ಉತ್ತರ ಪ್ರದೇಶದ (Uttar Pradesh) ಆಗ್ರಾ ಶಿಕ್ಷಕರ ಎಂಎಲ್ಸಿ ಚುನಾವಣೆ (Teachers MLC Election) ವೇಳೆ ಹೈಡ್ರಾಮಾ ನಡೆದಿದ್ದು, ಸಮಾಜವಾದಿ ಪಕ್ಷದ (SP) ಅಭ್ಯರ್ಥಿ ಡಾ. ಆಕಾಶ್ ಅಗರ್ವಾಲ್ (Akash Agarawal) ಅಧಿಕಾರಿಗಳು ಹಾಗೂ ಆಡಳಿತ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿ ಕಣ್ಣೀರಿಟ್ಟಿದ್ದಾರೆ.
ಮತದಾನದ ವೇಳೆ ಅಕ್ರಮಗಳು ನಡೆಯುತ್ತಿವೆ ಮತ್ತು ತಮ್ಮ ಬೆಂಬಲಿಗರನ್ನು ಪೊಲೀಸರು ಹಾಗೂ ಆಡಳಿತದವರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಕಣದಲ್ಲಿ ತಮಗೆ ಮತ್ತು ತಮ್ಮ ಬೆಂಬಲಿಗರಿಗೆ ಆಗುತ್ತಿರುವ ಕಿರುಕುಳವನ್ನು ಸಹಿಸಲಾಗದೆ ಆಕಾಶ್ ಅಗರ್ವಾಲ್ ಭಾವುಕರಾದರು. ‘ನಾನು ಪಾಕಿಸ್ತಾನದಿಂದ ಬಂದಿರುವ ಉಗ್ರನಂತೆ ನನ್ನನ್ನು ನಡೆಸಿಕೊಳ್ಳಲಾಗುತ್ತಿದೆ. ನನಗೆ ಇಂತಹ ಸನಾತನ ಧರ್ಮದಲ್ಲಿ ಬದುಕಲು ಇಷ್ಟವಿಲ್ಲ. ಮುಂದಿನ ತಿಂಗಳು ಲಕ್ನೋದ ಶಾಹಿ ಈದ್ಗಾಗೆ ಹೋಗಿ ಇಸ್ಲಾಂ ಧರ್ಮ ಸ್ವೀಕರಿಸುತ್ತೇನೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
https://x.com/mediacellsp/status/2113567761675002123?ref_src=twsrc%5Etfw%7Ctwcamp%5Etweetembed%7Ctwterm%5E2113567761675002123%7Ctwgr%5Ed81e09e566a8e078b4824d26e07cc736be5384e6%7Ctwcon%5Es1_c10&ref_url=https%3A%2F%2Fapi-news.dailyhunt.in%2F
ಚುನಾವಣೆಯಲ್ಲಿ ಗೆಲುವು ಅಥವಾ ಸೋಲು ತಮಗೆ ಮುಖ್ಯವಲ್ಲ ಎಂದಿರುವ ಅವರು, ತಾವು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದು, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಅಥವಾ ಯಾವ ಧರ್ಮವನ್ನು ಅನುಸರಿಸಬೇಕು ಎಂಬುದನ್ನು ತಾವೇ ನಿರ್ಧರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಮತದಾನದ ಸಂದರ್ಭದಲ್ಲಿ ಬೂತ್ ಕ್ಯಾಪ್ಚರಿಂಗ್ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿ ಅವರು ಆಗ್ರಾ ವಿಭಾಗೀಯ ಆಯುಕ್ತ ನಗೇಂದ್ರ ಪ್ರತಾಪ್ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿದ್ದಾರೆ.
ತಮ್ಮ ಪರವಾಗಿ ನಿಂತಿರುವ ಸುಮಾರು 12 ಜಿಲ್ಲೆಗಳ ಶಾಲಾ ವ್ಯವಸ್ಥಾಪಕರು ಹಾಗೂ ಶಿಕ್ಷಕರನ್ನು ಪೊಲೀಸರು ಪದೇ ಪದೇ ಗುರಿಯಾಗಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ತಮ್ಮ ಮೇಲೆ ಕ್ರಮ ಕೈಗೊಳ್ಳುವುದಾದರೆ ನೇರವಾಗಿ ಜೀವಾವಧಿ ಶಿಕ್ಷೆ ನೀಡಿ, ಆದರೆ ತಮ್ಮೊಂದಿಗೆ ಗುರುತಿಸಿಕೊಂಡಿರುವ ಮುಗ್ದ ಶಿಕ್ಷಕರನ್ನು ಹಾಗೂ ಸಹೋದ್ಯೋಗಿಗಳನ್ನು ತೊಂದರೆಗೊಳಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಈ ಹಿಂದೆ 2020ರ ಎಂಎಲ್ಸಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆಕಾಶ್ ಅಗರ್ವಾಲ್, ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿಯು ಹರಿಕಿಶೋರ್ ತಿವಾರಿ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅವರು ಸಮಾಜವಾದಿ ಪಕ್ಷವನ್ನು ಸೇರ್ಪಡೆಗೊಂಡು ಕಣಕ್ಕಿಳಿದಿದ್ದರು.
ಉಗ್ರನಂತೆ ನೋಡ್ತಿದ್ದಾರೆ, ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಬಿಡ್ತೇನೆ – ಕಣ್ಣೀರಿಟ್ಟ ಸಮಾಜವಾದಿ ನಾಯಕ!
WhatsApp Group
Join Now