನಶೀಲತೆ ಕಳೆದುಕೊಂಡಿದ್ದ ಕೃಷ್ಣ ಚಂದ್ರ ಸಾಹು ಎಂಬ ವ್ಯಕ್ತಿಗೆ ಮಲಗಿದ್ದ ಹಾಸಿಗೆಗೆ ವಿಷಕಾರಿ ಹಾವು ನುಗ್ಗಿತ್ತು. ಕಿಟಕಿಯಿಂದ ನುಗ್ಗಿದ ಯಮಸ್ವರೂಪಿ ಹಾವು!ರಾತ್ರಿ ಮನೆಯ ಕೋಣೆಯ … Read more

ಕೃಷ್ಣಾ ನದಿಯಲ್ಲಿ ಮುಳುಗಿ 7 ವರ್ಷದ ಬಾಲಕ ಸಾ*ವು – ರಕ್ಷಿಸಲು ಹೋದ ತಾಯಿ ಗಂಭೀರ!

ಚಿಕ್ಕೋಡಿ: ಕೃಷ್ಣಾ ನದಿ ದಡದಲ್ಲಿ ಆಟವಾಡುತ್ತಿದ್ದ ಏಳು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ರಾಯಬಾಗ ತಾಲ್ಲೂಕಿನ ಶಿರಗೂರ ಗ್ರಾಮದ (Belagavi crime) ಸಮೀಪ ನಡೆದಿದೆ. ಶಿರಗೂರದಲ್ಲಿ ತಾಯಿಯೊಂದಿಗೆ ವಾಸವಿದ್ದ ಪ್ರಣವ ಸುನೀಲ ಕಾಂಬಳೆ (7) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ. ಪೂಜಾ ಅವರು ಪುತ್ರ ಪ್ರಣವ್‌ ಜೊತೆಗೆ ಬಟ್ಟೆ ಒಗೆಯಲು ಕೃಷ್ಣಾ ನದಿಗೆ ತೆರಳಿದ್ದರು. ಈ ವೇಳೆ ತಾಯಿಯೊಂದಿಗೆ ಹೋಗಿದ್ದ ಬಾಲಕ ಪ್ರಣವ ನದಿಯ ನೀರಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಆಳವಾದ ನೀರಿಗೆ ಇಳಿದು … Read more

ದ್ವೇಷವನ್ನೇ ಉಸಿರಾಡಿದ್ದು ಎಂಬುದನ್ನು ಒಪ್ಪಿಕೊಂಡ ಕಲ್ಲಡ್ಕ ಪ್ರಭಾಕರ್ ಭಟ್ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

“ಇನ್ನು ಮುಂದೆ ದ್ವೇಷ ಭಾಷಣ ಮಾಡುವುದಿಲ್ಲ” ಎಂದು ನ್ಯಾಯಾಲಯಕ್ಕೆ ಹೇಳುವ ಮೂಲಕ ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ತಾವು ಇಷ್ಟು ದಿನಗಳ ಕಾಲ ದ್ವೇಷವನ್ನೇ ಉಸಿರಾಡಿದ್ದು ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, ಪುರಾಣದ ಬಸ್ಮಾಸುರ ತಲೆ ಮೇಲೆ ಕೈ ಇಟ್ಟು ಸಿಕ್ಕವರನ್ನು ಸುಡುತ್ತಿದ್ದನಂತೆ, RSS ಎಂಬ ಆಧುನಿಕ ಬಸ್ಮಾಸುರ ಮುಗ್ದ ಯುವಸಮುದಾಯದ ಮೆದುಳಿಗೆ ಕೈ ಇಟ್ಟು ಇಡೀ … Read more

ಪೆಟ್ರೋಲ್ ಬಂಕ್‌ಗಳಲ್ಲಿ ಹೊಸ ಮೋಸದ ಜಾಲ: ನಿಮ್ಮ ವಾಹನ ಇಂಧನ ಸಾಮರ್ಥ್ಯವನ್ನೂ ಚೆಕ್ ಮಾಡಿಕೊಳ್ಳಿ

ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ. ಇದರ ನಡುವೆ ಪೆಟ್ರೋಲ್ ವಿಚಾರದಲ್ಲಿ ಹೊಸದೊಂದು ವಿಚಾರ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಥಳೀಯ ಪೆಟ್ರೋಲ್ ಪಂಪ್‌ವೊಂದರಲ್ಲಿ ಕೇವಲ 45 ಲೀಟರ್ ಗರಿಷ್ಠ ಟ್ಯಾಂಕ್ ಸಾಮರ್ಥ್ಯದ ವಾಹನದಲ್ಲಿ ಸುಮಾರು 52 ಲೀಟರ್ ಇಂಧನ ತುಂಬಿಸಲಾಗಿದೆ ಎಂದು ತೋರಿಸಿರುವ ಬಿಲ್‌ವೊಂದು ವೈರಲ್ ಆಗಿದೆ. ಹೊಸ ಕಾರು ಖರೀದಿ ಮಾಡಿದ ಮಾಲೀಕರೊಬ್ಬರು ಪೆಟ್ರೋಲ್ ಪಂಪ್‌ನಲ್ಲಿ ಸಿಬ್ಬಂದಿ ಕೊಟ್ಟ ಬಿಲ್ ನೋಡಿ ಶಾಕ್ ಆಗಿದ್ದಾರೆ. ಕಾರು ಮಾಲೀಕರು ಪೆಟ್ರೋಲ್ ಪಂಪ್ ಸಿಬ್ಬಂದಿಯೊಂದಿಗೆ … Read more

ಅಪ್ಪನಲ್ಲ ರೀ ಅಸುರ! : ಊಟ ಸಿಲುಕಿ ಮಗು ಸಾವನ್ನಪ್ಪಿದೆ ಎಂದಿದ್ದ ಪಾಪಿ ತಂದೆಯ ನೀಚತನ ಬಯಲು!

ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ ಮಗು ಮೃತಪಟ್ಟಿದೆ ಎನ್ನಲಾಗಿದ್ದ ಪ್ರಕರಣದಲ್ಲಿ, ಕಳೆದ ಮೂರು ತಿಂಗಳಿನಿಂದ ಮಗುವಿನ ಮೇಲೆ ನಡೆದಿದ್ದ ಭೀಕರ ದೈಹಿಕ ದೌರ್ಜನ್ಯ ಹಾಗೂ ಕೊಲೆ (Crime) ಸಂಚಿನ ರಹಸ್ಯ ಈಗ ಬಯಲಾಗಿದೆ. ಹೊಡೆದು ಕೊಂದ ಸಾಕು ತಂದೆ ಕೇವಲ ಒಂದೂವರೆ ವರ್ಷದ ಕಂದಮ್ಮ ಆರ್ಶಿದ್‌ ಎಂಬ ಮಗುವನ್ನು ಆತನ ಸಾಕುತಂದೆ ಹೊಡೆದು ಕೊಂದಿದ್ದು, ಹೆತ್ತ ತಾಯಿ ಮೂಕಪ್ರೇಕ್ಷಕಳಾಗಿ ನಿಂತಿದ್ದಳು ಎನ್ನಲಾಗಿದೆ. ಈ ಘೋರ ಘಟನೆಯು ಕೇರಳದ ರಾಜಧಾನಿ ತಿರುವನಂತಪುರಂನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ … Read more

ಅಕ್ರಮ ಸಂಬಂಧಕ್ಕೆ ಬಲಿಯಾದ ಮಗ: ಹತ್ಯೆ ಮಾಡಿ ಹೈಕೋರ್ಟ್ ಮೊರೆ ಹೋದ ಪಾಪಿ ತಾಯಿ!

ಕರ್ನೂಲು ಜಿಲ್ಲೆಯ ಆದೋನಿ ಮಂಡಲದ ಜಿ. ಹೊಸಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧದ ಕಾರಣದಿಂದ 15 ವರ್ಷದ ಬಾಲಕನೊಬ್ಬ ಬಲಿಯಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಗಂಗಮ್ಮ ಎಂಬ ಮಹಿಳೆ ದರ್ಗಪ್ಪ ಎಂಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದನ್ನು ಆಕೆಯ ಮಗ ವೀರೇಂದ್ರ ಪ್ರಶ್ನಿಸಿದ್ದನು. ಇದರಿಂದ ಕುಪಿತಳಾದ ತಾಯಿ, ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಮಗನನ್ನೇ ಕತ್ತಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ನಂತರ ಯಾರಿಗೂ ಅನುಮಾನ ಬಾರದಂತೆ ಮೃತದೇಹವನ್ನು ಸ್ಥಳೀಯ ಸ್ಮಶಾನದಲ್ಲಿ ಹೂತು ಹಾಕಿದ್ದಾಳೆ. ಮಗ … Read more