Agriculture Department : ನಮಸ್ಕಾರ ಸ್ನೇಹಿತರೇ, ಕೃಷಿ ಇಲಾಖೆಯಲ್ಲಿ ಒಟ್ಟಾರೆ 945 ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳನ್ನೊಳಗೊಂಡ ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಸೂಚನೆ ಹೊರಡಿಸಿದೆ. ಕೃಷಿ ಇಲಾಖೆಯ ಉಳಿಕೆ ಮೂಲ ವೃಂದದ ಗ್ರೂಪ್ ‘ಬಿ’ ಹುದ್ದೆಗಳಾದ ಕೃಷಿ ಅಧಿಕಾರಿಗಳು 86 ಹಾಗೂ ಸಹಾಯಕ ಕೃಷಿ ಅಧಿಕಾರಿಗಳು 586 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಕೂಡ ಓದಿ : Vidya Nidhi Scholarship : ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಸಿಹಿಸುದ್ಧಿ – ರಾಜ್ಯ ಸರ್ಕಾರದಿಂದ `ವಿದ್ಯಾನಿಧಿ’ ಯೋಜನೆಗೆ ಅರ್ಜಿ ಆಹ್ವಾನ.!
ಉಳಿದಂತೆ ಹೈದರಾಬಾದ್ ಕರ್ನಾಟಕ ವಿಭಾಗದ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ 42 ಕೃಷಿ ಅಧಿಕಾರಿಗಳು ಹಾಗೂ 231 ಸಹಾಯಕ ಕರಷಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 945 ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ಈವರೆಗೆ ಕೃಷಿ ಇಲಾಖೆಯ ಅತಿ ದೊಡ್ಡ ನೇಮಕಾತಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಆನ್ಲೈನ್ ಮೂಲಕ ಅ.07ರಿಂದ ಅರ್ಜಿ ಸಲ್ಲಿಕೆ ಮಾಡಬಹುದಿದ್ದು, ನವೆಂಬರ್ 07ಕ್ಕೆ ಕೊನೆಯ ದಿನಾಂಕವಾಗಿದೆ. ಶೈಕ್ಷಣಿಕ ಮಾನದಂಡಗಳು, ವಯೋಮಿತಿ ಸೇರಿದಂತೆ ಇತರೆ ಅರ್ಹತೆಗಳಿಗಾಗಿ ಕೆಳಗೆ ನೀಡಿರುವ ಪಿಡಿಎಫ್ ವೀಕ್ಷಣೆ ಮಾಡಿ.
ಪಿಡಿಎಫ್ ಲಿಂಕ್ :- https://kpsc.kar.nic.in/AAO%20-%20AO_RPC_Notification.pdf
ಹೈದರಾಬಾದ್ ಕರ್ನಾಟಕ ವೃಂದದ ನೇಮಕಾತಿ ಅಧಿಸೂಚನೆ :- https://kpsc.kar.nic.in/AAO%20-%20AO_HK_Notification.pdf
ಇದನ್ನೂ ಕೂಡ ಓದಿ : ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ಸೌಲಭ್ಯ – business loan for women
ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ವಿಶೇಷ ಪ್ರಯತ್ನದ ಫಲವಾಗಿ ಈ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಇಲಾಖೆ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರಿವುದು ಇದೇ ಮೊದಲು. ಎನ್. ಚಲುವರಾಯಸ್ವಾಮಿ ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೇ ಇಲಾಖಾ ಸುಧಾರಣೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇಲಾಖೆಯಲ್ಲಿ ಶೇ.60 ಕ್ಕೂ ಅಧಿಕ ಹುದ್ದೆ ಗಳು ಖಾಲಿ ಇರುವುದನ್ನು ಮನಗಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ಆರ್ಥಿಕ ಇಲಾಖೆ ಅನುಮತಿಯನ್ನು ಪಡೆದು ಇಲಾಖೆ ಮೂಲಕ ಕೆ.ಪಿ.ಎಸ್.ಸಿ ಗೆ ಪ್ರಸ್ತಾವನೆ ಕಳಿಸಲು ಕಾರಣರಾಗಿದ್ದಾರೆ.
ಈ ನೇಮಕಾತಿಯಿಂದ ರಾಜ್ಯದ 31 ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿ ತಳ ಮಟ್ಟದಲ್ಲಿ ಕೆಲಸ ಮಾಡಲು ಅಧಿಕಾರಿಗಳನ್ನು ನೇಮಿಸಲು ಸಾಧ್ಯವಾಗಲಿದೆ. 2008 ರಲ್ಲಿ ಕೆ.ಪಿ ಎಸ್.ಸಿ ಮೂಲಕ 410 ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇದೀಗ ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿ ಮಾಡಲು ಕ್ರಮ ವಹಿಸಲಾಗಿದ್ದು ಮೂರು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣ ಗೊಳಿಸಲು ಸೂಚಿಸಲಾಗಿದೆ. ಇದರಿಂದ ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳು ಲಭ್ಯವಾಗಲಿದ್ದು ಕೃಷಿಕ ಸಮುದಾಯದ ಮಾರ್ಗದರ್ಶನ ಹಾಗೂ ಸೇವೆಗೆ ದೊಡ್ಡ ಶಕ್ತಿ ದೊರೆತಂತಾಗಲಿದೆ.
ಇದನ್ನೂ ಕೂಡ ಓದಿ : Canara Bank Recruitment : ಕೆನರಾ ಬ್ಯಾಂಕಿನಲ್ಲಿ 3,000 ಹುದ್ದೆಗಳಿಗೆ ಅರ್ಜಿ ಆಹ್ವಾನ – ಹೇಗೆ ಅರ್ಜಿ ಸಲ್ಲಿಸುವುದು.? ಕೊನೆಯ ದಿನಾಂಕ ಯಾವುದು.?
ಕೃಷಿ ಇಲಾಖೆಯಲ್ಲಿ ಏಕಕಾಲದಲ್ಲಿ ಇಷ್ಟು ದೊಡ್ಡ ಮಟ್ಟದ ನೇಮಕಾತಿಗೆ ಅನುಮತಿ ಒದಗಿಸಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃಷಿ ಸಚಿವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ನೇಮಕಾತಿಯಿಂದ ಇಲಾಖೆಯಲ್ಲಿ ಖಾಲಿ ಇದ್ದ ಮೂರನೇ ಒಂದರಷ್ಟು ಅಧಿಕಾರಿಗಳ ಹುದ್ದೆ ಭರ್ತಿಯಾದಂತಾಗಲಿದೆ. ಇದರಿಂದ ರೈತರಿಗೆ ಸೇವಾ ಸೌಲಭ್ಯ ಒದಗಿಸುವ ಪ್ರಕ್ರಿಯೆ ಸುಗಮವಾಗಲಿದೆ. ಬಾಕಿ ಉಳಿವ ಖಾಲಿ ಹುದ್ದೆಗಳ ಭರ್ತಿಗೂ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಆರೆಸ್ಸೆಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ; ಪ್ರಿಯಾಂಕ್ ಖರ್ಗೆ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
- ಕೇವಲ 40 ನಿಮಿಷದಲ್ಲೇ ಕೂದಲು ಉದುರುವ ಸಮಸ್ಯೆಗೆ ಮುಕ್ತಿ ನೀಡುತ್ತೆ ಈ ಎಲೆ..! ಇಂದೇ ಟ್ರೈ ಮಾಡಿ
- ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಒಂದೆರಡು ಬಾರಿ ಡ್ರಿಂಕ್ಸ್ ಮಾಡಿದರೂ, ಲಿವರ್ ಗೆ ಸಮಸ್ಯೆ ಆಗುತ್ತಾ.?
- ಯಾರ ಮನೆ ಬಾಗಿಲಿಗೆ ಯಾರು ಹೋಗಿದ್ದರು ಎಂಬುದು ನನಗೂ ಗೊತ್ತು: ಎಚ್ಡಿಕೆ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು!
- ‘ವಿಜಯೇಂದ್ರನನ್ನು ಒದ್ದು ಬಿಸಾಕಿ’ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಲೀಕ್, ನೋ ಕಮೆಂಟ್ಸ್ ಎಂದ ಡಿವಿಎಸ್!!
- ತೆರಿಗೆ ಹಣಕ್ಕಿಂತ ಜನರ ಆರೋಗ್ಯವೇ ಮುಖ್ಯ: ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ- ಮುಕ್ತ ಕರ್ನಾಟಕಕ್ಕೆ ಡಿ.ಕೆ. ಶಿವಕುಮಾರ್ ಖಡಕ್ ನಿರ್ಧಾರ
- ‘ನಮ್ಮ ರಾಜಕೀಯ ಮುಗಿಯಿತು.. ಚುನಾವಣಾ ರಾಜಕೀಯದ ಅಂತ್ಯದ ಬಗ್ಗೆ ಮೈಸೂರಲ್ಲಿ ಮುನ್ಸೂಚನೆ ನೀಡಿದ್ರಾ ಮಾಜಿ ಸಿಎಂ ಸಿದ್ದರಾಮಯ್ಯ!
- ಹೋಟೆಲ್ನಲ್ಲಿ ಕೊನೆಯ ಊಟ ಮಾಡಿ ನದಿಗೆ ಹಾರಿದ ದಂಪತಿ, ಇಬ್ಬರು ಮಕ್ಕಳು; ಬಡತನ ತಾಳಲಾರದೆ ಒಂದೇ ಕುಟುಂಬದ ನಾಲ್ವರ ಸಾಮೂಹಿಕ ಆತ್ಮಹತ್ಯೆ!
- ಗರ್ಭದಲ್ಲಿರೋ ಮಗುವಿಗೆ DNA ಟೆಸ್ಟ್ ಮಾಡಿಸಲು ಗಂಡನ ಪಟ್ಟು; ಮನನೊಂದು 23 ವರ್ಷದ ಗರ್ಭಿಣಿ ಆತ್ಮಹತ್ಯೆ!
- 10 ಕೆಜಿ ತೂಕ ಇಳಿಸಿಕೊಳ್ಳಲು ಜೀರಿಗೆ ನೀರನ್ನ ಎಷ್ಟು ದಿನಗಳವರೆಗೆ ಕುಡಿಯಬೇಕು.?
- ರಕ್ತದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಕಿಡ್ನಿ ಹಾಗೂ ಮೂಳೆಗಳಿಗೆ ಹಾನಿ ಜಾಸ್ತಿಯಂತೆ!
- ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ! SIR ಪರಿಣಾಮ ಏನೆಂದು ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳದ ಫಲಿತಾಂಶದಲ್ಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ
- ಕಾರಿನಲ್ಲಿ ನಾಡಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸ್ಪೋಟಕ ವಿಚಾರ ಬಿಚ್ಚಿಟ್ಟ ಸಂತ್ರಸ್ತೆ.!
- ಹರ್ನಿಯಾ : ಹೊಟ್ಟೆ ಭಾಗದಲ್ಲಿ ನೋವು, ತೊಡೆಸಂಧಿಯ ಉಬ್ಬು, ಹರ್ನಿಯಾ ನಡುವಿನ ವ್ಯತ್ಯಾಸ ತಿಳಿಯಿರಿ
- ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಆಗುತ್ತಾ? ವೈದ್ಯರೇ ಬಿಚ್ಚಿಟ್ಟ ಸತ್ಯವಿದು..
- ಹೆಣ್ಣಿಗೆ ಮಿಲನದಲ್ಲಿ ಸಂಪೂರ್ಣ ತೃಪ್ತಿ ಸಿಗದೇ ಇದ್ದರೆ, ಆಕೆಯ ಮೇಲಾಗುವ 6 ಆಶ್ಚರ್ಯಕರ ಪರಿಣಾಮಗಳು | Health Tips
- ಅಂಬಾನಿ ನೀಡಿದ ₹900 ಕೋಟಿ ದೇಣಿಗೆಯ ಲೆಕ್ಕ ನೀಡಿ: ರಾಮಮಂದಿರ ಟ್ರಸ್ಟ್ʼಗೆ ಬಿ.ಕೆ. ಹರಿಪ್ರಸಾದ್ ಪ್ರಶ್ನೆ
- ಭಾಮೈದುನ ಮೇಲಿನ ದಾಳಿ ಸತ್ಯಾಂಶ ತಿಳಿಯಲು 6 ತಿಂಗಳು ಬೇಕು : ಸಚಿವ ಸತೀಶ್ ಜಾರಕಿಹೊಳಿ
- ಭೂತಾಯಿ ಬಾಯಿಬಿಡಲಿದ್ದಾಳೆ ಅಗ್ನಿ ಅವಘಡ ಹೆಚ್ಚಲಿದೆ : ನಡುಕ ಹುಟ್ಟಿಸುತ್ತಿದೆ ಕೋಡಿಶ್ರೀಗಳ ಭೀಕರ ಭವಿಷ್ಯ
- ಮಗುವಿನ ಅಳುವಿಗೆ ಬೇಸತ್ತು ಕತ್ತು ಸೀಳಿ ಹೆತ್ತ ಕಂದನನ್ನೇ ಹತ್ಯೆಗೈದ ತಾಯಿ! ಬಳಿಕ ತನ್ನ ಗಂಟಲು ಸೀಳಿ ಆತ್ಮಹತ್ಯೆಗೆ ಯತ್ನ



















