PMKVY : ಕೆಲಸ ಇಲ್ಲದವರಿಗೆ ಉಚಿತ ತರಬೇತಿ ಜೊತೆಗೆ ₹8,000/- ಹಣ ಬರುತ್ತೆ.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

PMKVY : ನಮಸ್ಕಾರ ಸ್ನೇಹಿತರೇ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯಮ ಪ್ರಾರಂಭ ಮಾಡಲು ಸಹಾಯ ಮಾಡುತ್ತಿದೆ. ಇದಕ್ಕಾಗಿ ಪಿಎಮ್ ಮೋದಿ ಅವರು 2015ರಲ್ಲಿ ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಯನ್ನು(PM Kaushal Vikas Yojana) ಜಾರಿಗೆ ತಂದಿದ್ದರು.

ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಯ(PM Kaushal Vikas Yojana) ಮೂಲಕ ನಿರುದ್ಯೋಗಿ ಯುವಕರು ತಮ್ಮದೇ ಆದ ಸ್ವಂತ ಉದ್ಯಮ ಅಥವಾ ಸ್ವಂತ ಉದ್ಯೋಗ ಪ್ರಾರಂಭಿಸಲು ಉಚಿತವಾಗಿ ತರಬೇತಿ ಕೊಡುವುದರ ಜೊತೆಗೆ ₹8,000/- ಹಣ ಕೂಡ ಕೊಡಲಾಗುತ್ತದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

kannada news time

ಇದನ್ನೂ ಕೂಡ ಓದಿ : Raitha Siri Yojane : ರೈತ ಸಿರಿ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಿಂದ ರೈತರಿಗೆ ಸಿಗುತ್ತೆ ₹10,000/- ರೂಪಾಯಿ ಹಣ – ಹೇಗೆ ಪಡೆಯುವುದು.?

ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ – PM Kaushal Vikas Yojana :

ದೇಶದ ಯುವಪೀಳಿಗೆಗಾಗಿ ಜಾರಿಗೆ ತಂದಿರುವ ಈ ಯೋಜನೆಯ ಸೌಲಭ್ಯವನ್ನು ನಿರುದ್ಯೋಗಿ ಯುವಕ-ಯುವತಿಯರು ಇಬ್ಬರು ಕೂಡ ಪಡೆದುಕೊಳ್ಳಬಹುದು. ಚೆನ್ನಾಗಿ ಓದಿರುವವರಿಗೆ ಆದ್ಯತೆ ಕೊಡಲಾಗುತ್ತಿದೆ. ದೇಶದ ಎಲ್ಲಾ ರಾಜ್ಯದವರು ಕೂಡ ಈ ಪಿಎಂ ಕೌಶಲ್ ವಿಕಾಸ್ ಯೋಜನೆಗೆ(PM Kaushal Vikas Yojana) ಆನ್ ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ವಿಭಿನ್ನ ರೀತಿಯ ತರಬೇತಿಗೆ ಬೇರೆ ಬೇರೆ ಕಾಲದ ಮಿತಿಯನ್ನು ಫಿಕ್ಸ್ ಮಾಡಲಾಗಿದ್ದು, ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಆ ರಿಸಿಕೊಂಡು, ಕಳಿತುಕೊಳ್ಳಬಹುದು. ಈ ಪಿಎಂ ಕೌಶಲ್ ವಿಕಾಸ್ ಯೋಜನೆಯ(PM Kaushal Vikas Yojana) ಮೂಲಕ ಕೆಲಸಕ್ಕಾಗಿ ಆನ್ ಲೈನ್ ಅಥವಾ ಆಫ್ ಲೈನ್ ಎರಡು ರೀತಿಯಲ್ಲಿ ತರಬೇತಿಗಳನ್ನು ಅಟೆಂಡ್ ಮಾಡಬಹುದು. ನಿರುದ್ಯೋಗಿ ಯುವಕ-ಯುವತಿಯರಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ.

kannada news time

ಇದನ್ನೂ ಕೂಡ ಓದಿ : PM Awas Yojana : ಪಿಎಂ ಆವಾಸ್ ಯೋಜನೆಗೆ ಅರ್ಜಿಗಳು ಆರಂಭ | 2024-25 ನೇ ಸಾಲಿನ ಮನೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ

ಬೇಕಾಗುವ ದಾಖಲೆಗಳೇನು.?

 • ವಿದ್ಯಾರ್ಹತೆ ಸರ್ಟಿಫಿಕೇಟ್
 • ಆಧಾರ್ ಕಾರ್ಡ್
 • ಪಾನ್ ಕಾರ್ಡ್
 • ಬ್ಯಾಂಕ್ ಪಾಸ್ ಬುಕ್
 • ಜಾತಿ ಮತ್ತು ಆದಾಯ ಪ್ರಮಾಣಪತ್ರ
 • ವಯಸ್ಸಿನ ಧೃಡೀಕರಣ ಪತ್ರ
 • ಮೊಬೈಲ್ ನಂಬರ್
 • Employment ID

ಏನೆಲ್ಲಾ ಅರ್ಹತೆಗಳಿರಬೇಕು.?

 • ಚೆನ್ನಾಗಿ ಓದಿರುವ ವಿದ್ಯಾವಂತರಿಗೆ ಅವರ ಕೌಶಲ್ಯವನ್ನು ಹೆಚ್ಚಿಸಿಕೊಂಡು, ಅವರ ಕೆಲಸಕ್ಕೆ ಸಹಾಯ ಮಾಡುವ ಯೋಜನೆ ಇದಾಗಿದ್ದು, ಅಭ್ಯರ್ಥಿಗಳು ಶಿಕ್ಷಣ ಪಡೆದಿರುವುದು ಮುಖ್ಯವಾಗಿರುತ್ತದೆ.
 • ದೇಶದ ಎಲ್ಲಾ ರಾಜ್ಯದವರು ಪಿಎಂ ಕೌಶಲ್ ವಿಕಾಸ್ ಯೋಜನೆಯ(PM Kaushal Vikas Yojana) ಸೌಲಭ್ಯವನ್ನ ಪಡೆಯಬಹುದು.
 • ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹೊಂದಿರಲೇಬೇಕು.
 • ಅರ್ಜಿ ಸಲ್ಲಿಸ ಬಯಸುವ ನಿರುದ್ಯೋಗಿ ಯುವಕ – ಯುವತಿಯರ ವಯಸ್ಸು 18 ವರ್ಷ ತುಂಬಿರಬೇಕು.

ಇದನ್ನೂ ಕೂಡ ಓದಿ : ಮಹಿಳೆಯರಿಗೆ ಉದ್ಯೋಗಕ್ಕಾಗಿ ಸಾಲ ಸೌಲಭ್ಯ – business loan for women

ಈ ಯೋಜನೆಯಿಂದ ಏನೆಲ್ಲಾ ಉಪಯೋಗಗಳಿವೆ.?

ನಿರುದ್ಯೋಗಿ ಯುವಕ – ಯುವತಿಯರು ಕೆಲಸ ಪಡೆಯಲು ಬಹಳಷ್ಟು ಕಷ್ಟಪಡುತ್ತಿದ್ದಾರೆ. ಅವರ ವಿದ್ಯಾರ್ಹತೆಗೆ ತಕ್ಕದಾದ ಕೆಲಸ ಸಿಗುತ್ತಿಲ್ಲ. ಅಂತಹ ಅಭ್ಯರ್ಥಿಗಳು ಪಿಎಂ ಕೌಶಲ್ ವಿಕಾಸ್ ಯೋಜನೆಯ(PM Kaushal Vikas Yojana) ಮೂಲಕ ತರಬೇತಿ ಪಡೆದು, ತಮ್ಮದೇ ಸ್ವಂತ ಉದ್ಯೋಗ ಪ್ರಾರಂಭಿಸಬಹುದು. ಅಥವಾ ಬೇರೆ ಕಡೆ ಉದ್ಯೋಗ ಮಾಡಬಹುದು. ಈ ಯೋಜನೆಯ ಅಡಿಯಲ್ಲಿ ತರಬೇತಿ ಪಡೆದ ನಂತರ ಅಭ್ಯರ್ಥಿಗಳಿಗೆ ಸರ್ಟಿಫಿಕೇಟ್ ಕೂಡ ಸಿಗಲಿದ್ದು, ಅದನ್ನು ದೇಶದ ಎಲ್ಲೆಡೆ ಉಪಯೋಗಿಸಿ ಕೆಲಸ ಪಡೆಯುವುದಕ್ಕೆ ಇದರಿಂದ ಸಹಾಯವಾಗುತ್ತದೆ.

ಇದನ್ನೂ ಕೂಡ ಓದಿ : Free Borewell : ನಿಮಗೆ ಉಚಿತ ಬೋರ್ ವೆಲ್ ಬೇಕಾ.? ಈ ಕೂಡಲೇ ಅರ್ಜಿ ಸಲ್ಲಿಸಿ.! ಡೈರೆಕ್ಟ್ ಲಿಂಕ್ ಇಲ್ಲಿದೆ

kannada news time

ಅರ್ಜಿ ಸಲ್ಲಿಸುವ ವಿಧಾನ :-

 • ಕೇಂದ್ರ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಹೋಮ್ ಪೇಜ್ ನಲ್ಲಿ, ಪಿಎಮ್ ಕೌಶಲ್ ವಿಕಾಸ್ ಯೋಜನೆ ಎನ್ನುವ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು
 • ಈಗ ಹೊಸ ಪೇಜ್ ಓಪನ್ ಆಗುತ್ತದೆ, ಇದರಲ್ಲಿ ಮೊದಲಿಗೆ ನೀವು ಯೋಜನೆಗೆ ರಿಜಿಸ್ಟರ್ ಮಾಡಬೇಕು
 • ಈ ಯೋಜನೆಯಲ್ಲಿ ಹೊಸದಾಗಿ ನೀವು ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
 • ಮೊದಲು ನಿಮ್ಮ ಡೀಟೇಲ್ಸ್ ಹಾಕಿ, ಪೋರ್ಟಲ್ ನಲ್ಲಿ ಕೌಶಲ್ ವಿಕಾಸ್ ಯೋಜನೆಗೆ ರಿಜಿಸ್ಟರ್ ಮಾಡಿ, ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಪಡೆಯಿರಿ
 • ಬಳಿಕ ಅಪ್ಲಿಕೇಶನ್ ಫಾರ್ಮ್ ಬರುತ್ತದೆ. ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ, ಬೇಕಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
 • ಇದೆಲ್ಲಾ ಆದ ನಂತರ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ. ಇಲ್ಲಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ ಆಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply