ವೈರಲ್‌ ಫಿವರ್ ಎಫೆಕ್ಟ್ ; ಕಿಡ್ನಿ ಜೋಪಾನ, ಈ ಲಕ್ಷಣಗಳು ಕಂಡರೆ ಇಂದೇ ಎಚ್ಚೆತ್ತುಕೊಳ್ಳಿ.!

Spread the love

ಮಳೆಗಾಲ ಹಾಗೂ ಹವಾಮಾನ ಬದಲಾವಣೆಯಿಂದಾಗಿ ಸದ್ಯ ರಾಜ್ಯ ಹಾಗೂ ದೇಶಾದ್ಯಂತ ವೈರಲ್ ಜ್ವರ (Viral Fever) ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಸಾಮಾನ್ಯವಾಗಿ ಈ ಜ್ವರಗಳು ಮೂರರಿಂದ ಏಳು ದಿನಗಳಲ್ಲಿ ತಾನಾಗಿಯೇ ಗುಣಮುಖವಾಗುವುದರಿಂದ, ಜನರಿಗೆ ಆರೋಗ್ಯ (Health Alert) ಸಂಪೂರ್ಣ ಸರಿಹೋಯಿತು ಎಂಬ (Kidney Health) ಭಾವನೆ ಮೂಡುತ್ತದೆ.

ಆದರೆ, ಜ್ವರ ಮಾಯವಾದರೂ ಇದರ ದುಷ್ಪರಿಣಾಮಗಳು ದೇಹದ ಇತರೆ ಪ್ರಮುಖ ಅಂಗಗಳ ಮೇಲೆ, ಅದರಲ್ಲೂ ನಿರ್ದಿಷ್ಟವಾಗಿ ಮೂತ್ರಪಿಂಡಗಳ (Kidneys) ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ವೈರಲ್ ಜ್ವರ ಎಂದರೇನು.?

ವೈರಲ್ ಜ್ವರ ಎಂಬುದು ಸ್ವತಃ ಇದೊಂದು ಪ್ರತ್ಯೇಕ ಕಾಯಿಲೆಯಲ್ಲ, ಬದಲಾಗಿ ದೇಹದೊಳಗೆ ಪ್ರವೇಶಿಸುವ ವೈರಸ್‌ಗಳ ವಿರುದ್ಧ ಹೋರಾಡಲು ನಮ್ಮ ರೋಗನಿರೋಧಕ ಶಕ್ತಿಯು ತೋರುವ ಪ್ರತಿಕ್ರಿಯೆಯಾಗಿದೆ. ವೈರಸ್ ದಾಳಿಯಿಟ್ಟಾಗ ದೇಹದ ಉಷ್ಣತೆ ಏರಿಕೆಯಾಗುತ್ತದೆ. ಇದು ಸಾಮಾನ್ಯವಾಗಿ ಕೆಲವೇ ದಿನಗಳಲ್ಲಿ ವಾಸಿಯಾದರೂ, ಪ್ರಸ್ತುತ ಕೆಲವು ರೋಗಿಗಳಲ್ಲಿ ಕಡಿಮೆ ಜ್ವರವಿದ್ದರೂ ಅದು ನೇರವಾಗಿ ಕಿಡ್ನಿಗಳ ಕಾರ್ಯಕ್ಷಮತೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ವೈದ್ಯಕೀಯ ತಪಾಸಣೆಗಳಲ್ಲಿ ದೃಢಪಟ್ಟಿದೆ.

ಈ ಕುರಿತು ವದ್ಯರು ನೀಡಿರುವ ಮಾಹಿತಿಯ ಪ್ರಕಾರ, ಕೆಲವು ನಿರ್ದಿಷ್ಟ ವೈರಸ್‌ಗಳು ನೇರವಾಗಿ ಮೂತ್ರಪಿಂಡಗಳ ಮೇಲೆ ದಾಳಿ ನಡೆಸಿದರೆ, ಇನ್ನು ಕೆಲವು ವೈರಸ್‌ಗಳು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಕಿಡ್ನಿಗೆ ಹಾನಿ ಉಂಟುಮಾಡುತ್ತವೆ. ಆದ್ದರಿಂದ ಯಾವುದೇ ವೈರಲ್ ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಮೂತ್ರಪಿಂಡಗಳ ಆರೋಗ್ಯದ ಬಗ್ಗೆ ನಿರಂತರ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.

ಯಾರು ಹೆಚ್ಚು ಅಪಾಯದಲ್ಲಿದ್ದಾರೆ.?

ವೈರಲ್ ಜ್ವರದ ಸೋಂಕಿನ ಬಳಿಕ ಈ ಕೆಳಗಿನ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಕಿಡ್ನಿ ವೈಫಲ್ಯ ಅಥವಾ ತೊಂದರೆ ಎದುರಾಗುವ ಸಂಭವ ಬಹಳ ಹೆಚ್ಚಿರುತ್ತದೆ.

• ಮಧುಮೇಹ (Diabetes) ರೋಗಿಗಳು
• ಅಧಿಕ ರಕ್ತದೊತ್ತಡ (High Blood Pressure) ಇರುವವರು
• ಈಗಾಗಲೇ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವವರು
• ರೋಗನಿರೋಧಕ ಶಕ್ತಿ (Immunity) ಬಹಳವಾಗಿ ಕುಸಿದಿರುವವರು
• ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು

ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ.!

ವೈರಲ್ ಜ್ವರದಿಂದ ಚೇತರಿಸಿಕೊಂಡ ನಂತರ ನಿಮ್ಮ ದೇಹದಲ್ಲಿ ಈ ಕೆಳಗಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ

• ಮೂತ್ರದ ಪ್ರಮಾಣದಲ್ಲಿ ಗಣನೀಯ ಇಳಿಕೆ
• ಕಾಲು ಅಥವಾ ಪಾದಗಳಲ್ಲಿ ಅಸಾಮಾನ್ಯ ಊತ
• ವಿಪರೀತ ಸುಸ್ತು ಹಾಗೂ ದೌರ್ಬಲ್ಯ
• ವಾಂತಿ ಅಥವಾ ವಾಕರಿಕೆ ಭಾವನೆ
• ಗಾಢ ಬಣ್ಣದ ಮೂತ್ರ ವಿಸರ್ಜನೆ

ವೈದ್ಯರು ಇಂತಹ ಪ್ರಕರಣಗಳಲ್ಲಿ ರಕ್ತ ಹಾಗೂ ಮೂತ್ರ ಪರೀಕ್ಷೆಗಳನ್ನು (Blood and Urine Tests) ನಡೆಸಿ ಸೋಂಕಿನ ತೀವ್ರತೆಯನ್ನು ಅಂದಾಜಿಸುತ್ತಾರೆ. ಅಗತ್ಯವಿದ್ದರೆ ಮೂತ್ರಪಿಂಡದ ಬಯಾಪ್ಸಿ (Kidney Biopsy) ಪರೀಕ್ಷೆಯನ್ನು ನಡೆಸಿ ಸೂಕ್ತ ಚಿಕಿತ್ಸೆ ಆರಂಭಿಸುತ್ತಾರೆ.

WhatsApp Group Join Now

Spread the love

Leave a Reply