PM Kisan Maandhan : ನಮಸ್ಕಾರ ಸ್ನೇಹಿತರೇ, ರೈತರಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ. ರೈತರು ಯೋಜನೆಗಳಿಂದ ನೇರವಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರವು ರೈತರಿಗಾಗಿ ಪಿಂಚಣಿ(Pension) ಯೋಜನೆಯನ್ನು ಜಾರಿಗೊಳಿಸಿದೆ. ಈ ಪಿಂಚಣಿ ಯೋಜನೆಯಲ್ಲಿ ಪ್ರತಿ ತಿಂಗಳು ₹3,000/- ರೂಪಾಯಿ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Bele Parihara Payment : ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ.! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಬರಪರಿಹಾರ ಹಣ ನಿಮಗೆ ಬರಲ್ಲ.!
ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್(PM Kisan Maandhan) ಯೋಜನೆಯಡಿ ರೈತರು ಕೇವಲ ₹55/- ರೂಪಾಯಿ ಠೇವಣಿ ಇಟ್ಟರೆ 60 ವರ್ಷ ದಾಟಿದ ನಂತರ ರೈತರಿಗೆ ಪ್ರತಿ ತಿಂಗಳು ಪಿಂಚಣಿಯಾಗಿ ₹3,000/- ರೂಪಾಯಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. 60 ವರ್ಷ ವಯಸ್ಸಿನ ನಂತರ ರೈತರು ಕೃಷಿ ಮಾಡಲು ದೈಹಿಕವಾಗಿ ಸಾಮರ್ಥ್ಯ ಹೊಂದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಇತರರನ್ನು ಅವಲಂಬಿಸಬೇಕಾಗಿದೆ. ಆದರೆ, ಈ ಪಿಂಚಣಿ(Pension)ಯೋಜನೆಯಡಿ ರೈತರು ಯಾರನ್ನೂ ಕೂಡ ಇಳಿವಯಸ್ಸಿನಲ್ಲಿ ಅವಲಂಬಿಸುವ ಅಗತ್ಯವಿರುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2019 ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮಾಂಧನ್(PM Kisan Maandhan) ಯೋಜನೆಯನ್ನು ಆರಂಭಿಸಿತ್ತು. ಸಣ್ಣ ರೈತರಿಗೆ ಈ ಪಿಂಚಣಿ ಯೋಜನೆಯ ಮೂಲಕ ಆರ್ಥಿಕ ಪ್ರಯೋಜನಗಳನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. 18 ರಿಂದ 40 ವರ್ಷದೊಳಗಿನ ಎಲ್ಲಾ ರೈತರು ಈ ಪಿಂಚಣಿ ಯೋಜನೆಯ ಪ್ರಯೋಜನವನ್ನ ಪಡೆದುಕೊಳ್ಳಬಹುದು.
ಇದನ್ನೂ ಕೂಡ ಓದಿ : Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ
ವಿವಿಧ ವಯಸ್ಸಿನ ಹಂತಗಳಿಗೆ ಅನುಗುಣವಾಗಿ ವಿವಿಧ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ. ಇದು ₹55 ರಿಂದ ₹200 ರೂಪಾಯಿಗಳವರೆಗೆ ಇದೆ. ಈ ಪಿಂಚಣಿ ಯೋಜನೆಗೆ ಸೇರ್ಪಡೆಯಾದ ರೈತರಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ₹3,000/- ರೂಪಾಯಿ ದೊರೆಯಲಿದೆ. ಈ ಯೋಜನೆಯ ಲಾಭ ಪಡೆಯುವ ಫಲಾನುಭವಿ ರೈತರು ಯಾವುದೇ ಸಂದರ್ಭದಲ್ಲಿ ಮರಣ ಹೊಂದಿದರೆ, ಅವರ ಪತ್ನಿಗೆ ಅವರ ಅರ್ಧದಷ್ಟು ಪಿಂಚಣಿ ಅಂದರೆ ಪ್ರತಿ ತಿಂಗಳು ₹1,500/- ರೂಪಾಯಿ ಹಣ ಮೃತಪಟ್ಟ ಫಲಾನುಭವಿ ರೈತನ ಪತ್ನಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲಿದೆ.
ಈ ಪಿಂಚಣಿ ಯೋಜನೆಯ ಅಧೀಕೃತ ವೆಬ್ ಸೈಟ್ ಲಿಂಕ್ :- Pradhan Mantri Shram Yogi Maandhan Yojana
ಅರ್ಜಿ ಸಲ್ಲಿಸುವ ವಿಧಾನ :-
- ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಮೊದಲನೆಯದಾಗಿ ರೈತರು ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. Pradhan Mantri Shram Yogi Maandhan Yojana
- ಇದಾದ ನಂತರ ರೈತರು ಲಾಗಿನ್ ಆಗಿ ನಂತರ ಯೋಜನೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಅದರಲ್ಲಿ ನಮೂದಿಸಬೇಕಾಗುತ್ತದೆ.
- ನಂತರ Generate OTP ಮೇಲೆ ಕ್ಲಿಕ್ ಮಾಡಿದಾಗ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ನಂತರ OTP ಯನ್ನ ನಮೂದಿಸಿ.
- ಈ ಸಂಪೂರ್ಣ ಪ್ರಕ್ರಿಯೆಯ ನಂತರ ನೀವು Submit ಮೇಲೆ ಕ್ಲಿಕ್ ಮಾಡಬೇಕು.
- ಆಗ ನಿಮ್ಮ ಅಪ್ಲಿಕೇಶನ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
ಇದನ್ನೂ ಕೂಡ ಓದಿ : FID Number : ನೀವು ಫ್ರೂಟ್ಸ್ ಐಡಿ ಹೊಂದಿದ್ದೀರಾ.?ನಿಮ್ಮ ಹೆಸರಿಗೆ FID ಇದ್ದರೆ ಬರ ಪರಿಹಾರ ಹಣ.! ನಿಮ್ಮ FID ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ರಾಜ್ಯದಲ್ಲಿ 5 ದಿನ ಮಳೆ ಅಬ್ಬರ; ಬೆಂಗಳೂರು ಸೇರಿ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ದಿನ ಭವಿಷ್ಯ (21-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಸಾಲ ತೀರಿಸುವ ಕಾರಣಕ್ಕೆ ಪಕ್ಕದ ಮನೆಯ ಬಾಲಕನ ಕಿ*ಡ್ನಾಪ್, ಹ*ತ್ಯೆ , ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ
- ಇಂದಿನ ದಿನ ಭವಿಷ್ಯ: 12 ರಾಶಿಗಳ ಫಲ ಹೇಗಿದೆ? ಯಾರಿಗೆ ಶುಭ, ಯಾರಿಗೆ ಎಚ್ಚರಿಕೆ.?
- ವಾಹನ ಸವಾರರೇ ಎಚ್ಚರ; ಸೆಪ್ಟೆಂಬರ್ 25ರೊಳಗೆ ಈ ಕೆಲಸ ಮಾಡದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದು.?
- Fatty Liver: ನಿರ್ಲಕ್ಷಿಸಬೇಡಿ.. ಲಿವರ್ ಅಪಾಯದಲ್ಲಿದೆ ಎನ್ನಲು ಮುಖ ನೀಡುವ 4 ಎಚ್ಚರಿಕೆಗಳಿವು!
- ಗ್ರಾಮೀಣ ಆಸ್ತಿ ಮಾಲೀಕರಿಗೆ ಸರ್ಕಾರದಿಂದ ಬಿಗ್ ರಿಲೀಫ್ ; ಅ.2 ರಿಂದ ಇ-ಸ್ವತ್ತು ವಿತರಣೆ ಆರಂಭ
- ಅಂಚೆ ಕಚೇರಿಯ ಅದ್ಭುತ ಯೋಜನೆ : ಇಷ್ಟು ಹಣ ಹೂಡಿಕೆ ಮಾಡಿದ್ರೆ ಪ್ರತಿ 3 ತಿಂಗಳಿಗೆ ₹57,400 ಬಡ್ಡಿ!
- ದಿನ ಭವಿಷ್ಯ (18-09-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- E-KYC ಮಾಡದಿದ್ರೆ ರೇಷನ್ ಬಂದ್! ಸೆ.30 ಕೊನೆ ದಿನ- ಮನೆಯಿಂದ್ಲೇ ಮಾಡೋದು ಹೇಗೆ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ
- 2,000 ದಾಟಿದ UPI ಪೇಮೆಂಟ್ಗೆ MDR ಶುಲ್ಕ : ಪೆಟ್ರೋಲ್ ಬಂಕ್ಗಳಲ್ಲಿ ಇನ್ಮುಂದೆ UPI ಬಂದ್.?
- ಉದ್ಯೋಗಿಗಳಿಗೆ ಗುಡ್ ನ್ಯೂಸ್: EPFO ವೇತನ ಮಿತಿ ₹25,000 ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
- ಸೆಪ್ಟೆಂಬರ್ 17 ರ ಜಾತಕ: ವೃಷಭ, ಸಿಂಹ ಮತ್ತು ಮೀನ ರಾಶಿಗೆ ದೊಡ್ಡ ಲಾಭ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ
- ಇಂದು ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ ; ಈ 13 ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ!
- ಹಬ್ಬ ಮುಗಿಸಿ ಬೆಂಗಳೂರಿಗೆ ಬರ್ತಿದ್ದವರ ಬೈಕ್ಗೆ ವಾಹನ ಡಿಕ್ಕಿ, 8 ವರ್ಷದ ಮಗಳು ಸೇರಿ ಮೂವರ ದುರ್ಮರಣ
- ಗಣೇಶನ ಚೌತಿಯಂದೇ ಘೋರ ದುರಂತ – ಫ್ರಿಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರ ಸಜೀವ ದಹನ!
- 16 ಸೆಪ್ಟೆಂಬರ್ 2026: ಮಿಥುನ ಧನು ರಾಶಿಯವರಿಗೆ ವಿಘ್ನಗಳು ಮಾಯ: 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?
- ಸೈಲೆಂಟ್ ಕಿಲ್ಲರ್ ‘ಲಂಗ್ ಕ್ಯಾನ್ಸರ್’: ಈ ದೈನಂದಿನ ಅಭ್ಯಾಸಗಳಿಂದ ಇಂದೇ ದೂರವಿರಿ!
- ಫ್ರಿಡ್ಜ್ ಸ್ಪೋಟಕ್ಕೆ ಹೋಯ್ತಾ ಒಂದೇ ಕುಟುಂಬದ ನಾಲ್ವರ ಪ್ರಾಣ.? ಭೀಕರ ಅಗ್ನಿ ಅವಘಡಕ್ಕೆ ಅಸಲಿ ಕಾರಣ ಏನು.?
- ಬಿಪಿಎಲ್ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ರೇಷನ್ ಪಡೆಯಲು ಇನ್ನುಮುಂದೆ ಬೆರಳಚ್ಚು ಕೊಡುವುದು ಕಡ್ಡಾಯವಿಲ್ಲ!



















