ಬರುವ ದಿನಗಳು ಶುಭವಿಲ್ಲ, ಅನ್ನ ನೀರಿಗೆ ಆಹಾಕಾರ ಎಂದಿರುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ. ಜತೆಗೆ ಈ ವರ್ಷದ ಮಳೆ ಬೆಳೆಯ ಬಗ್ಗೆಯೂ ಶ್ರೀಗಳು ಮಾತನಾಡಿದ್ದಾರೆ.ಮಂಡ್ಯ ಜಿಲ್ಲೆ ಮದ್ದೂರಿಗೆ ಭಾನುವಾರ ಭೇಟಿದ ಸ್ವಾಮೀಜಿಗಳು ಶನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಪ್ರಸಕ್ತ ವರ್ಷದ ಆಗು ಹೋಗುಗಳ ಬಗ್ಗೆ ಭವಿಷ್ಯ ಹೇಳಿದ್ದಾರೆ.
ಮಳೆ ಬೆಳೆ ಚನ್ನಾಗಿ ಆಗುತ್ತದೆ!
ಈ ವರ್ಷ ದೇಶದಲ್ಲಿ ಮಳೆ ಬೆಳೆ ಚನ್ನಾಗಿ ಆಗುತ್ತದೆ. ಅದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೋಡಿಶ್ರೀಗಳು ಹೇಳಿದ್ದಾರೆ. ಈ ಮೂಲಕ ಮುಂಗಾರು ಕೈಕೊಡುವ ಆಂತಕದಲ್ಲಿದ್ದವರಿಗೆ ಶ್ರೀಗಳ ಮಾತು ತುಸು ನಿರಾಳ ಭಾವ ನೀಡಿದೆ.
ಅಗ್ನಿ ಭವ, ಅಪಮೃತ್ಯು
ಈ ವರ್ಷ ಅನ್ನ ನೀರು ಆಹಾಕಾರ ಆಗುತ್ತದೆ. ಅಗ್ನಿ ಭಯ ಜಾಸ್ತಿ ಇದೆ. ಜತೆ ಅಪಮೃತ್ಯು ಕೂಡ ಹೆಚ್ಚಾಗಿ ಆಗುತ್ತದೆ. ಗಾಳಿಯ ತೊಂದರೆ ಆಗುತ್ತದೆ. ಬರುವ ದಿನಗಳು ಶುಭವಿಲ್ಲ. ಆದರೆ, ಕರ್ನಾಟಕಕ್ಕೆ ಹೆಚ್ಚಿನ ಆತಂಕವಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ಇನ್ನೂ ರಾಜಕೀಯ ಬೆಳವಣಿಕೆ ಬಗ್ಗೆ ಮಾತನಾಡಲು ನಿರಾಕರಿಸಿದ್ದು, ಇಂತಹ ಒಳ್ಳೆಯ ಸಂದರ್ಭದಲ್ಲಿ ಯಾಕೆ ಕೇಳುತ್ತೀಯಾ ಎಂದು ಹೇಳಿದರು.
ಶನೇಶ್ವರ ಬುದ್ದಿ ಹೇಳುವ ಉಪಾಧ್ಯಾಯ
ಇಂದು ಐತಿಹಾಸಿಕವಾಗಿರುವ ದಿನ. ಎಲ್ಲ ಕಡೆ ಜನರಲ್ಲಿ ದೈವಭಕ್ತ ಹೆಚ್ಚಾಗುತ್ತಿದೆ. ಶನೇಶ್ವರ ದೇವಸ್ಥಾನ ಜೀರ್ಣೋದ್ದಾರ ಆಗಿದೆ. ಶನೇಶ್ವರ ಎಂದರೆ, ಗುರು ಇದ್ದಂತೆ. ಬುದ್ದಿ ಹೇಳುವ ಉಪಾಧ್ಯಾಯ, ತಪ್ಪಿದರೆ ತಿದ್ದುವ ದೈವ. ಅಂತಹ ದೈವದ ಸೇವೆಯನ್ನು ಮಾಡಿ ಕೇಳಿದ್ದು ಸಂತೋಷ ಆಯಿತು ಎಂದು ಕೋಡಿಶ್ರೀಗಳು ತಿಳಿಸಿದರು.
ಪ್ರತಿ ವರ್ಷ ಸಂಕ್ರಾಂತಿ ಅಥವಾ ಯುಗಾದಿಗೆ ಭವಿಷ್ಯ
ಕೋಡಿಮಠದ ಸ್ವಾಮೀಜಿಗಳು ಪ್ರತಿ ವರ್ಷವೂ ಸಂಕ್ರಾಂತಿ ಅಥವಾ ಯುಗಾದಿಗೆ ಭವಿಷ್ಯ ನುಡಿಯುತ್ತಾರೆ. ಆ ವರ್ಷದ ಮಳೆ ಬೆಳೆ ಹಾಗೂ ಪ್ರಮುಖ ರಾಜಕೀಯ ವಿದ್ಯಮಾನದ ಬಗ್ಗೆ ಸ್ವಾಮೀಜಿ ಮಾತನಾಡುತ್ತಾರೆ. ಈ ಹಿಂದೆ ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಬಗ್ಗೆ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಜತೆಗೆ ಉಕ್ರೇನ್ ರಷ್ಯಾ ಯುದ್ಧ, ಇಸ್ರೇಲ್ ಇರಾನ್ ಯುದ್ಧ, ವಿಶ್ವದ ದೊಡ್ಡ ನಾಯಕರ ತಲೆ ಉರುಳುತ್ತದೆ ಎಂಬ ಸ್ವಾಮೀಜಿಗಳ ಹಲವು ಮಾತುಗಳು ನಿಜವಾಗಿದ್ದವು ಎಂದು ಅವರ ಭಕ್ತ ವಲಯ ಹೇಳುತ್ತದೆ.