ಪೆಟ್ರೋಲ್ ಬಂಕ್‌ಗಳಲ್ಲಿ ಹೊಸ ಮೋಸದ ಜಾಲ: ನಿಮ್ಮ ವಾಹನ ಇಂಧನ ಸಾಮರ್ಥ್ಯವನ್ನೂ ಚೆಕ್ ಮಾಡಿಕೊಳ್ಳಿ

Spread the love

ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ. ಇದರ ನಡುವೆ ಪೆಟ್ರೋಲ್ ವಿಚಾರದಲ್ಲಿ ಹೊಸದೊಂದು ವಿಚಾರ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಥಳೀಯ ಪೆಟ್ರೋಲ್ ಪಂಪ್‌ವೊಂದರಲ್ಲಿ ಕೇವಲ 45 ಲೀಟರ್ ಗರಿಷ್ಠ ಟ್ಯಾಂಕ್ ಸಾಮರ್ಥ್ಯದ ವಾಹನದಲ್ಲಿ ಸುಮಾರು 52 ಲೀಟರ್ ಇಂಧನ ತುಂಬಿಸಲಾಗಿದೆ ಎಂದು ತೋರಿಸಿರುವ ಬಿಲ್‌ವೊಂದು ವೈರಲ್ ಆಗಿದೆ.

ಹೊಸ ಕಾರು ಖರೀದಿ ಮಾಡಿದ ಮಾಲೀಕರೊಬ್ಬರು ಪೆಟ್ರೋಲ್ ಪಂಪ್‌ನಲ್ಲಿ ಸಿಬ್ಬಂದಿ ಕೊಟ್ಟ ಬಿಲ್ ನೋಡಿ ಶಾಕ್ ಆಗಿದ್ದಾರೆ. ಕಾರು ಮಾಲೀಕರು ಪೆಟ್ರೋಲ್ ಪಂಪ್ ಸಿಬ್ಬಂದಿಯೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಪೆಟ್ರೋಲ್ ಪಂಪ್‌ನ ವಿತರಣಾ ವ್ಯವಸ್ಥೆಯ ಬಗ್ಗೆ ತಕ್ಷಣದ ತನಿಖೆಗೆ ಆದೇಶಿಸಿದೆ. ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಹೆಚ್ಚಳವಾಗಿದೆ. ಈ ರೀತಿ ಇರುವಾಗ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಿಕೊಳ್ಳುವುದರಲ್ಲೂ ಮೋಸವಾಗುತ್ತಿರುವುದು ಗ್ರಾಹಕರಲ್ಲಿ ಭಾರೀ ಆತಂಕವನ್ನುಂಟು ಮಾಡಿದೆ. ನೀವು ಸಹ ನಿಮ್ಮ ವಾಹನಕ್ಕೆ ಪೆಟ್ರೋಲ್ – ಡೀಸೆಲ್ ತುಂಬಿಸಿಕೊಂಡು ಯಾವ ರೀತಿ ಮೋಸವಾಗುತ್ತಿದೆ ಅಥವಾ ಇದು ಕೆಲವು ಭಾಗದಲ್ಲಿ ಮಾತ್ರವೇ ಎನ್ನುವುದನ್ನು ಪರಿಶೀಲಿಸಬಹುದು.

ಉತ್ತರ ಪ್ರದೇಶದಲ್ಲಿ ಕಾರು ಮಾಲೀಕರೊಬ್ಬರು ಹೊಸ ವೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ಚರಣ್ ಸಿಂಗ್ ಎನ್ನುವವರು ಖರೀದಿ ಮಾಡಿದ್ದು, ವಾಹನದಲ್ಲಿ ಪೂರ್ತಿ ಪೆಟ್ರೋಲ್ ಖಾಲಿ ಮಾಡಿಕೊಂಡು ಅಥವಾ ಖಾಲಿ ಟ್ಯಾಂಕ್‌ನಲ್ಲಿ ಪೆಟ್ರೋಲ್ ಬಂಕ್‌ಗೆ ಬಂದಿರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಪೆಟ್ರೋಲ್ ಬಂಕ್‌ಗೆ ಬಂದ ಚರಣ್ ಸಿಂಗ್ ಅವರು ಪೆಟ್ರೋಲ್ ಪಂಪ್ ಸಿಬ್ಬಂದಿಯಿಂದ ಕಾರ್‌ನ ಟ್ಯಾಂಕ್ ಪುಲ್ ಮಾಡುವಂತೆ ಹೇಳಿದ್ದಾರೆ.

ಚರಣ್ ಸಿಂಗ್ ಅವರ ಪ್ರಕಾರ, ಪೆಟ್ರೋಲ್ ಪಂಪ್‌ನ ಸಿಬ್ಬಂದಿಯು ಪ್ರಾರಂಭದಲ್ಲಿ ಸುಮಾರು 41 ಲೀಟರ್ ಇಂಧನವನ್ನು ತುಂಬಿಸಿದ್ದಾರೆ. ಆದರೆ, ಪೆಟ್ರೋಲ್ ತುಂಬಿಸುವಾಗ ಏಕಾಏಕಿ ಪೆಟ್ರೋಲ್ ತುಂಬುವುದನ್ನು ನಿಲ್ಲಿಸಿದ್ದಾರೆ. ಚರನ್ ಅವರು ಇದನ್ನು ಪ್ರಶ್ನಿಸಿದ್ದಾರೆ ಅದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿ ಎರಡು ಕಂತುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ತುಂಬಿಸಬೇಕು ಎಂದು ಅಂತ ಹೇಳಿದ್ದಾರೆ. ನಂತರ ಅವರು ಮತ್ತೆ ವಾಹನದ ಟ್ಯಾಂಕ್‌ಗೆ ಪೆಟ್ರೋಲ್ ತುಂಬಿಸಲು ಮುಂದಾಗಿದ್ದಾರೆ.

ಹೆಚ್ಚು ಪೆಟ್ರೋಲ್ ತುಂಬಿಸಿರುವಂತೆ ಬಿಲ್

ಇನ್ನು ವಾಹನಕ್ಕೆ ಪೆಟ್ರೋಲ್ ತುಂಬಿಸುವಾಗ ಬ್ರೇಕ್ ತೆಗೆದುಕೊಂಡಿದ್ದು ಗೊಂದಲಕ್ಕೆ ಕಾರಣವಾಯಿತು. ಅಂತಿಮಾಗಿ ಬಿಲ್‌ನಲ್ಲಿ ಒಟ್ಟು 52 ಲೀಟರ್ ಪೆಟ್ರೋಲ್ ತುಂಬಿಸಿರುವಂತೆ ಉಲ್ಲೇಖಿಸಲಾಗಿದೆ. ಚರಣ್ ಅವರು ತಕ್ಷಣವೇ ಪಂಪ್ ಸಿಬ್ಬಂದಿಗೆ ಸವಾಲು ಹಾಕಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ವಾಹನಕ್ಕೆ ಪೆಟ್ರೋಲ್ ತುಂಬಿಸುವುದು ಅಸಾಧ್ಯ ಎಂದು ಹೇಳಿದ್ದಾರೆ. ಟ್ಯಾಂಕ್‌ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪೆಟ್ರೋಲ್ ತುಂಬುವುದು ಹೇಗೆ ಸಾಧ್ಯ ಎಂದು ಕಾರ್ ಮಾಲೀಕರು ಪ್ರಶ್ನೆ ಮಾಡಿದ್ದಾರೆ. ನಂತರ ಕಾರು ಉತ್ಪಾದನಾ ಕಂಪನಿಯ ಪ್ರತಿನಿಧಿಯನ್ನು ನೇರವಾಗಿ ಸ್ಥಳಕ್ಕೆ ಚರಣ್ ಅವರು ಕರೆಸಿದ್ದಾರೆ. ಕಂಪನಿಯ ಅಧಿಕಾರಿ ಆಗಮಿಸಿ ಯಾವುದೇ ಸಂದರ್ಭದಲ್ಲೂ ವಾಹನದ ಟ್ಯಾಂಕ್‌ಗೆ 45 ಲೀಟರ್‌ಗಿಂತ ಹೆಚ್ಚು ಪೆಟ್ರೋಲ್ ತುಂಬಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ದೃಢಪಡಿಸಿದ್ದಾರೆ.

ಸ್ಥಳೀಯ ತೂಕ ಮತ್ತು ಅಳತೆ ಅಧಿಕಾರಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಸಂಘಟಿತ ವಂಚನೆ ಬಗ್ಗೆ ಚರಣ್ ಸಿಂಗ್ ಅವರು ಅಧಿಕೃತ ದೂರು ನೀಡಿದ್ದಾರೆ. ವಿತರಣೆ ಯಂತ್ರಗಳಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂಬುದನ್ನು ಪರಿಶೀಲಿಸಲು ಜಿಲ್ಲಾಡಳಿತ ತನಿಖೆ ಆರಂಭಿಸಿದೆ.

WhatsApp Group Join Now
https://x.com/micchamasala/status/2060962212341309588?ref_src=twsrc%5Etfw%7Ctwcamp%5Etweetembed%7Ctwterm%5E2060962212341309588%7Ctwgr%5E0a8f8c4caf8187d51afa1b9c1530b3b4f36f024a%7Ctwcon%5Es1_c10&ref_url=https%3A%2F%2Fapi-news.dailyhunt.in%2F

Spread the love

Leave a Reply