PAN Aadhaar Link : ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಜೋಡಣೆಗೆ ಇನ್ನು ಮೂರೇ ದಿನ ಬಾಕಿ – ಐಟಿ ಇಲಾಖೆ ಮಹತ್ವದ ಸೂಚನೆ

PAN Aadhaar Link : ನಮಸ್ಕಾರ ಸ್ನೇಹಿತರೇ, ಇದುವರೆಗೂ ಪ್ಯಾನ್ ಕಾರ್ಡ್‌ಗೆ ಆಧಾ‌ರ್ ಸಂಖ್ಯೆಯನ್ನ (PAN Aadhaar) ಜೋಡಣೆ ಮಾಡದಿರುವ ತೆರಿಗೆದಾರರು ಇದೇ ತಿಂಗಳ 31ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ನೀವು ತೆರಿಗೆದಾರರಾಗಿದ್ದು, ಪ್ಯಾನ್ ಕಾರ್ಡ್‌ಗೆ ಆಧಾ‌ರ್ ಲಿಂಕ್ ಮಾಡದಿದ್ದಲ್ಲಿ, ತೆರಿಗೆಯು ದುಪ್ಪಟ್ಟು ಕಡಿತವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆಯು(IT) ಎಚ್ಚರಿಕೆ ನೀಡಿದೆ.

ತೆರಿಗೆ ಇಲಾಖೆಯ ನಿಯಮಾವಳಿಗಳ ಅನ್ವಯ, ಪ್ಯಾನ್‌ ಕಾರ್ಡ್ ಗೆ ಬಯೊಮೆಟ್ರಿಕ್‌ ಆಧಾರ್ ಜೋಡಣೆ ಮಾಡದಿದ್ದರೆ ಟಿಡಿಎಸ್ ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ತೆರಿಗೆ ಕಡಿತವಾಗಲಿದೆ. ಹಾಗು ಕೊನೆಯ ದಿನಾಂಕದೊಳಗೆ ಪ್ಯಾನ್ ಕಾರ್ಡ್‌ಗೆ ಆಧಾ‌ರ್ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ತೆರಿಗೆ ಕಡಿತಗೊಳಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯು ಕಳೆದ ತಿಂಗಳು ಸುತ್ತೋಲೆ ಹೊರಡಿಸಿತ್ತು.

ಇದನ್ನೂ ಕೂಡ ಓದಿ : Bele Parihara Payment : ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ.! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಬರಪರಿಹಾರ ಹಣ ನಿಮಗೆ ಬರಲ್ಲ.! 

ಇದೇ ಮೇ 31ರೊಳಗೆ ಹಣಕಾಸು ವ್ಯವಹಾರಗಳ ಹೇಳಿಕೆ ಸಲ್ಲಿಸುವಂತೆ ಬ್ಯಾಂಕ್‌ಗಳು, ವಿದೇಶಿ ವಿನಿಮಯ ವಿತರಕರು, ಸರ್ಕಾರೇತರ ಹಣಕಾಸು ಸಂಸ್ಥೆಗಳು, ಬಾಂಡ್ ಮತ್ತು ಡಿಬೆಂಚರ್‌ಗಳ ವಿತರಕರು, ಮ್ಯೂಚುವಲ್ ಫಂಡ್‌ ಟ್ರಸ್ಟಿಗಳಿಗೆ ಆದಾಯ ತೆರಿಗೆ ಇಲಾಖೆಯು ಸೂಚಿಸಿದೆ.

ಈ ಹಣಕಾಸು ವ್ಯವಹಾರಗಳ ಹೇಳಿಕೆಯಲ್ಲಿ ಇರುವ ದತ್ತಾಂಶಗಳನ್ನು ವಿಶ್ಲೇಷಿಸುವ ಮೂಲಕ ತೆರಿಗೆ ರಿಟರ್ನ್ಸ್(Tax Returns) ಸಲ್ಲಿಸದ ವ್ಯಕ್ತಿಗಳ ಬಗ್ಗೆ ಐಟಿ ಇಲಾಖೆಯು ಮಾಹಿತಿಯನ್ನು ಕಲೆ ಹಾಕುತ್ತದೆ. ಬಳಿಕ ಅಂತಹ ತೆರಿಗೆದಾರರಿಗೆ ಎಸ್‌ಎಂಎಸ್, ಇ-ಮೇಲ್ ಮತ್ತು ಪತ್ರಗಳ ಮೂಲಕ ಮಾಹಿತಿ ಕಳುಹಿಸುತ್ತದೆ.

ಇದನ್ನೂ ಕೂಡ ಓದಿ : Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ

ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಹೇಗೆ?

incometaxindiaefiling.gov.in ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ‘ಕ್ವಿಕ್ ಲಿಂಕ್ಸ್’ ವಿಭಾಗಕ್ಕೆ ಹೋಗಿ ಮತ್ತು ‘ಲಿಂಕ್ ಆಧಾರ್’ ಆಯ್ಕೆಯನ್ನು ಆರಿಸಿ. ನಿಮ್ಮ ಪ್ಯಾನ್ ಮತ್ತು ಆಧಾರ್(PAN Aadhaar) ಸಂಖ್ಯೆಯನ್ನು ನಮೂದಿಸಿ ಮತ್ತು ‘ಮೌಲ್ವಿಕರಿಸಿ’ ಬಟನ್ ಕ್ಲಿಕ್ ಮಾಡಿ. ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಹಾಗು ‘ಲಿಂಕ್‌ ಆಧಾರ್’ ಬಟನ್ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘ಮೌಲ್ವಿಕರಿಸಿ’ ಬಟನ್ ಕ್ಲಿಕ್ ಮಾಡಿ.

ಇದೇ ರೀತಿಯ ಹೊಸ ಹೊಸ ಮಾಹಿತಿಗಳು ತಿಳಿಯಲು, ವಿದ್ಯಾರ್ಥಿವೇತನಗಳು, ಸರ್ಕಾರಿ ಯೋಜನೆಗಳು, ಸರ್ಕಾರಿ ಕೆಲಸಗಳು ಹಾಗೂ ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ Telegram & Whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply