Bigg Boss : ಪತ್ನಿ ಶ್ರಾವಣಿ ಮೇಲೆ ಬಿಗ್‌ಬಾಸ್ ಖ್ಯಾತಿಯ ಸಮೀರಾಚಾರ್ಯ ಹಲ್ಲೆ..? ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ.!

Bigg Boss : ಬಿಗ್ ಬಾಸ್ ಕನ್ನಡ ಖ್ಯಾತಿಯ ಸಮೀರ್ ಆಚಾರ್ಯ ತನ್ನ ತಂದೆ-ತಾಯಿಯ ಜೊತೆಗೂಡಿ ತನ್ನ ಪತ್ನಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಂದಿನಂತೆ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದ ಶ್ರಾವಣಿ ಸಮೀರ್ ಆಚಾರ್ಯ ತನ್ನ ಮಗಳು ಅಳುತ್ತಿದ್ದ ಕಾರಣಕ್ಕೆ ಮಗಳನ್ನ ಬೆದರಿಸಿದ್ದಾರೆ.

WhatsApp Group Join Now

ಇದನ್ನೂ ಕೂಡ ಓದಿ : ಬಿಪಿಎಲ್ ಕಾರ್ಡ್ ಇದ್ದವರಿಗೆ ₹30,000/- ರೂಪಾಯಿ ಸಹಾಯಧನ.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

ಇದೇ ವಿಷಯಕ್ಕೆ ಸಮೀರ್ ಆಚಾರ್ಯ ಅವರ ತಂದೆ ತನ್ನ ಸೊಸೆ ಶ್ರಾವಣಿಗೆ ಬೈದಿದ್ದಾರೆ. ಇದೇ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ. ನಂತರ ಸಮೀರ್ ಸೇರಿದಂತೆ ಅವರ ಅತ್ತೆ, ಮಾವ ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದ ಶ್ರಾವಣಿ ಮೊಬೈಲ್ ಫೋನ್ ಒಡೆದು ಹಾಕಿದ್ದಾರೆ. ಗಲಾಟೆ ವೇಳೆ ಶ್ರಾವಣಿ ಅವರಿಗೆ ಕೈ, ಮುಖಕ್ಕೆ ಗಾಯಗಳಾಗಿವೆ.

WhatsApp Group Join Now

ಇದನ್ನೂ ಕೂಡ ಓದಿ : Atal Pension Yojana : ಈ ಯೋಜನೆಯಡಿ ಪ್ರತಿ ತಿಂಗಳಿಗೆ ₹5,000/- ಪಿಂಚಣಿ ಪಡೆಯಲು ಅರ್ಜಿ ಆಹ್ವಾನ.! ಬೇಕಾಗುವ ದಾಖಲೆಗಳೇನು.?

ಮತ್ತೊಂದೆಡೆ ಸಮೀರ್ ಆಚಾರ್ಯ ತಂದೆಯ ತಲೆಗೆ ಗಾಯಗಳಾಗಿವೆ. ಸದ್ಯ ಶ್ರಾವಣಿ ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಸಮೀರ್ ಆಚಾರ್ಯ ತಂದೆ ಕೂಡ ಸೊಸೆ ಶ್ರಾವಣಿ ಸಮೀರ್ ಆಚಾರ್ಯ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ. ಆದರೆ ಈ ಬಗ್ಗೆ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಅವರನ್ನು ಮಾತನಾಡಿಸಲು ಮುಂದಾದಾಗ ಅವರು ಮಾವ, ಅತ್ತೆ ಹಾಗೂ ಗಂಡ ಹಲ್ಲೆ ನಡೆಸಿದ್ದು ಸತ್ಯ ಎಂದಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

WhatsApp Group Join Now

Leave a Reply