MGR ಚಿನ್ನದ ಖಡ್ಗ, ಜಯಲಲಿತಾ ಚಂಡಿಕಾಯಾಗ.. ಈಗ ಮುಕಾಂಬಿಕೆ ಸನ್ನಿದಿಯಲ್ಲಿ ‘ದಳಪತಿ’! ಇದರ ಹಿಂದಿನ ರಹಸ್ಯವೇನು?

Spread the love

ಕಳೆದ ಮೇ 10ರಂದು ಪ್ರಮಾಣವಚನ ಸ್ವೀಕರಿಸಿ, ಆಡಳಿತಾತ್ಮಕ ಕೆಲಸಗಳಲ್ಲಿ ತೀವ್ರ ಬ್ಯುಸಿಯಾಗಿದ್ದರೂ ವಿಜಯ್ ಅವರು ಕೇವಲ ಒಂದು ತಿಂಗಳ ಅಂತರದಲ್ಲಿ ಕೊಲ್ಲೂರಿಗೆ ಧಾವಿಸುತ್ತಿರುವುದು ತಮಿಳುನಾಡು ರಾಜಕಾರಣದ ದಶಕಗಳ ಹಳೆಯ ಪದ್ದತಿಯನ್ನು ನೆನಪಿಸುತ್ತಿದೆ.

ಅಷ್ಟಕ್ಕೂ ತಮಿಳು ನಾಡು ಮುಖ್ಯಮಂತ್ರಿಗಳಿಗೆ ಹಾಗೂ ಮೂಕಾಂಬಿಕಾ ದೇಗುಲಕ್ಕೆ ಇರುವ ಸಂಬಂಧವೇನು..? ಬನ್ನಿ ನೋಡೋಣ..

ಹೌದು.. ವಿಜಯ್ ಅವರು ಇಂದು ಮಧ್ಯಾಹ್ನ 3:00 ಗಂಟೆಗೆ ದೇವಸ್ಥಾನಕ್ಕೆ ಭೇಟಿ ನೀಡಿ, ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕರ್ನಾಟಕದಲ್ಲೂ ಅವರಿಗೆ ಅಪಾರ ಅಭಿಮಾನಿ ಬಳಗ ಇರುವುದರಿಂದ, ಸುರಕ್ಷತೆಯ ದೃಷ್ಟಿಯಿಂದ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಧ್ಯಾಹ್ನ 12:00 ರಿಂದ ಸಂಜೆ 5:00 ರವರೆಗೆ ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

ಕೊಲ್ಲೂರು ಮತ್ತು ತಮಿಳುನಾಡು ಸಿಎಂಗಳ ನಂಟು : ತಮಿಳುನಾಡು ರಾಜಕಾರಣಕ್ಕೂ ಮತ್ತು ಕೊಲ್ಲೂರು ಕ್ಷೇತ್ರಕ್ಕೂ ದಶಕಗಳ ಹಳೆಯ ಆಳವಾದ ಆಧ್ಯಾತ್ಮಿಕ ಸಂಬಂಧವಿದೆ. ತಮಿಳುನಾಡನ್ನು ಆಳಿದ ಘಟಾನುಘಟಿ ನಾಯಕರು ಮೂಕಾಂಬಿಕೆಯ ಪರಮ ಭಕ್ತರಾಗಿದ್ದರು ಎಂಬುದು ಇತಿಹಾಸ.

ಎಂ.ಜಿ. ರಾಮಚಂದ್ರನ್ (MGR) ಅವರ ಚಿನ್ನದ ಖಡ್ಗ: ತಮಿಳುನಾಡಿನ ಮಾಜಿ ಸಿಎಂ ಎಂಜಿಆರ್ ಅವರು ದೇವಿಯ ದರ್ಶನಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದರು. ತಾವು ಮುಖ್ಯಮಂತ್ರಿಯಾಗಿದ್ದಾಗ ದೇವಿಗೆ 1 ಕೆಜಿ ತೂಕದ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದರು. ಸುಮಾರು 12 ವರ್ಷಗಳ ಕಾಲ ಅವರು ತಮಿಳುನಾಡನ್ನು ಯಶಸ್ವಿಯಾಗಿ ಆಳಲು ದೇವಿಯ ಅನುಗ್ರಹವೇ ಕಾರಣ ಎಂಬ ನಂಬಿಕೆ ಇಂದಿಗೂ ಇದೆ.

ಜಯಲಲಿತಾ ಅವರ ಚಂಡಿಕಾ ಯಾಗ: ‘ಪುರಚ್ಚಿ ತಲೈವಿ’ ಜಯಲಲಿತಾ ಅವರು ತಮ್ಮ ರಾಜಕೀಯ ಸಂಕಷ್ಟದ ದಿನಗಳಲ್ಲಿ ಕೊಲ್ಲೂರಿಗೆ ಬಂದು ಭವ್ಯ ‘ಚಂಡಿಕಾ ಯಾಗ’ ನೆರವೇರಿಸಿದ್ದರು. ಈ ಸಂದರ್ಭದಲ್ಲಿ ಅವರು ಎಂಜಿಆರ್ ನೀಡಿದ್ದ ಪವಿತ್ರ ಚಿನ್ನದ ಖಡ್ಗವನ್ನು ಕೈಯಲ್ಲಿ ಹಿಡಿದು ಪ್ರಾರ್ಥನೆ ಸಲ್ಲಿಸಿದ್ದು ದೊಡ್ಡ ಸುದ್ದಿಯಾಗಿತ್ತು.

ರಾಜಕೀಯ ವಲಯದಲ್ಲಿ ಹೊಸ ಸಂಚಲನ : ಅಧಿಕಾರ ಹಿಡಿದ ಕೇವಲ ಒಂದು ತಿಂಗಳಲ್ಲೇ ವಿಜಯ್ ಕೊಲ್ಲೂರಿಗೆ ಭೇಟಿ ನೀಡುತ್ತಿರುವುದು, ಅವರು ಕೂಡ ಎಂಜಿಆರ್ ಮತ್ತು ಜಯಲಲಿತಾ ಅವರ ಹಾದಿಯನ್ನೇ ತುಳಿಯುತ್ತಿದ್ದಾರೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಚುನಾವಣಾ ಗೆಲುವಿನ ಹರಕೆ ತೀರಿಸಲು ಅಥವಾ ಭವಿಷ್ಯದ ರಾಜಕೀಯ ಭದ್ರತೆಗಾಗಿ ಅವರು ಈ ಭೇಟಿ ನೀಡುತ್ತಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಮೂಕಾಂಬಿಕೆಯ ದರ್ಶನದ ಬಳಿಕ ವಿಜಯ್ ಅವರು ಮಂಗಳೂರು ಮಾರ್ಗವಾಗಿ ವಿಮಾನದ ಮೂಲಕ ಸೀದಾ ಚೆನ್ನೈಗೆ ಮರಳಲಿದ್ದಾರೆ. ದಳಪತಿಯ ಈ ಭೇಟಿ ಸ

WhatsApp Group Join Now

Spread the love

Leave a Reply