ಖಾಸಗಿ ವಿಡಿಯೋ ಇಡ್ಕೊಂಡು ಬ್ಲಾಕ್‌ಮೇಲ್, ಹಣ ಹೊಂದಿಸಲು ಅತ್ತಿಗೆಯನ್ನೇ ಕೊಂದ ನಾದಿನಿ

ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅಂತಾರಲ್ಲ.. ಆ ಮಾತು ಅಕ್ಷರಶಃ ಸತ್ಯ ಬಿಡಿ.. ತಾವು ಮಾಡೋ ತಪ್ಪು ಮುಚ್ಚಿಕೊಳ್ಳೋದಕ್ಕೆ ಕೆಲವ್ರು ಏನ್‌ ಬೇಕಾದ್ರೂ ಮಾಡ್ಬಿಡ್ತಾರೆ.. ಸ್ನೇಹ, ಸಂಬಂಧ ಅನ್ನೋದನ್ನೂ ನೋಡದೇ ರಕ್ತ ಕುಡಿದು ರಣಕೇಕೆ ಹಾಕ್ಬಿಡ್ತಾರೆ.. ಚಿಕ್ಕಬಳ್ಳಾಪುರದಲ್ಲಿ ಇಂಥದ್ದೇ ಘಟನೆ ನಡೆದಿದೆ. ಸಹೋದರ ಸಂಬಂಧಿ ಜೊತೆ ಸೇರಿ ಅತ್ತಿಗೆಯನ್ನೇ ನಾದಿನಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಹತ್ಯೆ ಹಿಂದಿದೆ ಹಸಿಬಿಸಿ ವಿಡಿಯೋ ಕಹಾನಿ! ಅತ್ತಿಗೆಯ ನೆತ್ತರು ಕುಡಿದ ಕಿರಾತಕಿಯ ಹೆಸ್ರು ಭವ್ಯಾ. ಚಿಕ್ಕಬಳ್ಳಾಪುರ ನಗರದ ಕಂದವಾರದ ಬಾಪೂಜಿ ನಗರ … Read more

ನಾಪತ್ತೆಯಾಗಿದ್ದ ವೃದ್ದೆಯ ಮೃತದೇಹ ಪಾಳು ಕೊಳವೆ ಭಾವಿಯಲ್ಲಿ ಪತ್ತೆ.! ಚಿನ್ನಾಭರಣಕ್ಕಾಗಿ ಕೃತ್ಯವೆಸಗಿದ ಹಂತಕರು ಅಂದರ್

ನಂಜನಗೂಡು : ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ದೆ ಶವವಾಗಿ ಪತ್ತೆಯಾಗಿದ್ದಾರೆ. ನಂಜನಗೂಡು ತಾಲೂಕು ಕಸುವಿನಹಳ್ಳಿ ಗ್ರಾಮದ ಜಮೀನೊಂದರ ಪಾಳು ಕೊಳವೆಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಚಿನ್ನಾಭರಣಕ್ಕಾಗಿ ಕೊಲೆ ನಡೆದಿದ್ದು, ಕೃತ್ಯವೆಸಗಿದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಕಸುವಿನಹಳ್ಳಿ ಗ್ರಾಮದ ಶಿವರುದ್ರಮ್ಮ (63) ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ನಾಪತ್ತೆಯಾದ ಸ್ಥಳದಲ್ಲಿ ವೃದ್ದೆಯ ಚಪ್ಪಿಲಿಗಳು ಕಂಡುಬಂದಿತ್ತು. ಅಲ್ಲದೆ ಕೃತಕವಾಗಿ ಸೃಷ್ಟಿಸಿದ್ದ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿತ್ತು. ಅನುಮಾನಾಸ್ಪದವಾಗಿದ್ದ ಪ್ರಕರಣವನ್ನ … Read more

ಮನೆ ಮಗಳ ಕಾಮಾದಾಟಕ್ಕೆ ಸೊಸೆ ಹತ್ಯೆ, ದರೋಡೆಯ ಕಥೆ ಕಟ್ಟಿದ ಅತ್ತೆ, ನಾದಿನಿ, ಅಜ್ಜಿ, 24 ಗಂಟೆಯಲ್ಲೇ ಕೊಲೆ ಆರೋಪಿಗಳ ಬಂಧನ 

ಚಿಕ್ಕಬಳ್ಳಾಪುರ : ಕುಟುಂಬ ಕಲಹದಿಂದಾಗಿ ಸೊಸೆಯನ್ನ ಕೊಲೆ ಮಾಡಿಸಿದ ಅತ್ತೆ,ನಾದಿನಿ, ಅಜ್ಜಿ ದರೋಡೆ ಕಥೆ ಕಟ್ಟಿದ್ರು, ಕೊಲೆಯಾದ 24 ಗಂಟೆಯಲ್ಲೇ ಕೊಲೆ ಪ್ರಕರಣವನ್ನ ಭೇಧಿಸಿದ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ಬಳಿಯ ಬಾಪೂಜಿ ನಗರದಲ್ಲಿ ವಿವಾಹಿತ ಮಹಿಳೆಯ ಹತ್ಯೆ ಮಾಡಲಾಗಿತ್ತು, ಮೇಸ್ತ್ರೀ ನರಸಿಂಹಮೂರ್ತಿಯವರ ಸೊಸೆಯ ಕತ್ತು ಸಿಳಿ ಬರ್ಬರ ಕೊಲೆ ಮಾಡಲಾಗಿದ್ದು, ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರ ಮತ್ತು ಕಿವಿಯೊಲೆ ದೋಚಿದ ಕೊಲೆಗಡುಕರು ಪರಾರಿಯಾಗಿದ್ದರು. ಮೇ 28 ರಾತ್ರಿ ನಡೆದ ಘಟನೆಯಿಂದ … Read more

Alert : ಮೂತ್ರದ ಸೋಂಕು ಅಂತ ನಿರ್ಲಕ್ಷ್ಯ ಬೇಡ! ಇದು ಕ್ಯಾನ್ಸರ್‌ನ ಮೊದಲ ಎಚ್ಚರಿಕೆ ಆಗಿರಬಹುದು

ಅನೇಕ ಮೂತ್ರಕೋಶದ ಕ್ಯಾನ್ಸರ್ (Bladder Cancer) ರೋಗಿಗಳು ಆರಂಭದಲ್ಲಿ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿತ, ಪದೇ ಪದೇ ಮೂತ್ರ ವಿಸರ್ಜನೆ ಅಥವಾ ಮರುಕಳಿಸುವ ಮೂತ್ರದ ಸೋಂಕು (UTI) ಎಂಬ ಕಾರಣಕ್ಕೆ ಇದನ್ನು ಸಾಮಾನ್ಯ ಸೋಂಕು ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಮತ್ತು ಪದೇ ಪದೇ ಮೂತ್ರದ ತೊಂದರೆಗಳು ಕಾಣಿಸಿಕೊಂಡರೆ ಅದನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಆರಂಭಿಕ ಹಂತದಲ್ಲಿ ರೋಗವನ್ನು ಪತ್ತೆ ಹಚ್ಚುವುದರಿಂದ ಜೀವ ಉಳಿಸಬಹುದು. ಭಾರತದ ಕ್ಲಿನಿಕ್‌ಗಳಲ್ಲಿ ಮೂತ್ರಶಾಸ್ತ್ರಜ್ಞರು (Urologist) … Read more

ಫ್ಯಾಟಿ ಲಿವರ್ ಇದ್ದರೆ ಕಿಡ್ನಿಗೂ ಡೇಂಜರ್! ಈ ಎರಡು ಅಂಗಗಳ ನಡುವಿನ ಸಂಬಂಧ ಏನು.? ತಜ್ಞರಿಂದ ತಿಳಿದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅಸ್ವಸ್ಥ ಆಹಾರ ಪದ್ಧತಿ, ಅತಿಯಾದ ತೂಕ, ವ್ಯಾಯಾಮದ ಕೊರತೆ ಮತ್ತು ಕುಳಿತುಕೊಂಡೇ ಕೆಲಸ ಮಾಡುವ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಸಾಮಾನ್ಯವಾಗಿ ಜನರು ಇದನ್ನು ಕೇವಲ ಲಿವರ್‌ಗೆ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಫ್ಯಾಟಿ ಲಿವರ್ ದೇಹದ ಇತರೆ ಅಂಗಾಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಕಿಡ್ನಿ ಆರೋಗ್ಯದ ಮೇಲೆ ಇದರ ಪ್ರಭಾವ ಹೆಚ್ಚಾಗಬಹುದು ಎಂದು ಎಚ್ಚರಿಕೆ … Read more

Blood Group : ಈ ರಕ್ತದ ಗುಂಪಿನವರಿಗೆ ಚಿಕ್ಕ ವಯಸ್ಸಿನಲ್ಲೇ ಪಾರ್ಶ್ವವಾಯು ಭೀತಿ ಹೆಚ್ಚಂತೆ!

ನಮ್ಮ ರಕ್ತದ ಗುಂಪು ಕೇವಲ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಲು ಅಥವಾ ರಕ್ತ ಪಡೆದುಕೊಳ್ಳಲು ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಅದು ನಮ್ಮ ಭವಿಷ್ಯದ ಆರೋಗ್ಯದ ಬಗ್ಗೆಯೂ ದೊಡ್ಡ ಸುಳಿವು ನೀಡುತ್ತದೆ. ಇತ್ತೀಚಿನ ಆಘಾತಕಾರಿ ಅಧ್ಯಯನವೊಂದರ ಪ್ರಕಾರ, ನಿರ್ದಿಷ್ಟ ರಕ್ತದ ಗುಂಪನ್ನು ಹೊಂದಿರುವ ಜನರಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಅಪಾಯ ಇತರರಿಗಿಂತ ಗಣನೀಯವಾಗಿ ಹೆಚ್ಚಿರುತ್ತದೆ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ನಿಮ್ಮ ರಕ್ತದ ಪ್ರಕಾರವು ನಿಮ್ಮ ಆರೋಗ್ಯದ ರಹಸ್ಯಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದೆ. ಹಾಗಾದರೆ, ಯಾವ ರಕ್ತದ ಗುಂಪಿನವರಿಗೆ ಸ್ಟ್ರೋಕ್ ಅಪಾಯ … Read more

ತ್ರಿಕೋನ ಪ್ರೇಮ ಕಥೆ.! ನನಗೆ ಸಿಗದವಳು ಯಾರಿಗೂ ಸಿಗಬಾರದು’ ಎಂದ ಪ್ರೇಮಿ… ಮುಂದೆ ನಡೆದಿದ್ದು ಶಾಕಿಂಗ್!

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ 19 ವರ್ಷದ ಹರೆಯದ ಯುವಕನ ನಾಪತ್ತೆ ಪ್ರಕರಣ ಇದೀಗ ರಕ್ತಸಿಕ್ತ ಅಂತ್ಯ ಕಂಡಿದೆ. ತನ್ನ ಪ್ರೇಯಸಿ ತನಗೆ ಮಾತ್ರ ದಕ್ಕಬೇಕೆಂಬ ಹಠಕ್ಕೆ ಬಿದ್ದ ಮತ್ತೊಬ್ಬ ಪ್ರೇಮಿ ಆಕೆಯ ಸ್ವಂತ ಸಹೋದರನನ್ನೇ ಎತ್ತಿಕಟ್ಟಿ ಭೀಕರ ಹತ್ಯೆ ಮಾಡಿದ್ದಾರೆ. 19 ವರ್ಷದ ವಿಕಾಸ್ ದಳವಾಯಿ ಎಂಬಾತ ತ್ರಿಕೋನ ಪ್ರೇಮಕಥೆಗೆ ಬಲಿಯಾಗಿದ್ದಾನೆ. ವಿಕಾಸ್ ಪ್ರೀತಿಸುತ್ತಿದ್ದ ಯುವತಿಯ ಇನ್ನೊಬ್ಬ ಪ್ರೇಮಿ ಕೃಷ್ಣಾ ಹಾಗೂ ಆಕೆಯ ಸಹೋದರ … Read more

ಅನೈತಿಕ ಸಂಬಂಧಕ್ಕೆ ಪತಿ ಬಲಿ : ಪ್ರಿಯಕರನೊಂದಿಗೆ ಜೈಲು ಸೇರಿದ ಪತ್ನಿ.!

ಶಿವಮೊಗ್ಗ : ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದ್ದ ನಿಗೂಢ ಕೊ# ಪ್ರಕರಣವನ್ನು ಭೇದಿಸುವಲ್ಲಿ ಸಾಗರ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕೌಟಂಬಿಕ ಕಲಹ ಎಂದು ಬಿಂಬಿಸಿ ಮುಚ್ಚಿಹಾಕಲು ಯತ್ನಿಸಲಾಗಿದ್ದ ಈ ಕೊಲೆಯ ಹಿಂದೆ ಅನೈತಿಕ ಸಂಬಂಧದ ಕರಾಳ ಮುಖ ಬಯಲಾಗಿದ್ದು, ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರದ ಜೆ.ಪಿ. ನಗರದ ನಿವಾಸಿ ಪರಶುರಾಮ್ (40) ಕೊಲೆಯಾದ ದುರ್ದೈವಿ. ಈತನ ಪತ್ನಿ ಚೈತ್ರಾ ಹಾಗೂ ಆಕೆಯ ಪ್ರಿಯಕರ ಮಂಜು (ಯಾನೆ ಟೀಪುಡಿ ಮಂಜು) ಸದ್ಯ ಕಂಬಿ … Read more

ಮಧುಮೇಹ ಕೇವಲ ರಕ್ತಕ್ಕೆ ಮಾತ್ರವಲ್ಲ, ಬೆಡ್‌ರೂಮ್‌ಗೂ ಶತ್ರು! ಲೈಂಗಿಕ ಜೀವನದ ಮೇಲಾಗುವ ಸದ್ದಿಲ್ಲದ ದಾಳಿ

ಮಧುಮೇಹ ಅಥವಾ ಡಯಾಬಿಟಿಸ್ (Diabetes) ಎಂದ ತಕ್ಷಣ ನಮ್ಮ ಗಮನಕ್ಕೆ ಬರುವುದು ಕಿಡ್ನಿ ಸಮಸ್ಯೆ, ಹೃದಯಾಘಾತ, ಕಣ್ಣಿನ ದೃಷ್ಟಿ ಮಂದವಾಗುವುದು ಅಥವಾ ಹಾರ್ಮೋನ್ ಏರುಪೇರುಗಳು. ಆದರೆ, ಮಧುಮೇಹವು ದಂಪತಿಗಳ ಅತ್ಯಂತ ವೈಯಕ್ತಿಕವಾದ ಲೈಂಗಿಕ ಜೀವನವನ್ನು (Sex Life) ಸದ್ದಿಲ್ಲದೆ ಹೇಗೆ ನಾಶಪಡಿಸುತ್ತಿದೆ ಎಂಬ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡುವುದಿಲ್ಲ.ಭಾರತವು ಇಂದು ‘ವಿಶ್ವದ ಮಧುಮೇಹದ ರಾಜಧಾನಿ’ ಎಂದು ಕರೆಸಿಕೊಳ್ಳುತ್ತಿದೆ, ಇದರ ಜೊತೆಯಲ್ಲೇ ಲಕ್ಷಾಂತರ ದಂಪತಿಗಳ ಲೈಂಗಿಕ ಆರೋಗ್ಯವೂ ಈ ಕಾಯಿಲೆಯಿಂದಾಗಿ ಹದಗೆಡುತ್ತಿದೆ. ಸಾಮಾನ್ಯವಾಗಿ ಪುರುಷರು ತಮಗೆ ಎದುರಾಗುವ ಲೈಂಗಿಕ … Read more

ಪುರುಷರಲ್ಲಿ ಮೂಗು ಹಾಗೂ ಕಿವಿಗಳಲ್ಲಿ ಕೂದಲು ಬೆಳೆಯಲು ಕಾರಣವೇನು? ಇದನ್ನು ತೆಗೆಯಬಹುದೇ.?

ಅನೇಕ ಪುರುಷರು ತಮ್ಮ ಮೂಗು ಮತ್ತು ಕಿವಿಗಳಲ್ಲಿ ಅತಿಯಾದ ಕೂದಲು ಬೆಳವಣಿಗೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಪರಿಣಾಮವಾಗಿ, ಪುರುಷರು ಆಗಾಗ್ಗೆ ಈ ಕೂದಲನ್ನು ತೆಗೆದುಹಾಕಲು ನಿರಂತರವಾಗಿ ಪ್ರಯತ್ನಿಸುತ್ತಾರೆ. ಅನೇಕ ಪುರುಷರಲ್ಲಿ ಮೂಗು ಹಾಗೂ ಕಿವಿಯಲ್ಲಿ ಕೂದಲಿನ ಬೆಳವಣಿಗೆಯಾಗಿರುತ್ತದೆ. ಇದು ಅಸಹ್ಯ ಕಾಣೋದ್ರಿಂದ ಅವರು ಹೆಚ್ಚಾಗಿ ಅದನ್ನು ಕೀಳಲು ಪ್ರಯತ್ನಿಸುತ್ತಾರೆ. ಆದರೆ ಪುರುಷರ ಮೂಗು ಮತ್ತು ಕಿವಿಗಳಲ್ಲಿ ಕೂದಲು ಏಕೆ ಬೆಳೆಯುತ್ತದೆ ಎನ್ನುವುದು ನಿಮಗೆ ಗೊತ್ತಾ?. ಮೂಗು ಮತ್ತು ಕಿವಿಯ ಕೂದಲು ಮಾನವ ದೇಹದಲ್ಲಿ ಪ್ರಮುಖ ರಕ್ಷಣಾತ್ಮಕ ಪಾತ್ರವನ್ನು ವಹಿಸುತ್ತದೆ … Read more